Huawei: ಹುವಾವೇ ನೋವಾ 12 ಲೈಟ್ ಅಬ್ಬರಕ್ಕೆ ಟೆಕ್ ವಲಯವೇ ಕಂಗಾಲು! ಎದುರಾಳಿಗಳ ಎದೆಯಲ್ಲಿ ಕಂಪನ!
ಹುವಾವೇ ತನ್ನ ಮತ್ತೊಂದು ಫೋನ್ ಪರಿಚಯಿಸುವ ಮೂಲಕ ಟೆಕ್ ವಲಯದಲ್ಲಿ ಹಲ್‌ಚಲ್ ಎಬ್ಬಿಸಿದೆ. ಇದನ್ನು ಹುವಾವೇ ನೋವಾ 12 ಲೈಟ್ ಸ್ಮಾರ್ಟ್‌ಫೋನ್ ಎಂದು ಹೆಸರಿಸಲಾಗಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G 4G SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ.
ಹೌದು, ಹುವಾವೇ (huawei) ನೋವಾ 12 ಲೈಟ್ ಸ್ಮಾರ್ಟ್‌ಫೋನ್ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್ 1440Hz PWM ಡಿಮ್ಮಿಂಗ್ ಬೆಂಬಲಿಸುವ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಇದು 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 66W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ನೊಂದಿಗೆ ಬರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹುವಾವೇ ನೋವಾ 12 ಲೈಟ್ ಫೀಚರ್ಸ್ ಹೇಗಿದೆ?
ಹುವಾವೇ ನೋವಾ 12 ಲೈಟ್ ಸ್ಮಾರ್ಟ್‌ಫೋನ್ 6.7 ಇಂಚಿನ ಫುಲ್‌ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2412 x 1084 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 1440Hz PWM ಡಿಮ್ಮಿಂಗ್ ಅನ್ನು ಬೆಂಬಲಿಸಲಿದ್ದು, 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಜೊತೆಗೆ P3 ಕಲರ್ ಗ್ಯಾಮಟ್ ಅನ್ನು ಹೊಂದಿದೆ. ಇದಲ್ಲದೆ ಭದ್ರತೆಗಾಗಿ, ಇನ್-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಹೊಂದಿದೆ.
ಹುವಾವೇ ನೋವಾ 12 ಲೈಟ್ ಪ್ರೊಸೆಸರ್ ಯಾವುದು?
ಹುವಾವೇ ನೋವಾ 12 ಲೈಟ್ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G 4G SoC ಪ್ರೊಸೆಸರ್ ಅನ್ನು ಹೊಂದಿದೆ. ಇದು HarmonyOS 4 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 256GB ಹಾಗೂ 512GB ಇಂಟರ್ ಸ್ಟೋರೇಜ್ ವೇರಿಯೆಂಟ್ ಆಯ್ಕೆಯಲ್ಲಿ ಬರಲಿದೆ.

ಹುವಾವೇ ನೋವಾ 12 ಲೈಟ್ ಕ್ಯಾಮೆರಾ ಸೆಟಪ್ ಏನಿದೆ?
ಹುವಾವೇ ನೋವಾ 12 ಲೈಟ್ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು ಮೂರನೇ ಕ್ಯಾಮೆರಾ ಮ್ಯಾಕ್ರೋ ಲೆನ್ಸ್‌ನೊಮದಿಗೆ ಬರಲಿದೆ. ಇದಲ್ಲದೆ 60 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಇನ್ನು ಕ್ಯಾಮೆರಾ ಮೂಲಕ 4K ವೀಡಿಯೊ ರೆಕಾರ್ಡಿಂಗ್ ಮಾಡಬಹುದಾಗಿದ್ದು, 720p@960fps ಸೂಪರ್ ಸ್ಲೋ-ಮೋಷನ್ ವೀಡಿಯೊವನ್ನು ಬೆಂಬಲಿಸುತ್ತದೆ.
ಹುವಾವೇ ನೋವಾ 12 ಲೈಟ್ ಬ್ಯಾಟರಿ ಮತ್ತು ಇತರೆ ಸೌಲಭ್ಯ
ಹುವಾವೇ ನೋವಾ 12 ಲೈಟ್ ಸ್ಮಾರ್ಟ್‌ಫೋನ್ 66W ವೇಗದ ಚಾರ್ಜಿಂಗ್‌ನೊಂದಿಗೆ 4500mAh ಬ್ಯಾಟರಿಯನ್ನು ಹೊಂದಿದೆ. ಇದು ಕೇವಲ 15 ನಿಮಿಷಗಳ ಚಾರ್ಜ್‌ನೊಂದಿಗೆ 60% ಬ್ಯಾಟರಿಯನ್ನು ತಲುಪುತ್ತದೆ. ಅಲ್ಲದೆ ಸಂಪೂರ್ಣ ಚಾರ್ಜ್ ಆಗುವುದಕ್ಕೆ ಕೇವಲ 31 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 2.4GHz ಮತ್ತು 5GHz WLAN ಆವರ್ತನಗಳನ್ನು ಬೆಂಬಲಿಸುತ್ತದೆ. ಅಲ್ಲದೆ ಹಾಟ್‌ಸ್ಪಾಟ್ ರಚನೆ ಮತ್ತು ನೇರ WLAN ಸಂಪರ್ಕಗಳನ್ನು ಸುಗಮಗೊಳಿಸುತ್ತದೆ. ಇದು ಬ್ಲೂಟೂತ್ 5.2 ಅನ್ನು ಬೆಂಬಲಿಸಲಿದ್ದು, ಹೈ-ಡೆಫಿನಿಷನ್ ಆಡಿಯೊಗಾಗಿ BLE, SBC, AAC ಮತ್ತು LDAC ಅನ್ನು ಬೆಂಬಲಿಸುತ್ತದೆ.

ಹುವಾವೇ ನೋವಾ 12 ಲೈಟ್ ಬೆಲೆ ಮತ್ತು ಲಭ್ಯತೆ
Huawei Nova 12 Lite ಚೀನಾದಲ್ಲಿ ಬಿಡುಗಡೆ ಆಗಿದ್ದು, ಇದರ ಆರಂಭಿಕ ಬೆಲೆ 2499 ಯುವಾನ್ (ಅಂದಾಜು 29,083ರೂ) ಆಗಿದೆ. ಆದರೆ ಇದರ 512GB ರೂಪಾಂತರದ ಆಯ್ಕೆಯು 2,799 ಯುವಾನ್ (ಅಂದಾಜು 32,575ರೂ)ಬೆಲೆಯನ್ನು ಹೊಂದಿದೆ. ಇದನ್ನು ನೀವು ನೀಲಿ, ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.


Click it and Unblock the Notifications








