Home
ಸುದ್ದಿಜಾಲ

ಒಪ್ಪೋ ರೆನೋ 3 ಪ್ರೊ ಸ್ಮಾರ್ಟ್‌ಫೋನ್‌ಗೆ ಬೊಂಬಾಟ್‌ ಡಿಸ್ಕೌಂಟ್‌! ಅಫರ್ ಬೆಲೆ ಎಷ್ಟು?

ಒಪ್ಪೋ ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಈಗಂತೂ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯನ್ನು ಆಳುತ್ತಿವೆ. ಈ ಫೋನ್‌ಗಳ ವಿಷಯಕ್ಕೆ ಬಂದರೆ ಅತ್ಯುತ್ತಮ ಕಾರ್ಯಕ್ಷಮತೆ ಹಾಗೂ ಉತ್ತಮ ಕ್ಯಾಮೆರಾ ಫೀಚರ್ಸ್‌ ಅನ್ನು ಪಡೆದುಕೊಂಡಿರಲಿವೆ. ಈ ನಡುವೆ ಒಪ್ಪೋ ರೆನೋ 3 ಪ್ರೊ (Oppo Reno 3 Pro) ಸ್ಮಾರ್ಟ್‌ಫೋನ್‌ಗೆ ಭಾರೀ ರಿಯಾಯಿತಿ ನೀಡಲಾಗಿದೆ.

ಹೌದು, ಒಪ್ಪೋ ರೆನೋ 3 ಪ್ರೊ ಸ್ಮಾರ್ಟ್‌ಫೋನ್‌ನ 8GB RAM ಆಯ್ಕೆಯ ಫೋನ್‌ಗೆ 18% ರಿಯಾಯಿತಿ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ ಅಮೋಲೆಡ್‌ ಡಿಸ್‌ಪ್ಲೇ ಆಯ್ಕೆ ಹಾಗೂ 64 ಮೆಗಾಪಿಕ್ಸೆಲ್‌ ಮುಖ್ಯ ಕ್ಯಾಮೆರಾದೊಂದಿಗೆ ಕಾಣಿಸಿಕೊಂಡಿದೆ. ಹಾಗಿದ್ರೆ, ಈ ವಿಶೇಷ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಆಫರ್ ಬೆಲೆ ವಿವರಗಳನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಒಪ್ಪೋ ರೆನೋ 3 ಪ್ರೊ ಸ್ಮಾರ್ಟ್‌ಫೋನ್‌ಗೆ ಬೊಂಬಾಟ್‌ ಡಿಸ್ಕೌಂಟ್‌!

ಒಪ್ಪೋ ರೆನೋ 3 ಪ್ರೊ ಸ್ಮಾರ್ಟ್‌ಫೋನ್‌ ಆಫರ್ ವಿವರ: ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ದರ 32,990 ರೂ.ಗಳಾಗಿದೆ. ಆದರೆ, ನೀವು ಈಗ ಇದನ್ನು 26,900 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಅಮೆಜಾನ್‌ನಲ್ಲಿ ಇದಕ್ಕೆ ರಿಯಾಯಿತಿ ನೀಡಲಾಗಿದೆ. ಇಷ್ಟೇ ಅಲ್ಲದೆ ನೀವು ಬ್ಯಾಂಕ್‌ ಆಫರ್ ಬಳಕೆ ಮಾಡಿಕೊಳ್ಳುವ ಮೂಲಕ ಇನ್ನೂ ಕಡಿಮೆ ದರದಲ್ಲಿ ಈ ಫೋನ್‌ ಅನ್ನು ಖರೀದಿ ಮಾಡಬಹುದಾಗಿದೆ.

ಅಂದರೆ ವಿನಿಮಯ ಆಫರ್‌ನಲ್ಲಿ ನೀವು ಬರೋಬ್ಬರಿ 25,300ರೂ.ಗಳ ವರೆಗೆ ಉಳಿತಾಯ ಮಾಡಬಹುದಾಗಿದೆ. ಇದರೊಂದಿಗೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದಲ್ಲಿ 10% ತ್ವರಿತ ರಿಯಾಯಿತಿ, ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ಅಲ್ಲದ ವ್ಯವಹಾರದ ಮೇಲೆ 10% ತ್ವರಿತ ರಿಯಾಯಿತಿ, ಐಡಿಎಫ್‌ಸಿ ಮೊದಲ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ತ್ವರಿತ ರಿಯಾಯಿತಿ ಸಿಗಲಿದೆ. ಇಷ್ಟೇ ಅಲ್ಲದೆ ಕ್ಯಾಶ್‌ಬ್ಯಾಕ್‌ ಹಾಗೂ ಇನ್ನಿತರೆ ಪ್ರಯೋಜನ ಸಹ ಸಿಗಲಿದೆ.

ಒಪ್ಪೋ ರೆನೋ 3 ಪ್ರೊ ಸ್ಮಾರ್ಟ್‌ಫೋನ್‌ಗೆ ಬೊಂಬಾಟ್‌ ಡಿಸ್ಕೌಂಟ್‌!

ಒಪ್ಪೋ ರೆನೋ 3 ಪ್ರೊ ಸ್ಮಾರ್ಟ್‌ಫೋನ್‌ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ಫೋನ್ 6.4 ಇಂಚಿನ ಸೂಪರ್ ಅಮೋಲೆಡ್‌ ಡಿಸ್ಪ್ಲೇ ಆಯ್ಕೆ ಪಡೆದುಕೊಂಡಿದೆ. ಈ ಮೂಲಕ ವಿಡಿಯೋ ಗೇಮ್‌ನಲ್ಲಿ ಹಾಗೂ ಸಿನಿಮಾ ವೀಕ್ಷಣೆಯಲ್ಲಿ ಅತ್ಯುತ್ತಮ ಅನುಭವ ಪಡೆದುಕೊಳ್ಳಬಹುದು. ಇದರೊಂದಿಗೆ 20:9 ಆಕಾರ ಅನುಪಾತ ಹಾಗೂ 411 ppi ಪಿಕ್ಸೆಲ್ ಸಾಂದ್ರತೆ ಮತ್ತು 1080 x 2400 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಅನ್ನು ಈ ಡಿಸ್‌ಪ್ಲೇ ಹೊಂದಿದೆ.

ಒಪ್ಪೋ ರೆನೋ 3 ಪ್ರೊ ಸ್ಮಾರ್ಟ್‌ಫೋನ್‌ ಪ್ರೊಸೆಸರ್‌ ಮಾಹಿತಿ: ಈ ಸ್ಮಾರ್ಟ್‌ಫೋನ್ ಪ್ರಬಲವಾದ ಮೀಡಿಯಾ ಟೆಕ್ ಹಿಲಿಯೋ P95 ಪ್ರೊಸೆಸರ್‌ ಬಲ ಪಡೆದುಕೊಂಡಿದ್ದು, 8GB RAM ಮತ್ತು ಪವರ್ ವಿಆರ್‌ GM9446 ಜಿಪಿಯು ನೊಂದಿಗೆ ಬರುತ್ತದೆ. ಈ ಪ್ರೊಸೆಸರ್‌ 2.2GHz ಗರಿಷ್ಠ ಆವರ್ತನದೊಂದಿಗೆ ಆಕ್ಟಾ-ಕೋರ್ ಸಿಪಿಯು ಮತ್ತು ಕಾರ್ಟೆಕ್ಸ್ A55 ಮತ್ತು A75 ಕಾನ್ಫಿಗರೇಶನ್ ಸ್ಮಾರ್ಟ್‌ಫೋನ್‌ನ ಕಾರ್ಯಕ್ಷಮತೆಯನ್ನು ಮತ್ತಷ್ಟು ಹೆಚ್ಚು ಮಾಡಲಿದೆ.

ಒಪ್ಪೋ ರೆನೋ 3 ಪ್ರೊ ಸ್ಮಾರ್ಟ್‌ಫೋನ್‌ಗೆ ಬೊಂಬಾಟ್‌ ಡಿಸ್ಕೌಂಟ್‌!

ಒಪ್ಪೋ ರೆನೋ 3 ಪ್ರೊ ಸ್ಮಾರ್ಟ್‌ಫೋನ್‌ ಕ್ಯಾಮೆರಾ ರಚನೆ: ಈ ಫೋನ್ ಟೆಟ್ರಾ ಸೆಲ್ ಮತ್ತು ಸ್ಮಾರ್ಟ್ WDR ತಂತ್ರಜ್ಞಾನದೊಂದಿಗೆ 64 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮರಾ, 13 ಮೆಗಾಪಿಕ್ಸೆಲ್‌ ಟೆಲಿಫೋಟೋ ಕ್ಯಾಮರಾ, 8 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್‌ ಆಯ್ಕೆ ಪಡೆದಿದೆ. ಇದರೊಂದಿಗೆ ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ 2 ಮೆಗಾಪಿಕ್ಸೆಲ್‌ ಡೆಪ್ತ್ ಫೀಲ್ಡ್ ಲೆನ್ಸ್ ಮತ್ತು 44 ಮೆಗಾಪಿಕ್ಸೆಲ್‌ಅಲ್ಟ್ರಾ ಕ್ಲಿಯರ್ ಕ್ಯಾಮೆರಾ ಆಯ್ಕೆ ಪಡೆದಿದೆ. ಉಳಿದಂತೆ ಈ ಫೋನ್ 4025mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 30W ವೂಕ್‌ ಫ್ಲ್ಯಾಶ್ ಚಾರ್ಜಿಂಗ್ ಬೆಂಬಲ ಪಡೆದಿದೆ.

Best Mobiles in India

English summary
18% discount on Oppo Reno 3 Pro smartphone . This smartphone comes with an AMOLED display option and a 64 megapixel main camera.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+