Huawei Y8s ಸ್ಮಾರ್ಟ್‌ಫೋನ್ ಫೀಚರ್ಸ್ ಬಹಿರಂಗ!
ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಹುವಾವೇ ತನ್ನ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳ ಮೂಲಕ ಗುರುತಿಸಿಕೊಂಡಿದೆ. ಜಾಗತಿಕವಾಗಿ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಹ ಹುವಾವೇ ಮುಂಚೂಣಿಯಲ್ಲಿದೆ. ಇದೇ ಕಾರಣಕ್ಕೆ ಹುವಾವೇ ಹೊಸ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾರುಕಟ್ಟೆಯಲ್ಲಿ ಸಾಕಷ್ಟು ನಿರೀಕ್ಷೆ ಸೃಷ್ಟಿಯಾಗಿರುತ್ತೆ. ಸದ್ಯ ಈಗಾಗ್ಲೆ ಸ್ಮಾರ್ಟ್‌ಫೋನ್ ಪ್ರಿಯರ ನೆಚ್ಚಿನ ಬ್ರ್ಯಾಂಡ್ ಆಗಿರುವ ಹುವಾವೇ ತನ್ನ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ದತೆ ನಡೆಸಿದೆ.

ಹೌದು, ಹುವಾವೇ ತನ್ನ ಹೊಸ ಸ್ಮಾರ್ಟ್‌ಫೋನ್ ಬಿಡುಗಡೆಗೆ ಸಿದ್ದತೆ ನಡೆಸಿದೆ. ಇನ್ನು ಈ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸದ್ಯ ಈ ಸ್ಮಾರ್ಟ್‌ಫೋನ್ ಅನ್ನು ಹುವಾವೇ Y8s ಎಂದು ಹೆಸರಿಸಲಾಗಿದೆ. ಅಲ್ಲದೆ ಜೋರ್ಡಾನ್‌ನಲ್ಲಿರುವ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸಹ ಈ ಫೋನ್ ಅನ್ನು ಪಟ್ಟಿ ಮಾಡಲಾಗಿದೆ. ಸದ್ಯ ಆನ್‌ಲೈನ್ ಲೀಕ್ ಆದ ಮಾಹಿತಿ ಪ್ರಕಾರ ಹುವಾವೇ Y8s ಸ್ಮಾರ್ಟ್‌ಫೋನ್ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರಲಿದೆ. ಅಲ್ಲದೆ 6.5 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನ ಹೊಂದಿರಲಿದೆ ಎಂದು ಹೇಳಲಾಗ್ತಿದೆ. ಹೊಂದಿದೆ. ಹಾಗಾದ್ರೆ ಲೀಕ್ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನ ಹೊಂದಿರಲಿದೆ ಎಂದು ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಡಿಸ್‌ಪ್ಲೇ
ಹುವಾವೇ Y8s ಸ್ಮಾರ್ಟ್‌ಫೋನ್ 1080x2340 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.5 ಇಂಚಿನ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ ಫುಲ್ ಎಚ್‌ಡಿ ಆಗಿದ್ದು, TFT LCD ವಿನ್ಯಾಸವನ್ನ ಒಳಗೊಂಡಿದೆ. ಅಲ್ಲದೆ ಈ ಡಿಸ್‌ಪ್ಲೇಯು 396 ppi ಪಿಕ್ಸೆಲ್ ಸಾಂಧ್ರತೆಯನ್ನ ಒಳಗೊಂಡಿದೆ. ಜೊತೆಗೆ ಈ ಡಿಸ್‌ಪ್ಲೇಯು 82.65% ಸ್ಕ್ರೀನ್ ಟು ಬಾಡಿ ಅನುಪಾತವನ್ನ ಹೊಂದಿದೆ ಎಂದು ಹೆಸರಿಸಲಾಗಿದೆ.

ಪ್ರೊಸೆಸರ್
ಇನ್ನು ಈ ಸ್ಮಾರ್ಟ್‌ಫೋನ್ ಕಿರಿನ್ 710 ಆಕ್ಟಾ-ಕೋರ್ ಪ್ರೊಸೆಸರ್ ವೇಗವನ್ನು ಹೊಂದಿದ್ದು, ಆಂಡ್ರಾಯ್ಡ್ 9 ಪೈ ಆಧಾರಿತ EMUI 9.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೇಯೇ ಈ ಸ್ಮಾರ್ಟ್‌ಫೋನ್ 4GB RAM + 64GB ಆಂತರಿಕ ಶೇಖರಣಾ ಆಯ್ಕೆ ಮತ್ತು 4GB RAM + 128GB ಆಂತರಿಕ ಶೇಖರಣಾ ಆಯ್ಕೆಯ ವೇರಿಯೆಂಟ್ ಆಯ್ಕೆಯಲ್ಲಿ ಲಭ್ಯವಾಗಲಿದೆ. ಇದಲ್ಲದೆ ಮೆಮೊರಿ ಕಾರ್ಡ್ ಮೂಲಕ 512GB ವರೆಗೆ ಸಂಗ್ರಹಣಾ ಸಾಮರ್ಥ್ಯವನ್ನ ವಿಸ್ತರಣೆ ಮಾಡಬಹುದಾಗಿದೆ.

ಕ್ಯಾಮೆರಾ ವಿನ್ಯಾಸ
ಹುವಾವೇ Y8s ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್, f/ 2.4 ಲೆನ್ಸ್ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರುವ ಕ್ಯಾಮೆರಾವನ್ನು ನೀಡಲಾಗಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಮತ್ತು 2 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿರುವ ಡ್ಯುಯೆಲ್ ಸೆಲ್ಫಿ ಕ್ಯಾಮೆರಾಗಳನ್ನು ನೀಡಲಾಗಿದೆ.

ಬ್ಯಾಟರಿ ಮತ್ತು ಇತರೆ
ಇನ್ನು ಈ ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ ಎನ್ನಲಾಗಿದೆ. ಆದರೆ ವೇಗದ ಚಾರ್ಜಿಂಗ್ ಆಯ್ಕೆಯ ಬಗ್ಗೆ ಯಾವುದೇ ಮಾಹಿತಿ ಲಬ್ಯವಾಗಿಲ್ಲ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮೈಕ್ರೋ-ಯುಎಸ್‌ಬಿ ಪೋರ್ಟ್, 3.5mm ಆಡಿಯೊ ಜ್ಯಾಕ್, ವೈ-ಫೈ , ಬ್ಲೂಟೂತ್ ವಿ 4.2, GPS, ಅನ್ನು ಬೆಂಬಲಿಸಲಿದೆ. ಇದಲ್ಲದೆ ಆಂಬಿಯೆಂಟ್ ಲೈಟ್ ಸೆನ್ಸರ್, ದಿಕ್ಸೂಚಿ, ಮತ್ತು ರಿಯರ್ ಫಿಂಗರ್ ಪ್ರಿಂಟ್ ಸೆನ್ಸಾರ್ ಅನ್ನು ಒಳಗೊಂಡಿದೆ. ಸದ್ಯ ಈ ಸ್ಮಾರ್ಟ್ ಫೋನ್ ಎಮರಾಲ್ಡ್ ಗ್ರೀನ್ ಮತ್ತು ಮಿಡ್ನೈಟ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.


Click it and Unblock the Notifications




