Home
ಸುದ್ದಿಜಾಲ

ಹುವಾವೇ ವಾಚ್ ಅಲ್ಟಿಮೇಟ್ ಸ್ಮಾರ್ಟ್‌ವಾಚ್‌ ಲಾಂಚ್‌! ಗಮನ ಸೆಳೆವ ಸ್ಟೈಲಿಶ್‌ ಲುಕ್‌!

ಹುವಾವೆ ಕಂಪೆನಿಯ ಡಿವೈಸ್‌ಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಸ್ಮಾರ್ಟ್‌ವಾಚ್‌ಗಳ ಮೂಲಕವೂ ಸೌಂಡ್‌ ಮಾಡ್ತಿದೆ. ಸದ್ಯ ಇದೀಗ ಹುವಾವೇ ಕಂಪೆನಿ ಹೊಸ ಹುವಾವೇ ವಾಚ್‌ ಅಲ್ಟಿಮೇಟ್‌ ಸ್ಮಾರ್ಟ್‌ವಾಚ್‌ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ವಾಚ್‌ ಸಿಂಗಲ್‌ ಚಾರ್ಜ್‌ನಲ್ಲಿ 14 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ನೀಡಲಿದೆ.

ಹೌದು, ಹುವಾವೇ ವಾಚ್‌ ಅಲ್ಟಿಮೇಟ್‌ ಸ್ಮಾರ್ಟ್‌ವಾಚ್‌ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಇದು ಜಿರ್ಕೋನಿಯಮ್ ಆಧಾರಿತ ಲಿಕ್ವಿಡ್‌ ಮೆಟಲ್‌ ಕೇಸ್ ಮತ್ತು ಹೈಡ್ರೋಜನೀಕರಿಸಿದ ನೈಟ್ರೈಲ್ ರಬ್ಬರ್ ಸ್ಟ್ರಾಪ್‌ ಅನ್ನು ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಹುವಾವೇ ವಾಚ್ ಅಲ್ಟಿಮೇಟ್ ಸ್ಮಾರ್ಟ್‌ವಾಚ್‌ ಲಾಂಚ್‌! ಗಮನ ಸೆಳೆವ ಸ್ಟೈಲಿಶ್‌ ಲುಕ್‌

ಹುವಾವೇ ವಾಚ್ ಅಲ್ಟಿಮೇಟ್ ಫೀಚರ್ಸ್‌ ಹೇಗಿದೆ?

ಹುವಾವೇ ವಾಚ್ ಅಲ್ಟಿಮೇಟ್ ಸ್ಮಾರ್ಟ್‌ವಾಚ್‌ 1.5 ಇಂಚಿನ LTPO AMOLED ಸರ್ಕ್ಯುಲರ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 60Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ಇನ್ನು ಸ್ಮಾರ್ಟ್‌ವಾಚ್‌ ISO 22810 ವಾಟರ್‌ ರೆಸಿಸ್ಟೆನ್ಸಿ ರೇಟಿಂಗ್ ಅನ್ನು ಹೊಂದಿದ್ದು, ಸಮುದ್ರದ ಆಳದಲ್ಲಿಯೂ ಕೂಡ ಕಾರ್ಯನಿರ್ವಹಿಸಲಿದೆ. ಅಂದರೆ 24-ಗಂಟೆಗಳ 110 ಮೀಟರ್ ಆಳದ ಮುಳುಗುವಿಕೆಯನ್ನು ಸಹ ತಡೆದುಕೊಳ್ಳಲಿದೆ.

ಹುವಾವೇ ವಾಚ್ ಅಲ್ಟಿಮೇಟ್ ಸ್ಮಾರ್ಟ್‌ವಾಚ್‌ ಲಾಂಚ್‌! ಗಮನ ಸೆಳೆವ ಸ್ಟೈಲಿಶ್‌ ಲುಕ್‌

ಇದಲ್ಲದೆ ಸ್ಮಾರ್ಟ್‌ವಾಚ್‌ನಲ್ಲಿ ನಿಖರವಾದ ಮ್ಯಾಪಿಂಗ್ ಒದಗಿಸಲು ಡ್ಯುಯಲ್-ಫ್ರೀಕ್ವೆನ್ಸಿ ಫೈವ್-ಸಿಸ್ಟಮ್ ಎಕ್ಸ್‌ಪೆಡಿಶನ್ ಮೋಡ್ ಅನ್ನು ಹೊಂದಿದೆ. ಇದರಿಂದ ಬಳಕೆದಾರರಿಗೆ ಅತ್ಯುತ್ತಮವಾದ ಅನುಭವ ದೊರೆಯಲಿದೆ. ಜೊತೆಗೆ ಇದು ಜಿರ್ಕೋನಿಯಮ್ ಆಧಾರಿತ ಲಿಕ್ವಿಡ್‌ ಮೆಟಲ್‌ ಕೇಸ್ ಮತ್ತು ಹೈಡ್ರೋಜನೀಕರಿಸಿದ ನೈಟ್ರೈಲ್ ರಬ್ಬರ್ ಸ್ಟ್ರಾಪ್‌ ಅನ್ನು ಪಡೆದದೆ. ಇನ್ನು ಸ್ಮಾರ್ಟ್‌ವಾಚ್ ಸೆರಾಮಿಕ್‌ ಫಿನಿಶ್‌ ಅನ್ನು ಹೊಂದಿದೆ. ಈ ಸ್ಮಾರ್ಟ್ ವಾಚ್ ಹೃದಯ ಬಡಿತ, ರಕ್ತದ ಆಮ್ಲಜನಕ ಮತ್ತು ಇಸಿಜಿ ಟ್ರ್ಯಾಕರ್‌ ಅನ್ನು ಹೊಂದಿದೆ.

ಹುವಾವೇ ವಾಚ್ ಅಲ್ಟಿಮೇಟ್ ಸ್ಮಾರ್ಟ್‌ವಾಚ್‌ ಲಾಂಚ್‌! ಗಮನ ಸೆಳೆವ ಸ್ಟೈಲಿಶ್‌ ಲುಕ್‌

ಇನ್ನು ಈ ಡಿವೈಸ್‌ 530mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇದು 60 ನಿಮಿಷಗಳಲ್ಲಿ ಫುಲ್‌ ಚಾರ್ಜಿಂಗ್‌ ಆಗುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೆ ಸಿಂಗಲ್‌ ಚಾರ್ಜ್‌ನಲ್ಲಿ 14 ದಿನಗಳ ಬ್ಯಾಕ್‌ಅಪ್‌ ಅನ್ನು ನೀಡಲಿದೆ. ಹಾಗೆಯೇ ಹೆವಿ ಡ್ಯೂಟಿ ಬಳಕೆದಾರರು 8 ದಿನಗಳ ಬಳಕೆಯನ್ನು ಪಡೆಯಬಹುದು ಎಂದು ವರದಿಯಾಗಿದೆ. ಇದರೊಂದಿಗೆ ಸ್ಮಾರ್ಟ್‌ವಾಚ್‌ Qi ವಾಯರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.

ಹುವಾವೇ ವಾಚ್ ಅಲ್ಟಿಮೇಟ್ ಸ್ಮಾರ್ಟ್‌ವಾಚ್‌ ಲಾಂಚ್‌! ಗಮನ ಸೆಳೆವ ಸ್ಟೈಲಿಶ್‌ ಲುಕ್‌

ಹುವಾವೇ ವಾಚ್ ಅಲ್ಟಿಮೇಟ್ ಬೆಲೆ ಮತ್ತು ಲಭ್ಯತೆ

ಹುವಾವೇ ವಾಚ್ ಅಲ್ಟಿಮೇಟ್ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದೆ. ಆದರಿಂದ ಈ ಸ್ಮಾರ್ಟ್‌ವಾಚ್‌ ಎಕ್ಸ್‌ಪೆಡಿಶನ್ ಬ್ಲ್ಯಾಕ್ (ರಬ್ಬರ್ ಸ್ಟ್ರಾಪ್) ಆವೃತ್ತಿಯು CNY 5,999 (ಸುಮಾರು 72,300ರೂ)ಬೆಲೆಯನ್ನು ಪಡೆದಿದೆ. ಅಲ್ಲದೆ ವಾಯೇಜ್ ಬ್ಲೂ (ಮೆಟಾಲಿಕ್ ಸ್ಟ್ರಾಪ್) ಆವೃತ್ತಿಯ ಆಯ್ಕೆಯು CNY6,999 (ಸುಮಾರು 84,300ರೂ)ಬೆಲೆಯಲ್ಲಿ ದೊರೆಯಲಿದೆ.

ಹುವಾವೇ ಕಂಪನಿ ಹೊಸ ಹುವಾವೇ ನೋವಾ 10 SE ಸ್ಮಾರ್ಟ್‌ಫೋನ್‌ ಪರಿಚಯಿಸಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌ ವೇಗವನ್ನು ಹೊಂದಿದೆ. ಇದು HarmonyOS 2 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಒಳಗೊಂಡಿದೆ.
ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ.

Best Mobiles in India

English summary
Huawei Watch Ultimate has been built to withstand extreme deep-sea pressure, boasting an ISO 22810 water resistance rating.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+