ಹುವಾವೇ P40 ಲೈಟ್ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ ಲೀಕ್‌!

|

ಜನಪ್ರಿಯ ಸ್ಮಾರ್ಟ್‌ಫೋನ್‌ ಕಂಪೆನಿ ಹುವಾವೇ ತನ್ನ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಸಜ್ಜಾಗಿದೆ. ಸ್ಮಾರ್ಟ್‌ಫೊನ್‌ ಪ್ರಿಯರಿಗೆ ಸದಾ ಹೊಸ ಫಿಚರ್ಸ್‌ಗಳನ್ನ ಪರಿಚಯಿಸೋ ಹುವಾವೇ ಇದೀಗ ಹುವಾವೇ P40 ಲೈಟ್ ಸ್ಮಾರ್ಟ್‌ಫೋನ್‌ ಅನ್ನ ನೋವಾ 6SE ಹೆಸರಿನಲ್ಲಿ ಕೆಲವೇ ದಿನಗಳಲ್ಲಿ ಲಾಂಚ್‌ ಮಾಡಲಿದೆ. ಸದ್ಯ ಈಗಾಗ್ಲೆ P40ಲೈಟ್‌ ಸ್ಮಾರ್ಟ್‌ಫೋನ್‌ನ ಫಿಚರ್ಸ್‌ ಅನ್‌ಲೈನ್‌ನಲ್ಲಿ ಲೀಕ್‌ ಆಗಿದ್ದು ಪಂಚ್‌ ಹೋಲ್‌ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ ಇದಾಗಿದೆ ಎಂದು ನಿರೀಕ್ಷಿಸಲಾಗಿದೆ.

ಹುವಾವೇ

ಹೌದು,ಹುವಾವೇ ಸ್ಮಾರ್ಟ್‌ಫೋನ್‌ ಕಂಪೆನಿ ನೋವಾ 6SE ಬ್ರಾಂಡೆಡ್‌ ಹೆಸರಿನ ಹುವಾವೇ P40ಲೈಟ್‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲಿದೆ. ಈಗಾಗ್ಲೆ ಲೀಕ್‌ ಮಾಹಿತಿ ಪ್ರಕಾರ ಹುವಾವೇ P40ಲೈಟ್ ನೋವಾ 6SE ಯ ಆಪ್‌ಡೇಟೆಡ್‌ ಆವೃತ್ತಿಯಾಗಿದ್ದು ಚೀನಾದಲ್ಲಿ ಬಿಡುಗಡೆಯಾಗಲಿದೆ. ಜೊತೆಗೆ ಮುಂಬರುವ ದಿನಗಳಲ್ಲಿ ಇತರೆ ಮಧ್ಯ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನ ಹುವಾವೇ ಬಿಡುಗಡೆ ಮಾಡಲಿದೆ ಎನ್ನಲಾಗಿದ್ದು. ಲೀಕ್‌ ಮಾಹಿತಿ ಪ್ರಕಾರ ಹುವಾವೇ P40ಲೈಟ್ ಸ್ಮಾರ್ಟ್‌ಫೋನ್‌ನ ಫೀಚರ್ಸ್‌ಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

ಡಿಸ್‌ಪ್ಲೇ

ಡಿಸ್‌ಪ್ಲೇ

ಹುವಾವೇ ನೋವಾ6SE 1080 × 2310 ಪಿಕ್ಸೆಲ್‌ ರೆಸಲ್ಯೂಶನ್‌ನ 6.4-ಇಂಚಿನ ಐಪಿಎಸ್ ಡಿಸ್‌ಪ್ಲೇ ಹೊಂದಿದ್ದು, 19: 9 ರ ಅನುಪಾತವನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಪಂಚ್‌ಹೋಲ್‌ ಡಿಸ್‌ಪ್ಲೇ ಮಾದರಿ ಹೊಂದಿರಲಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಡಿಸ್‌ಪ್ಲೇ ಪಿಂಗರ್‌ಪ್ರಿಂಟ್‌ ಸೆನ್ಸಾರ್‌ ಕೂಡ ಹೊಂದಿದೆ. ಅಲ್ಲದೆ ವಿಡಿಯೋ ವಿಕ್ಷಣೆಗೆ ಉತ್ತಮ ಅನುಭವವನ್ನ ನೀಡಲಿದೆ ಎಂದು ಹೇಳಲಾಗಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಇನ್ನು ಈ ಸ್ಮಾರ್ಟ್‌ಫೊನ್‌ ಆಕ್ಟಾ-ಕೋರ್ ಸಿಪಿಯು ಹಿಸಿಲಿಕಾನ್ ಕಿರಿನ್ 810 SoC ಪ್ರೊಸೆಸರ್‌ ಹೊಂದಿದ್ದು,ಅಂಡ್ರಾಯ್ಡ್‌10ಒಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ Mali-G52 MP6 GPU ಯನ್ನ ಹೊಂದಿದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ 8GBRAM ಮತ್ತು 128GB ಶೇಖರಣಾ ಸಾಮರ್ಥ್ಯವನ್ನ ಹೊಂದಿದ್ದು ಮೆಮೊರಿ ಕಾರ್ಡ್‌ ಮೂಲಕ ಶೇಖರಣಾ ಸಾಮರ್ಥ್ಯವನ್ನ ಇನ್ನಷ್ಟು ವಿಸ್ತರಿಸಬಹುದಾಗಿದೆ.

ಕ್ಯಾಮೆರಾ

ಕ್ಯಾಮೆರಾ

ಹುವಾವೇ P40ಲೈಟ್ ಸ್ಮಾರ್ಟ್‌ಫೋನ್‌ ಹಿಂಭಾಗದಲ್ಲಿ ಕ್ವಾಡ್-ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದ್ದು ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ , ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ವೈಡ್-ಆಂಗಲ್ ಲೆನ್ಸ್, ಮೂರು ಮತ್ತು ನಾಲ್ಕನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಅನ್ನು ಹೊಂದಿದೆ. ಅಲ್ಲದೆ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಜೊತೆಗೆ ಕ್ಯಾಮೆರಾದಲ್ಲಿ ವಿಭಿನ್ನ ದೃಶ್ಯ ಪ್ರಕಾರಗಳಿಗಾಗಿ AI ದೃಶ್ಯ ಪತ್ತೆ ಹಚ್ಚುವಿಕೆ ನೀಡಲಾಗಿದೆ ಎಂದು ಹೇಳಲಾಗ್ತಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಇನ್ನು ಹುವಾವೇ P40ಲೈಟ್ 4W200mAh ಬ್ಯಾಟರಿ ಸಾಮರ್ಥ್ಯ ಹೊಂದಿದ್ದು 40W ವೇಗದಲ್ಲಿ ಚಾರ್ಜಿಂಗ್ ಪ್ಯಾಕ್ ಮಾಡುತ್ತದೆ. ಅಲ್ಲದೆ ಸ್ಮಾರ್ಟ್‌ಫೋನ್‌ನಲ್ಲಿನ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯಲ್ ಸಿಮ್ ಕಾರ್ಡ್ ಸ್ಲಾಟ್‌ಗಳು, ಬ್ಲೂಟೂತ್ 5.0, VoLTE ಯೊಂದಿಗೆ 4 ಜಿ, ಮತ್ತು ಚಾರ್ಜಿಂಗ್ ಮತ್ತು ಡೇಟಾ ವರ್ಗಾವಣೆಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ನೀಡಲಾಗಿದ್ದು, ವೈ-ಫೈ ಡ್ಯುಯಲ್-ಬ್ಯಾಂಡ್ ಎಸಿಯನ್ನು ಬೆಂಬಲಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಇದರ ಬೆಲೆ 22,290ರೂ ಇರಲಿದೆ ಎಂದು ಅಂದಾಜಿಸಲಾಗಿದೆ

Most Read Articles
Best Mobiles in India

Read more about:
English summary
Huawei has been aggressive with its launches having products across various price points. Recently, the company launched the Huawei Nova 6 and Huawei Nova 6 SE in China. These are among the first devices from the company to feature a punch-hole display.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X