ಆನ್‌ಲೈನ್ ಲೈವ್‌ನಲ್ಲಿ ಬಿಡುಗಡೆ ಆಗಲಿದೆ ಹುವಾವೇ P40 ಫೋನ್!
ಟೆಕ್‌ವಲಯದಲ್ಲಿ ಪ್ರತಿನಿತ್ಯ ಹೊಸ ಮಾದರಿಯ ಸ್ಮಾರ್ಟ್‌ಫೋನ್‌ಗಳು ಬಿಡುಗಡೆ ಆಗುತ್ತಲೇ ಇರುತ್ತವೆ. ಆದರೆ ಇದೀಗ ಕೊರೊನಾ ವೈರಸ್ ಬೀತಿ ಟೆಕ್ ವಲಯದ ಮೇಲೂ ಪರಿಣಾಮ ಬೀರಿದ್ದು ಕೆಲ ಪ್ರಮುಖ ಸ್ಮಾರ್ಟ್‌ಫೋನ್‌ಗಳ ಸಮ್ಮೇಳನ ಹಾಗೂ ಟೆಕ್ ವಲಯದ ಪ್ರಮುಖ ಕಾರ್ಯಕ್ರಮಗಳು ರದ್ದಾಗಿವೆ. ಇನ್ನೂ ಕೆಲ ಕಂಪೆನಿಗಳು ತಮ್ಮ ಕಾರ್ಯಕ್ರಮಗಳನ್ನ ರದ್ದು ಮಾಡಿ ಆನ್‌ಲೈನ್ ಈವೆಂಟ್ ಮೂಲಕ ತಮ್ಮ ಪ್ರಾಡಕ್ಟ್‌ಗಳನ್ನ ಲಾಂಚ್ ಮಾಡುತ್ತಿವೆ. ಈ ಸಾಲಿಗೆ ಇದೀಗ ಹುವಾವೇ ಕಂಪೆನಿ ಕೂಡ ಸೇರಿದ್ದು, ತನ್ನ ಹೊಸ ಸ್ಮಾರ್ಟ್‌ಫೋನ್ ಅನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ.

ಹೌದು, ಕೊರೊನಾ ವೈರಸ್ ಬೀತಿ ಟೆಕ್‌ವಲಯದ ಮೇಲೂ ಪರಿಣಾಮ ಬೀರಿದ್ದು, ಕೆಲ ಪ್ರಮುಖ ಕಂಪೆನಿಗಳು ಇದೀಗ ಆನ್‌ಲೈನ್ ಈವೆಂಟ್‌ಗಳ ಮೊರೆ ಹೋಗಿವೆ. ಸದ್ಯ ಸ್ಮಾರ್ಟ್‌ಫೋನ್ ಜಗತ್ತಿನ ಪ್ರಮುಖ ಕಂಪೆನಿ ಎಂದು ಹುವಾವೇ ಪ್ರಸಿದ್ಧಿ ಪಡೆದುಕೊಂಡಿದೆ. ಇದೀಗ ತನ್ನ ಹೊಸ ಸ್ಮಾರ್ಟ್‌ಫೋನ್ ಹುವಾವೇ P40 ಅನ್ನು ಆನ್‌ಲೈನ್ ಈವೆಂಟ್ ಮೂಲಕ ಇದೇ ಮಾರ್ಚ್ 26 ರಂದು ಬಿಡುಗಡೆ ಮಾಡಲು ಮುಂದಾಗಿದೆ. ಹಾಗಾದ್ರೆ ಈ ಸ್ಮಾರ್ಟ್‌ಫೋನ್ ಬಗ್ಗೆ ಲಭ್ಯವಾಗಿರುವ ಮಾಹಿತಿ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ

ಚೀನಾದ ಟೆಕ್ ದೈತ್ಯ ಹುವಾವೇ ಕಂಪೆನಿ ತನ್ನ P40 ಸರಣಿ ಫೋನ್‌ಗಳನ್ನು ಇದೇ ಮಾರ್ಚ್ 26 ರಂದು ಆನ್‌ಲೈನ್ ಮೂಲಕ ಲಾಂಚ್ ಮಾಡಲಿದೆ. ಕೊರೊನಾ ವೈರಸ್ ಬೀತಿ ಎಲ್ಲೆಡೆ ಇರುವುದರಿಂದ ಎಲ್ಲರ ಸುರಕ್ಷತೆ ಮತ್ತು ಸೌಕರ್ಯವನ್ನು ರಕ್ಷಿಸಲು ಕಂಪನಿಯು ಸಹ ಬಯಸಿದೆ ಅಂತಾ ಹುವಾವೇ ಕಂಪೆನಿ ಹೇಳಿಕೊಂಡಿದೆ. ಸದ್ಯ ಈ ಸ್ಮಾರ್ಟ್‌ಫೋನ್ ಕುರಿತು ಟೀಸರ್ ಒಂದನ್ನು ಕಂಪೆನಿ ಬಿಡುಗಡೆ ಮಾಡಿದ್ದು, ಟೀಸರ್ ಮೂಲಕ ಸ್ಮಾರ್ಟ್‌ಫೋನ್ ಪ್ರಿಯರಲ್ಲಿ ಭಾರಿ ನಿರೀಕ್ಷೆಯನ್ನ ಹುಟ್ಟು ಹಾಕಿದೆ.

ಇನ್ನು ಲಭ್ಯವಿರುವ ಟೀಸರ್ ಪ್ರಕಾರ ಈ ಸ್ಮಾರ್ಟ್‌ಫೋನ್ ಹೊಸ ತಲೆಮಾರಿ ಜೂಮಿಂಗ್ ಸಾಮರ್ಥ್ಯ ಹೊಂಧಿರುವ ಕ್ಯಾಮೆರಾಗಳನ್ನ ಹೊಂದಿರಲಿದೆ ಎಂದು ಹೇಳಲಾಗ್ತಿದೆ. ಅಲ್ಲದೆ ಇದು ಕಳೆದ ವರ್ಷ ಹುವಾವೆ ಬಿಡುಗಡೆ ಮಾಡಿದ್ದ ಸ್ಮಾರ್ಟ್‌ಫೋನ್ ಕ್ಯಾಮೆರಾಗಳಿಗಿಂತ ಹೈಲೆಟ್ ಆಗಿರಲಿದೆ ಎನ್ನಲಾಗ್ತಿದೆ. ಹಾಗೇ ನೋಡಿದ್ರೆ ಇದು 52 ಮೆಗಾಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿರಲಿದೆ ಅನ್ನುವ ಮಾತು ಕೂಡ ಕೇಳಿ ಬಂದಿದ್ದು, ಇದು ಸ್ಯಾಮ್‌ಸಂಗ್‌ನ 108 ಮೆಗಾಪಿಕ್ಸೆಲ್ ಸೆನ್ಸಾರ್‌ಗಿಂತ ಉತ್ತಮವಾದ ಕಡಿಮೆ ಬೆಳಕಿನ ಕಾರ್ಯಕ್ಷಮತೆಯನ್ನು ನೀಡುತ್ತದೆ ಎಂದು ಅಂದಾಜಿಸಲಾಗಿದೆ.

ಅಲ್ಲದೆ, ಇದರಲ್ಲಿ ಪ್ರೆಸ್ ಇಮೇಜ್ ಗಾಗಿ "18-240" ಲೆನ್ಸ್ ಸಿಸ್ಟಮ್ ಅನ್ನು ಬಳಸಿರಬಹುದು. ಜೊತೆಗೆ ಇದು ಪಿ30 ಪ್ರೊನಿಂದ 10X ಬದಲಿಗೆ 13x ಆಪ್ಟಿಕಲ್ ಜೂಮ್ ಅನ್ನು ಪಡೆದುಕೊಂಡಿದ್ದು ಇದು ಡಿಜಿಟಲ್ ಕ್ರಾಪಿಂಗ್ ಅನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ಇನ್ನು ಈಗಾಗಲೇ ಹುವಾವೇಯನ್ನ ಗೂಗಲ್ ಬ್ಲಾಕ್ ಮಾಡಿರುವುದರಿಂದ ಗೂಗಲ್ ಆಪ್ಲಿಕೇಶನ್‌ಗಳು ಇಲ್ಲದೆ ಬರುವ P ಸರಣಿಯ ಸ್ಮಾರ್ಟ್‌ಫೋನ್ ಇದಾಗಿರಲಿದೆ.

ಇನ್ನು ಈ ಸ್ಮಾರ್ಟ್‌ಫೋನ್ ತನ್ನ ಕ್ಯಾಮೆರಾ ಫೀಚರ್ಸ್‌ಗಳಿಂದಲೇ ಟೆಕ್‌ವಲಯದಲ್ಲಿ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ. ಆದರೆ ಯುರೋಪ್ ರಾಷ್ಟ್ರ ಹಾಗೂ ಜಿಮೇಲ್ ಮತ್ತು ಗೂಗಲ್ ಸೇವೆಗಳು ಜನಪ್ರಿಯವಾಗಿರುವ ಇತರ ಪ್ರದೇಶಗಳಲ್ಲಿನಷ್ಟವನ್ನು ಸಹ ಅನುಭವಿಸಬಹುದು ಎನ್ನಲಾಗ್ತಿದೆ. ಆದರೆ ಹುವಾವೇ ಟೆಂಟ್‌ಪೋಲ್ ಫೋನ್ ಶ್ರೇಣಿಯು ಚೀನಾ ಮತ್ತು ಗೂಗಲ್ ಅಪ್ಲಿಕೇಶನ್‌ಗಳನ್ನು ನಿರೀಕ್ಷಿಸದ ಇತರೆ ದೇಶಗಳಳಲ್ಲಿ ಕಮಾಲ್ ಮಾಡುತ್ತಿದೆ. ಇದೇ ಕಾರಣಕ್ಕೆ ಈ ಸರಣಿಯ ಸ್ಮಾರ್ಟ್‌ಫೋನ್ ಗ್ರಾಹಕರಲ್ಲಿ ಭಾರಿ ನಿರೀಕ್ಷೆಯನ್ನ ಹುಟ್ಟುಹಾಕಿದೆ.


Click it and Unblock the Notifications




