ಬರಲಿದೆ ಹುವಾವೇ ಕಂಪೆನಿಯ ಹುವಾವೆ ವಾಚ್‌GT 2E!

|

ಚೀನಾದ ಟೆಕ್‌ ದೈತ್ಯ ಹುವಾವೇ ಕಂಪೆನಿ ಈಗಾಗಲೆ ಟೆಕ್‌ ವಲಯದಲ್ಲಿ ಹಲವು ಮಾದರಿಯ ಸ್ಮಾರ್ಟ್‌ ಡಿವೈಸ್‌ಗಳನ್ನ ಪರಿಚಯಿಸಿದೆ. ಸ್ಮಾರ್ಟ್‌ಫೋನ್‌ ಮಾರುಕ್ಟೆಯಲ್ಲಿ ಜಾಗತಿಕವಾಗಿ ಬ್ರ್ಯಾಂಡ್‌ ಹೊಂದಿರುವ ಹುವಾವೆ ತನ್ನ ಸ್ಮಾರ್ಟ್‌ ಡಿವೈಸ್‌ಗಳ ಮೂಲಕವೂ ಗ್ರಾಹಕರ ಮನಸ್ಸನ್ನ ಗೆದ್ದಿದೆ. ಇನ್ನು ನಿಮಗೆಲ್ಲಾ ತಿಳಿದಿರುವಂತೆ ಟೆಕ್‌ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ಗಳ ಮಾದರಿಯಲ್ಲಿಯೇ ಸ್ಮಾರ್ಟ್‌ವಾಚ್‌ಗಳ ಮಾರುಕಟ್ಟೆ ಕೂಡ ವಿಸ್ತಾರಗೊಂಡಿದೆ. ಇದೀಗ ತನ್ನ ಹೊಸ ಮಾದರಿಯ ಸ್ಮಾರ್ಟ್‌ವಾಚ್‌ ಮೂಲಕ ಮತ್ತೆ ಸಮಚಲನ ಮೂಡಿಸಲು ಹುವಾವೇ ಪ್ಲ್ಯಾನ್‌ ರೂಪಿಸಿಕೊಂಡಿದೆ.

ಹೌದು

ಹೌದು, ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಕ ಹುವಾವೇ ಕಂಪೆನಿ ಈಗಾಗಲೇ ಹಲವು ಸ್ಮಾರ್ಟ್‌ವಾಚ್‌ಗಳನ್ನ ಬಿಡುಗಡೆ ಮಾಡಿದೆ. ಇದೀಗ ತನ್ನ ಹೊಸ ಮಾದರಿಯ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಲು ವೇದಿಕೆ ಸಿದ್ದಪಡಿಸಿಕೊಂಡಿದೆ. ಈ ಸ್ಮಾರ್ಟ್‌ವಾಚ್‌ ಇದೇ ಮಾರ್ಚ್ 26 ರಂದು ಬಿಡುಗಡೆಯಾಗಲಿದ್ದು, ಇದನ್ನ ಹುವಾವೇ ವಾಚ್ GT 2E ಎಂದು ಹೆಸರಿಸಲಾಗಿದೆ. ಈ ಸ್ಮಾರ್ಟ್‌ವಾಚ್‌ ಈ ಹಿಂದೆ ಹುವಾವೇ ಬಿಡುಗಡೆ ಮಾಡಿದ್ದ ಹುವಾವೇ ವಾಚ್ GT2 ಸ್ಮಾರ್ಟ್‌ವಾಚ್‌ ನ ಮುಂದುವರೆದ ಆವೃತ್ತಿಯಾಗಿದೆ.

ಇನ್ನು

ಇನ್ನು ಈ ಸ್ಮಾರ್ಟ್‌ವಾಚ್‌ ಉತ್ತಮ ವಿನ್ಯಾಸವನ್ನ ಹೊಂದಿದ್ದು, ಬಾಡಿ ಪಿಟ್ನೆಸ್‌ ಅನ್ನು ಅಳೆಯಬಲ್ಲ ಸಾಮರ್ಥ್ಯವನ್ನು ಸಹ ಹೊಂದಿದೆ. ಇತ್ತೀಚಿಗೆ ಸ್ಮಾರ್ಟ್‌ವಾಚ್‌ಗಳಲ್ಲಿ ಲಬ್ಯವಿರುವ ಫಿಟ್ನೆಸ್‌ ಟೆಕ್ನಾಲಜಿ ಈ ಸ್ಮಾರ್ಟ್‌ವಾಚ್‌ನಲ್ಲೂ ಲಬ್ಯವಿ್ದು, ಇದರಲ್ಲಿ ಇ ಮಾನಿಟರ್‌ ವ್ಯವಸ್ತೆಯನ್ನ ಅಳವಡಿಸಲಾಗಿದೆ ಎಂದು ಹೇಳಲಾಗಿದೆ. ಸದ್ಯ ಈ ಸ್ಮಾರ್ಟ್‌ವಾಚ್‌ ಕುರಿತು ಪ್ರೋಮೋ ಪೋಸ್ಟರ್‌ಗಳು ಮತ್ತು ವೀಡಿಯೊಗಳನ್ನ ಬಿಡುಗಡೆ ಮಾಡಲಾಗಿದ್ದು, ಸ್ಮಾರ್ಟ್‌ವಾಚ್‌ ವಲಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಸ್ಮಾರ್ಟ್‌ವಾಚ್‌

ಈ ಸ್ಮಾರ್ಟ್‌ವಾಚ್‌ ಭಾರತದಲ್ಲಿಯೂ ಬಿಡುಗಡೆ ಆಗಲಿದೆ. ಆದರೆ ಮೊದಲು ಚೀನಾದಲ್ಲಿ ಬಿಡುಗಡೆ ಆಗಲಿದ್ದು, ನಂತರ ಬಾರತದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಸದ್ಯ ಲಬ್ಯವಿರುವ ಮಾಹಿತಿ ಪ್ರಕಾರ ಈ ಸ್ಮಾರ್ಟ್ ವಾಚ್ ಎರಡು ವಾರಗಳ ಬ್ಯಾಟರಿ ಬಾಳಿಕೆಯನ್ನ ಪಡೆದುಕೊಂಡಿದೆ ಎಂದು ಹೇಳಲಾಗಿದೆ. ಒಂದು ದಿನಕ್ಕೆ ಚಾರ್ಜ್ ಮಾಡಿದರೆ ಕನಿಷ್ಠ ಹದಿನಾಲ್ಕು ದಿನಗಳ ಬ್ಯಾಟರಿ ಅವಧಿಯನ್ನು ಪಡೆಯಬಹುದಾಗಿದೆ.

ಅಲ್ಲದೆ

ಅಲ್ಲದೆ ಈ ಸ್ಮಾರ್ಟ್‌ವಾಚ್‌ ಕಿರಿನ್ A1 ಚಿಪ್‌ಸೆಟ್‌ ಪ್ರೊಸೆಸರ್‌ ವೇಗವನ್ನ ಹೊಂದಿದ್ದು, ಉತ್ತಮ ಕಾರ್ಯದಕ್ಷತೆಯನ್ನ ಪಡೆದುಕೊಂಡಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಹಾಟ್ಬಿಟ್‌ ರೇಟಿoಗ್‌, ವಾಕಿಂಗ್‌, ರನ್ನಿಂಗ್‌, ಸ್ವಿಮ್ಮಿಂಗ್‌, ದೈನಂದಿನ ಚಟುವಟಿಕೆಗಳ ಮೇಲೆ ನಿಗಾವಹಿಸುವ ಸಾಮರ್ಥ್ಯವನ್ನ ಹೊಂದಿರುವ ಸಾಧ್ಯತೆ ಕೂಡ ಇದೆ ಎನ್ನಲಾಗ್ತಿದೆ. ಹಾಗೇ ನೊಡಿದರೆ ಈ ಸ್ಮಾರ್ಟ್‌ವಾಚ್‌ ಆಪಲ್ ವಾಚ್‌ ಹೊಂದಿರುವ ಕೆಲವು ಫೀಚರ್ಸ್‌ಗಳನ್ನ ಹೊಂದಿಲ್ಲದಿರುವುದರಿಂದ ಇದನ್ನ ಪೂರ್ಣ ಪ್ರಮಾಣದ ಸ್ಮಾರ್ಟ್ ವಾಚ್ ಎಂದು ಸಹ ಹೇಳಲಾಗ್ತಿದೆ. ಆದರೆ ಈ ಸ್ಮಾರ್ಟ್‌ವಾಚ್‌ ಮುಂದಿನ ವಾರ ಮಾರುಕಟ್ಟೆಗೆ ಲಗ್ಗೆ ಇಡಲಿದ್ದು, ಆ ನಂತರವಷ್ಟೇ ಇದರ ಪರಿಪೂರ್ಣ ಫೀಚರ್ಸ್‌ ಬಗ್ಗೆ ಮಾಹಿತಿ ಲಭ್ಯವಾಗಲಿದೆ.

Best Mobiles in India

English summary
Huawei Watch GT 2e launch set for March 26; will come to India soon.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X