Home
ಸುದ್ದಿಜಾಲ

ಹುವಾವೇ ಸಂಸ್ಥೆಯ ಹುವಾವೇ ಸ್ಮಾರ್ಟ್ ಸ್ಕ್ರೀನ್ X65 ಟಿವಿ ಲಾಂಚ್‌!

ಇತ್ತೀಚಿನ ದಿನಗಳಲ್ಲಿ ಟಿವಿ ಲೋಕ ತುಂಬಾನೆ ಕಲರ್‌ಫುಲ್‌ ಆಗಿದೆ. ಟೆಕ್ನಾಲಜಿ ಮುಂದುವರೆದಂತೆ ಟಿವಿಲೋಕ ಕೂಡ ಸಾಕಷ್ಟು ಸ್ಮಾರ್ಟ್‌ ಆಗುತ್ತಿದೆ. ನಿಮಗೆಲ್ಲಾ ತಿಳಿದಿರುವಂತೆ ಈಗಾಗಲೇ ಹಲವು ಕಂಪೆನಿಗಳ ಸ್ಮಾರ್ಟ್‌ಟಿವಿಗಳು ಮಾರುಕಟ್ಟೆಯಲ್ಲಿ ಲಬ್ಯವಿವೆ. ಹಲವು ಕಂಪೆನಿಗಳ ಉತ್ತಮ ರೆಸಲ್ಯೂಶನ್‌ ಸಾಮರ್ಥ್ಯವಿರುವ ಸ್ಮಾರ್ಟ್‌ಟಿವಿಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ಉತ್ತಮ ಬ್ರಾಂಡ್‌ ವ್ಯಾಲ್ಯೂ ಹೊಂದಿರುವ ಸ್ಮಾರ್ಟ್‌ಟಿವಿಗಳನ್ನ ಗ್ರಾಹಕರು ಆಯ್ಕೆ ಮಾಡಿಕೊಳ್ಳುತ್ತಾರೆ. ಇವುಗಳಲ್ಲಿ ಹುವಾವೇ ಕಂಪೆನಿ ಕೂಡ ಒಂದಾಗಿದ್ದು, ತನ್ನ ಬ್ರಾಂಡ್‌ ಸ್ಮಾರ್ಟ್‌ಟಿವಿ ಗಳಿಂದಲೇ ಗುರುತಿಸಿಕೊಂಡಿದೆ.

ಹೌದು

ಹೌದು, ಚೀನಾದ ಎಲೆಕ್ಟ್ರಾನಿಕ್ಸ್ ದೈತ್ಯ ಹುವಾವೇ ತನ್ನ ಇತ್ತೀಚಿನ ಹೊಸ ಮಾದರಿಯ ಸ್ಮಾರ್ಟ್‌ಟಿವಿಯನ್ನ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ ಟಿವಿ ಹೊಸ ವಿನ್ಯಾಸವನ್ನ ಒಳಗೊಂಡಿದ್ದು, ಇದನ್ನು ಹುವಾವೇ ಸ್ಮಾರ್ಟ್ ಸ್ಕ್ರೀನ್ X65 ಅನ್ನು ಬಿಡುಗಡೆ ಮಾಡಿದೆ. ಇದು 65 ಇಂಚಿನ ಒಎಲ್ಇಡಿ ಸ್ಮಾರ್ಟ್ ಟಿವಿ ಆಗಿದ್ದು, ಚೀನಾದ ಮಾರುಕಟ್ಟೆಯಲ್ಲಿ ಲಾಂಚ್‌ ಆಗಿದೆ. ಇನ್ನು ಈ ಸ್ಮಾರ್ಟ್‌ಟಿವಿ ಉನ್ನತ-ಮಟ್ಟದ ಫೀಚರ್ಸ್‌ಗಳನ್ನ ಹೊಂದಿದ್ದು, ಪ್ರೀಮಿಯಂ ಮಾದರಿಯಾಗಿದೆ. ಈ ಸ್ಮಾರ್ಟ್‌ಟಿವಿ CNY 24,999 (ಅಂದಾಜು ರೂ. 2,70,000) ಬೆಲೆಯನ್ನ ಹೊಂದಿದೆ. ಇನ್ನು ಈ ಸ್ಮಾರ್ಟ್‌ಟಿವಿ ವಿನ್ಯಾಸ ಹಾಗೂ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಯೋಣ ಬನ್ನಿರಿ.

ಹುವಾವೇ

ಇನ್ನು ಹುವಾವೇ ಸ್ಮಾರ್ಟ್ ಸ್ಕ್ರೀನ್ X65 ಸ್ಮಾರ್ಟ್‌ಟಿವಿ ಉತ್ತಮ ವಿನ್ಯಾಸವನ್ನ ಹೊಂದಿದೆ. ಇದಲ್ಲದೆ ಈ ಸ್ಮಾರ್ಟ್‌ಟಿವಿ 65 ಇಂಚಿನ ಒಎಲ್ಇಡಿ ಟಿವಿಯಾಗಿದ್ದು, ಎಚ್‌ಡಿಆರ್ 10 ಅನ್ನು ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ ಟಿವಿಯು ಗರಿಷ್ಠ 1,000 ನಿಟ್‌ಗಳ ಬ್ರೈಟ್‌ನೆಶ್‌ ಅನ್ನು ಹೊಂದಿದೆ. ಜೊತೆಗೆ 120Hz ನ ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿದೆ. ಅಲ್ಲದೆ ಬಳಕೆದಾರರ ಕಣ್ಣಿನ ಆರೋಗ್ಯಕ್ಕಾಗಿ ಈ ಸ್ಮಾರ್ಟ್‌ಟಿವಿಯ ಡಿಸ್‌ಪ್ಲೇಯನ್ನ TUV ರೈನ್‌ಲ್ಯಾಂಡ್ ಪ್ರಮಾಣೀಕರಿಸಿದೆ ಎಂದು ಕಂಪನಿ ಹೇಳುತ್ತದೆ.

ಸ್ಮಾರ್ಟ್‌ಟಿವಿ

ಅಲ್ಲದೆ ಈ ಸ್ಮಾರ್ಟ್‌ಟಿವಿ 14-ಸ್ಪೀಕರ್ ಅಂಡರ್-ಡಿಸ್ಪ್ಲೇ ಸೌಂಡ್ ಸಿಸ್ಟಮ್ ಅನ್ನು ಹೊಂದಿದ್ದು, ಇದರಲ್ಲಿ ಪೂರ್ಣ ಪ್ರಮಾಣದ 6 ಆಡಿಯೋ ಡ್ರೈವರ್‌ಗಳನ್ನ ಒಳಗೊಂಡಿದೆ. ಜೊತೆಗೆ ಗರಿಷ್ಠ ಆರು ಟ್ವೀಟರ್‌ಗಳು ಮತ್ತು ಕನಿಷ್ಠ ಎರಡು ವೂಫರ್‌ಗಳನ್ನ ನೀಡಲಾಗಿದೆ. ಇನ್ನು ಈ ಸ್ಮಾರ್ಟ್ ಟಿವಿ ಹುವಾವೇ ಹಾರ್ಮನಿ ಓಎಸ್ ಬೆಮಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಅಲ್ಲದೆ ಇದು ಒಎಲ್‌ಇಡಿ ಟಿವಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹಾಂಗ್‌ಹು 898 ಪ್ರೊಸೆಸರ್ ನಿಂದ ನಿಯಂತ್ರಿಸಲ್ಪಡುತ್ತದೆ. ಹಾಗೇಯೆ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನ ಹೊಂದಿದೆ.

ಸ್ಮಾರ್ಟ್

ಇನ್ನು ಸ್ಮಾರ್ಟ್ ಟೆಲಿವಿಷನ್‌ಗಳಲ್ಲಿ ಇಲ್ಲಿವರೆಗೂ ಲಭ್ಯವಿರುವ RAM ಮತ್ತು ಸ್ಟೋರೇಜ್‌ ಸಾಮರ್ಥ್ಯಕ್ಕಿಂತ ಈ ಸ್ಮಾರ್ಟ್‌ಟಿವಿಯಲ್ಲಿ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಇದು ಸ್ಮಾರ್ಟ್ ಸ್ಕ್ರೀನ್ X65 ನಲ್ಲಿನ ಸಂಗ್ರಹಣೆಯನ್ನು ಕೇವಲ ಅಪ್ಲಿಕೇಶನ್‌ಗಳು ಮತ್ತು ಅಪ್ಲಿಕೇಶನ್ ಡೇಟಾಕ್ಕಿಂತ ಹೆಚ್ಚಾಗಿ ಬಳಸಲು ಹುವಾವೇ ಅವಕಾಶ ಕಲ್ಪಿಸುತ್ತದೆ. ಇನ್ನು ಈ ಸ್ಮಾರ್ಟ್‌ಟಿವಿಯಲ್ಲಿ 24 ಮೆಗಾಪಿಕ್ಸೆಲ್ ಪಾಪ್-ಅಪ್ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಇದು ವೀಡಿಯೊ ಕರೆಗಳು ಮತ್ತು ಇತರ ಕ್ಯಾಮೆರಾ ಆಧಾರಿತ ಅಪ್ಲಿಕೇಶನ್‌ಗಳಿಗಾಗಿ ಟಿವಿಯನ್ನು ಬಳಸಲು ಬಳಕೆದಾರರಿಗೆ ಅವಕಾಶ ನೀಡುತ್ತದೆ.

Best Mobiles in India

English summary
Huawei Smart Screen X65 Television With Pop-Up Camera Launched: Price, Specifications, Features, and More.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+