Home
ಸುದ್ದಿಜಾಲ

ಗೂಗಲ್‌ಗೆ ಸೆಡ್ಡು!..ಹುವಾವೇಯ ಸ್ವಂತ ಓಎಸ್ ಆಂಡ್ರಾಯ್ಡ್‌ಗಿಂತ 60% ವೇಗವಾಗಿದೆ!

ಅಮೆರಿಕಾದ ನಿಷೇಧದ ನಂತರ, ಚೀನೀ ದೈತ್ಯ ಕಂಪನಿ ಹುವಾವೇ ಆಂಡ್ರಾಯ್ಡ್ ಓಎಸ್‌ಗೆ ಪರ್ಯಾಯವನ್ನು ನಿರ್ಮಿಸಲು ಕೆಲಸ ಮಾಡುತ್ತಿದೆ ಎಂದು ವರದಿಯಾಗಿತ್ತು. ಇದೀಗ ಬಂದಿರವ ವಿಶೇಷ ಸುದ್ದಿ ಏನೆಂದರೆ, ಹುವಾವೇಯ ಸ್ವಂತ ಓಎಸ್ ಆಂಡ್ರಾಯ್ಡ್‌ಗಿಂತ 60%ವೇಗವಾಗಿದೆ. ಇದು ಶೀಘ್ರದಲ್ಲೇ ಬಿಡುಗಡೆಗೂ ಸಿದ್ದವಾಗಿದೆ ಎಂದು ಅಲ್ಲಿನ ಮಾಧ್ಯಮ ವರದಿಗಳು ತಿಳಿಸಿವೆ.

ಗೂಗಲ್‌ಗೆ ಸೆಡ್ಡು!..ಹುವಾವೇಯ ಸ್ವಂತ ಓಎಸ್ ಆಂಡ್ರಾಯ್ಡ್‌ಗಿಂತ 60% ವೇಗವಾಗಿದೆ!

ಹೌದು, ಹುವಾವೇ ಕಂಪನಿಯು ತನ್ನದೇ ಆದ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಹೊಸ ಓಎಸ್ 'ಹಾಂಗ್‌ಮೆಂಗ್ ಓಎಸ್' ಅನ್ನು ಅಭಿವೃದ್ಧಿಪಡಿಸಿದೆ. ಈ 'ಹಾಂಗ್‌ಮೆಂಗ್ ಓಎಸ್ ಆಂಡ್ರಾಯ್ಡ್‌ಗಿಂತ 60% ವೇಗವಾಗಿದ್ದು, ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್‌ನ ಸಂಪೂರ್ಣ ಪ್ರಾಬಲ್ಯವವನ್ನು ತಡೆಯಲಿದೆ ಎಂದು ಕೆಲವು ವರದಿಗಳು ಸೂಚಿಸುತ್ತಿವೆ.

ಅಮೆರಿಕಾದ ಟ್ರಂಪ್ ಆಡಳಿತವು ಚೀನಾದ ದೈತ್ಯ ಹುವಾವೇಯನ್ನು ಅಪಾಯಕಾರಿ ಘಟಕದ ಪಟ್ಟಿಗೆ ಸೇರಿಸಿದಾಗ ಹುವಾವೇಯ ಸ್ವಂತ ಓಎಸ್ ಅಭಿವೃದ್ಧಿ ಪ್ರಾರಂಭವಾಯಿತು. ಇದೀಗ, ಹುವಾವೇ ತನ್ನ ಓಎಸ್ ಅನ್ನು ಟೆಕ್ ದೈತ್ಯ ಕಂಪನಿಗಳಾದ ವಿವೊ, ಒಪ್ಪೊ, ಟೆನ್ಸೆಂಟ್‌ನೊಂದಿಗೆ ಪರೀಕ್ಷಿಸುತ್ತಿದೆ ಮತ್ತು ಮುಂದಿನ ಕೆಲವು ತಿಂಗಳುಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಗೂಗಲ್‌ಗೆ ಸೆಡ್ಡು!..ಹುವಾವೇಯ ಸ್ವಂತ ಓಎಸ್ ಆಂಡ್ರಾಯ್ಡ್‌ಗಿಂತ 60% ವೇಗವಾಗಿದೆ!

ಇತ್ತೀಚಿನ ಸಂದರ್ಶನವೊಂದರಲ್ಲಿ, ಹುವಾವೇ ಸಿಇಒ ರೆನ್ ಝೆಂಗ್ ಫೈ ತಮ್ಮ ಹಾಂಗ್‌ಮೆಂಗ್ ಓಎಸ್ ಆಂಡ್ರಾಯ್ಡ್ ಮತ್ತು ಮ್ಯಾಕ್ ಓಎಸ್ಗಿಂತ ಹೆಚ್ಚು ವೇಗವಾಗಿರುತ್ತದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ, ಹಾಂಗ್‌ಮೆಂಗ್ ಓಎಸ್ ಸ್ಮಾರ್ಟ್‌ಫೋನ್‌ಗಳಿಗೆ ಸಾಂಪ್ರದಾಯಿಕ ಆಪರೇಟಿಂಗ್ ಸಿಸ್ಟಮ್ ಅಲ್ಲ ಎಂದು ಅವರು ಹೇಳಿರುವುದು ಆಂಡ್ರಾಯ್ಡ್ ಪ್ರಾಬಲ್ಯಕ್ಕೆ ಧಕ್ಕೆ ತರಬಹುದಾಗಿದೆ.

ಈ ಬಗ್ಗೆ ಹಲವು ವರದಿಗಳು ಅಭಿಪ್ರಾಯಪಟ್ಟಿದ್ದು, ಗಿಜ್‌ಮೋಚಿನಾದ ವರದಿ ಪ್ರಕಾರ, ಹುವಾವೇಯ ಸ್ವದೇಶಿ ಆಪರೇಟಿಂಗ್ ಸಿಸ್ಟಮ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಆಂಡ್ರಾಯ್ಡ್ ಸಂಪೂರ್ಣ ಪ್ರಾಬಲ್ಯವನ್ನು ಹಾಳು ಮಾಡುತ್ತದೆ ಎಂದಿದೆ. ಆದರೆ, 'ಹಾಂಗ್‌ಮೆಂಗ್ ಓಎಸ್' ಇನ್ನೂ ಗೂಗಲ್ ಪ್ಲೇ ಸ್ಟೋರ್ ಪರ್ಯಾಯವನ್ನು ಹೊಂದಿಲ್ಲ ಎಂಬುದನ್ನು ಸಹ ಪಟ್ಟಿ ಮಾಡಿದೆ.

Best Mobiles in India

English summary
The reports from Global Times also says that Huawei’s Hongmeng OS is likely to be 60% faster than Android. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+