Home
ಸುದ್ದಿಜಾಲ

ಬಿರುಗಾಳಿಯಂತೆ ಎಂಟ್ರಿ ಕೊಟ್ಟ ಹುವಾವೇ ನೊವಾ 11 SE! ಮೊಬೈಲ್‌ ಪ್ರಿಯರ ಮನಗೆಲ್ಲಲಿದೆಯಾ?

ಟೆಕ್‌ ವಲಯದಲ್ಲಿ ಕಳೆದೊಂದು ವಾರದಿಂದ ಸಂಚಲನ ಮೂಡಿಸಿದ್ದ ಹುವಾವೇ ನೊವಾ 11 SE ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿದೆ. ಬಿಡುಗಡೆಗೂ ಮುನ್ನವೇ ಫೀಚರ್ಸ್‌ ಸೋರಿಕೆಯ ಮೂಲಕ ಟ್ರೆಂಡ್‌ ಕ್ರಿಯೆಟ್‌ ಮಾಡಿದ್ದ ಈ ಫೋನ್‌ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸೋದು ಗ್ಯಾರಂಟಿ ಎನ್ನುವಂತಿದೆ. ಈ ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಒಳಗೊಂಡಿದೆ.

ಹೌದು, ಹುವಾವೇ ನೋವಾ 11 SE ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 680SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 66W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಫೀಚರ್ಸ್‌ ವಿವರಗಳನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬಿರುಗಾಳಿಯಂತೆ ಎಂಟ್ರಿ ಕೊಟ್ಟ ಹುವಾವೇ ನೊವಾ 11 SE!

ಹುವಾವೇ ನೋವಾ 11 SE ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಹುವಾವೇ ನೋವಾ 11 SE ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ 100% P3 ವೈಡ್ ಕಲರ್ ಗ್ಯಾಮಟ್ ಮತ್ತು 91.85% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್‌, 10-ಬಿಟ್ ಬಣ್ಣಗಳು ಮತ್ತು P3 ವೈಡ್ ಕಲರ್ ಗ್ಯಾಮಟ್ ಅನ್ನು ನೀಡುತ್ತದೆ.

ಹುವಾವೇ ನೋವಾ 11 SE ಪ್ರೊಸೆಸರ್‌ ಯಾವುದು?
ಹುವಾವೇ ನೋವಾ 11 SE ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು ಹಾರ್ಮನಿ ಓಎಸ್ 4-ಆಧಾರಿತ ಆಂಡ್ರಾಯ್ಡ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 256GB ಹಾಗೂ 8GB RAM ಮತ್ತು 512 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆಗಳಲ್ಲಿ ಬರಲಿದೆ.

ಬಿರುಗಾಳಿಯಂತೆ ಎಂಟ್ರಿ ಕೊಟ್ಟ ಹುವಾವೇ ನೊವಾ 11 SE!

ಹುವಾವೇ ನೋವಾ 11 SE ಕ್ಯಾಮೆರಾ ಸೆಟ್‌ಅಪ್‌ ಏನಿದೆ?
ಹುವಾವೇ ನೋವಾ 11 SE ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 100 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ ಹಾಗೂ ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಹುವಾವೇ ನೋವಾ 11 SE ಬ್ಯಾಟರಿ ಮತ್ತು ಇತರೆ
ಹುವಾವೇ ನೋವಾ 11 SE ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 66W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 5G, Wi-Fi 802.11ac, ಬ್ಲೂಟೂತ್ 5.0, NFC, GPS ಮತ್ತು USB-C ಪೋರ್ಟ್ ಅನ್ನು ಬೆಂಬಲಿಸಲಿದೆ. ಹೆಚ್ಚುವರಿ ಭದ್ರತೆಗಾಗಿ ಇದು ಸೈಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ.

ಬಿರುಗಾಳಿಯಂತೆ ಎಂಟ್ರಿ ಕೊಟ್ಟ ಹುವಾವೇ ನೊವಾ 11 SE!

ಹುವಾವೇ ನೋವಾ 11 SE ಬೆಲೆ ಮತ್ತು ಲಭ್ಯತೆ
ಹುವಾವೇ ನೋವಾ 11 SE ಸ್ಮಾರ್ಟ್‌ಫೋನ್‌ ಪ್ರಸ್ತುತ ಚೀನಾದಲ್ಲಿ ಲಾಂಚ್‌ ಆಗಿದೆ. ಆದರಿಂದ ಇದರ 8GB RAM + 256 GB ಸ್ಟೋರೇಜ್‌ ಆಯ್ಕೆಯ ಬೆಲೆ 1,999 ಯುವಾನ್ (ಅಂದಾಜು 23,020ರೂ) ಬೆಲೆಯನ್ನು ಹೊಂದಿದೆ. ಇನ್ನು 8 GB RAM + 512 GB ಸ್ಟೋರೇಜ್‌ ಆಯ್ಕೆಯು 2,199 ಯುವಾನ್ (ಅಂದಾಜು 25,020ರೂ)ಬೆಲೆಯಲ್ಲಿ ಲಭ್ಯವಾಗಲಿದೆ. ಈ ಸ್ಮಾರ್ಟ್‌ಫೋನ್‌ ಕಪ್ಪು, ಬಿಳಿ ಮತ್ತು ಹಸಿರು ಬಣ್ಣದ ಆಯ್ಕೆಗಳಲ್ಲಿ ಬರಲಿದೆ.

Best Mobiles in India

English summary
Huawei Nova 11 SE with 108MP triple cameras launched
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+