ಭಾರತದ ಮಾರುಕಟ್ಟೆಯಲ್ಲಿ ಹುವಾವೇ ಮೇಟ್‌ಪ್ಯಾಡ್ T8 ಟ್ಯಾಬ್ಲೆಟ್‌ ಬಿಡುಗಡೆ!

|

ಹುವಾವೇ ಕಂಪೆನಿ ಜಾಗತಿಕ ಮಾರುಕಟ್ಟೆಯಲ್ಲಿ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಎನಿಸಿಕೊಂಡಿರುವ ಕಂಪೆನಿ. ಈಗಾಗಲೇ ತನ್ನ ವಿಭಿನ್ನ ಮಾದರಿಯ ಪ್ರಾಡಕ್ಟ್‌ಗಳನ್ನ ಭಾರತದ ಮಾರುಕಟ್ಟೆಯಲ್ಲಿಯೂ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ತನ್ನ ಹೊಸ ಬಜೆಟ್‌ ಸ್ನೇಹಿ ಟ್ಯಾಬ್ಲೆಟ್‌ 8 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಹುವಾವೇ ಮೇಟ್‌ಪ್ಯಾಡ್ T8 ಟ್ಯಾಬ್ಲೆಟ್ ಅನ್ನು ಮೇ ತಿಂಗಳಲ್ಲಿಯೇ ಜಾಗತಿಕವಾಗಿ ಬಿಡುಗಡೆ ಮಾಡಿತ್ತು. ಆದರೆ ಇದೀಗ ಹಲವು ತಿಂಗಳುಗಳ ನಂತರ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ.

ಹುವಾವೇ

ಹೌದು, ಹುವಾವೇ ಸಂಸ್ಥೆ ತನ್ನ ಹೊಸ ಬಜೆಟ್ ಸ್ನೇಹಿ ಟ್ಯಾಬ್ಲೆಟ್ 8 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇನ್ನು ಈ ಟ್ಯಾಬ್ಲೆಟ್‌ 8 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಬದಿಗಳಲ್ಲಿ thick bezels ಅಂಚುಗಳನ್ನು ಹೊಂದಿದೆ. ಇದು ಯಾವುದೇ ಮಾದರಿಯುಲ್ಲೂ ಟ್ಯಾಬ್ಲೆಟ್‌ ಅನ್ನು ಹಿಡಿದಿಡಲು ಸಾಕಷ್ಟು ಸುಲಭಗೊಳಿಸುತ್ತದೆ. ಇದಲ್ಲದೆ ಹುವಾವೇ ಮೇಟ್‌ಪ್ಯಾಡ್ T8 ಒಂದೇ RAM ಮತ್ತು ಸ್ಟೋರೇಜ್‌ ಆಯ್ಕೆಯನ್ನ ಹೊಂದಿದೆ. ಇನ್ನುಳಿದಂತೆ ಈ ಟ್ಯಾಬ್ಲೆಟ್‌ ಒಳಗೊಂಡಿರುವ ವಿಶೇಷತೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಹುವಾವೇ ಮೇಟ್‌ ಪ್ಯಾಡ್‌ T8 ಟ್ಯಾಬ್ಲೆಟ್‌ 1,280x800 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಹೊಂದಿರುವ 8 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 189 ಪಿಪಿ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಇದು ಎಲ್‌ಸಿಡಿ ಡಿಸ್‌ಪ್ಲೇ ವಿನ್ಯಾಸವನ್ನು ಹೊಂದಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ MT8768 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಇದು IMG GE8320 GPU ಅನ್ನು ಹೊಂದಿದೆ. ಅಲ್ಲದೆ 2GB RAM ಮತ್ತು 32GB ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದಲ್ಲದೆ ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಹುವಾವೇ ಮೇಟ್‌ಪ್ಯಾಡ್ T8 ಟ್ಯಾಬ್ಲೆಟ್‌ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದಲ್ಲದೆ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇನ್ನು ಈ ಟ್ಯಾಬ್ಲೆಟ್‌ 5,100mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಅಲ್ಲದೆ ಇದು ಸ್ಟ್ಯಾಂಡರ್ಡ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ 5.0, ಯುಎಸ್‌ಬಿ ಒಟಿಜಿ ಮತ್ತು ಮೈಕ್ರೋ-ಯುಎಸ್‌ಬಿ ಪೋರ್ಟ್ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹುವಾವೇ ಮೇಟ್‌ಪ್ಯಾಡ್ T8 ಟ್ಯಾಬ್ಲೆಟ್‌ 9,999 ರೂ.ಬೆಲೆಯನ್ನು ಹೊಂದಿದೆ. ಇನ್ನು ಇದರ ಎಲ್‌ಟಿಇ ಮಾದರಿಯು 10,999 ರೂ. ಬೆಲೆಯನ್ನು ಹೊಂದಿದೆ. ಇನ್ನು ಇದು ಒಂದೇ ಡೀಪ್ಸಿಯಾ ಬ್ಲೂ ಕಲರ್ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇನ್ನು ಈ ಹುವಾವೇ ಮೇಟ್‌ಪ್ಯಾಡ್ T 8 ಅಧಿಕೃತ ಮಾರಾಟ ಸೆಪ್ಟೆಂಬರ್ 15 ರಿಂದ ಫ್ಲಿಪ್‌ಕಾರ್ಟ್ ಮೂಲಕ ಪ್ರಾರಂಭವಾಗಲಿದೆ.

Most Read Articles
Best Mobiles in India

Read more about:
English summary
Huawei MatePad T8 is an entry-level tablet, priced starting at Rs. 9,999 in the country.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X