Home
ಸುದ್ದಿಜಾಲ

ಭಾರಿ ಸಂಚಲನ ಸೃಷ್ಟಿಸಿದ ಹುವಾವೇ ನೋವಾ 12 ಅಲ್ಟ್ರಾ ಫೋನ್‌! 60 MP ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ!

ಹುವಾವೇ ಕಂಪೆನಿಯ ಫೋನ್‌ಗಳಿಗೆ ಟೆಕ್‌ ವಲಯದಲ್ಲಿ ಸಖತ್‌ ಡಿಮ್ಯಾಂಡ್‌ ಇದೆ. ವಿಭಿನ್ನ ಶೈಲಿಯ ಡಿಸ್‌ಪ್ಲೇ, ಪವರ್‌ಫುಲ್‌ ಪ್ರೊಸೆಸರ್‌ ಕಾರಣಕ್ಕಾಗಿ ಹುವಾವೇ ಫೋನ್‌ಗಳು ಹೆಚ್ಚು ಸದ್ದು ಮಾಡುತ್ತವೆ. ಇದೀಗ ಅದೇ ಹಾದಿಯಲ್ಲಿ ಹುವಾವೇ ನೋವಾ 12 ಸ್ಮಾರ್ಟ್‌ಫೋನ್‌ ಬಿಡುಗಡೆಗೂ ಮುನ್ನವೇ ಮಾರುಕಟ್ಟೆಯಲ್ಲಿ ಹಲ್‌ಚಲ್‌ ಎಬ್ಬಿಸಿದೆ.

ಹೌದು, ಹುವಾವೇ ನೋವಾ 12 ಸರಣಿಯು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡಲಿವೆ. ಈ ಸಮಯದಲ್ಲಿ ಹುವಾವೇ 12 ಸರಣಿಯ ಫೀಚರ್ಸ್‌ ಆನ್‌ಲೈನ್‌ನಲ್ಲಿ ಬಹಿರಂಗವಾಗಿದೆ. ಅದರಂತೆ ಹುವಾವೇ ನೋವ 12 ಸರಣಿಯಲ್ಲಿ ಹುವಾವೇ ನೋವಾ 12 ಲೈಟ್‌, ಹುವಾವೇ ನೋವಾ 12 ಪ್ರೊ ಮತ್ತು ಹುವಾವೇ ನೋವಾ 12 ಅಲ್ಟ್ರಾ ಫೋನ್‌ಗಳು ಬರಲಿವೆ. ಇದರಲ್ಲಿ ಹುವಾವೇ ನೋವಾ 12 ಅಲ್ಟ್ರಾ ಸಾಕಷ್ಟು ಗಮನಸೆಳೆದಿದೆ. ಹಾಗಾದ್ರೆ ಹುವಾವೇ 12 ಅಲ್ಟ್ರಾದಲ್ಲಿ ಏನೆಲ್ಲಾ ಫೀಚರ್ಸ್‌ ನಿರೀಕ್ಷಿಸಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರಿ ಸಂಚಲನ ಸೃಷ್ಟಿಸಿದ ಹುವಾವೇ ನೋವಾ 12 ಅಲ್ಟ್ರಾ ! 60 MP ಸೆಲ್ಫಿ ಕ್ಯಾಮೆರಾ!

ಹುವಾವೇ ನೋವಾ 12 ಅಲ್ಟ್ರಾ ಡಿಸ್‌ಪ್ಲೇ ನಿರೀಕ್ಷೆ?
ಹುವಾವೇ ನೋವಾ 12 ಅಲ್ಟ್ರಾ ಸ್ಮಾರ್ಟ್‌ಫೋನ್‌ 6.78 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1200 x 2652 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿ ಬರಲಿದೆ. ಇನ್ನು ಡಿಸ್‌ಪ್ಲೇ 429 ppi ಪಿಕ್ಸೆಲ್‌ ಸಾಂದ್ರತೆಯನ್ನು ಒಳಗೊಂಡಿರಲಿದ್ದು, 120 Hz ರಿಫ್ರೆಶ್ ರೇಟ್ ಬೆಂಬಲಿಸುವ ನಿರೀಕ್ಷೆಯನ್ನು ಇಡಲಾಗಿದೆ.

ಹುವಾವೇ ನೋವಾ 12 ಅಲ್ಟ್ರಾ ಪ್ರೊಸೆಸರ್‌ ಯಾವುದು?
ಹುವಾವೇ ನೋವಾ 12 ಅಲ್ಟ್ರಾ ಸ್ಮಾರ್ಟ್‌ಫೋನ್‌ ಕಿರಿನ್‌ 9000S ಚಿಪ್‌ಸೆಟ್‌ ಹೊಂದಿರಲಿದ್ದು, ಹಾರ್ಮೋನಿ OS v4.0ನಲ್ಲಿ ರನ್‌ ಆಗಲಿದೆ ಎನ್ನಲಾಗಿದೆ. ಹಾಗೆಯೇ 512 GB ಇನ್‌ಬಿಲ್ಟ್‌ ಸ್ಟೊರೇಜ್‌ನಲ್ಲಿ ಬರಲಿದೆ ಎಂದು ವರದಿಯಾಗಿದೆ. ಇನ್ನುಳಿದಂತೆ ಇದರ RAM ವಿವರಗಳು ಹಾಗೂ ಮೆಮೊರಿ ಕಾರ್ಡ್‌ ಬೆಂಬಲಿಸುವುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಭಾರಿ ಸಂಚಲನ ಸೃಷ್ಟಿಸಿದ ಹುವಾವೇ ನೋವಾ 12 ಅಲ್ಟ್ರಾ ! 60 MP ಸೆಲ್ಫಿ ಕ್ಯಾಮೆರಾ!

ಹುವಾವೇ ನೋವಾ 12 ಅಲ್ಟ್ರಾ ಕ್ಯಾಮೆರಾ ಸೆಟಪ್‌
ಹುವಾವೇ ನೋವಾ 12 ಅಲ್ಟ್ರಾ ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ರಚನೆ ಪಡೆದಿರಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 32 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 12 ಮೆಗಾಪಿಕ್ಸೆಲ್‌ ಸೆನ್ಸಾರ್‌ ಇರಲಿದೆ. ಇದರ ಮೇನ್‌ ಹೈಲೈಟ್‌ ಎಂದರೆ ಮುಂಭಾಗದಲ್ಲಿ 60 MP ಸೆನ್ಸಾರ್‌ ಮತ್ತು 16 MP ಸೆನ್ಸಾರ್‌ ಸಾಮರ್ಥ್ಯದ ಡ್ಯುಯಲ್ ಸೆಲ್ಫಿ ಕ್ಯಾಮೆರಾ ಹೊಂದಿರುವುದು.

ಹುವಾವೇ ನೋವಾ 12 ಅಲ್ಟ್ರಾ ಬ್ಯಾಟರಿ ಮತ್ತು ಇತರೆ
ಹುವಾವೇ ನೋವಾ 12 ಅಲ್ಟ್ರಾ ಸ್ಮಾರ್ಟ್‌ಫೋನ್‌ 4,600mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರಲಿದೆ. ಇದು 100W ಚಾರ್ಜಿಂಗ್‌ ವೇಗವನ್ನು ಬೆಂಬಲಿಸುವ ನಿರೀಕ್ಷೆಯನ್ನು ಇಡಲಾಗಿದೆ. ಇದರೊಂದಿಗೆ ಈ ಸ್ಮಾರ್ಟ್‌ಫೋನ್‌ ದ್ವಿಮುಖ ಉಪಗ್ರಹ ಸಂವಹನ, AI ಏರ್-ಟು-ಏರ್ ಕಂಟ್ರೋಲ್ ಮತ್ತು ಸ್ಮಾರ್ಟ್ ಪಾವತಿಯಂತಹ ಇತರ ಫೀಚರ್ಸ್‌ಗಳನ್ನು ಬೆಂಬಲಿಸಲಿದೆ.

ಭಾರಿ ಸಂಚಲನ ಸೃಷ್ಟಿಸಿದ ಹುವಾವೇ ನೋವಾ 12 ಅಲ್ಟ್ರಾ ! 60 MP ಸೆಲ್ಫಿ ಕ್ಯಾಮೆರಾ!

ಹುವಾವೇ ನೋವಾ 12 ಅಲ್ಟ್ರಾ ಸ್ಮಾರ್ಟ್‌ಫೋನ್‌ ಬೆಲೆ ಮತ್ತು ಲಭ್ಯತೆ
ಹುವಾವೇ ನೋವಾ 12 ಅಲ್ಟ್ರಾ ಸ್ಮಾರ್ಟ್‌ಫೋನ್‌ ಬೆಲೆ ವಿವರಗಳು ಇನ್ನು ಬಹಿರಂಗವಾಗಿಲ್ಲ. ಈ ಸ್ಮಾರ್ಟ್‌ಫೋನ್‌ ಚೀನಾದಲ್ಲಿ ಬಿಡುಗಡೆ ಆಗಲಿದೆ. ಇದು ಸಿಗ್ನೇಚರ್‌ ನೀಲಿ ಬಣ್ಣ, ಅಬ್ಸಿಡಿಯನ್ ಕಪ್ಪು ಮತ್ತು ಸ್ಮೋಕ್ ಗ್ರೇ ಬಣ್ಣದ ಆಯ್ಕೆಗಳಲ್ಲಿ ದೊರೆಯಲಿದೆ. ಇದು ಭಾರತಕ್ಕೆ ಎಂಟ್ರಿ ನೀಡುವ ಬಗ್ಗೆ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಇದರ ಫೀಚರ್ಸ್‌ಗಳನ್ನು ಗಮನಿಸಿದರೆ ಇದು ಟಾಪ್‌ ಎಂಡ್‌ ಪ್ರೈಸ್‌ಟ್ಯಾಗ್‌ನಲ್ಲಿ ಬರುವ ನಿರೀಕ್ಷೆಯಿದೆ.

Best Mobiles in India

English summary
Huawei Nova 12 Ultra Smartphone specifications leaked before launch: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+