ಎಂಟ್ರಿ ಲೆವೆಲ್ ಫೋಲ್ಡಬಲ್ ಫೋನ್ ಪರಿಚಯಿಸಲು ಹುವಾವೇ ಪ್ಲಾನ್! ಬೆಲೆ ನಿರೀಕ್ಷೆ ಏನು?
ಇತ್ತೀಚಿನ ದಿನಗಳಲ್ಲಿ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳು ಸಾಕಷ್ಟು ಸೌಂಡ್ ಮಾಡುತ್ತಿವೆ. ಕಳೆದ ಹಲವು ವರ್ಷಗಳಿಂದಲೂ ಫೋಲ್ಡಬಲ್ ಫೋನ್‌ಗಳು ಮಾರುಕಟ್ಟೆಯಲ್ಲಿವೆಯಾದರೂ ಈ ವರ್ಷ ಅತಿ ಹೆಚ್ಚು ಫೋಲ್ಡಬಲ್ ಫೋನ್‌ಗಳು ಮಾರುಕಟ್ಟೆಯಲ್ಲಿ ರಾರಾಜಿಸುತ್ತಿವೆ. ಈ ನಿಟ್ಟಿನಲ್ಲಿ ಹುವಾವೇ ಕಂಪೆನಿ ಫೋಲ್ಡಬಲ್ ವಿಭಾಗದಲ್ಲಿ ಹೊಸ ಪ್ರಯತ್ನಕ್ಕೆ ಮುಂದಾಗಿದೆ.
ಹೌದು, ಹುವಾವೇ ಕಂಪೆನಿ ಶೀಘ್ರದಲ್ಲೇ ಎಂಟ್ರಿ ಲೆವೆಲ್ ಫೋಲ್ಡಬಲ್ ಫೋನ್ ಪರಿಚಯಿಸುವುದಕ್ಕೆ ತಯಾರಿ ನಡೆಸಿದೆ. ಫೋಲ್ಡಬಲ್ ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯಿದೆ. ಆದರಿಂದ ಹುವಾವೇ ಕಂಪೆನಿಯ ಎಂಟ್ರಿ ಲೆವೆಲ್ ಫೋಲ್ಡಬಲ್ ಫೋನ್ ಬೆಲೆ ಎಷ್ಟಿರಲಿದೆ ಎನ್ನುವ ಕುತೂಹಲ ಶುರುವಾಗಿದೆ. ಈ ಸ್ಮಾರ್ಟ್‌ಫೋನ್ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ Z FE ಗೆ ಪ್ರತಿಸ್ಪರ್ಧಿಯಾಗಲಿದೆ ಎನ್ನಲಾಗಿದೆ. ಹಾಗಾದ್ರೆ ಹುವಾವೇ ಕಂಪೆನಿಯ ಎಂಟ್ರಿ ಲೆವೆಲ್ ಫೋಲ್ಡಬಲ್ ಸ್ಮಾರ್ಟ್‌ಫೋನ್ ಹೇಗಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹುವಾವೇ ಕಂಪೆನಿ ವಿಶೇಷ ಸ್ಮಾರ್ಟ್‌ಫೋನ್‌ಗಳಿಗೆ ಹೆಸರುವಾಸಿಯಾಗಿದೆ. ಮಾರುಕಟ್ಟೆಯಲ್ಲಿ ಹಲವು ಹೊಸತುಗಳಿಗೆ ಸೈ ಎನಿಸಿಕೊಂಡಿರುವ ಹುವಾವೇ ಎಂಟ್ರಿ-ಲೆವೆಲ್ ಫೋಲ್ಡಬಲ್ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚಿನ ಆನ್‌ಲೈನ್ ಸೋರಿಕೆ ವರದಿಗಳ ಪ್ರಕಾರ ಹುವಾವೇ ಫ್ಲಿಪ್-ಶೈಲಿಯ P ಪಾಕೆಟ್ ಸರಣಿಯ ಮಡಿಸಬಹುದಾದ ಸ್ಮಾರ್ಟ್‌ಫೋನ್‌ನ ಆವೃತ್ತಿಯಾಗಿದೆ. ಇದು ಮಾರುಕಟ್ಟೆಯಲ್ಲಿ ಅತ್ಯಂತ ಕೈಗೆಟುಕುವ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿರಲಿದೆ ಎಂದು ಹೇಳಲಾಗಿದೆ.
ಇತ್ತೀಚಿನ ಮಾಹಿತಿಯ ಪ್ರಕಾರ ಹುವಾವೇ ಎಂಟ್ರಿ ಲೆವೆಲ್ ಫೋಲ್ಡಬಲ್ ಸ್ಮಾರ್ಟ್‌ಫೋನ್‌ನ ಬೆಲೆ ಅಂದಾಜು 61,000ರೂ ಅಥವಾ ಅದಕ್ಕಿಂತ ಕಡಿಮೆ ಇರುತ್ತದೆ ಎಂದು ಹೇಳಲಾಗಿದೆ. ಇದೆನು ಕಡಿಮೆ ಬೆಲೆಯ ಎಂದು ನಿಮಗನಿಸಬಹುದು, ಆದರೆ ಫೋಲ್ಡಬಲ್ ಫೋನ್‌ಗಳ ವಿಭಾಗದಲ್ಲಿ ಇದುವೆ ಕಡಿಮೆ ಬೆಲೆ ಎಂದು ಹೇಳಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 2024 ರ ಮೊದಲಾರ್ಧದಲ್ಲಿ ಅಧಿಕೃತಗೊಳಿಸಬಹುದು ಎಂದು ವರದಿಯಾಗಿದೆ.
ಸ್ಯಾಮ್‌ಸಂಗ್‌ನಿಂದಲೂ ಬರಲಿದೆ ಎಂಟ್ರಿ ಲೆವೆಲ್ ಫೋಲ್ಡಬಲ್ ಫೋನ್
ಸ್ಯಾಮ್‌ಸಂಗ್ ಸಂಸ್ಥೆಯು ಸಹ ಗ್ಯಾಲಕ್ಸಿ Z ಫ್ಲಿಪ್ ಅಥವಾ Z ಫೋಲ್ಡ್ ಸ್ಮಾರ್ಟ್‌ಫೋನ್‌ಗಳ FE ರೂಪಾಂತರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಅದರಂತೆ ಸ್ಯಾಮ್‌ಸಂಗ್ ಕಂಪನಿ ಸಹ ಕೈಗೆಟುಕುವ ಬೆಲೆಯಲ್ಲಿ ಫೋಲ್ಡಬಲ್ ಸ್ಮಾರ್ಟ್‌ಫೋನ್ ಪರಿಚಯಿಸುವ ನಿರೀಕ್ಷೆಯಿದೆ. ಆದರೆ ಈ ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಬಿಡುಗಡೆಯಾಗುವ ಸಾಧ್ಯತೆಯಿಲ್ಲ. ಇದು ಹುವಾವೇ ಕಂಪೆನಿಯ ಫೋಲ್ಡಬಲ್ ಫೋನ್ ಬಿಡುಗಡೆಯಾದ ನಂತರ ಎಂಟ್ರಿ ನೀಡುವ ನಿರೀಕ್ಷೆ ಇಡಲಾಗಿದೆ.
ಫೋಲ್ಡಬಲ್ ಫೋನ್ ಮಾರುಕಟ್ಟೆಯಲ್ಲಿ ಭಾರಿ ಬದಲಾವಣೆ
ಪ್ರಾರಂಭದಲ್ಲಿ ಸಾಕಷ್ಟು ಹಿಂದೆ ಉಳಿದಿದ್ದ ಫೋಲ್ಡಬಲ್ ಫೋನ್ ಮಾರುಕಟ್ಟೆ ಇದೀಗ ನಿಧಾನವಾಗಿ ಸೌಂಡ್ ಮಾಡಲು ಶುರುಮಾಡಿದೆ. ಅದರಲ್ಲೂ ಕಳೆದ ಒಂದು ವರ್ಷದಿಂದೀಚೆಗೆ ಫೋಲ್ಡಬಲ್ ಸ್ಮಾರ್ಟ್‌ಫೋನ್‌ಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಎಂಟ್ರಿ ನೀಡಿವೆ. ಅದರಲ್ಲೂ ಪ್ರಮುಖ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಾದ ಒಪ್ಪೋ, ಒನ್‌ಪ್ಲಸ್, ಸಂಸ್ಥೆಗಳು ಸಹ ಫೋಲ್ಡಬಲ್ ಫೋನ್ ಮಾರುಕಟ್ಟೆಯಲ್ಲಿ ಸೌಂಡ್ ಮಾಡಲು ಶುರುಮಾಡಿವೆ.
ಇತ್ತೀಚಿಗೆ ಒನ್‌ಪ್ಲಸ್ ಕಂಪೆನಿ ತನ್ನ ಮೊದಲ ಫೋಲ್ಡಬಲ್ ಫೋನ್ ಒನ್‌ಪ್ಲಸ್ ಓಪನ್ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ 7.82 ಇಂಚಿನ 2K ಫ್ಲೆಕ್ಸಿ-ಫ್ಲೂಯಿಡ್ LTPO 3.0 ಅಮೋಲೆಡ್ ಇನ್ನರ್ ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ 6.31 ಇಂಚಿನ ಔಟರ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 SoC ಪ್ರೊಸೆಸರ್ ವೇಗವನ್ನು ಹೊಂದಿದೆ. ಆಂಡ್ರಾಯ್ಡ್ 13 ಔಟ್-ಆಫ್-ದಿ-ಬಾಕ್ಸ್ ಆಧಾರಿತ ಆಕ್ಸಿಜನ್OS 13.2 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 16GB RAM ಮತ್ತು 512GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದಲ್ಲದೆ ಬಳಕೆಯಾಗದ ಸಂಗ್ರಹಣೆಯನ್ನು ಬಳಸಿಕೊಂಡು ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುವ ಮೆಮೊರಿಯನ್ನು 4GB, 8GB ಮತ್ತು 12GB ಯ ಏರಿಕೆಗಳಲ್ಲಿ ವಿಸ್ತರಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ.


Click it and Unblock the Notifications








