ಭಾರತದ ಮಾರುಕಟ್ಟೆಯಲ್ಲಿ ಹುವಾವೇ ವಾಚ್ GT2E ಸ್ಮಾರ್ಟ್‌ವಾಚ್‌ ಬಿಡುಗಡೆ!

|

ಪ್ರಸ್ತುತ ಜಗತ್ತಿನಲ್ಲಿ ಟೆಕ್ನಾಲಜಿ ಮುಂದುವರೆದಿರುವ ಪರಿಣಾಮ ಹಲವು ಮಾದರಿಯ ಸ್ಮಾರ್ಟ್‌ ಪ್ರಾಡಕ್ಟ್‌ಗಳು ಇಂದು ನಮ್ಮ ಕೈ ಸೇರಿವೆ. ಅಂಗೈ ಗಾತ್ರದ ಸ್ಮಾರ್ಟ್‌ಫೋನ್‌ಗಳಲ್ಲಿ ಇಡೀ ಜಗತ್ತನೇ ಕಾಣಬಹುದಾದ ಮಟ್ಟಿಗೆ ಇಂದು ನಾವೆಲ್ಲಾ ಮುಂದುವರೆದಿದ್ದೇವೆ. ಹಾಗೇಯೇ ಕೈಗೆ ಕಟ್ಟುವ ವಾಚ್‌ ಕೂಡ ನಮ್ಮ ದೇಹದ ಫಿಟ್ನೆಸ್‌ ತಿಳಿಸುವಷ್ಟರ ಮಟ್ಟಿಗೆ ಸ್ಮಾರ್ಟ್‌ ಆಗಿದ್ದು, ಟೆಕ್‌ ವಲಯ ಸಾಕಷ್ಟು ಮುಂದುವರೆದಿದೆ. ಸದ್ಯ ಈಗಾಗಲೇ ನಿಮಗೆ ತಿಳಿದಿರುವಂತೆ ಸಾಕಷ್ಟು ವಿಭಿನ್ನ ಮಾದರಿಯ ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಯಲ್ಲಿ ಲಬ್ಯವಿದೆ. ಇವುಗಳಲ್ಲಿ ಹುವಾವೇ ಕಂಪೆನಿಯ ಸ್ಮಾರ್ಟ್‌ವಾಚ್‌ಗಳು ಕೂಡ ಸಖತ್‌ ಟ್ರೆಂಡಿ ಆಗಿವೆ. ಸದ್ಯ ಇದೀಗ ಹುವಾವೇ ಕಂಪೆನಿ ಮತ್ತೊಂದು ಹೊಸ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ.

ಸ್ಮಾರ್ಟ್‌ವಾಚ್‌

ಹೌದು, ಚೀನಾದ ಟೆಕ್‌ ದೈತ್ಯ ಅಂತಾನೇ ಖ್ಯಾತಿ ಪಡೆದುಕೊಂಡಿರುವ ಹುವಾವೇ ತನ್ನ ಹೊಸ ಮಾದರಿಯ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ. ಹುವಾವೇ ವಾಚ್‌GT2E ಅನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದ್ದು, ಸ್ಮಾರ್ಟ್‌ವಾಚ್‌ ವಲಯದಲ್ಲಿ ಸಂಚಲನ ಸೃಷ್ಟಿಸುವ ಸಾಧ್ಯತೆ ಇದೆ. ಇನ್ನು ಈ ಸ್ಮಾರ್ಟ್‌ವಾಚ್‌ ಅನ್ನು ನೀವು ಮೇ 21 ರ ಮೊದಲು ಖರೀದಿಸಿದರೆ, 3,990 ರೂ ಮೌಲ್ಯದ ಉಚಿತ AM61 ಬ್ಲೂಟೂತ್ ಇಯರ್‌ಫೋನ್‌ಗಳನ್ನು ಪಡೆಯಬಹುದಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ವಿನ್ಯಾಸ ಹೇಗಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಹುವಾವೇ

ಇನ್ನು ಹುವಾವೇ ವಾಚ್ GT2E ಸ್ಮಾರ್ಟ್‌ವಾಚ್‌ 100 ರೀತಿಯ ತಾಲೀಮು ಮೋಡ್‌ಗಳನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಹಾನರ್ ಬ್ಯಾಂಡ್ 5i ಸ್ಮಾರ್ಟ್ ವಾಚ್ ರಕ್ತದ ಆಮ್ಲಜನಕ ಸ್ಯಾಚುರೇಶನ್ (SpO2) ಮಾನಿಟರಿಂಗ್ ಫೀಚರ್ಸ್‌ ಅನ್ನು ಸಹ ಹೊಂದಿದೆ. ಅಲ್ಲದೆ ಈ ಸ್ಮಾರ್ಟ್ ವಾಚ್ 1.39-ಇಂಚಿನ ಅಮೋಲೆಡ್ ಡಿಸ್‌ಪ್ಲೇಯನ್ನು ರೆಟಿನಾ-ಗ್ರೇಡ್ ರೆಸಲ್ಯೂಶನ್ ಅನ್ನು ಬೆಂಬಲಿಸುತ್ತದೆ. ಇನ್ನು ಹುವಾವೇನ ಸ್ವಾಮ್ಯದ ಕಿರಿನ್ a1 ಪ್ರೊಸೆಸರ್‌ ಅನ್ನು ಒಳಗೊಂಡಿದೆ.

ಸ್ಮಾರ್ಟ್‌ವಾಚ್‌

ಇದಲ್ಲದೆ ಈ ಸ್ಮಾರ್ಟ್‌ವಾಚ್‌ 2 ವಾರಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಕ್ಲಾಸಿಕ್ ರೌಂಡ್ ಡಯಲ್ ವಿನ್ಯಾಸ, ಸ್ಟೇನ್ಲೆಸ್ ಸ್ಟೀಲ್ ಬಾಡಿ ಮತ್ತು ಗಡಿಯಾರದ ಕಿರೀಟವನ್ನು ಒಳಗೊಂಡಿದೆ. ಜೊತೆಗೆ ಈ ವಾಚ್ ಹೊಸ ಮೋಷನ್ ವಾಚ್ ಫೇಸ್‌ನೊಂದಿಗೆ ಬರಲಿದೆ. ಅಲ್ಲದೆ ಹೆಚ್ಚುವರಿಯಾಗಿ, ಇದು ಹೊಸ ಡ್ಯುಯಲ್ ಟೈಮ್ ಜೋನ್ ಥೀಮ್ ಅನ್ನು ಸಹ ಹೊಂದಿದೆ, ಇದು ಬಳಕೆದಾರರು ವಿಶ್ವದಾದ್ಯಂತ ಸ್ನೇಹಿತರು, ಕುಟುಂಬ ಮತ್ತು ಸಹೋದ್ಯೋಗಿಗಳೊಂದಿಗೆ ಸಂಪರ್ಕದಲ್ಲಿರಲು ಸಹಾಯ ಮಾಡುತ್ತದೆ.

ವಾಚ್

ಇನ್ನು ಈ ಮಲ್ಟಿ-ಫಂಕ್ಷನಲ್ ವಾಚ್ ಫೇಸ್ ಬಳಕೆದಾರರಿಗೆ ದಿನದಲ್ಲಿ ಸ್ವೀಕರಿಸಲು ಜ್ಞಾಪನೆಗಳನ್ನು ಆಯ್ಕೆ ಮಾಡುವಂತಹ ತಮಗೆ ಬೇಕಾದ ಸೆಟ್ಟಿಂಗ್‌ಗಳನ್ನು ಕಸ್ಟಮೈಸ್ ಮಾಡಲು ಅನುಮತಿಸುತ್ತದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್ GT2E ರನ್ನಿಂಗ್, ವಾಕಿಂಗ್, ಸೈಕ್ಲಿಂಗ್, ಸೇರಿಂದರೆ ಏಳು ಒಳಾಂಗಣ ಚಟುವಟಿಕೆಗಳನ್ನ ಬೆಂಬಲಿಸಲಿದೆ. ಇದಲ್ಲದೆ 15 ವೃತ್ತಿಪರ ತಾಲೀಮು ವಿಧಾನಗಳನ್ನು ಸಹ ಬೆಂಬಲಿಸುತ್ತದೆ. ಅಲ್ಲದೆ 85 ಕಸ್ಟಮೈಸ್ ಮಾಡಿದ ತಾಲೀಮು ಮೋಡ್‌ಗಳನ್ನು ಸಹ ಬೆಂಬಲಿಸುತ್ತದೆ. ಇನ್ನು ಈ ಸ್ಮಾರ್ಟ್ ವಾಚ್ ಸುಮಾರು 500mp3 ಹಾಡುಗಳನ್ನು ಸಂಗ್ರಹಿಸಬಹುದಾಗಿದೆ. ಅಲ್ಲದೆ ಇದು ಹುವಾವೇ ಮ್ಯೂಸಿಕ್ ಮತ್ತು ಬ್ಲೂಟೂತ್ ಹೆಡ್‌ಫೋನ್‌ಗಳೊಂದಿಗೆ ಹೊಂದಿಕೊಳ್ಳಲಿದೆ. ಸದ್ಯ ಇದರ ಬೆಲೆ ಭಾರತದಲ್ಲಿ 11,990 ರೂ. ಆಗಿದ್ದು, ಗ್ರಾಫಿಕ್ ಬ್ಲ್ಯಾಕ್, ಐಸಿ ವೈಟ್, ಮಿಂಟ್ ಗ್ರೀನ್ ಮತ್ತು ಲಾವಾ ರೆಡ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Most Read Articles
Best Mobiles in India

English summary
The Huawei Watch GT 2e is priced at Rs 11,990 in India. It comes in Graphic Black, Icy White, Mint Green, and Lava Red colour variants.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X