ಗ್ರಾಹಕರ ನೆಚ್ಚಿನ ಸ್ಮಾರ್ಟ್‌ಫೋನ್ ಆದ ನೋಕಿಯಾ 7 ಪ್ಲಸ್..!
ಯುರೋಪ್‌ನ ಪ್ರತಿಷ್ಟಿತ ಸಂಸ್ಥೆ ಎಕ್ಸ್‌ಪರ್ಟ್ ಇಮೇಜಿಂಗ್ ಮತ್ತು ಸೌಂಡ್ ಅಸೋಸಿಯೇಷನ್‌ನಿಂದ ಕೊಡಲ್ಪಡುವ ಎಸಾ (EISA) ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ. ಜಗತ್ತಿನ ಪ್ರಸಿದ್ಧ 25ಕ್ಕೂ ಹೆಚ್ಚು ಟೆಕ್ ಮ್ಯಾಗಜೀನ್‌ಗಳು ಸೇರಿಕೊಂಡು ನೀಡುವ ಪ್ರಶಸ್ತಿಯು ಅನೇಕ ವಿಭಾಗಗಳನ್ನು ಹೊಂದಿದೆ.

ಹೈ ಫೈ, ಫೋಟೋಗ್ರಾಫಿ, ಹೋಮ್ ಥಿಯೇಟರ್ ಆಡಿಯೋ, ಹೋಮ್ ಥಿಯೇಟರ್ ಡಿಸ್‌ಪ್ಲೇ ಮತ್ತು ವಿಡಿಯೋ, ಕಾರ್ ಎಲೆಕ್ಟ್ರಾನಿಕ್ಸ್ ಮತ್ತು ಮೊಬೈಲ್ ಫೋನ್ ವಿಭಾಗವನ್ನು ಒಳಗೊಂಡಿದೆ. ಈ ವಿಭಾಗಗಳಲ್ಲೂ ಉಪ ವಿಭಾಗಗಳಿದ್ದೂ, ಮೊಬೈಲ್ ಫೋನ್ ವಿಭಾಗದಲ್ಲಿ ಯಾವ ಯಾವ ಸ್ಮಾರ್ಟ್‌ಫೋನ್‌ಗಳು ಮತ್ತು ಗ್ಯಾಡ್ಜೆಟ್ಸ್‌ಗಳು ಪ್ರಶಸ್ತಿ ಬಾಚಿಕೊಂಡಿವೆ ನೋಡೋಣ.

ಉತ್ತಮ ಸ್ಮಾರ್ಟ್‌ಫೋನ್
ಎಸಾ ನೀಡುವ ಉತ್ತಮ ಸ್ಮಾರ್ಟ್‌ಫೋನ್ ಪ್ರಶಸ್ತಿಗೆ ಹುವಾವೆ ಪಿ20 ಪ್ರೋ ಸ್ಮಾರ್ಟ್‌ಫೋನ್ ಭಾಜನವಾಗಿದೆ. 6.1 ಇಂಚ್ ಡಿಸ್‌ಪ್ಲೇ, 1080x2240px ರೆಸಲೂಷನ್, AMOLED ಸ್ಕ್ರೀನ್, 18:9 ಆಸ್ಪೆಕ್ಟ್ ರೇಷಿಯೋ, 4000mAh ಬ್ಯಾಟರಿ ಸಾಮರ್ಥ್ಯ ಹೊಂದಿರುವ ಹುವಾವೆ ಪಿ20 ಪ್ರೋ ಅರ್ಹವಾಗಿಯೇ ಉತ್ತಮ ಸ್ಮಾರ್ಟ್‌ಫೋನ್ ಪ್ರಶಸ್ತಿ ಪಡೆದಿದೆ. ಅತ್ಯಾಧುನಿಕವಾಗಿರುವ ತಂತ್ರಜ್ಞಾನದ ಉನ್ನತಿ ಸಾಧಿಸಿರುವ ಸ್ಮಾರ್ಟ್‌ಫೋನ್ ಇದಾಗಿದೆ. 40 MP ಪ್ರೈಮರಿ ಕ್ಯಾಮೆರಾ ಹಾಗೂ 20MP ಮತ್ತು 8MP ಸೆಕೆಂಡರಿ ಕ್ಯಾಮೆರಾಗಳನ್ನು ಹೊಂದಿದೆ.

ಖರೀದಿಗೆ ಉತ್ತಮ ಸ್ಮಾರ್ಟ್‌ಫೋನ್
ಅಗ್ಗದ ದರದಲ್ಲಿ ಉತ್ತಮ ಕಾರ್ಯನಿರ್ವಹಣೆ ನೀಡುವ ಸ್ಮಾರ್ಟ್‌ಫೋನ್ ಖರೀದಿಸಬೇಕೆಂಬ ಹಂಬಲ ಎಲ್ಲರಿಗೂ ಇರುತ್ತೆ. ಅದಕ್ಕಂತಾನೇ ಎಸಾ ನೋವಾ ಎಲೆಮೆಂಟ್ 10 ಸ್ಮಾರ್ಟ್‌ಫೋನ್‌ನ್ನು ಖರೀದಿಗೆ ಉತ್ತಮ ಮೊಬೈಲ್ ಎಂದು ಅಂತಿಮಗೊಳಿಸಿದೆ. ಆಧುನಿಕ ವಿನ್ಯಾಸದೊಂದಿಗೆ 19:9 ಫುಲ್ ಹೆಚ್‌ಡಿ+ ಸ್ಕ್ರೀನ್ ರೆಸಲೂಷನ್, ಡಿಟಿಎಸ್ ಸೌಂಡ್ ತಂತ್ರಜ್ಞಾನ ಹಾಗೂ ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ ಹೊಂದಿದ್ದು, ಎರಡು 16MP ಸೋನಿ IMX499 ಸೆನ್ಸಾರ್ ಹೊಂದಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಸೆರೆ ಹಿಡಿದ ಚಿತ್ರಗಳು 96MP ರೆಸಲೂಷನ್ ಹೊಂದಿರುವುದು ಕ್ಯಾಮೆರಾ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ.

ಗ್ರಾಹಕರ ಸ್ಮಾರ್ಟ್‌ಫೋನ್
ಗ್ರಾಹಕರಿಗೆ ಯಾವಾಗಲೂ ನಂಬಿಕೆಯ ಪ್ರತಿಬಿಂಬವಾಗಿರುವ ನೋಕಿಯಾ ಎಸಾ ಘೋಷಿಸಿರುವ ಪ್ರಶಸ್ತಿಯಲ್ಲಿ ಮೋಡಿ ಮಾಡಿದೆ. ನೋಕಿಯಾ 7ಪ್ಲಸ್ ಸ್ಮಾರ್ಟ್‌ಫೋನ್ ಗ್ರಾಹಕರ ನೆಚ್ಚಿನ ಸ್ಮಾರ್ಟ್‌ಫೋನ್ ಆಗಿ ಆಯ್ಕೆಯಾಗಿದೆ. ಆಂಡ್ರಾಯ್ಡ್ ಒನ್ ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್ ಹೊಂದಿರುವ ನೋಕಿಯಾ 7 ಪ್ಲಸ್ 6 ಇಂಚ್ ಪೋಲಾರಾಯ್ಸಡ್ ಐಪಿಎಸ್ ಸ್ಕ್ರೀನ್, 2160x1080px ಡಿಸ್‌ಪ್ಲೇ, 12MP ಮತ್ತು 13MP ಡ್ಯುಯಲ್ ಕ್ಯಾಮೆರಾ ವ್ಯವಸ್ಥೆ ಹಾಗೂ 3800mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.

ಲೈಫ್‌ಸ್ಟೈಲ್ ಸ್ಮಾರ್ಟ್‌ಫೋನ್
ಆಕರ್ಷಕ ಅಲ್ಯುಮಿನಿಯಂ ಫ್ರೇಂ ಮತ್ತು ಗ್ಲಾಸ್ ಬ್ಯಾಕ್ ವಿನ್ಯಾಸ ಹೊಂದಿರುವ ಹಾನರ್ 10 ಸ್ಮಾರ್ಟ್‌ಫೋನ್ ನಾಲ್ಕು ವಿವಿಧ ಆಕರ್ಷಕ ಬಣ್ಣಗಳಲ್ಲಿ ಕಾಣುತ್ತದೆ. ಅದಕ್ಕಾಗಿಯೇ ಹಾನರ್ 10ಗೆ ಎಸಾ ಲೈಫ್‌ಸ್ಟೈಲ್ ಅವಾರ್ಡ್ ನೀಡಿದೆ. ಅತ್ಯಾಧುನಿಕ ಕ್ಯಾಮೆರಾ ಸಿಸ್ಟಮ್ ಹೊಂದಿರುವ ಹಾನರ್ 10 ಯುವ ಜನಾಂಗದ ಲೈಫ್ ಸ್ಟೈಲ್ ಪ್ರತಿಕವಾಗಿದೆ. 5.84 ಇಂಚ್ ಐಪಿಎಸ್ ಸ್ಕ್ರೀನ್, 2280x1080px ರೆಸಲೂಷನ್ (19:9 ರೇಷಿಯೋ) HiSilicon Kirin 970 ಒಕ್ಟಾಕೋರ್ ಚಿಪ್‌ಸೆಟ್ ಮತ್ತು 2400mAh ಬ್ಯಾಟರಿ ಹೊಂದಿದೆ. 16MP ಹಾಗೂ 24MP ಡ್ಯುಯಲ್ ಎಐ ಕ್ಯಾಮೆರಾ ವ್ಯವಸ್ಥೆ ಹೊಂದಿದೆ. 500ಕ್ಕೂ ಹೆಚ್ಚು ವಿವಿಧ ಲೈಫ್‌ಸ್ಟೈಲ್ ಸಂದರ್ಭಗಳಲ್ಲಿ ಹಾನರ್ 10 ಉತ್ತಮ ಲೈಫ್‌ಸ್ಟೈಲ್ ಚಿಹ್ನೆಯಾಗಿ ಗುರುತಿಸಿಕೊಂಡಿದೆ.

ಇತರ ಪ್ರಶಸ್ತಿಗಳು
ಎಸಾ ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಇನ್ನು ಅನೇಕ ಪ್ರಶಸ್ತಿಗಳನ್ನು ನೀಡಿದ್ದು, ಅವು ಕೆಳಗಿನಂತಿವೆ
ಎಸಾ ಮೊಬೈಲ್ ಆಡಿಯೋ ಪ್ಲೇಯರ್- ಪಾಯನೀರ್ XDP- 02U
ಎಸಾ ವೈರ್‌ಲೆಸ್ ಇನ್‌ಇಯರ್ ಹೆಡ್‌ಫೋನ್‌ಗಳು- ಜೆಬಿಎಲ್ ಎಂಡ್ಯೂರೆನ್ಸ್ ಡೈವ್
ಎಸಾ ಮೊಬೈಲ್ ಲೌಡ್‌ಸ್ಪೀಕರ್- ಜೆಬಿಎಲ್ ಎಕ್ಸ್‌ಟ್ರಿಮ್ 2
ಎಸಾ ನಾಯ್ಸ್ ಕ್ಯಾನ್ಸಲಿಂಗ್ ಹೆಡ್‌ಫೋನ್‌ಗಳು - AKG N700NC
ಎಸಾ ಎಐ ಲೌಡ್‌ಸ್ಪೀಕರ್ - ಎಲ್‌ಜಿ ಎಕ್ಸ್‌ಬೂಮ್ ಎಐ ಥಿಂಕ್ಯೂ WK7
ಎಸಾ ಪೋರ್ಟೆಬಲ್ ಡ್ಯಾಕ್/ಹೆಡ್‌ಫೋನ್ ಆಂಪ್ಲಿಫೀಯರ್ - IFI ಆಡಿಯೋ XDSD


Click it and Unblock the Notifications








