ಕಾರನ್ನು ಓಡಿಸುವ ಕೃತಕ ಬುದ್ಧಿಮತ್ತೆಯ ಮೊಬೈಲ್‌!..ವಿಡಿಯೋ ನೋಡಿ!!

|

ಒಂದು ಕಾಲದಲ್ಲಿ ಕೇವಲ ಸಂವಹನ ಸಾಧನವಾಗಿದ್ದ ಮೊಬೈಲ್‌ ಇಂದು ಸಾವಿರಾರು ಉಪಯೋಗಗಳಿಗೆ ಬಳಕೆಯಾಗುತ್ತಿದೆ. ಕೈಯಲ್ಲೊಂದು ಮೊಬೈಲ್ ಇದ್ದರೆ ಏನು ಬೇಕಾದರೂ ಮಾಡಬಹುದು ಎಂಬಂತಾಗಿದೆ. ಇದಕ್ಕೆ ಹೊಸದೊಂದು ಉದಾಹರಣೆ ಎಂದರೆ, 'ರೋಡ್‌ ರೀಡರ್‌' ಹೆಸರಿನ ಪ್ರಾಜೆಕ್ಟ್‌ ಅಡಿಯಲ್ಲಿ ಒಂದು ಮೊಬೈಲ್ ನಿಖರವಾಗಿ ಕಾರನ್ನು ಓಡಿಸಿದೆ.

ಹೌದು, ಹುವಾವೆ ಕಂಪೆನಿ ತನ್ನ 'ರೋಡ್‌ ರೀಡರ್‌' ಹೆಸರಿನ ಪ್ರಾಜೆಕ್ಟ್‌ ಅಡಿ ಈ ಪ್ರಯೋಗ ನಡೆಸಿದ್ದು, ರಸ್ತೆಯಲ್ಲಿ ಕಾರು ಸಾಗುವಾಗ ಎದುರಾಗುವ ಪ್ರಾಣಿಗಳು ಸೇರಿದಂತೆ, ಹಲವು ವಸ್ತುಗಳನ್ನು ಈ ಸಾಧನ ಗುರುತಿಸುವ. ಪ್ರಾಣಿಗಳು ಅಡ್ಡಬಂದರೆ ಏನು ಮಾಡಬೇಕು ಎಂಬ ಬಗ್ಗೆ ಸೂಕ್ತವಾದ ತೀರ್ಮಾನ ಕೈಗೊಳ್ಳುವಂತಹ ಮೊಬೈಲ್ ಒಂದನ್ನು ಪರಿಚಯಿಸಿದೆ.

ಕಾರನ್ನು ಓಡಿಸುವ ಕೃತಕ ಬುದ್ಧಿಮತ್ತೆಯ ಮೊಬೈಲ್‌!..ವಿಡಿಯೋ ನೋಡಿ!!

ನಮ್ಮ ಸ್ಮಾರ್ಟ್‌ಫೋನ್‌ ಈಗಾಗಲೇ ವಸ್ತುಗಳನ್ನು ಸುಸ್ಪಷ್ಟವಾಗಿ ಗುರುತಿಸುತ್ತದೆ. ಇದು ಕೇವಲ ಚಾಲಕ ರಹಿತ ಕಾರಿನ ಚಾಲನೆಗೆ ಮಾತ್ರವಲ್ಲದೆ ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಮತ್ತಷ್ಟು ಸಾಧ್ಯತೆಗಳ ಬಗ್ಗೆಯೂ ಯೋಚಿಸುವಂತೆ ಮಾಡಿದೆ ಎಂದು ಹುವಾವೆ ಕಂಪನಿ ಹೇಳಿದೆ. ಹಾಗಾದರೆ, ಏನಿದು ವಿಶೇಷ ವರದಿ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಅಚ್ಚರಿ ಮೂಡಿಸಿದ ಹುವಾವೆ!

ಅಚ್ಚರಿ ಮೂಡಿಸಿದ ಹುವಾವೆ!

ಮೊಬೈಲ್‌ ಬಳಕೆಯ ಅನಂತ ಸಾಧ್ಯತೆಗಳ ಬಗ್ಗೆ ವಿಶ್ವದಾದ್ಯಂತ ನಿರಂತರವಾಗಿ ಸಂಶೋಧನೆಗಳು ನಡೆಯುತ್ತಲೇ ಇವೆ. ಈಗ ಕಾರು ಚಲಾಯಿಸಲು ಮೊಬೈಲ್‌ ಬಳಸಿರುವ ಪ್ರಾತ್ಯಕ್ಷಿತೆಯನ್ನೂ ಹುವಾವೆ ಕಂಪನಿ ತೋರಿಸಿ ಅಚ್ಚರಿ ಮೂಡಿಸಿದೆ. ವಸ್ತುಗಳನ್ನು ಮತ್ತು ಪ್ರಾಣಿಗಳನ್ನು ಸುಸ್ಪಷ್ಟವಾಗಿ ಗುರುತಿಸುವ ಸ್ಮಾರ್ಟ್‌ಫೋನ್‌ ತಂತ್ರಜ್ಞಾನವನ್ನು ಕಾರಿನಲ್ಲಿಯೂ ಯಶಸ್ವಿಯಾಗಿ ಬಳಸಿದ ಕೀರ್ತಿ ಹುವಾವೆ ಕಂಪೆನಿಗೆ ಸಲ್ಲಿದೆ.!

ತಾನೇ ಅರ್ಥೈಸಿಕೊಳ್ಳುವ ಮೊಬೈಲ್ ಕಾರ್!

ತಾನೇ ಅರ್ಥೈಸಿಕೊಳ್ಳುವ ಮೊಬೈಲ್ ಕಾರ್!

ಸಾಮಾನ್ಯವಾಗಿ ಚಾಲಕರಹಿತ ಕಾರುಗಳಿಗಿರುವ ದೊಡ್ಡ ಶಕ್ತಿ ಎಂದರೆ ರಸ್ತೆಯ ಮೇಲಿನ ಮತ್ತು ಪಕ್ಕದ ವಸ್ತುಗಳನ್ನು ಸರಿಯಾಗಿ ಗುರುತಿಸುವುದು. ಹುವಾವೆ ಇದೀಗ ಪೋರ್ಸೆ ಪನಮೇರಾ ಕಾರನ್ನು ಈ ಪ್ರಯೋಗಕ್ಕೆ ಬಳಸಿದೆ. ಈ ಕಾರು ತನ್ನ ಸುತ್ತಲಿನ ಎಲ್ಲ ಚಟುವಟಿಕೆಗಳನ್ನೂ ಅರ್ಥೈಸಿಕೊಳ್ಳುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಸ್ವಯಂಚಾಲಿತವಾಗಿ ವಸ್ತುಗಳನ್ನು ಗುರುತಿಸುವ ಇದರೊಂದಿಗೆ ಕೃತಕ ಬುದ್ಧಿಮತ್ತೆಯ ಮೊಬೈಲ್ ಸೇರಿಸಿರುವುದು ಇದರ ಶಕ್ತಿ ಎಂದು ತಿಳಿಸಿದೆ.

ಚಾಲಕರಹಿತ ಬುದ್ದಿವಂತ ಕಾರು

ಚಾಲಕರಹಿತ ಬುದ್ದಿವಂತ ಕಾರು

ಚಾಲಕರಹಿತ ಕಾರುಗಳಲ್ಲಿ ಸಾಮಾನ್ಯವಾಗಿ ಕ್ಯಾಮೆರಾ, ರಡಾರ್ ಮತ್ತು ಲಿಡರ್‌ಗಳನ್ನು ಬಳಸಿ ಕಾರುಗಳು ಯಾವುದೇ ವಸ್ತು ಮತ್ತು ಪ್ರಾಣಿಗಳಿಗೆ ಡಿಕ್ಕಿಯಾಗುವುದನ್ನು ತಡೆಯಲಾಗುತ್ತದೆ. ಆದರೆ ಕೃತಕಬುದ್ಧಿಮತ್ತೆಯ ಮೊಬೈಲ್ ಬಳಕೆಯಿಂದ ಕಾರು ಚಲಿಸುವ ಪಥವನ್ನು ಸ್ವಯಂಚಾಲಿತವಾಗಿ ಗುರುತಿಸುವುದು ಇನ್ನೂ ಸರಳವಾಗಲಿದೆ. ಬುದ್ಧಿವಂತಿಕೆಯಿಂದ ಕಾರು ಯಾವುದಕ್ಕೂ ಡಿಕ್ಕಿ ಹೊಡೆಯದಂತೆ ತಡೆಯುತ್ತದೆ ಎಂದು ಹುವಾವೆ ಕಂಪೆನಿ ತಿಳಿಸಿದೆ.

ಕೃತಕ ಬುದ್ದಿಮತ್ತೆ ಚಿಪ್!

ಕೃತಕ ಬುದ್ದಿಮತ್ತೆ ಚಿಪ್!

ಕೃತಕ ಬುದ್ಧಿಮತ್ತೆಯ ಲಕ್ಷಣಗಳನ್ನು ಹೊಂದಿರುವ ಮೊಬೈಲ್‌ ಚಿಪ್‌ಗಳು ಈಗಾಗಲೇ ಬಂದಿವೆ. ಇವುಗಳಲ್ಲಿ ಆಪಲ್‌ನ ಎ11 ಬಯೋನಿಕ್, ಹುವಾವೆಯ ಕಿರಿನ್ 970 ಹಾಗೂ ಸ್ಯಾಮ್ಸಂಗ್‌ನ ಎಕ್ಸಿನೊಸ್ 9810 ಮುಖ್ಯವಾದವು. ಇದೀಗ ಈ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಚಾಲಕರಹಿತ ಕಾರಿಗೂ ಬಳಕೆ ಮಾಡುವತ್ತ ಹುವಾವೆ ಕಂಪೆನಿ ಮುಂದಾಗಿದೆ. ಸುಧಾರಿತ ಸ್ಮಾರ್ಟ್‌ ಸಾಧನಗಳ ತಯಾರಿಕೆಗೆ ಚೀನಾದ ಬೈದು ಕಂಪನಿ ಜತೆಗೂಡಿ ಹಲವು ಯೋಜನೆಗಳಿಗೆ ಹುವಾವೆ ಕಂಪನಿ ಒಪ್ಪಂದ ಮಾಡಿಕೊಂಡಿದೆ.

ಮತ್ತಷ್ಟು ಯೋಜನೆಗಳು

ಮತ್ತಷ್ಟು ಯೋಜನೆಗಳು

ಬೈದು ಹಾಗೂ ಹುವಾವೆ ಜತೆಗೂಡಿ ಮೊಬೈಲ್‌ಗಳಲ್ಲಿ ಧ್ವನಿ ಮತ್ತು ಚಹರೆ ಗುರುತಿಸುವ ಸುಧಾರಿತ ಸ್ಮಾರ್ಟ್‌ ಸಾಧನಗಳನ್ನು ಸಿದ್ಧಪಡಿಸುತ್ತಿವೆ. ಅಲ್ಲದೆ ಇದಕ್ಕೆ ಸೂಕ್ತವಾಗುವಂತಹ ಎಆರ್ ತಂತ್ರಾಂಶ ಮತ್ತು ಹಾರ್ಡ್‌ವೇರ್‌ ರೂಪಿಸಲಾಗುತ್ತದೆ. ಕೃತಕಬುದ್ಧಿಮತ್ತೆ ವ್ಯವಸ್ಥೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ರೂಪಿಸಲು ಹುವಾವೆ ಮುಂದಾಗಿದೆ. ವಿಶ್ವ ಟೆಕ್ ದಿಗ್ಗಜ ಸ್ಥಾನಕ್ಕೇರಲು ಭಾರೀ ಪ್ರಯತ್ನಿಸುತ್ತಿರುವ ಹುವಾವೆ ಕಂಪೆನಿ ತನ್ನ ಕಾರ್ಯದಲ್ಲಿ ಈಗಾಗಲೇ ಯಶಸ್ಸನ್ನು ಸಹ ಗಳಿಸಿದೆ.

Best Mobiles in India

English summary
Huawei has developed a driverless AI car that is controlled by the Mate 10 Pro, the flagship smartphone from Huawei.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X