Home
ಸುದ್ದಿಜಾಲ

'ಹುವಾವೆ ಪಿ30 ಪ್ರೊ' ಮೊದಲ ಸೇಲ್ ನೋಡಿ ಆಪಲ್, ಒನ್‌ಪ್ಲಸ್ ಸುಸ್ತಾಗಿದ್ದು ಏಕೆ?!

ಭಾರತದ ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿರುವ ಹುವಾವೆಯ ನೂತನ 'ಹುವಾವೆ ಪಿ30' ಸರಣಿ ಸ್ಮಾರ್ಟ್‌ಫೋನ್‌ಗಳು ಮೊದಲ ಸೇಲ್‌ನಲ್ಲಿ ಭರ್ಜರಿ ಮಾರಾಟ ಕಂಡಿವೆ. ಏಪ್ರಿಲ್ 15 ರಿಂದ ಮೊದಲ ಸೇಲ್‌ಗೆ ಬಂದಿದ್ದ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಾದ ಹುವಾವೆ ಪಿ30 ಮತ್ತು ಹುವಾವೆ ಪಿ30 ಪ್ರೊಗಳು ಮೊದಲ ಸೇಲ್‌ನಲ್ಲಿ ಸಂಪೂರ್ಣ ಮಾರಾಟ ಕಂಡಿದ್ದು, ಏಪ್ರಿಲ್ 17 ರಂದು ಅಂದರೆ ನಾಳೆ ಎರಡನೇ ಸೇಲ್ ಅನ್ನು ಅಮೆಜಾನ್‌.ಇನ್‌ ಇ-ಕಾಮರ್ಸ್ ತಾಣದಲ್ಲಿ ಆಯೋಜನೆ ಮಾಡಲಾಗಿದೆ.

ಹೌದು,ಹುವಾವೆ ಪಿ30 ಪ್ರೊ ಸ್ಮಾರ್ಟ್‌ಫೋನ್ ಅರೋರಾ ಮತ್ತು ಬ್ರೀಥಿಂಗ್ ಕ್ರಿಸ್ಟ್ ಬಣ್ಣದಲ್ಲಿ ಲಭ್ಯವಾಗುತ್ತಿದ್ದು, 8 ಜಿಬಿ RAM ಮತ್ತು 256 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯ ಹೊಂದಿರುವ ಈ ಸ್ಮಾರ್ಟ್‌ಪೋನ್ 71,990 ರೂಪಾಯಿ ಬೆಲೆಗೆ ಲಭ್ಯವಾಗುತ್ತಿದೆ. ಆಫರ್‌ನ ಭಾಗವಾಗ, ಈ ಫೋನ್ ಮೇಲೆ 2000 ರೂಪಾಯಿ ರಿಯಾಯಿತಿ ಹಾಗೂ ಆಫರ್ ಬೆಲೆಯಲ್ಲಿ ಹುವಾವೆ ಸ್ಮಾರ್ಟ್‌ವಾಚ್ ಕೂಡ ಲಭ್ಯವಾಗಲಿದೆ. ಈ ವಾಚ್‌ನ ಮೂಲ ಬೆಲೆ 15,990 ರೂಪಾಯಿ ಆಗಿದ್ದು, ಇದನ್ನು ಫೋನ್ ಜೊತೆ ಕೇವಲ 2000ಕ್ಕೆ ಖರೀದಿಸಬಹುದಾಗಿದೆ.

'ಹುವಾವೆ ಪಿ30 ಪ್ರೊ' ಮೊದಲ ಸೇಲ್ ನೋಡಿ ಆಪಲ್, ಒನ್‌ಪ್ಲಸ್ ಸುಸ್ತಾಗಿದ್ದು ಏಕೆ?!

ಹುವಾವೆ ಪಿ30 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ರಿಲಯನ್ಸ್ ಜಿಯೋ ಡಬಲ್ ಡೇಟಾ ಆಫರ್‌ನೊಂದಿಗೂ ಖರೀದಿಸಬಹುದಾಗಿದ್ದು, ಇದರ ಅಡಿಯಲ್ಲಿ 2,200 ರೂಪಾಯಿಗಳಷ್ಟು ಉಳಿತಾಯ ಮಾಡಬಹುದು ಹಾಗೂ ಮೊದಲ ಐದು ರಿಚಾರ್ಜ್ ಮೇಲೆ ಡಬಲ್ ಡೇಟಾ ಪಡೆಯಬಹುದು. ಇನ್ನು ಐಸಿಐಸಿಐ ಬ್ಯಾಂಕ್ ಬಳಕೆದಾರರಿಗೆ ಶೇ. 10 ರಷ್ಟು ಡಿಸ್ಕೌಂಟ್ಸ್ ಇರುವುದನ್ನು ಸಹ ನಾವು ನೋಡಬಹುದು. ಹಾಗಾದರೆ, ಮೊಬೈಲ್ ಪ್ರಿಯರ ನಿದ್ದೆಗೆಡಿಸಿರುವ ಹುವಾವೆ ಪಿ30 ಪ್ರೊ ಸ್ಮಾರ್ಟ್‌ಪೋನ್ ಹೇಗಿದೆ ಎಂಬುದನ್ನು ಮುಂದೆ ಓದಿ ತಿಳಿಯಿರಿ.

  ಹುವಾವೆ P30 ಪ್ರೊ ವಿನ್ಯಾಸ

ಹುವಾವೆ P30 ಪ್ರೊ ವಿನ್ಯಾಸ

ಹುವಾವೆ P30 ಪ್ರೊ ಇದೇ ಮೊದಲ ಬಾರಿಗೆ ವಿಶ್ವ ಮಾರುಕಟ್ಟೆಯಲ್ಲಿ ಹೈ ಎಂಡ್ ಪ್ರೀಮಿಯಮ್ ವಿನ್ಯಾಸದ ಚೀನಾ ಕಂಪೆನಿಯ ಸ್ಮಾರ್ಟ್‌ಫೋನ್ ಆಗಿದೆ. ವಿಶ್ವ ಮೊಬೈಲ್ ಉದ್ಯಮದ ಮೊಟ್ಟ ಮೊದಲ ಹೈ ಅಡ್ವಾನ್ಸ್ ಕ್ಯಾಮೆರಾ ಸ್ಮಾರ್ಟ್‌ಪೋನ್ ಇದಾಗಿರುವುರಿಂದ ಹುವಾವೆ P30 ಪ್ರೊ ಸ್ಮಾರ್ಟ್‌ಫೋನ್ ಅತ್ಯಂತ ಪ್ರೀಮಿಯಮ್ ಆಗಿ ವಿನ್ಯಾಸಗೊಂಡಿದೆ. ಬಾಗಿದ ಅಂಚುಗಳ ವಿನ್ಯಾಸದಲ್ಲಿ ಫುಲ್‌ಸ್ಕ್ರೀನ್ ಡಿಸ್‌ಪ್ಲೇ ಮೂಲಕ ಕಂದೊಳಿಸುತ್ತಿರುವ ಈ ಫೋನ್ ವಾಟರ್‌ ಡ್ರಾಪ್ ನೋಚ್ ಹೊಂದಿರುವುದು ಮೊಬೈಲ್ ಪ್ರಿಯರ ಪ್ರಮುಖ ಆಕರ್ಷಣೆಯಲ್ಲಿ ಒಂದು.

ಹುವಾವೆ P30 ಪ್ರೊ ಡಿಸ್‌ಪ್ಲೇ

ಹುವಾವೆ P30 ಪ್ರೊ ಡಿಸ್‌ಪ್ಲೇ

ವಿನ್ಯಾಸವೇ ಹಾಗಿರುವಾಗ ಹುವಾವೆ P30 ಪ್ರೊ ಸ್ಮಾರ್ಟ್‌ಪೋನ್ ಡಿಸ್‌ಪ್ಲೇ ಕೂಡ ಅದ್ಬುತವಾಗಿರಲಿದೆ ಎಂದು ನೀವು ಸುಲಭವಾಗಿ ಊಹಿಸಬಹುದು. ಬಾಗಿದ ಅಂಚುಗಳು ಮತ್ತು "ವಾಟರ್-ಡ್ರಾಪ್" ದರ್ಜೆಯೊಂದಿಗೆ 6.47-ಇಂಚಿನ ಪೂರ್ಣ ಹೆಚ್‌ಡಿ+ OLED ಡಿಸ್‌ಪ್ಲೇಯನ್ನು ಹುವಾವೆ P30 ಪ್ರೊ ಹೊಂದಿದೆ. ಈ ಪೋನ್ 19.5: 9 ರ ಆಕಾರ ಅನುಪಾತದಲ್ಲಿರುವ ಡಿಸ್‌ಪ್ಲೇ 1080x2340 ಪಿಕ್ಸೆಲ್‌ಗಳ ಸಾಮರ್ಥ್ಯವನ್ನು ಹೊಂದಿರುವುದು ಮಲ್ಟಿಮೀಡಿಯಾ ಪ್ರಿಯರಿಗೆ ನಂ.1 ಆಯ್ಕೆಯ ಸ್ಮಾರ್ಟ್‌ಪೋನ್ ಆಗಬಹುದು.

ಹುವಾವೆ P30 ಪ್ರೊ ಪ್ರೊಸೆಸರ್!

ಹುವಾವೆ P30 ಪ್ರೊ ಪ್ರೊಸೆಸರ್!

ಹುವಾವೇ P30 ಪ್ರೊ ಸ್ಮಾರ್ಟ್‌ಫೋನ್ 2.6GHzನಲ್ಲಿ 2 ಕೋರ್‌ಗಳನ್ನು ಹೊಂದಿದೆ. 2 ಕೋರ್‌ಗಳು 1.92GHz ಮತ್ತು 1.8GHz ನಲ್ಲಿ ದೊರೆಯುತ್ತದೆ. ಜೊತೆಗೆ 4 ಕೋರ್‌ಗಳನ್ನು ಹೊಂದಿರುವ 2.6GHz ಆಕ್ಟಾ ಕೋರ್ HiSilicon Kirin 980 ಪ್ರೊಸೆಸರ್ ಹೊತ್ತು ಬಿಡುಗಡೆಯಾದ ಮೊಟ್ಟಮೊದಲ ಪ್ರೀಮಿಯಮ್ ಸ್ಮಾರ್ಟ್‌ಫೋನ್ ಆಗಿ ಹುವಾವೇ P30 ಪ್ರೊ ಹೆಸರುಗಳಿಸಿದೆ. ಸಾಮಾನ್ಯ ಕಂಪ್ಯೂಟರ್‌ಗಿಂತಲೂ ಹೆಚ್ಚು ಕಾರ್ಯನಿರ್ವಹಣೆ ನೀಡುವ ಈ ಸ್ಮಾರ್ಟ್‌ಫೋನಿನಲ್ಲಿ 8GB RAM ನೀಡಿರುವುದನ್ನು ನೀವು ನೋಡಬಹುದು.

ಹುವಾವೆ P30 ಪ್ರೊ ಮೆಮೊರಿ

ಹುವಾವೆ P30 ಪ್ರೊ ಮೆಮೊರಿ

ಹುವಾವೆ P30 ಪ್ರೊ ಸ್ಮಾರ್ಟ್‌ಪೋನ್ ಆಂಡ್ರಾಯ್ಡ್ 9 ಆಧಾರಿತ EMUI 9.1 ಮೂಲಕ ರನ್ ಆಗಲಿದ್ದು, 8GB RAM ಜೊತೆಗೆ ಎಸ್‌ಡಿ ಕಾರ್ಡ್ ಮೂಲಕ ವಿಸ್ತರಿಸಬಹುದಾದ 128GB ಆಂತರಿಕ ಮೆಮೊರಿಯನ್ನು ಹೊಂದಿದೆ. ಡ್ಯುಯಲ್-ಸಿಮ್ (ಜಿಎಸ್ಎಂ ಮತ್ತು ಜಿಎಸ್ಎಂ) ಸ್ಮಾರ್ಟ್‌ಫೋನ್ ಇದಾಗಿದ್ದು, ಫೋನ್ ನ್ಯಾನೋ ಸಿಮ್ ಮತ್ತು ನ್ಯಾನೋ-ಸಿಮ್ ಕಾರ್ಡ್ಗಳನ್ನು ಸ್ವೀಕರಿಸುತ್ತದೆ.

ಹುವಾವೆ P30 ಪ್ರೊ ಕ್ಯಾಮೆರಾ

ಹುವಾವೆ P30 ಪ್ರೊ ಕ್ಯಾಮೆರಾ

ಮೊದಲೇ ಹೇಳಿದಂತೆ, 40MP ವಿಶಾಲ ಕೋನ, 8MP 5X ಟೆಲಿಫೋಟೋ ಸೇರಿದಂತೆ 5x ಪರಿದರ್ಶಕ-ರೀತಿಯ ಆಪ್ಟಿಕಲ್ ಝೂಮ್ ಮತ್ತು ಹಿಂದೆ ನಾಲ್ಕು ಕ್ಯಾಮರಾಗಳನ್ನು ಹೊಂದಿರುವ ವಿಶ್ವದ ಮೊದಲ ಫೋನ್ ಆಗಿ ಹುವಾವೇ P30 ಪ್ರೊ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಎಫ್ / 2.0 ಅಪಾರ್ಚರ್ ಜೊತೆಗೆ 32 ಮೆಗಾಪಿಕ್ಸೆಲ್ ಕ್ಯಾಮರಾ ಸೆಲ್ಫೀ ಕ್ಯಾಮೆರಾವನ್ನು ನಿಡಲಾಗಿದೆ.

ಹುವಾವೆ P30 ಪ್ರೊ ಇತರೆ ಫೀಚರ್ಸ್

ಹುವಾವೆ P30 ಪ್ರೊ ಇತರೆ ಫೀಚರ್ಸ್

ಹುವಾವೆ P30 ಪ್ರೊ 4,200 mAh ಸಾಮರ್ಥ್ಯದ ಶಕ್ತಿಶಾಲಿ ಬ್ಯಾಟರಿಯಿಂದ ಚಾಲಿತವಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ವೈರ್ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. LTE ಬಳಸುವ ಬ್ಯಾಂಡ್ 40 ಬೆಂಬಲ, Wi-Fi 802.11 ಬ್ಲೂಟೂತ್ v5.00, NFC, ಇನ್ಫ್ರಾರೆಡ್, ಯುಎಸ್ಬಿ ಟೈಪ್-ಸಿ ಮತ್ತು 4ಜಿ ಒಳಗೊಂಡಂತೆ, ಹುವಾವೆ P30 ಪ್ರೊ ಫೇಸ್ ಅನ್ಲಾಕ್ ಅನ್ನು ಬೆಂಬಲಿಸುತ್ತದೆ.

Best Mobiles in India

English summary
Huawei P30 Pro set to go on sale tomorrow on Amazon: Discount, offers and more ... device Huawei P30 Pro will be available for purchase in India from. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+