ಹುವಾವೆ ಕಂಪೆನಿಯ ಹುವಾವೇ P40 ಲೈಟ್ ಸ್ಮಾರ್ಟ್‌ಫೋನ್‌ ಲಾಂಚ್‌!

|

ಚೀನಾದ ಸ್ಮಾರ್ಟ್‌ಫೋನ್‌ ದೈತ್ಯ ಎನಿಸಿಕೊಂಡಿರುವ ಹುವಾವೇ ಕಂಪೆನಿ P40 ಆವೃತ್ತಿಯಲ್ಲಿ ಹೊಸ ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ವಿಶ್ವದ ಜನಪ್ರಿಯ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಹುವಾವೇ ಕಂಪೆನಿ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸಿ ಸೈ ಎನಿಸಿಕೊಂಡಿದೆ. ಇದೀಗ ಹುವಾವೇ ನೋವಾ 6SE ಸ್ಮಾರ್ಟ್‌ಫೋನ್‌ನ ರಿ ಬ್ರಾಂಡೆಡ್‌ ಆವೃತ್ತಿಯನ್ನ ಹೊಸ ಮಾದರಿಯಲ್ಲಿ ಬಿಡುಗಡೆ ಮಾಡಿದೆ.

ಹೌದು

ಹೌದು, ಹುವಾವೇ ಕಂಪೆನಿ P40 ಆವೃತ್ತಿಯ ಹೊಸ P40 ಲೈಟ್‌ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ ಹುವಾವೇ ಕಂಪೆನಿಯ ಹೊಸ ಮಾದರಿಯ ಫೀಚರ್ಸ್‌ಗಳನ್ನ ಒಳಗೊಂಡಿದ್ದು, ಕಿರಿನ್‌ 810ಚಿಪ್‌ಸೆಟ್‌ ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಅಲ್ಲದೆ ಇದು ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿರುವ ಸ್ಮಾರ್ಟ್‌ಫೋನ್‌ ಆಗಿದೆ. ಸದ್ಯ ಯುರೋಪ್‌ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ಈ ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

ಡಿಸ್‌ಪ್ಲೇ ಮಾದರಿ

ಡಿಸ್‌ಪ್ಲೇ ಮಾದರಿ

ಈ ಸ್ಮಾರ್ಟ್‌ಫೋನ್‌ 1080 x 2310 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಹೊಂದಿರುವ 6.4 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇಯು 90.6% ಬಾಡಿ ಟು ಸ್ಕ್ರೀನ್‌ ರೆಶೀಯೋ ಹೊಂದಿದ್ದು, ಇದು ಪಂಚ್‌ಹೋಲ್‌ ವಿನ್ಯಾಸವನ್ನು ಒಳಗೊಂಡಿದೆ. ಈ ಡಿಸ್‌ಪ್ಲೇ IPS LCD ಡಿಸ್‌ಪ್ಲೇ ಆಗಿದ್ದು, ಉತ್ತಮ ಪಿಕ್ಸೆಲ್‌ ಸಾಂದ್ರತೆಯನ್ನ ಹೊಂದಿದೆ. ಇನ್ನು ವಿಡಿಯೋ ವೀಕ್ಷಣೆಯಲ್ಲಿ ಉತ್ತಮ ಅನುಭವವನ್ನು ನೀಡಲಿದೆ ಎಂದು ಕಂಪೆನಿ ಹೇಳಿಕೊಂಡಿದೆ.

ಪ್ರೊಸೆಸರ್‌

ಪ್ರೊಸೆಸರ್‌

ಹುವಾವೇ P40 ಲೈಟ್ ಸ್ಮಾರ್ಟ್‌ಫೋನ್‌ ಕಿರಿನ್‌ 810 ಚಿಪ್‌ಸೆಟ್‌ ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 10 ಒಎಸ್‌ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್‌ 6GB RAM ಮತ್ತು 128GB ಶೇಖರಣಾ ಸಾಮರ್ಥ್ಯವನ್ನು ಒಳಗೊಂಡಿದೆ. ಜೊತೆಗೆ ಮೆಮೊರಿ ಕಾರ್ಡ್‌ ಮೂಲಕ ಶೇಖರಣಾ ಸಾಮರ್ಥ್ಯವನ್ನ ವಿಸ್ತರಿಸಬಹುದಾಗಿದ್ದು, ಯಾವ ಪ್ರಮಾಣದಲ್ಲಿ ವಿಸ್ತರಿಸಬಹುದು ಅನ್ನುವ ಮಾಹಿತಿಯನ್ನ ಕಂಪೆನಿ ಹಂಚಿಕೊಂಡಿಲ್ಲ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಈ ಸ್ಮಾರ್ಟ್‌ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್, ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಲೆನ್ಸ್‌ ಹಾಗೂ ನಾಲ್ಕನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್‌ ಡೆಪ್ತ್‌ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 16 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರುವ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಈ ಕ್ಯಾಮೆರಾಗಳು ಸೂಪರ್‌ ನೈಟ್‌ ಮೋಡ್‌, ಹಾಗೂ ಆಲ್‌ಡ್ರೈವನ್‌ ವಿಡಿಯೋ ಎಡಿಟರ್‌ ಫೀಚರ್ಸ್‌ಗಳನ್ನ ಹೊಂದಿವೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಹುವಾವೇ P40 ಲೈಟ್ ಸ್ಮಾರ್ಟ್‌ಫೋನ್‌ 4200 mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಅಲ್ಲದೆ ಇದು 40W ಸೂಪರ್‌ ಫಾಸ್ಟ್‌ ಚಾರ್ಜಿಂಗ್‌ ಟೆಕ್ನಾಲಜಿಯನ್ನ ಹೊಂದಿದ್ದು, ಸುಮಾರು 30 ನಿಮಿಷಗಳಲ್ಲಿ 70% ಚಾರ್ಜಿಂಗ್‌ ಆಗಿರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಡ್ಯುಯೆಲ್‌ ಸಿಮ್‌ ಸ್ಲಾಟ್‌, ವೈಫೈ, ಬ್ಲೂಟೂತ್‌ 5.0, ಯುಎಸ್‌ಬಿ ಸಿ ಪೋರ್ಟ್‌, ಹಾಗೂ 3.5mm ಆಡಿಯೋ ಜ್ಯಾಕ್‌ ಅನ್ನು ಬೆಂಬಲಿಸಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಹುವಾವೇ ಕಂಪೆನಿಯ P40 ಲೈಟ್ ಸ್ಮಾರ್ಟ್‌ಫೋನ್‌ ಯುರೋಪ್‌ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಇದರ ಬೆಲೆ ಯುರೋ 299 (ಅಂದಾಜು 23,370 ರೂ)ಆಗಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ ಮಾರ್ಚ್ 2 ರಂದು ಯುರೋಪಿಯನ್ ಮಾರುಕಟ್ಟೆಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ ಮಿಡ್‌ನೈಟ್ ಬ್ಲ್ಯಾಕ್, ಪಿಂಕ್ ಮತ್ತು ಕ್ರಷ್ ಗ್ರೀನ್ ಕಲರ್‌ ಆಯ್ಕೆಯಲ್ಲಿ ಖರೀದಿಸಬಹುದಾಗಿದೆ, ಇನ್ನು P40 ಲೈಟ್‌ ಅನ್ನು ಮಾರ್ಚ್ 2 ಕ್ಕೂ ಮೊದಲೇ ಅನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಗ್ರಾಹಕರಿಗೆ ವಾಯರ್‌ಲೆಸ್‌ ಇಯರ್ ಫೋನ್ ಮತ್ತು ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ಉಚಿತವಾಗಿ ನೀಡಲಾಗುತ್ತೆ.

Best Mobiles in India

English summary
The key highlights of the P40 Lite are Android 10, 48-megapixel quad rear cameras, Kirin 810 chipset and more.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X