Home
ಸುದ್ದಿಜಾಲ

ಫೆ.18ಕ್ಕೆ ಗ್ರ್ಯಾಂಡ್ ಲಾಂಚ್! ಮೂರು ದೊಡ್ಡ ಡಿಸ್ಪ್ಲೇಗಳು.. 1TB ಸ್ಟೋರೇಜ್.. ಇದು ಅಂತಿಂಥಾ ಫೋನ್‌ ಅಲ್ಲ

ಹುವಾವೇ ಸಂಸ್ಥೆಯು ಹೊಸ ಫೋಲ್ಡಬಲ್ ಮೊಬೈಲ್ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಈ ಫೋನ್‌ ಟ್ರಿಪಲ್ ಡಿಸ್ಪ್ಲೇ ಜೊತೆಗೆ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಹೌದು, ಹುವಾವೇ ಮೇಟ್ XT ಅಲ್ಟಿಮೇಟ್ ಡಿಸೈನ್ (HUAWEI Mate XT Ultimate Design) ಸ್ಮಾರ್ಟ್‌ಫೋನ್ ಫೆಬ್ರವರಿ 18 ರಂದು ಅಧಿಕೃತವಾಗಿ ಲಾಂಚ್ ಆಗಲಿದೆ. ಕಳೆದ ವರ್ಷ ಚೀನಾದಲ್ಲಿ ಬಿಡುಗಡೆಯಾದ ಈ ಟ್ರೈ ಫೋಲ್ಡಿಂಗ್ ಫೋನ್ ಇದೀಗ ಜಾಗತಿಕ ಮಾರುಕಟ್ಟೆಗೆ ಬರುತ್ತಿದೆ. ಬನ್ನಿ, ಈ ಹೊಸ ಫೋನಿನ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯೋಣ.

ಹುವಾವೇ ಮೇಟ್ XT ಟ್ರೈ ಫೋಲ್ಡಿಂಗ್ ಫೋನ್ (ಮೂರು ಡಿಸ್ಪ್ಲೇಗಳು) ಆಗಿದೆ. ಇದು 10.2 ಇಂನಿ ಡಿಸ್ಪ್ಲೇ, 7.9 ಇಂಚು ಮತ್ತು 6.4 ಇಂಚಿನ ಡಿಸ್ಪ್ಲೇ ಹೊಂದಿದೆ. ಇದು ಕಿರಿನ್ 9010 5G ಪ್ರೊಸೆಸರ್ ಹೊಂದಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಈ ಸ್ಮಾರ್ಟ್‌ಫೋನ್ 5,600mAh ಬ್ಯಾಟರಿ, 66W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಒಳಗೊಂಡಿದೆ. ಈ ಫೋನಿನ ಬೆಲೆ ತಿಳಿಯಲು ಮುಂದೆ ಓದಿ.

ಫೆ.18ಕ್ಕೆ ಗ್ರ್ಯಾಂಡ್ ಲಾಂಚ್; ಮೂರು ಡಿಸ್ಪ್ಲೇಗಳು, 1TB ಸ್ಟೋರೇಜ್.. ಯಾವ ಫೋನ್

ಹುವಾವೇ ಮೇಟ್ XT ಬೆಲೆ

ಕಂಪನಿಯು ಹುವಾವೇ ಮೇಟ್ XT ಅಲ್ಟಿಮೇಟ್ ಡಿಸೈನ್ ಫೋನಿನ ಬೆಲೆ ಬಗ್ಗೆ ಮಾಹಿತಿ ನೀಡಿಲ್ಲ. ವರದಿಯ ಪ್ರಕಾರ ಈ ಫೋನಿನ ಮೂಲ ರೂಪಾಂತರದ ಆರಂಭಿಕ ಬೆಲೆ ಸುಮಾರು 2.4 ಲಕ್ಷ ರೂ. (CNY 19,999) ಆಗಿದೆ. ಇದು ಮೊದಲು ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಇದನ್ನು ಫೆಬ್ರವರಿ 8 ರಂದು ಮಲೇಷ್ಯಾದ ಇನ್ವೆಂಟ್‌ನಲ್ಲಿ ಲಾಂಚ್ ಮಾಡಲಾಗುವುದು.

ಹುವಾವೇ ಮೇಟ್ XT ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಹುವಾವೇ ಮೇಟ್ XT ಅಲ್ಟಿಮೇಟ್ ಡಿಸೈನ್ ಸ್ಮಾರ್ಟ್‌ಫೋನ್ 6.4 ಇಂಚಿನ OLED ಸಿಂಗಲ್ ಡಿಸ್ಪ್ಲೇ ಹೊಂದಿರುತ್ತದೆ. ಇದು 2232 × 1008 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಹಾಗೆಯೇ 7.9 ಇಂಚಿನ 2K ಡ್ಯುಯಲ್ ಡಿಸ್ಪ್ಲೇ ಲಭ್ಯವಿದೆ. ಇದು 2232 × 2048 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಸಾಮರ್ಥ್ಯ ಹೊಂದಿದೆ. ಮತ್ತು ಸಂಪೂರ್ಣವಾಗಿ ತೆರೆದಾಗ 10.2 ಇಂಚಿನ 3K OLED ಡಿಸ್ಪ್ಲೇಯನ್ನು ಸಹ ಒಳಗೊಂಡಿದೆ.

ಮೂರು ಡಿಸ್ಪ್ಲೇಗಳು 90Hz ರಿಫ್ರೆಶ್ ದರ ಮತ್ತು 240Hz ಟಚ್ ಸ್ಯಾಂಪ್ಲಿಂಗ್ ದರದ ಬೆಂಬಲ ಪಡೆದಿವೆ. ಜೊತೆಗೆ 1440Hz ಹೈ ಫ್ರೀಕ್ವೆನ್ಸಿ PWM ಡಿಮ್ಮಿಂಗ್ ಲಭ್ಯವಿದೆ. ಇದು ಪೂರ್ಣ ಎಚ್‌ಡಿ ಪ್ಲಸ್ ರೆಸಲ್ಯೂಶನ್ ಹೊಂದಿದೆ. ಈ ಡಿಸ್ಪ್ಲೇಯು UTG ಗ್ಲಾಸ್ ರಕ್ಷಣೆ ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಹುವಾವೇ ಮೇಟ್ XT ಮೊಬೈಲ್ ಕಿರಿನ್ 9010 5G ಪ್ರೊಸೆಸರ್ ಹೊಂದಿದೆ. ಈ ಫೋನ್ HarmonyOS 4.2 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ನಿರ್ವಹಿಸುತ್ತದೆ. ಈ ಮೊಬೈಲ್ 16GB RAM ಜೊತೆಗೆ 256GB, 512GB ಮತ್ತು 1TB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.

ಫೆ.18ಕ್ಕೆ ಗ್ರ್ಯಾಂಡ್ ಲಾಂಚ್; ಮೂರು ಡಿಸ್ಪ್ಲೇಗಳು, 1TB ಸ್ಟೋರೇಜ್.. ಯಾವ ಫೋನ್

ಕ್ಯಾಮೆರಾ ಸೆಟಪ್

ಹುವಾವೇ ಮೇಟ್ XT ಅಲ್ಟಿಮೇಟ್ ಡಿಸೈನ್ ಫೋನ್ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹೊಂದಿದೆ. ಜೊತೆಗೆ 12 ಮೆಗಾಪಿಕ್ಸೆಲ್ ದ್ವಿತೀಯ (ಅಲ್ಟ್ರಾ ವೈಡ್ ಆಂಗಲ್ ಲೆನ್ಸ್) ಕ್ಯಾಮೆರಾ ಮತ್ತು 5.5x ಜೂಮ್ ಮತ್ತು OIS ಜೊತೆಗೆ 12 ಮೆಗಾಪಿಕ್ಸೆಲ್ (ಪೆರಿಸ್ಕೋಪ್ ಟೆಲಿಫೋಟೋ ಸೆನ್ಸಾರ್) ತೃತೀಯ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನಿನಲ್ಲಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಹ ಲಭ್ಯವಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್

ಹುವಾವೇ ಮೇಟ್ XT ಸ್ಮಾರ್ಟ್‌ಫೋನ್ 5,600mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಲಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 66W ವೈರ್ಡ್ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಕನೆಕ್ಟಿವಿಟಿ ಈ ಮೊಬೈಲ್ 5G SA/NSA, ಡ್ಯುಯಲ್ 4G VoLTE, ವೈ-ಫೈ, ಬ್ಲೂಟೂತ್ 5.2 LE, ಜಿಪಿಎಸ್‌, ಎನ್‌ಎಫ್‌ಸಿ ಮತ್ತು ಯುಎಸ್‌ಬಿ ಟೈಪ್ ಸಿ ಸೇರಿಂದತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.

Best Mobiles in India

English summary
Huawei Mate XT Ultimate Design with tri fold to launch globally on Feb 18: price, specifications
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+