Home
ಸುದ್ದಿಜಾಲ

ಸೈಲೆಂಟ್‌ ಆಗಿ ಎಂಟ್ರಿ ಕೊಟ್ಟ ಹುವಾವೇ ನೋವಾ Y62: ಫೀಚರ್ಸ್‌ ಮಾತ್ರ ಬೆಂಕಿ

ಹೊಸ ವರ್ಷದ ಮೊದಲ ದಿನವೇ ಹುವಾವೇ ಕಂಪೆನಿ ಟೆಕ್‌ ವಲಯದಲ್ಲಿ ಧೂಳೆಬ್ಬಿಸಿದೆ. ಸ್ಮಾರ್ಟ್‌ಫೋನ್‌ ಪ್ರಿಯರಿಗೆ ಯಾವುದೇ ಮುನ್ಸೂಚನೆ ನೀಡದ ಸೈಲೆಂಟ್‌ ಆಗಿ ಹುವಾವೇ ನೋವಾ Y62 ಸರಣಿಯನ್ನು ಅನಾವರಣಗೊಳಿಸಿದೆ. ಇದರ ಫೀಚರ್ಸ್‌ ಹಾಗೂ ವಿನ್ಯಾಸವನ್ನು ತಿಳಿದ ಗ್ರಾಹಕರು ದಂಗಾಗುವಂತೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಹೊಸ ವರ್ಷಕ್ಕೆ ಹೊಸ ಆರಂಭ ಎನ್ನುವಂತಿದೆ.

ಹೌದು, ಹುವಾವೇ ನೋವಾ Y62 ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್‌ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದು 22.5W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿಯನ್ನು ಹೊಂದಿದೆ. ಹಾಗಾದ್ರೆ ಹುವಾವೇ ನೋವಾ Y62 ಫೋನ್‌ನಲ್ಲಿ ಯಾವೆಲ್ಲಾ ಫೀಚರ್ಸ್‌ ನೀಡಲಾಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸೈಲೆಂಟ್‌ ಆಗಿ ಎಂಟ್ರಿ ಕೊಟ್ಟ ಹುವಾವೇ ನೋವಾ Y62: ಫೀಚರ್ಸ್‌ ಮಾತ್ರ ಬೆಂಕಿ

ಹುವಾವೇ ನೋವಾ Y62 ಡಿಸ್‌ಪ್ಲೇ ಹೇಗಿದೆ?
ಹುವಾವೇ ನೋವಾ Y62 ಸ್ಮಾರ್ಟ್‌ಫೋನ್‌ 6.52 ಇಂಚಿನ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಡಿಸ್‌ಪ್ಲೇಯು 60 Hz ಫ್ರೇಮ್ ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು, 20:9 ರಚನೆಯ ಅನುಪಾತದಲ್ಲಿದೆ.

ಹುವಾವೇ ನೋವಾ Y62 ಪ್ರೊಸೆಸರ್‌ ಯಾವುದು?
ಹುವಾವೇ ನೋವಾ Y62 ಸ್ಮಾರ್ಟ್‌ಫೋನ್‌ ಆಕ್ಟಾ ಕೊರ್‌ ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು Android 12 ದೊಂದಿಗೆ EMUI 12ನಲ್ಲಿ ಕಾರ್ಯನಿರ್ವಹಿಸಲಿದೆ. ಇನ್ನು ಸ್ಮಾರ್ಟ್‌ಫೋನ್‌ 4 GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ನೊಂದಿಗೆ ಬರಲಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿದೆ.

ಸೈಲೆಂಟ್‌ ಆಗಿ ಎಂಟ್ರಿ ಕೊಟ್ಟ ಹುವಾವೇ ನೋವಾ Y62: ಫೀಚರ್ಸ್‌ ಮಾತ್ರ ಬೆಂಕಿ

ಹುವಾವೇ ನೋವಾ Y62 ಕ್ಯಾಮೆರಾ ಸೆಟಪ್‌
ಹುವಾವೇ ನೋವಾ Y62 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾದೊಂದಿಗೆ ಬರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 2ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್‌ ಹಾಗೂ ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಡೆಪ್ತ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 5 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಹುವಾವೇ ನೋವಾ Y62 ಬ್ಯಾಟರಿ ಮತ್ತು ಇತರೆ
ಹುವಾವೇ ನೋವಾ Y62 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 22.5W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್, 4G VoLTE, Wi-Fi 802.11 b/g/n, Bluetooth 5.1, GPS, USB-C ಪೋರ್ಟ್ ಅನ್ನು ಒಳಗೊಂಡಿದೆ. ಇದು ಸೈಡ್-ಫೇಸಿಂಗ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 3.5mm ಆಡಿಯೊ ಜ್ಯಾಕ್‌ನಂತಹ ಫೀಚರ್ಸ್‌ಗಳನ್ನು ಹೊಂದಿದೆ.

ಸೈಲೆಂಟ್‌ ಆಗಿ ಎಂಟ್ರಿ ಕೊಟ್ಟ ಹುವಾವೇ ನೋವಾ Y62: ಫೀಚರ್ಸ್‌ ಮಾತ್ರ ಬೆಂಕಿ

ಹುವಾವೇ ನೋವಾ Y62 ಬೆಲೆ ಮತ್ತು ಲಭ್ಯತೆ
ಹುವಾವೇ ನೋವಾ Y62 ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿ ಮಾತ್ರ ಬಿಡುಗಡೆ ಆಗಿದೆ. ಆದರೆ ಇದರ ಬೆಲೆ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಇದು ಫಸ್ಟ್‌ ಸೇಲ್‌ ದಿನದಂದು ಬೆಲೆ ವಿವರವನ್ನು ಬಹಿರಂಗಗೊಳಿಸುವ ಸಾಧ್ಯತೆಯಿದೆ. ಈ ಸ್ಮಾರ್ಟ್‌ಫೋನ್‌ ಸಫೈರ್ ಬ್ಲೂ ಮತ್ತು ಮಿಡ್‌ನೈಟ್ ಬ್ಲ್ಯಾಕ್‌ ಕಲರ್‌ ಆಯ್ಕೆಗಳಲ್ಲಿ ದೊರೆಯಲಿದೆ.

ಇದಲ್ಲದೆ ಹುವಾವೇ ಕಂಪೆನಿ ಇತ್ತೀಚಿಗೆ ಹುವಾವೇ (huawei) ನೋವಾ 12 ಲೈಟ್ ಸ್ಮಾರ್ಟ್‌ಫೋನ್‌ ಬಿಡುಗಡೆ ಆಗಿದೆ. ಈ ಸ್ಮಾರ್ಟ್‌ಫೋನ್‌ 1440Hz PWM ಡಿಮ್ಮಿಂಗ್‌ ಬೆಂಬಲಿಸುವ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಇದು 4500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 66W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

Best Mobiles in India

English summary
Huawei Nova Y62 with 50MP triple cameras launched: Price Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+