ಹುವಾವೇ ಮೇಟ್ 60 RS ಅಲ್ಟಿಮೇಟ್ ಡಿಸೈನ್ ಸ್ಮಾರ್ಟ್‌ಫೋನ್ ಬಿಡುಗಡೆ!
ಟೆಕ್ ಲೋಕದ ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ ಹುವಾವೇ ಕಂಪೆನಿ ಕೂಡ ಗುರುತಿಸಿಕೊಂಡಿದೆ. ತನ್ನ ವಿಭಿನ್ನ ಶೈಲಿಯ ಸ್ಮಾರ್ಟ್‌ಫೋನ್‌ಗಳಿಂದಲೇ ಟೆಕ್ ವಲಯದ ಗಮನಸೆಳೆದಿದೆ. ಅದಕ್ಕೆ ತಕ್ಕಂತೆ ಇದೀಗ ಹೊಸ ಹುವಾವೇ ಮೇಟ್ 60 RS ಅಲ್ಟಿಮೇಟ್ ಡಿಸೈನ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಇದು ಕಿರಿನ್ 9000s ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
ಹೌದು, ಹುವಾವೇ ಮೇಟ್ 60 RS ಅಲ್ಟಿಮೇಟ್ ಸ್ಮಾರ್ಟ್‌ಫೋನ್ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಬಾಡಿ ಸೆರಾಮಿಕ್‌ನಿಂದ ಮಾಡಲ್ಪಟ್ಟಿದೆ. ಇದರ ಫ್ರೇಮ್ ಅಲ್ಯೂಮಿನಿಯಂ ಆಗಿದ್ದು, ಕೆಂಪು ಮತ್ತು ಕಪ್ಪು ಬಣ್ಣದ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇನ್ನು ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹುವಾವೇ ಮೇಟ್ 60 RS ಅಲ್ಟಿಮೇಟ್ ಡಿಸೈನ್ ಡಿಸ್‌ಪ್ಲೇ ರಚನೆ
ಹುವಾವೇ ಮೇಟ್ 60 RS ಅಲ್ಟಿಮೇಟ್ ಡಿಸೈನ್ ಸ್ಮಾರ್ಟ್‌ಫೋನ್ 6.82 ಇಂಚಿನ ಫ್ಲಾಟ್ OLED LTPO ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2720 x 1260 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 1Hz ನಿಂದ 120Hz ವರೆಗಿನ ಹೊಂದಾಣಿಕೆಯ ರಿಫ್ರೆಶ್ ರೇಟ್ ಅನ್ನು ನೀಡಲಿದೆ. ಜೊತೆಗೆ ಇದು 1440Hz ಹೈ-ಫ್ರೀಕ್ವೆನ್ಸಿ PWM ಡಿಮ್ಮಿಂಗ್ ಆನ್‌ಬೋರ್ಡ್ ಜೊತೆಗೆ 300Hz ಟಚ್ ಸ್ಯಾಂಪ್ಲಿಂಗ್ ರೇಟಿಂಗ್ ಅನ್ನು ಹೊಂದಿದೆ.
ಹುವಾವೇ ಮೇಟ್ 60 RS ಅಲ್ಟಿಮೇಟ್ ಡಿಸೈನ್ ಪ್ರೊಸೆಸರ್
ಹುವಾವೇ ಮೇಟ್ 60 RS ಅಲ್ಟಿಮೇಟ್ ಡಿಸೈನ್ ಸ್ಮಾರ್ಟ್‌ಫೋನ್ ಕಿರಿನ್ 9000s ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು ಹಾಂಗ್‌ಮೆಂಗ್ OS 4.0 ಬೆಂಬಲವನ್ನು ಒಳಗೊಂಡಿದೆ. ಹಾಗೆಯೇ 16GB RAM ಮತ್ತು 512GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ NM ಮೆಮೊರಿ ಕಾರ್ಡ್ ಬಳಸಿ 256GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಕೂಡ ಅವಕಾಶ ಲಭ್ಯವಿದೆ.
ಹುವಾವೇ ಮೇಟ್ 60 RS ಅಲ್ಟಿಮೇಟ್ ಡಿಸೈನ್ ಕ್ಯಾಮೆರಾ
ಹುವಾವೇ ಮೇಟ್ 60 RS ಅಲ್ಟಿಮೇಟ್ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 40 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್, ಮೂರನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಅಲ್ಟ್ರಾ-ಮ್ಯಾಕ್ರೋ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿರಲಿದೆ. ಇದು 3.5x ಆಪ್ಟಿಕಲ್ ಜೂಮ್ ಮತ್ತು 100x ಡಿಜಿಟಲ್ ಜೂಮ್ ಸಾಮರ್ಥ್ಯಗಳನ್ನು ನೀಡಲಿದೆ. ಇದಲ್ಲದೆ 13 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.
ಹುವಾವೇ ಮೇಟ್ 60 RS ಅಲ್ಟಿಮೇಟ್ ಡಿಸೈನ್ ಬ್ಯಾಟರಿ ಮತ್ತು ಇತರೆ
ಹುವಾವೇ ಮೇಟ್ 60 RS ಅಲ್ಟಿಮೇಟ್ ಡಿಸೈನ್ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 88W ವೇಗದ ಚಾರ್ಜಿಂಗ್ ಮತ್ತು 50W ವೇಗದ ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಒಳಗೊಂಡಿದೆ. ಇನ್ನು ಡಿವೈಸ್ 3D ಫೇಸ್ ಡಿಟೇಕ್ಷನ್, ಇನ್-ಸ್ಕ್ರೀನ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಆಂಬಿಯೆಂಟ್ ಲೈಟ್ ಸೆನ್ಸಾರ್, ಗೈರೊಸ್ಕೋಪ್, ದಿಕ್ಸೂಚಿ, NFC ಯನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್ 5.2 ಅನ್ನು ಬೆಂಬಲಿಸಲಿದೆ.
ಬೆಲೆ ಮತ್ತು ಲಭ್ಯತೆ
ಹುವಾವೇ ಮೇಟ್ 60 RS ಅಲ್ಟಿಮೇಟ್ ಡಿಸೈನ್ ಫೋನ್ 16GB ಮತ್ತು 512GB ಸ್ಟೋರೇಜ್ ಬೆಲೆ 11,999 ಯುವಾನ್ (ಅಂದಾಜು 1,38,479ರೂ) ಆಗಿದೆ. ಆದರೆ 16GB + 1TB ಸ್ಟೊರೇಜ್ ಆಯ್ಕೆಯು 12,999 ಯುವಾನ್ (ಅಂದಾಜು 1,50,020ರೂ)ಬೆಲೆಯಲ್ಲಿ ಬರಲಿದೆ.


Click it and Unblock the Notifications








