Subscribe to Gizbot

IFA 2015 ನಲ್ಲಿ ಮಿಂಚುತ್ತಿರುವ ಹುವಾವೆ ಮೇಟ್

Written By:

ಬರ್ಲಿನ್‌ನಲ್ಲಿ ನಡೆಯುತ್ತಿರುವ IFA 2015 ಈವೆಂಟ್‌ನಲ್ಲಿ ಹುವಾಯಿ ಹೆಚ್ಚು ನಿರೀಕ್ಷಿತ ಫ್ಲ್ಯಾಗ್‌ಶಿಪ್ ಡಿವೈಸ್ ಅನ್ನು ಲಾಂಚ್ ಮಾಡಿದೆ. ಹುವಾವೆ ಮೇಟ್ ಎಸ್ ಹೆಸರನ್ನು ಹೊಂದಿರುವ ಇದು ಪ್ರೀಮಿಯಮ್ ಅಂಡ್ರಾಯ್ಡ್ ಸೆಟ್ ಆಗಿದೆ. ಫೋರ್ಸ್ ಟಚ್ ಟೆಕ್ನಾಲಜಿಯನ್ನು ಹೊಂದಿರುವ ಇದು ಐಫೋನ್ 6 ಎಸ್‌ನಲ್ಲಿರುವ ಹೆಚ್ಚು ಶ್ರೀಮಂತ ಫೀಚರ್‌ಗಳನ್ನು ಹೊಂದಿದೆ.

ಅಸೆಂಡ್ ಮೇಟ್7 ಗೆ ಒಂದೇ ಮಾದರಿಯಲ್ಲಿರುವ ಹುವಾವೆ ಮೇಟ್ ಎಸ್ ಹೆಚ್ಚು ಸುಧಾರಿತ ಫೀಚರ್‌ಗಳೊಂದಿಗೆ ಬಂದಿದೆ. ಹುವಾವೆ ಮೇಟ್ ಎಸ್ ಫೋನ್‌ನ ಪ್ರಮುಖ ವಿಶೇಷತೆಗಳನ್ನು ಇಲ್ಲಿ ನಾವು ನೀಡುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೆಟಲ್ ಬಾಡಿ

ವಿನ್ಯಾಸ

ಮೆಟಲ್ ಬಾಡಿಯನ್ನು ಹೊಂದಿರುವ ಇದು ಕರ್ವ್ ಆಗಿರುವ ಸರ್ಫೇಸ್‌ನೊಂದಿಗೆ ಕೂಡಿದೆ. 149.8 x 75.3 x 7.2mm ಆಯಾಮವನ್ನು ಇದು ಹೊಂದಿದ್ದು, 2.65mm ಅಳತೆ ಇದರಲ್ಲಿದೆ.

ತಂತ್ರಜ್ಞಾನ

ಫೋರ್ಸ್ ಟಚ್ ಇಂಟಿಗ್ರೇಶನ್

5.5 ಇಂಚಿನ ಅಮೋಲೆಡ್ ಎಫ್‌ಎಚ್‌ಡಿ ಸ್ಕ್ರೀನ್‌ನೊಂದಿಗೆ ಡಿವೈಸ್ ಬಂದಿದ್ದು ಕೋರ್ನಿಂಗ್ ಗ್ಲಾಸ್ ಇದರಲ್ಲಿದೆ. ಫೋರ್ಸ್ ಟಚ್ ತಂತ್ರಜ್ಞಾನವನ್ನು ಡಿವೈಸ್ ಪಡೆದುಕೊಂಡಿದ್ದು ಶಾರ್ಟ್‌ಕಟ್‌ಗಳು, ಮಲ್ಟಿ ಟಾಸ್ಕ್ ಅಪ್ಲಿಕೇಶನ್, ಫೋಟೋ ಜೂಮ್ ಮಾಡುವುದು ಮೊದಲಾದ ಕಾರ್ಯಗಳಿಗೆ ಇದು ನೆರವನ್ನು ನೀಡಲಿದೆ.

ಕಿರಿನ್ 935 ಓಕ್ಟಾ ಕೋರ್ ಚಿಪ್‌ಸೆಟ್‌

ಪವರ್ ಹೌಸ್

ಹುವಾಯಿನ ಸ್ವಂತ ಕಿರಿನ್ 935 ಓಕ್ಟಾ ಕೋರ್ ಚಿಪ್‌ಸೆಟ್‌ನೊಂದಿಗೆ ಇದು ಬಂದಿದ್ದು ಡ್ಯುಯಲ್ ಕೋರ್ ಕ್ಲಾಕ್ ಸ್ಪೀಡ್ 2.2GHZ ಇದರಲ್ಲಿದೆ.

ಸಂಗ್ರಹಣಾ

ಸಂಗ್ರಹಣಾ ಸಾಮರ್ಥ್ಯ

3 ಜಿಬಿ RAM ನೊಂದಿಗೆ ಡಿವೈಸ್ ಬಂದಿದ್ದು, ಆಂತರಿಕ ಸಂಗ್ರಹಣಾ ಸಾಮರ್ಥ್ಯ 32 ಜಿಬಿಯಾಗಿದೆ ಇನ್ನು ಪ್ರಮಾಣಿತ ಆವೃತ್ತಿ 64 ಜಿಬಿಯಾಗಿದ್ದು ಮುಂದಿನ ದಿನಗಳಲ್ಲಿ 128 ಜಿಬಿ ಆವೃತ್ತಿಯನ್ನು ನಿಮಗೆ ಕಾಣಬಹುದಾಗಿದೆ.

ಫಿಕ್ಸ್ ಫೋಕಸ್

ಕ್ಯಾಮೆರಾ

ಫೋನ್‌ನ ಪ್ರಾಥಮಿಕ ಕ್ಯಾಮೆರಾ 13 ಮೆಗಾಪಿಕ್ಸೆಲ್ ಆಗಿದ್ದು ಮುಂಭಾಗದ ಸೆಲ್ಫಿ ಕ್ಯಾಮೆರಾ 8 ಮೆಗಾಪಿಕ್ಸೆಲ್ ಎಂದೆನಿಸಿದೆ. ಎಲ್‌ಇಡಿ ಲೈಟ್, 2.4 ಅಪಾರ್ಚರ್ ಇದರಲ್ಲಿದೆ ಮತ್ತು ಕ್ಯಾಮೆರಾ ಫಿಕ್ಸ್ ಫೋಕಸ್ ಅನ್ನು ಹೊಂದಿದೆ.

ಟ್ವೀಕ್ ಇಂಟರ್ಫೇಸ್

ಸಾಫ್ಟ್‌ವೇರ್

ಆಂಡ್ರಾಯ್ಡ್ ಲಾಲಿಪಪ್ 5.1.1 ಡಿವೈಸ್‌ನಲ್ಲಿದ್ದು ಟ್ವೀಕ್ ಇಂಟರ್ಫೇಸ್ ಮತ್ತು ಹೆಚ್ಚುವರಿ ಫೀಚರ್‌ಗಳನ್ನು ಮೊಬೈಲ್ ಹೊಂದಿದೆ.

ವೈರ್‌ಲೆಸ್ ಸಂಪರ್ಕ ವ್ಯವಸ್ಥೆ

ಸಂಪರ್ಕ ವಿಶೇಷತೆಗಳು

ವೈರ್‌ಲೆಸ್ ಸಂಪರ್ಕ ವ್ಯವಸ್ಥೆಯನ್ನು ನೋಡಿದಾಗ, ಫೋನ್ ಪ್ರಮಾಣಿತ ಸಂಪರ್ಕ ವಿಶೇಷತೆಗಳಾದ 4ಜಿ, ವೈಫೈ, ಬ್ಲ್ಯೂಟೂತ್ ಮತ್ತು ಜಿಪಿಎಸ್‌ನೊಂದಿಗೆ ಬಂದಿದೆ.

ಪವರ್ ಅಪ್

ಬ್ಯಾಟರಿ

ಫೋನ್ 2,700mAh ಬ್ಯಾಟರಿಯನ್ನು ಒಳಗೊಂಡಿದ್ದು ಫೋನ್ ಅನ್ನು ಪವರ್ ಅಪ್ ಮಾಡುತ್ತದೆ.

ಫೋನ್ ಬೆಲೆ

ಬೆಲೆ

ಇನ್ನು ಫೋನ್ ಬೆಲೆಯನ್ನು ನೋಡಿದರೆ, ಪ್ರಮಾಣಿತ ಆವೃತ್ತಿ ರೂ 48,300 ಆಗಿದ್ದರೆ, ಪ್ರೀಮಿಯಮ್ ಆವೃತ್ತಿ ರೂ 55,600 ಕ್ಕೆ ಬರುತ್ತಿದೆ.

30 ದೇಶ

ಲಭ್ಯತೆ

ಇನ್ನು ಭಾರತದಲ್ಲಿ ಈ ಫೋನ್ ಯಾವಾಗ ಬರಲಿದೆ ಎಂಬುದು ನಿಖರವಾಗಿ ತಿಳಿದಿಲ್ಲ. ಹುವಾವೆ ಮೇಟ್ ಎಸ್ ಅನ್ನು 30 ದೇಶಗಳಲ್ಲಿ ದೊರೆಯುವಂತೆ ಮಾಡುತ್ತಿದ್ದು ಚೀನಾ, ಜರ್ಮನಿ, ಜಪಾನ್, ಫ್ರಾನ್ಸ್, ಮತ್ತು ಸ್ಪೇನ್‌ ಇದರಲ್ಲಿ ಒಳಗೊಂಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
At the ongoing IFA 2015 in Berlin, Germany, Huawei unveiled its much awaited flagship device in the company's Mate series of smartphones.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot