ಹುವಾವೇ ಮೀಡಿಯಾ ಪ್ಯಾಡ್‌ M5 ಲೈಟ್ 10 ಟ್ಯಾಬ್‌ ಬಿಡುಗಡೆ!

|

ಸ್ಮಾರ್ಟ್‌ಫೋನ್‌ ವಲಯದ ದೈತ್ಯ ಎಂದು ಜನಪ್ರಿಯತೆ ಪಡೆದುಕೊಂಡಿರುವ ಹುವಾವೇ ಕಂಪೆನಿ ಭಾರತದಲ್ಲಿ M ಸರಣಿಯ ಟ್ಯಾಬ್‌ ಬಿಡುಗಡೆ ಮಾಡಲಿದೆ ಎಂದು ಹಿಂದಿನ ಲೇಖನದಲ್ಲಿ ತಿಳಿಸಿದ್ದೇವು. ಅದರಂತೆ ಇದೀಗ ಹುವಾವೇ ಕಂಪೆನಿ ಭಾರತದ ಮಾರುಕಟ್ಟೆಗೆ ಮೀಡಿಯಾಪ್ಯಾಡ್‌ M5 ಲೈಟ್‌ 10 ಅನ್ನು ಬಿಡುಗಡೆ ಮಾಡಿದೆ. ಈಗಾಗ್ಲೆ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿರುವ ಹುವಾವೇ ಟ್ಯಾಬ್ಲೆಟ್‌ ಮಾರುಕಟ್ಟೆಯಲ್ಲೂ ತನ್ನ ಮಾರುಕಟ್ಟೆಯನ್ನ ಇನ್ನಷ್ಟು ವಿಸ್ತರಿಸಿಕೊಳ್ಳಲು ಪ್ಲ್ಯಾನ್‌ ರೂಪಿಸಿಕೊಂಡಿದೆ.

ಹೌದು

ಹೌದು, ಹುವಾವೇ ಕಂಪೆನಿ ತನ್ನ ಹೊಸ ಟ್ಯಾಬ್‌ ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಈ ಟ್ಯಾಬ್‌ ಮಿಡ್‌ ಸೈಕಲ್‌ ರಿಪ್ರೆಶ್‌ ಪ್ರಾಡಕ್ಟ್‌ ಆಗಿದ್ದು, ಭಾರತದ ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಲೆನೊವೊ, ಸ್ಯಾಮ್‌ಸಂಗ್ ಮತ್ತು ಆಪಲ್ ಜೊತೆ ಪೈಪೋಟಿ ನೀಡಲು ಸಜ್ಜಾಗಿದೆ. ಸದ್ಯ ಇದೀಗ ಬಿಡುಗಡೆಯಾಗಿರುವ ಮೀಡಿಯಾಪ್ಯಾಡ್‌ M5 ಲೈಟ್‌ 10 ಹುವಾವೇ ಕಿರಿನ್ 659 CPU ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 8.0 ಓರಿಯೊ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಹುವಾವೇ ಮೀಡಿಯಾ ಪ್ಯಾಡ್‌ M5 ಲೈಟ್ 10

ಹುವಾವೇ ಮೀಡಿಯಾ ಪ್ಯಾಡ್‌ M5 ಲೈಟ್ 10

ಹುವಾವೇ ಕಂಪೆನಿಯ ಮೀಡಿಯಾ ಪ್ಯಾಡ್‌ M5 ಲೈಟ್ ಎಂಟ್ರಿ ಲೆವೆಲ್‌ನ ಟ್ಯಾಬ್‌ ಆಗಿದ್ದು. ಅಫಲ್‌ ಐಪ್ಯಾಡ್‌ಗೆ ಫೈಫೋಟಿ ನೀಡಲಿದೆ. ಆದರೆ ಭಾರತದ ಟ್ಯಾಭ್ಲೆಟ್‌ಮಾರುಕಟ್ಟೆಯಲ್ಲಿ ಈಗಾಗ್ಲೆ ಲೆನೊವೊ ತನ್ನ ಪ್ರಾಬಲ್ಯ ಸಾಧಿಸಿದ್ದು, ಹುವಾವೇ ಇದರ ಜೊತೆಗೆ ಸ್ಪರ್ಧಾತ್ಮಕವಾಗಿರಬೇಕಾಗುತ್ತದೆ. ಈ ದೃಷ್ಟಿಯಿಂದ ಹುವಾವೇ ಮೀಡಿಯಾ ಪ್ಯಾಡ್‌ M5ಲೈಟ್‌ನಲ್ಲಿ ಆಕರ್ಷಕ ಫೀಚರ್ಸ್‌ಗಳಿಗೆ ಆದ್ಯತೆ ನೀಡಲಾಗಿದೆ. ಅಲ್ಲದೆ ನವೀನ ಮಾದರಿಯ ವಿನ್ಯಾಸವನ್ನು ಸಹ ನೀಡಲಾಗಿದೆ.

ಟ್ಯಾಬ್‌ನ ವಿನ್ಯಾಸ

ಟ್ಯಾಬ್‌ನ ವಿನ್ಯಾಸ

ಈ ಮೀಡಿಯಾಪ್ಯಾಡ್ M5 ಲೈಟ್ 10 1920 x 1200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಹೊಂದಿರುವ 10.1-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ 224 ಪಿಕ್ಸೆಲ್‌ ರೆಸಲ್ಯೂಶನ್‌ ಸಾಂದ್ರತೆಯನ್ನ ಹೊಂದಿದೆ. ಇದಲ್ಲದೆ ಇದು ಉತ್ತಮ ಟಚ್‌ಸ್ಕ್ರೀನ್‌ ಅನ್ನು ಹೊಂದಿದ್ದು ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ. ಸ್ಟೈಲಶ್‌ ಪೆನ್‌ ಕೂಡ ನೀಡಲಾಗಿದ್ದು, ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಬಳಕೆ ಮಾಡಬಹುದಾಗಿದೆ. ವಿಡಿಯೋ ಕರೆಗಳು ಹಾಗೂ ವಿಡಿಯೋ ವೀಕ್ಷಣೆಯಲ್ಲೂ ಉತ್ತಮ ಅನುಭವ ಸಿಗಲಿದೆ.

ಟ್ಯಾಬ್‌ನ ವಿಶೇಷತೆ

ಟ್ಯಾಬ್‌ನ ವಿಶೇಷತೆ

ಇನ್ನು ಈ ಟ್ಯಾಬ್‌ ಆಕ್ಟಾ-ಕೋರ್ ಹುವಾವೇ ಕಿರಿನ್ 659 CPU ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌8.0 ಓರಿಯೊ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 4GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಅಲ್ಲದೆ ಮೆಮೊರಿ ಕಾರ್ಡ್‌ ಮೂಲಕ 256GB ವರೆಗೆ ಶೇಖರಣಾ ಸಾಮರ್ಥ್ಯವನ್ನು ವಿಸ್ತರಣೆ ಮಾಡಬಹುದಾಗಿದೆ.

ಕ್ಯಾಮೆರಾ ಮತ್ತು ಬ್ಯಾಟರಿ

ಕ್ಯಾಮೆರಾ ಮತ್ತು ಬ್ಯಾಟರಿ

ಹುವಾವೇ ಮೀಡಿಯಾಪ್ಯಾಡ್ M5 ಲೈಟ್ 10 ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಕ್ಯಾಮೆರಾ ಸೆಟ್‌ಅಪ್‌ ಅನ್ನು ನೀಡಲಾಗಿದೆ. ಇದರ ರಿಯರ್‌ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಹೊಂದಿರುವ ಆಟೋಫೋಕಸ್‌ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಆದರೆ ಈ ಸೆಲ್ಫಿ ಕ್ಯಾಮೆರಾ ಕೇವಲ ಫಿಕ್ಸ್ಡ್‌ ಫೋಕಸ್‌ ಅನ್ನು ಮಾತ್ರ ಬೆಂಬಲಿಸುತ್ತದೆ. ಇನ್ನು ಈ ಟ್ಯಾಬ್ಲೆಟ್ 7,500mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಹೊಂದಿದ್ದು, 8W ಫಾಸ್ಟ್‌ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದಲ್ಲದೆ 13 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಈ ಟ್ಯಾಬ್‌ 22,999 ರೂ. ಬೆಲೆಯನ್ನು ಹೊಂದಿದ್ದು, ಮಾರ್ಚ್ 6 ರಿಂದ ಫ್ಲಿಪ್‌ಕಾರ್ಟ್, ಕ್ರೋಮಾ ಮತ್ತು ಮಾರಾಟ ಮಳಿಗೆಗಳ ಮೂಲಕ ಖರೀದಿಸಬಹುದಾಗಿದೆ. ಅಲ್ಲದೆ ಈ ಟ್ಯಾಬ್‌ ಶಾಂಪೇನ್ ಗೋಲ್ಡ್‌ ಮತ್ತು ಸ್ಪೇಸ್‌ ಗ್ರೇ ಕಲರ್‌ಗಳ ಆಯ್ಕೆಯಲ್ಲಿ ಖರೀದಿಸಲು ಲಭ್ಯವಿರುತ್ತದೆ.

Best Mobiles in India

English summary
The MediaPad M5 Lite 10 from Huawei will compete with tablets from brands like Apple, Lenovo and Samsung in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X