ಹುವಾವೇ P40 ಲೈಟ್E ಸ್ಮಾರ್ಟ್‌ಫೋನ್ ಬಿಡುಗಡೆ!
ಚೀನಾದ ಟೆಕ್ ದೈತ್ಯ ಹುವಾವೇ ಕಂಪೆನಿ ಈಗಾಗ್ಲೆ ಹಲವು ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ. ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನ ಪರಿಚಯಿಸುವಲ್ಲಿ ಸೈ ಎನಿಸಿಕೊಂಡಿರುವ ಹುವಾವೇ ಕಂಪೆನಿ ಕೆಲ ದಿನಗಳ ಹಿಂದೆಯಷ್ಟೇ ಹುವಾವೇ P40 ಲೈಟ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತ್ತು. ಇದೀಗ ಅದರ ಮುಂದುವರೆದ ಆವೃತ್ತಿಯ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದೆ. ಈ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ.

ಹೌದು, ಜಾಗತಿಕವಾಗಿ ಪ್ರಸಿದ್ದಿಯನ್ನು ಪಡೆದಿರುವ ಹುವಾವೇ ಕಂಪೆನಿ ತನ್ನ ಹೊಸ ಹುವಾವೇ P40 ಲೈಟ್ E ಸ್ಮಾರ್ಟ್‌ಫೋನ್ ಅನ್ನು ಪೋಲೆಂಡ್‌ನ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 6.39-ಇಂಚಿನ ಪಂಚ್ ಫುಲ್ ವ್ಯೂ ಡಿಸ್‌ಪ್ಲೇ ಹೊಂದಿದ್ದು, 90% ಕ್ಕಿಂತ ಹೆಚ್ಚು ಸ್ಕ್ರೀನ್ ಕವರ್ ಅನ್ನು ಒಳಗೊಂಡಿದೆ ಎಂದು ಹುವಾವೇ ಕಂಪೆನಿ ಹೇಳಿಕೊಂಡಿದೆ. ಅಲ್ಲದೆ ಕಿರಿನ್ 710F ಪ್ರೊಸೆಸರ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಇನ್ನು ಯಾವೆಲ್ಲಾ ಫೀಚರ್ಸ್‌ಗಳನ್ನ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಡಿಸ್‌ಪ್ಲೇ ವಿನ್ಯಾಸ
ಈ ಸ್ಮಾರ್ಟ್‌ಫೋನ್ 1560 x 720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಹೊಂದಿರುವ 6.39 ಇಂಚಿನ ಫುಲ್ ವ್ಯೂ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನ ಹೊಂದಿದೆ. ಇದು ಎಲ್ಸಿಡಿ ಪ್ಯಾನಲ್ ಡಿಸ್‌ಪ್ಲೇ ಯನ್ನು ಆಗಿದ್ದು, 90% ಕ್ಕಿಂತ ಹೆಚ್ಚಿನ ಸ್ಕ್ರೀನ್ ಕವರ್ ಅನ್ನು ಒಳಗೊಂಡಿದೆ. ಇದು ಪಂಚ್‌ಹೋಲ್ ಸೆಲ್ಫಿ ಕ್ಯಾಮೆರಾ ಡಿಸ್‌ಪ್ಲೇ ವಿನ್ಯಾಶವನ್ನ ಹೊಂದಿದೆ. ಇನ್ನು ಸ್ಕ್ರೀನ್ ಟು ಡಿಸ್‌ಪ್ಲೇ 90% ಅನುಪಾತವನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ ಫುಲ್ ವ್ಯೂ ಡಿಸ್‌ಪ್ಲೇ ಆಗಿರುವುದರಿಂದ ವಿಡಿಯೋ ವೀಕ್ಷಣೆಯಲ್ಲಿ ಉತ್ತಮ ಅನುಭವವನ್ನು ನೀಡುವ ಸಾಧ್ಯತೆ ಇದೆ.

ಪ್ರೊಸೆಸರ್
ಹುವಾವೇ P40 ಲೈಟ್E ಸ್ಮಾರ್ಟ್‌ಫೋನ್ ಕಿರಿನ್ 710F ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 9 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ 4GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನ ಒಳಗೊಂಡಿದೆ. ಜೊತೆಗೆ ಮೆಮೊರಿ ಕಾರ್ಡ್ ಮೂಲಕ 512GBವರೆಗೆ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದೆ. ಅಲ್ಲದೆ ಹುವಾವೇ P40 ಲೈಟ್ E ಸ್ಮಾರ್ಟ್‌ಫೋನ್ ರಿಯರ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ.

ಕ್ಯಾಮೆರಾ ಮಾದರಿ
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ f/1.8 ಲೆನ್ಸ್, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ f/2.4 ಲೆನ್ಸ್, ಹಾಗೂ ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್‌ಫಿಲ್ಡ್ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಒಳಗೊಂಡಿರುವ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಎಲ್‌ಇಡಿ ಪ್ಲ್ಯಾಶ್, ನೈಟ್‌ಮೋಡ್, ಟಚ್ ದಿ ಫೋಕಸ್, ಡಿಜಿಟಲ್ ಜೂಮ್ ಅನ್ನು ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ
ಹುವಾವೇ P40 ಲೈಟ್ E ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದ್ದು,10W ಫಾಸ್ಟ್ ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ. ಇದಲ್ಲದೆ ನೀವು ಇಂಟರ್‌ನೆಟ್ ಬಳಕೆ ಮಾಡುವಾಗಲೂ ಒಂದೇ ಚಾರ್ಜ್‌ನಲ್ಲಿ 20 ಗಂಟೆಗಳವರೆಗೆ ಬ್ಯಾಟರಿ ಬಾಳಿಕೆ ಬರಲಿದೆ. ಜೊತೆಗೆ ಈ ಬ್ಯಾಟರಿಯನ್ನು ಸ್ಟ್ಯಾಂಡರ್ಡ್ ಮೈಕ್ರೊ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಮೂಲಕ ಚಾರ್ಜ್ ಮಾಡಬಹುದಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, ಬ್ಲೂಟೂತ್ v5.0, ಹಾಟ್‌ಸ್ಪಾಟ್, ಹಾಗೂ 3.5mm ಹೆಡ್‌ಫೋನ್ ಜ್ಯಾಕ್ ಮತ್ತು ಮೈಕ್ರೊ ಯುಎಸ್‌ಬಿ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ
ಈ ಸ್ಮಾರ್ಟ್‌ಫೋನ್ ಪೋಲೆಂಡ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು ಇದು PLN699 (ಅಂದಾಜು 13,328.ರೂ) ಬೆಲೆಯನ್ನ ಹೊಂದಿದ್ದು, ಇದೇ ಮಾರ್ಚ್ 12ರಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಇದಲ್ಲದೆ ಹುವಾವೇ P40 ಲೈಟ್ E ಅನ್ನು ಮಾರ್ಚ್ 12ಕ್ಕೂ ಮೊದಲೇ ಆರ್ಡರ್ ಮಾಡುವುದರಿಂದ ಹುವಾವೇ ಬ್ಯಾಂಡ್ 4 ಫಿಟ್‌ನೆಸ್ ಬ್ಯಾಂಡ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ ಅರೋರಾ ಬ್ಲೂ ಮತ್ತು ಬ್ಲ್ಯಾಕ್ ಕಲರ್‌ಗಳ ಆಯ್ಕೆಗಳಲ್ಲಿ ಲಭ್ಯವಾಗಲಿದೆ.


Click it and Unblock the Notifications








