Just In
- 2 hrs ago
ರೈಲ್ವೆ 'ಗ್ರೂಪ್ ಡಿ' ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ 'ವಿ ಟೆಲಿಕಾಂ'ನಿಂದ ಸಿಹಿಸುದ್ದಿ!
- 12 hrs ago
ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 4 ಮತ್ತು ಗ್ಯಾಲಕ್ಸಿ Z ಫ್ಲಿಪ್ 4 ಫೋನ್ ಬಿಡುಗಡೆ!
- 16 hrs ago
ಭಾರತದಲ್ಲಿ ರಿಯಲ್ಮಿ ಟೆಕ್ಲೈಫ್ ಬಡ್ಸ್ T100 ಲಾಂಚ್ ಡೇಟ್ ಫಿಕ್ಸ್!
- 17 hrs ago
ಲಾಂಚ್ಗೆ ಸಜ್ಜಾಗಿದೆ 'ಮೊಟೊರೊಲಾ ರೇಜರ್'!..ಗ್ಯಾಲಕ್ಸಿ Z ಫೋಲ್ಡ್ 4ಗೆ ಟಾಂಗ್!
Don't Miss
- News
Breaking: ಬ್ಲಾಕ್ ಮ್ಯಾಜಿಕ್ ಟೀಕೆ; ಮೋದಿ ವಿರುದ್ಧ ರಾಹುಲ್ ಕಿಡಿ
- Finance
ವಿಐ App ಬಳಸಿ ರೈಲ್ವೆಯ ಗ್ರೂಪ್ ಡಿ ಪರೀಕ್ಷೆಗೆ ಸಿದ್ಧತೆ ಹೇಗೆ?
- Movies
ಮತ್ತೊಂದು ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾದ ರಕ್ಷಿತ್ ಶೆಟ್ಟಿ
- Lifestyle
ಉಪ್ಪಿನಕಾಯಿ ರುಚಿಗ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು ಗೊತ್ತಾ!
- Automobiles
ಬೊಲೆರೊ ಮ್ಯಾಕ್ಸ್ ಪಿಕ್-ಅಪ್ ಸಿಟಿ 3000 ಬಿಡುಗಡೆ ಮಾಡಿದ ಮಹೀಂದ್ರಾ
- Sports
ಆ ಇಬ್ಬರು ಸ್ಟಾರ್ಗಳಿಗೆ ಭಾರತ ತಂಡದಲ್ಲಿ ಸ್ಥಾನ ನೀಡಿರುವುದಕ್ಕೆ ಜಯವರ್ಧನೆ ಕಳವಳ
- Travel
ಭಾರತದಲ್ಲಿಯ 10 ಪ್ರಸಿದ್ದ ಹನುಮಂತ ದೇವರ ದೇವಾಲಯಗಳು
- Education
CAT 2022 Preparation Tips : ಕ್ಯಾಟ್ ಪರೀಕ್ಷೆಗೆ ಸಿದ್ಧತೆ ನಡೆಸಲು ಸಲಹೆಗಳು ಇಲ್ಲಿವೆ
ಹುವಾವೇಯಿಂದ P40, P 40 ಪ್ರೊ ಮತ್ತು P 40 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್ ಬಿಡುಗಡೆ!
ಚೀನಾದ ಟೆಕ್ ದೈತ್ಯ ಹುವಾವೇ ಕಂಪೆನಿ ಈಗಾಗಲೇ ತನ್ನ ಬಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳ ಮೂಲಕ ಗುರುತಿಸಿಕೊಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಪ್ರಸಿದ್ಧಿಯನ್ನ ಪಡೆದುಕೊಂಡಿರುವ ಹುವಾವೇ ಕಂಪೆನಿ ತನ್ನ ಮಾರುಕಟ್ಟೆಯನ್ನ ಸಾಕಷ್ಟು ವಿಸ್ತರಿಸಿಕೊಂಡಿದೆ. ಪ್ರತಿಭಾರಿಯ ಗ್ರಾಹಕರಿಗೆ ಹೊಸ ಹೊಸ ಫೀಚರ್ಸ್‌ಗಳನ್ನ ಪರಿಚಯಿಸುವ ಹುವಾವೇ ಇದೀಗ ತನ್ನ ಹೊಸ ಸರಣಿಯ ಮೂರು ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ. ಇದೀಗ ಬಿಡುಗಡೆ ಆಗಿರುವ ಸ್ಮಾರ್ಟ್‌ಫೋನ್‌ಗಳು 10x ಆಪ್ಟಿಕಲ್ ಜೂಮ್ ಸಾಮರ್ಥ್ಯ ಹೊಂದಿರಲಿದೆ ಎಂದು ಹೇಲಲಾಗಿದೆ.

ಹೌದು, ಹುವಾವೇ ಸ್ಮಾರ್ಟ್‌ಫೋನ್ ಕಂಪೆನಿ ತನ್ನ ಹೊಸ ಮಾದರಿಯ ಮೂರು ಸ್ಮಾರ್ಟ್‌ಫೋನ್‌ಗಳನ್ನ ಆನ್‌ಲೈನ್ ಈವೇಂಟ್ ಮೂಲಕ ಲಾಂಚ್ ಮಾಡಿದೆ. ತನ್ನ ಜನಪ್ರಿಯ P ಸರಣಿಯಲ್ಲಿ P40 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನ ಬಿಡುಗಡೆ ಮಾಡಿದೆ. ಇದರಲ್ಲಿ P 40, P 40 ಪ್ರೊ ಮತ್ತು P 40 ಪ್ರೊ ಪ್ಲಸ್ ಅನ್ನು ಬಿಡುಗಡೆ ಮಾಡಿದೆ. ಸದ್ಯ ಈ ಮೂರು ಸ್ಮಾರ್ಟ್‌ಫೋನ್‌ಗಳು ಹೊಸ ವಿಭಿನ್ನ ಅನುಭವ ನೀಡುವ ಫೋಟೋಗ್ರಫಿ ಬಾರ್ ಅನ್ನು ಒಳಗೊಂಡಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ಗಳು ಕಿರಿನ್ 990 5G ಚಿಪ್‌ಸೆಟ್ ಪ್ರೊಸೆಸರ್ ಸಾಮರ್ಥ್ಯ ಹೊಂದಿವೆ. ಅಲ್ಲದೆ ಲೇಸಿಯಾ ಅಲ್ಟ್ರಾ ವಿಷನ್ ಕ್ಯಾಮೆರಾವನ್ನ ಸಹ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿ.

ಹುವಾವೆ P40 ಸ್ಮಾರ್ಟ್‌ಫೋನ್
ಈ ಸ್ಮಾರ್ಟ್‌ಫೋನ್ ತನ್ನ ಫಾರ್ಮ್ ಫ್ಯಾಕ್ಟರ್‌ನಲ್ಲಿ ವಿಷನರಿ ಫೋಟೋಗ್ರಫಿ ಅನುಭವವನ್ನ ನೀಡಲಾಗಿದೆ. ಈ ಎಲ್ಲಾ ಮೂರು ಮಾದರಿಗಳು ಮಾತ್ರೆ ಆಕಾರದ ಪಂಚ್ ಹೋಲ್ ಡಿಸ್‌ಪ್ಲೇಯನ್ನ ಒಳಗೊಂಡಿದೆ. ಇನ್ನು ಹುವಾವೇ P40 6.1-ಇಂಚಿನ ಫ್ಲಾಟ್ OLED ಡಿಸ್‌ಪ್ಲೇಯನ್ನು ಒಳಗೊಂಡಿದೆ. ಜೊತೆಗೆ 90Hz ಬ್ರೈಟ್‌ನೆಶ್ ಅನ್ನು ಒಳಗೊಂಡಿದೆ. ಇನ್ನು ಇದು ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಆದರೆ ಈ ಸ್ಮಾರ್ಟ್‌ಫೋನ್ 3800mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಒಳಗೊಂಡಿದೆ.

ಹುವಾವೇ P40 ಪ್ರೊ
ಇನ್ನು ಈ ಸ್ಮಾರ್ಟ್‌ಫೊನ್ 6.58 ಇಂಚಿನ ಬಾಗಿದ ದೊಡ್ಡ ಗಾತ್ರದ OLED ಡಿಸ್‌ಪ್ಲೇಯನ್ನು ಒಳಗೊಂಡಿದೆ. ಜೊತೆಗೆ ಈ ಡಿಸ್‌ಪ್ಲೇ ಕೂಡ 90Hz ಅನ್ನು ಒಳಗೊಂಡಿದ್ದು, 120Hz ಬ್ರೈಟ್‌ನೆಶ್ ಸ್ಕ್ರಿನ್ ಅನ್ನು ಸಹ ಹೊಂದಿದೆ. ಜೊತೆಗೆ ಇದರಲ್ಲಿ ಕ್ವಾಡ್ ಕರ್ವ್ ಓವರ್ ಫ್ಲೋ ಮಾದಿರಯ ಡಿಸ್‌ಪ್ಲೇ ಇದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ತೆಳುವಾದ ಬೆಜೆಲ್ ಇದ್ದು, ಆಯತಾಕಾರದ ಕ್ಯಾಮೆರಾ ಸೆಟ್‌ಅಪ್ ಅನ್ನು ಸಹ ನೀಡಲಾಗಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್ 4,200mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಹೊಂದಿದೆ. ಜೊತೆಗೆ ಕ್ವಾಡ್ ಕ್ಯಾಮೆರಾ ಸೆಟ್ ಅಪ್ ಹೊಂದಿದೆ

ಹುವಾವೇ P40 ಪ್ರೊ ಪ್ಲಸ್
ಈ ಸ್ಮಾರ್ಟ್‌ಫೋನ್ ಕೂಡ ದೊಡ್ಡ ಗಾತ್ರದ ಬಾಗಿದ ಮಾದರಿಯ 6.58 ಇಂಚಿನ OLED ಡಿಸ್‌ಪ್ಲೇಯನ್ನ ಹೊಂದಿದೆ. ಜೊತೆಗೆ ಇದರ ಬ್ರೈಟ್‌ನೆಶ್ ಸಾಮರ್ಥ್ಯ ಕೂಡ ಪಿ 40 ಪ್ರೊ ಸ್ಮಾರ್ಟ್‌ಫೋನ್ ನಂತೆಯೆ ಇರಲಿದೆ. ಜೊತೆಗೆ ಹುವಾವೇ "ಆರ್ಟ್ ಆಫ್ ಬ್ಯಾಲೆನ್ಸ್ಡ್ ರಿದಮ್" ವಿನ್ಯಾಸವನ್ನು ಇದು ಒಳಗೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ಫೋನ್ 4,200mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ಗಳು ಕ್ಲಾಸಿಕ್ ಬ್ಲ್ಯಾಕ್, ಡೀಪ್ ಸೀ ಬ್ಲೂ, ಐಸ್ ವೈಟ್, ಸಿಲ್ವರ್ ಫ್ರಾಸ್ಟ್ ಮತ್ತು ಬ್ಲಶ್ ಗೋಲ್ಡ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿವೆ. ಇದು ಪೆಂಟಾ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ.

ಇನ್ನು ಈ ಸ್ಮಾರ್ಟ್‌ಫೋನ್ ಜೊತೆಗೆ ಹುವಾವೇ ವಾಚ್ GT 2E ಅನ್ನು ಸಹ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್‌ವಾಚ್ ವೃತ್ತಾಕಾರದ ಡಯಲ್ ಹೊಂದಿದ್ದು, ಇದು ಹುವಾವೇ ವಾಚ್ GT2 ಗಿಂತ ಹೆಚ್ಚು ಸ್ಪೋರ್ಟಿ ವಿನ್ಯಾಸವನ್ನು ಹೊಂದಿದೆ. ಅಲ್ಲದೆ ಇದನ್ನ ಧರಿಸಿದವರು ನ್ಯಾವಿಗೇಟ್ ಮಾಡಲು ಸಹಾಯ ಮಾಡಲು ಬದಿಯಲ್ಲಿ ಎರಡು ಭೌತಿಕ ಗುಂಡಿಗಳನ್ನು ನೀಡಲಾಗಿದೆ. ಇನ್ನು ಈ ವಾಚ್ 454x454 ಪಿಕ್ಸೆಲ್ ರೆಸಲ್ಯೂಸನ್ ಹೊಂದಿರುವ 1.39-ಇಂಚಿನ AMOLED ಡಿಸ್‌ಪ್ಲೇ ಯನ್ನು ಹೊಂದಿದೆ. ಇನ್ನು ಈ ವಾಚ್‌ನ ಬ್ಯಾಟರಿ ಸಾಮರ್ಥ್ಯ ಒಂದೇ ಚಾರ್ಜ್‌ನಲ್ಲಿ 14 ದಿನಗಳು ಎಂದು ಹೇಳಲಾಗಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086