ಹುವಾವೇಯ ಮೇಟ್‌ಎಕ್ಸ್‌2 ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಜ್ಜು!

|

ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಈಗಾಗಲೇ ತನ್ನದೇ ಆದ ಜನಪ್ರಿಯತೆ ಪಡೆದುಕೊಂಡಿರುವ ಹುವಾವೇ ಸ್ಮಾರ್ಟ್‌ಫೋನ್‌ ಕಂಪೆನಿ ತನ್ನ ಮುಂದಿನ ಆವೃತ್ತಿಯ ಸ್ಮಾರ್ಟ್‌ಫೋಣ್‌ ಬಿಡುಗಡೆ ಮಾಡೋದಕ್ಕೆ ಸಿದ್ದವಾಗಿದೆ. 2020 ಕ್ಕೆ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ಆದ ಹುವಾವೇ ಮೇಟ್‌ ಎಕ್ಸ್‌2 ಅನ್ನ ಲಾಂಚ್‌ ಮಾಡಲು ಯೋಜನೆಯನ್ನ ರತೂಪಿಸಿದೆ ಎಂದು ಹೇಳಲಾಗ್ತಿದೆ.

ಹುವಾವೇ

ಹೌದು, ಹುವಾವೇ ಸ್ಮಾರ್ಟ್‌ಫೋನ್‌ ಕಂಪೆನಿ ಈಗಾಗಲೇ ಹುವಾವೇ ಮೇಟ್ ಎಕ್ಸ್‌ ಸ್ಮಾರ್ಟ್‌ಫೋನ್ ಅನ್ನ ಬಿಡುಗಡೆ ಮಾಡಿದೆ. ಇದೀಗ ಅದರ ಮುಂದುವರೆದ ಆವೃತ್ತಿ ಹುವಾವೇ ಮೇಟ್‌ ಎಕ್ಸ್‌2 ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿದೆ. ಸದ್ಯ ಕಂಪೆನಿಯ ಪ್ಲ್ಯಾನ್‌ ಪ್ರಕಾರ ಈ ಸ್ಮಾರ್ಟ್‌ಫೋನ್‌ 2020ರ ಮಧ್ಯಂತರದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಸದ್ಯ ಕಂಪೆನಿಯ ಪ್ರಕಾರ ಹುವಾವೇ ಮೇಟ್‌ ಎಕ್ಸ್‌2 ಸ್ಮಾರ್ಟ್‌ಫೋನ್‌ 5Gನೆಟ್‌ವರ್ಕ್‌ನ ಬೆಂಬಲಿಸಲಿದೆ ಎಂದು ಅಂದಾಜಿಸಲಾಗಿದೆ.

ಸ್ಮಾರ್ಟ್‌ಫೋನ್‌

ಇನ್ನು ಈ ಸ್ಮಾರ್ಟ್‌ಫೋನ್‌ ಡ್ಯುಯೆಲ್‌ ಸ್ಕ್ರೀನ್‌ ಅನ್ನ ಒಳಗೊಂಡಿರುವುದರಿಂದ ಮಡಚಬಹುದಾದ ಸ್ಕ್ರೀನ್‌ ಇದಾಗಿದೆ. ಅಲ್ಲದೆ ಈ ಸ್ಕ್ರೀನ್‌ ನಿಂದ ಉತ್ತಮ ವಿಡಿಯೋ ಅನುಭವವನ್ನ ಪಡೆಯಬಹುದಾಗಿದೆ. ಹುವಾವೇ ಮೇಟ್‌ ಎಕ್ಸ್‌2ಸ್ಮಾರ್ಟ್‌ಫೋನ್‌ ನ ಮೊದಲ ಡಿಸ್‌ಪ್ಲೇ 2480 x 2200 ಪಿಕ್ಸೆಲ್‌ ರೆಸಲ್ಯೂಶೆನ್‌ ಸೆನ್ಸಾರ್‌ ಹೊಂದಿರುವ 6.5-ಇಂಚಿನ ಡಿಸ್‌ಪ್ಲೇಯನ್ನ ಹೊಂದಿದೆ. ಇನ್ನು ಎರಡನೇ ಡಿಸ್‌ಪ್ಲೇ 2480 x 1148 ರೆಸಲ್ಯೂಶನ್‌ ಸೆನ್ಸಾರ್‌ ಒಳಗೊಂಡಿರುವ 6.9-ಇಂಚಿನ ಡಿಸ್‌ಪ್ಲೇಯನ್ನ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ.

ಕಿರಿನ್

ಅಲ್ಲದೆ ಈ ಸ್ಮಾರ್ಟ್‌ಫೋನ್‌ ಕಿರಿನ್ 990 ಪ್ರೊಸೆಸರ್‌ ಒಳಗೊಂಡಿದ್ದು 5G ನೆಟ್‌ವರ್ಕ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಸದ್ಯ ಈಗಾಗಲೇ ಹುವಾವೆ ಮೆಟ್‌ ಸ್ಮಾರ್ಟ್‌ಫೋನ್‌ಗಳು ಕೂಡ ಡ್ಯುಯೆಲ್‌ ಸ್ಕ್ರೀನ್‌ ಹೊಂದಿದ್ದು ಸ್ಯಾಮನ್‌ಸಂಗ್‌ನ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಸೆಡ್ಡು ಹೊಡೆಯುತ್ತಿವೆ. ಇದೀಗ ಹೊಸ ಮಾದರಿಯಲ್ಲಿ ಬರಲಿರೋ ಹುವಾವೇ ಮೆಟ್‌ ಎಕ್ಸ್‌2 ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಇನ್ನಷ್ಟು ಹವಾ ಕ್ರಿಯೆಟ್‌ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.

2020

ಸದ್ಯ ಹುವಾವೆ ಮೆಟ್‌ ಎಕ್ಸ್‌2 ಸ್ಮಾರ್ಟ್‌ಫೋನ್‌ ತಯಾರಿಕ ಹಂತದಲ್ಲಿದ್ದು ಇನ್ನು ಪ್ರಯೋಗಿಕ ಹಂತದಲ್ಲಿದೆ ಎನ್ನಲಾಗಿದೆ. ಆದಾಗ್ಯೂ ಈ ಸ್ಮಾರ್ಟ್‌ಫೋನ್‌ 2020ರಲ್ಲಿ ನಡೆಯುವ ಮೊಬೈಲ್ ವರ್ಲ್ಡ್‌ ಕಾಂಗ್ರೆಸ್ ಸಮ್ಮೆಳನದಲ್ಲಿ ಲಾಂಚ್‌ ಮಾಡುವ ನಿರೀಕ್ಷೆಯಿದೆ. ಸದ್ಯ ಎರಡು ಸ್ಕ್ರೀನ್‌ಗಳ ಸ್ಮಾರ್ಟ್‌ಫೋನ್‌ ಆಗಿರುವುದರಿಂದ ಮುಂಬಾಗದಲ್ಲಿ ಎರಡು ಸೆಲ್ಫಿ ಕ್ಯಾಮೆರಾಗಳಿರಲಿದ್ದು ಬಳಕೆದಾರರನ್ನ ಸೆಳೆಯಲಿದೆ ಎಂದು ಹೇಳಲಾಗ್ತಿದೆ.

Most Read Articles
Best Mobiles in India

English summary
It’s no secret Huawei’s been working on a successor to its first foldable smartphone , the Mate X, and now we have a new report that claims the next-gen successor could be launched by the company some time during the second half of 2020.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X