Huawei P30 Pro: ಹುವಾವೇ P30 ಪ್ರೊ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ಬಿಡುಗಡೆ!

|

ಚೀನಾದ ಟೆಕ್‌ ದೈತ್ಯ ಹುವಾವೇ ತನ್ನ ಹುವಾವೇ P30 ಸರಣಿಯ ಸ್ಮಾರ್ಟ್‌ಫೋನ್ ಅನ್ನು ಮತ್ತೆ ಲಾಂಚ್‌ ಮಾಡಿದೆ. 2019 ರಲ್ಲಿ ಬಿಡುಗಡೆ ಆಗಿದ್ದು ಹುವಾವೇ P30 ಸರಣಿಯ ಹುವಾವೇ p30ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಮತ್ತೆ ಬಿಡುಗಡೆ ಮಾಡಲಾಗಿದೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಈ ಸ್ಮಾರ್ಟ್‌ಫೋನ್‌ ಈಗಾಗಲೇ ಭಾರತದಲ್ಲಿ ಲಭ್ಯವಿದೆ. ಆದರೆ ಹುವಾವೇ ಕಂಪೆನಿ ಇದೇ ಸ್ಮಾರ್ಟ್‌ಫೋನ್‌ ಅನ್ನು ಹೊಸ ಮಾದರಿಯಲ್ಲಿ ಬಿಡುಗಡೆ ,ಮಾಡಿದೆ. ಅಂದರೆ ಹುವಾವೇ ಕಂಪನಿಯು ಹುವಾವೇ ಪಿ 30 ಪ್ರೊ ಸ್ಮಾರ್ಟ್‌ಫೋನ್‌ ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಸ್ಮಾರ್ಟ್‌ಫೋನ್‌

ಹೌದು, ಹುವಾವೇ ಕಂಪೆನಿ ತನ್ನ ಹುವಾವೇ P30 ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಹಪೊಸ ಮಾದರಿಯಲ್ಲಿ ಹೊಸ ಆವೃತ್ತಿಯಲ್ಲಿ ಬಿಡುಗಡೆ ಮಾಡಿದ್ದು, ಈ ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಅಷ್ಟೇ ಅಲ್ಲ ಇತ್ತೀಚಿನ ಹುವಾವೇ ಫೋನ್ ಗೂಗಲ್ ಮೊಬೈಲ್ ಸೇವೆಗಳನ್ನು ಸಹ ಬೆಂಬಲಿಸಲಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫಿಚರ್ಸ್‌ ಅನ್ನ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಈ ಸ್ಮಾರ್ಟ್‌ಫೋನ್‌ ಹೊಸ ವಿನ್ಯಾಸದಲ್ಲಿ ಲಾಂಚ್‌ ಆಗಿರುವುದರಿಂದ ಡಿಸ್‌ಪ್ಲಕೇ ವಿನ್ಯಾಸದಲ್ಲಿ ಹೊಸ ಮಾದರಿಯನ್ನ ಕಾಣಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.47-ಇಂಚಿನ ಬಾಗಿದ ಡಿಸ್‌ಪ್ಲೇಯನ್ನ ಹೊಂದಿದೆ. ಇದಲ್ಲದೆ ಈ ಡಿಸ್‌ಪ್ಲೇಯು OLED ವಿನ್ಯಾಸವನ್ನು ಹೊಂದಿದೆ. ಅಲ್ಲದೆ ಇದು ಫುಲ್‌ HD + ರೆಸಲ್ಯೂಶನ್ ಅನ್ನು ಬೆಂಬಲಿಸುತ್ತದೆ. ಜೊತೆಗೆ ಇದು ಇನ್-ಸ್ಕ್ರೀನ್ ಫಿಂಗರ್‌ ಪ್ರಿಂಟ್ ರೀಡರ್ ಅನ್ನು ಸಹ ಒಳಗೊಂಡಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇನ್ನು ಹೊಸ ಆವೃತ್ತಿಯ ಹುವಾವೇ P30 ಪ್ರೊ ಸ್ಮಾರ್ಟ್‌ಫೋನ್‌ 7nm ಕಿರಿನ್ 980 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೇಯೇ ಈ ಸ್ಮಾರ್ಟ್‌ಫೋನ್‌ ಇದು 8GB RAM ಮತ್ತು 256GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನ ಒಳಗೊಂಡಿದೆ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಹುವಾವೇ P30 ಪ್ರೊ ನ್ಯೂ ಎಡಿಷನ್ ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 40 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 20 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಅನ್ನು ಒಳಗೊಂಡಿದೆ. ಇನ್ನು ಮೂರನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸಾರ್‌ ಅನ್ನು ಸಹ ಒಳಗೊಂಡಿದೆ. ಇದು ಈಗ 5x ಬದಲಿಗೆ 10X ಹೈಬ್ರಿಡ್ ಜೂಮ್‌ಗೆ ಬೆಂಬಲವನ್ನು ನೀಡುತ್ತದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇನ್ನು ಹುವಾವೇ P30 ಪ್ರೊ ಹೊಸ ಆವೃತ್ತಿಯು 4,200mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, ಇದು 40W ಸೂಪರ್‌ಚಾರ್ಜ್ ವೇಗದ ಚಾರ್ಜಿಂಗ್ ಬೆಂಬಲವನ್ನು ಸಹ ನೀಡುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹುವಾವೇ P30 ಪ್ರೊ ಹೊಸ ಆವೃತ್ತಿಯ ಬೆಲೆ 749 ಯುರೋಗಳಾಗಿದ್ದು, ಇದು ಭಾರತದಲ್ಲಿ ಸುಮಾರು 61,450 ರೂ. ಆಗಿದ್ದು, ಹುವಾವೇ ಪಿ 30 ಸರಣಿಯ ಹೊಸ ಸದಸ್ಯ ಕಂಪನಿಯ ಅಧಿಕೃತ ಜರ್ಮನಿ ವೆಬ್‌ಸೈಟ್ ಮೂಲಕ ಖರೀದಿಸಲು ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಸಿಲ್ವರ್ ಫ್ರಾಸ್ಟ್, ಅರೋರಾ ಮತ್ತು ಬ್ಲ್ಯಾಕ್ ಕಲರ್‌ಗಳಲ್ಲಿ ಲಭ್ಯವಾಗಲಿದೆ.

Most Read Articles
Best Mobiles in India

Read more about:
English summary
The Huawei P30 Pro New Edition is priced at 749 Euros, which is around Rs 61,450 in India. The new member of the Huawei P30 series is available for pre-order.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X