Home
ಸುದ್ದಿಜಾಲ

ನೆಟ್‌ವರ್ಕ್‌ ಸಿಗ್ನಲ್‌ ಇಲ್ಲದಿದ್ದರೂ ಕಾರ್ಯನಿರ್ವಹಿಸುವ ಫೋನ್‌ ಪರಿಚಯಿಸಿದ ಹುವಾವೇ!

ಹುವಾವೇ ಕಂಪೆನಿ ತನ್ನ ಹೊಸ ನೋವಾ 11 ಸರಣಿಯನ್ನು ಪರಿಚಯಿಸಿದೆ. ಈ ಸರಣಿಯ ಸ್ಮಾರ್ಟ್‌ಫೋನ್‌ಗಳು ಸ್ಯಾಟ್‌ಲೈಟ್‌ ಕಮ್ಯೂನಿಕೇ‍ಷನ್‌ ಅನ್ನು ಬೆಂಬಲಿಸುವುದು ವಿಶೇಷವಾಗಿದೆ. ಇದರಿಂದ ನೀವು ನೆಟ್‌ವರ್ಕ್‌ ಸಿಗ್ನಲ್‌ ಇಲ್ಲದ ಜಾಗದಲ್ಲಿಯೂ ತುರ್ತು ಸಂದೇಶವನ್ನು ಕಳುಹಿಸುವುದಕ್ಕೆ ಸಾಧ್ಯವಾಗಲಿದೆ.

ಹೌದು, ಉಪಗ್ರಹ ಸಂವಹನವನ್ನು ಬೆಂಬಲಿಸುವ ಹುವಾವೇ ನೋವಾ 11 ಸರಣಿ ಸ್ಮಾರ್ಟ್‌ಫೋನ್‌ ಅನಾವರಣಗೊಳಿಸಿದೆ. ಈ ಸರಣಿಯಲ್ಲಿ ಹುವಾವೇ ನೋವಾ 11, ಹುವಾವೇ ನೋವಾ 11 ಪ್ರೊ ಮತ್ತು ಹುವಾವೇ ನೋವಾ 11 ಅಲ್ಟ್ರಾ ಫೋನ್‌ಗಳನ್ನು ಪರಿಚಯಿಸಿದೆ. ಹಾಗಾದ್ರೆ ಹುವಾವೇ ನೋವಾ 11 ಸರಣಿ ಫೋನ್‌ಗಳ ಫೀಚರ್ಸ್‌ ಹೇಗಿದೆ? ಇದರ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೆಟ್‌ವರ್ಕ್‌ ಸಿಗ್ನಲ್‌ ಇಲ್ಲದಿದ್ದರೂ ಕಾರ್ಯನಿರ್ವಹಿಸುವ ಫೋನ್‌ ಪರಿಚಯಿಸಿದ ಹುವಾವ

ಹುವಾವೇ ನೋವಾ 11

ಹುವಾವೇ ನೋವಾ 11 ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 120Hz ರಿಫ್ರೆಶ್‌ ರೇಟ್‌ ಅನ್ನು ಬೆಂಬಲಿಸಲಿದ್ದು, ಕುನ್ಲುನ್ ಗ್ಲಾಸ್ ಪ್ರೊಟೆಕ್ಷನ್‌ ಪಡೆದಿದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 778G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ರಿಯರ್‌ ಕ್ಯಾಮೆರಾ ಹೊಂದಿದೆ. ಅಲ್ಲದೆ 60 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ XD ಪೋರ್ಟ್ರೇಟ್‌ ಕ್ಯಾಮೆರಾ ಟೆಕ್ನಾಲಜಿ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಸ್ಯಾಟ್‌ಲೈಟ್‌ ಕಮ್ಯೂನಿಕೇಷನ್‌ ಹೊಂದಿರುವ ವಿಶ್ವದ ಮೊದಲ ಮಿಡ್‌ರೇಂಜ್‌ ಸ್ಮಾರ್ಟ್‌ಫೋನ್‌ ಎನಿಸಿಕೊಂಡಿದೆ. ಇದು 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 66W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ನೆಟ್‌ವರ್ಕ್‌ ಸಿಗ್ನಲ್‌ ಇಲ್ಲದಿದ್ದರೂ ಕಾರ್ಯನಿರ್ವಹಿಸುವ ಫೋನ್‌ ಪರಿಚಯಿಸಿದ ಹುವಾವ

ಹುವಾವೇ ನೋವಾ 11 ಪ್ರೊ

ಹುವಾವೇ ನೋವಾ 11 ಪ್ರೊ ಸ್ಮಾರ್ಟ್‌ಫೋನ್‌ 6.78 ಇಂಚಿನ ಕರ್ವ್ಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2652 x 1200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇನ್ನು ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ಇದು ಸ್ನಾಪ್‌ಡ್ರಾಗನ್ 778G ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಪಡೆದಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 100W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ನೆಟ್‌ವರ್ಕ್‌ ಸಿಗ್ನಲ್‌ ಇಲ್ಲದಿದ್ದರೂ ಕಾರ್ಯನಿರ್ವಹಿಸುವ ಫೋನ್‌ ಪರಿಚಯಿಸಿದ ಹುವಾವ

ಹುವಾವೇ ನೋವಾ 11 ಅಲ್ಟ್ರಾ

ಹುವಾವೇ ನೋವಾ 11 ಅಲ್ಟ್ರಾ ಸ್ಮಾರ್ಟ್‌ಫೋನ್‌ 6.78 ಇಂಚಿನ ಕರ್ವ್ಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಸ್ನಾಪ್‌ಡ್ರಾಗನ್‌ 778G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ಯಾಮೆರಾದಲ್ಲಿ ವೇರಿಯಬಲ್‌ ಅಪರ್ಚರ್‌ ಲೆನ್ಸ್‌ ನೀಡುವ ವಿಶ್ವದ ಮೊದಲ ಮಿಡ್‌ರೇಂಜ್‌ ಸ್ಮಾರ್ಟ್‌ಫೋನ್‌ ಆಗಿದೆ. ಈ ಫೋನ್‌ ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಮೇನ್‌ ಕ್ಯಾಮೆರಾವನ್ನು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಮುಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 60 ಮೆಗಾಪಿಕ್ಸೆಲ್ ವೈಡ್ ಆಂಗಲ್ ಶೂಟರ್ ಮತ್ತು 8 ಮೆಗಾಪಿಕ್ಸೆಲ್ ಪೋಟ್ರೇಟ್ ಲೆನ್ಸ್ ಅನ್ನು ನೀಡಲಾಗಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದ್ದು, 100W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.

ನೆಟ್‌ವರ್ಕ್‌ ಸಿಗ್ನಲ್‌ ಇಲ್ಲದಿದ್ದರೂ ಕಾರ್ಯನಿರ್ವಹಿಸುವ ಫೋನ್‌ ಪರಿಚಯಿಸಿದ ಹುವಾವ

ಸ್ಯಾಟ್‌ಲೈಟ್‌ ಕಮ್ಯೂನಿಕೇ‍ಷನ್‌ ವಿಶೇಷತೆ?

ಹುವಾವೇ ಈ ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿ ವಿಶೇಷವಾಗಿ ಸ್ಯಾಟ್‌ಲೈಟ್‌ ಮೂಲಕ ಮಾತನಾಡುವ ಅವಕಾಶವನ್ನು ಕಲ್ಪಿಸಿದೆ. ಆದರೆ ಸರಣಿಯ ಹುವಾವೇ ನೋವಾ 11 ಮತ್ತು ಪ್ರೊ ಮಾದರಿಗಳು ಒನ್‌ವೇ ಕಮ್ಯೂನಿಕೇಷನ್‌ಗೆ ಅವಕಾಶ ನೀಡಿದರೆ, ಹುವಾವೇ ನೋವಾ 11 ಅಲ್ಟ್ರಾ ಮಾದರಿಯು ಎರಡು-ಮಾರ್ಗ Beidou ಸ್ಯಾಟ್‌ಲೈಟ್‌ ಮೆಸೇಜ್‌ ಫೀಚರ್ಸ್‌ ಅನ್ನು ನೀಡಲಿದೆ. ಇದರಿಂದ ನೀವು ಯಾವುದೇ ನೆಟ್‌ವರ್ಕ್‌ ಸಿಗ್ನಲ್‌ ಇಲ್ಲದ ಪ್ರದೇಶದಲ್ಲಿರುವಾಗಲೂ ತ್ವರಿತ ಸಂದೇಶವನ್ನು ಕಳುಹಿಸುವುದಕ್ಕೆ ಅವಕಾಶ ನೀಡಲಿದೆ. ಅಲ್ಲದೆ ಟ್ರ್ಯಾಕಿಂಗ್ ಮಾಡುವುದಕ್ಕೆ ಕೂಡ ಅವಕಾಶವನ್ನು ಕಲ್ಪಿಸಿದೆ.

ಬೆಲೆ ಮತ್ತು ಲಭ್ಯತೆ

ಹುವಾವೇ ನೋವಾ 11 ಸರಣಿಯಲ್ಲಿ ಹುವಾವೇ ನೋವಾ 11 ಆಯ್ಕೆಯು 2,499 ಯುವಾನ್‌ (ಅಂದಾಜು 29,826ರೂ.)ಬೆಲೆಯನ್ನು ಹೊಂದಿದೆ. ಇನ್ನು ಹುವಾವೇ ನೋವಾ 11 ಪ್ರೊ ಸ್ಮಾರ್ಟ್‌ಫೋನ್‌ 3,449 ಯುವಾನ್ (ಅಂದಾಜು 41,172ರೂ) ಬೆಲೆ ಹೊಂದಿದೆ. ಆದರೆ ಹುವಾವೇ ನೋವಾ 11 ಅಲ್ಟ್ರಾ ಬೆಲೆ 4,449 ಯುವಾನ್ (ಅಂದಾಜು 53,109ರೂ.) ಆಗಿದೆ. ಈ ಸ್ಮಾರ್ಟ್‌ಫೋನ್‌ಗಳು ಬ್ಲ್ಯಾಕ್‌, ಗೋಲ್ಡ್‌, ವೈಟ್‌ ಬಣ್ಣದ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ.

Best Mobiles in India

English summary
Huawei Nova 11 series with satellite communication launched in global market.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+