ಹುವಾವೇ ಸಂಸ್ಥೆಯಿಂದ ಹುವಾವೇ ಮೇಟ್‌ಪ್ಯಾಡ್ T10 ಟ್ಯಾಬ್ಲೆಟ್‌ ಬಿಡುಗಡೆ!

|

ಜಾಗತಿಕ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಮಾರ್ಟ್‌ಫೋನ್‌ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಹುವಾವೇ ತನ್ನ ಹೊಸ ಆಂಡ್ರಾಯ್ಡ್ ಟ್ಯಾಬ್ಲೆಟ್‌ಗಳಾಗಿ ಹುವಾವೇ ಮೇಟ್‌ಪ್ಯಾಡ್ T10 ಮತ್ತು ಮೇಟ್‌ಪ್ಯಾಡ್ T10S ಅನ್ನು ಬಿಡುಗಡೆ ಮಾಡಿದೆ. ಇನ್ನು ಈ ಎರಡೂ ಹೊಸ ಡಿವೈಸ್‌ಗಳು ಹುವಾವೇ ಹಿಸಿಲಿಕಾನ್ ಕಿರಿನ್ 710 A SoC ಪ್ರೊಸೆಸರ್‌ ಅನ್ನು ಹೊಂದಿದ್ದು, EMUI 10.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿವೆ. ಜೊತೆಗೆ ಈ ಟ್ಯಾಬ್ಲೆಟ್‌ನಲ್ಲಿ ಕಿಡ್ಸ್ ಕಾರ್ನರ್‌ ಅನ್ನು ಫ್ರೀ ಲೋಡ್‌ ಮಾಡಲಾಗಿರುತ್ತದೆ ಎನ್ನಲಾಗಿದೆ. ಅಲ್ಲದೆ ಇದು ಪೋಷಕರಿಗೆ ಕೆಲವು ವಿಷಯವನ್ನು ನಿರ್ಬಂಧಿಸಲು ಅನುವು ಮಾಡಿಕೊಡುತ್ತದೆ.

ಹುವಾವೇ

ಹೌದು, ಹುವಾವೇ ಸಂಸ್ಥೆ ಹುವಾವೇ ಮೇಟ್‌ಪ್ಯಾಡ್ T10 ಮತ್ತು ಮೇಟ್‌ಪ್ಯಾಡ್ T10S ಎಂಬ ಎರಡು ಹೊಸ ಟ್ಯಾಬ್ಲೆಟ್‌ಗಳನ್ನ ಪರಿಚಯಿಸಿದೆ. ಈ ಎರಡು ಟ್ಯಾಬ್ಲೆಟ್‌ಗಳು ಕೂಡ ಡಾರ್ಕ್ ಮೋಡ್ ಅನ್ನು ಬೆಂಬಲಿಸಲಿವೆ. ಇನ್ನು ಈ ಟ್ಯಾಬ್ಲೆಟ್‌ಗಳಲ್ಲಿ ಹೆಚ್ಚುವರಿಯಾಗಿ ಗೂಗಲ್ ಮೊಬೈಲ್ ಸರ್ವೀಸಸ್ ಮತ್ತು ಗೂಗಲ್ ಪ್ಲೇ ಬದಲಿಗೆ ಹುವಾವೇ ಮೊಬೈಲ್ ಸರ್ವೀಸಸ್ ಮತ್ತು ಹುವಾವೇ ಆಪ್‌ ಗ್ಯಾಲರಿಯನ್ನ ಒಳಗೊಂಡಿವೆ. ಇನ್ನುಳಿದಂತೆ ಈ ಟ್ಯಾಬ್ಲೆಟ್‌ಗಳು ಯಾವೆಲ್ಲಾ ಫೀಚರ್ಸ್‌ಗಳನ್ನ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹುವಾವೇ ಮೇಟ್‌ಪ್ಯಾಡ್ T10

ಹುವಾವೇ ಮೇಟ್‌ಪ್ಯಾಡ್ T10

ಹುವಾವೇ ಮೇಟ್‌ ಪ್ಯಾಡ್‌ T10 ಟ್ಯಾಬ್ಲೆಟ್‌ 1,280x800 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ ಸಾಮರ್ಥ್ಯದ 9.7-ಇಂಚಿನ IPS ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ 156 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇನ್ನು ಈ ಟ್ಯಾಬ್ಲೆಟ್ ಆಕ್ಟಾ-ಕೋರ್ ಹಿಸಿಲಿಕಾನ್ ಕಿರಿನ್ 710A SoC ಪ್ರೊಸೆಸರ್‌ ಹೊಂದಿದೆ, ಹಾಗೇಯೇ ಇದು 2 GB RAM ಮತ್ತು 32GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಇದಲ್ಲದೆ ಈ ಟ್ಯಾಬ್ಲೆಟ್ 5 ಮೆಗಾಪಿಕ್ಸೆಲ್ ಸೆನ್ಸಾರ್‌ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ 2 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಜೊತೆಗೆ ಇದು 5,100mAh ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, ಟ್ಯಾಬ್ಲೆಟ್ 10W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

ಹುವಾವೇ ಮೇಟ್‌ಪ್ಯಾಡ್ T10s

ಹುವಾವೇ ಮೇಟ್‌ಪ್ಯಾಡ್ T10s

ಇದು 1,920X1,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 10.1-ಇಂಚಿನ ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ ಈ ಟ್ಯಾಬ್ಲೆಟ್‌ 224PPI ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇನ್ನು ಈ ಟ್ಯಾಬ್ಲೆಟ್‌ ಹಿಸಿಲಿಕಾನ್ ಕಿರಿನ್ 710A SoC ಪ್ರೊಸೆಸರ್‌ ಅನ್ನು ಹೊಂದಿದೆ. ಹಾಗೇಯೇ 3GB RAM ಮತ್ತು 64GB ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾದ ಅವಕಾಶವನ್ನು ಸಹ ಹೊಂದಿದೆ. ಜೊತೆಗೆ ಈ ಟ್ಯಾಬ್ಲೆಟ್‌ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇನ್ನು ಈ ಟ್ಯಾಬ್ಲೆಟ್‌ 5,100mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದು 10W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹುವಾವೇ ಮೇಟ್‌ಪ್ಯಾಡ್ T10 ಬೆಲೆ ಯುರೋ 159.90 (ಸುಮಾರು ರೂ. 14,000)ಗೆ ನಿಗದಿಪಡಿಸಲಾಗಿದೆ. ಅಲ್ಲದೆ ವೈ-ಫೈ 2GB RAM + 32GB ಶೇಖರಣಾ ಸಂರಚನೆಯು ಯುರೋ 179.90 (ಸುಮಾರು ರೂ. 15,600) ಬೆಲೆಯನ್ನ ಹೊಂದಿದೆ. ಹುವಾವೇ ಮೇಟ್‌ಪ್ಯಾಡ್ T10S ಬೆಲೆ ಯುರೋ 209.90 (ಸುಮಾರು ರೂ. 18,200), ಆದರೆ ಇದರ ಎಲ್‌ಟಿಇ ಆವೃತ್ತಿಯು ಯುರೋ 249.90 (ಸರಿಸುಮಾರು 21,700 ರೂ.) ಬೆಲೆಯಲ್ಲಿ ಲಭ್ಯವಾಗಲಿದೆ.

Most Read Articles
Best Mobiles in India

Read more about:
English summary
Huawei MatePad T10 price starts at EUR 159.90 (roughly Rs. 14,000), while MatePad T10s carries a starting price of EUR 209.90 (roughly Rs. 18,200).to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X