Home
ಸುದ್ದಿಜಾಲ

ಫ್ಲಿಪ್‌ಕಾರ್ಟ್‌ ಎಂಡ್‌ ಆಫ್ ಸೀಸನ್ ಸೇಲ್‌; iPhone ಖರೀದಿ ಮೇಲೆ ಭರ್ಜರಿ ರಿಯಾಯಿತಿ !

ಗ್ರಾಹಕರನ್ನು ಸೆಳೆಯಲು ಇ ಕಾಮರ್ಸ್‌ ವೆಬ್‌ಸೈಟ್‌ಗಳು ಆಗಾಗ ವಿಶೇಷ ರಿಯಾಯಿತಿ ನೀಡುವುದು ಸಾಮಾನ್ಯ ಸಂಗತಿ. ಇದೀಗ ಪ್ರತಿಷ್ಟಿತ ಇ-ಕಾಮರ್ಸ್‌ ಸಂಸ್ಥೆಯಾಗಿರುವ ಫ್ಲಿಪ್‌ಕಾರ್ಟ್ (Flipkart) ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ನೂತನ ಎಂಡ್ ಆಫ್ ಸೀಸನ್ ಸೇಲ್ ಈವೆಂಟ್ ಅನ್ನು ಆಯೋಜಿಸುತ್ತಿದೆ ಮತ್ತು ಹಲವಾರು ಐಫೋನ್‌ಗಳ (iPhone) ಮೇಲೆ ರಿಯಾಯಿತಿಗಳನ್ನು ನೀಡಲು ಮುಂದಾಗಿದೆ. ಫ್ಲಿಪ್‌ಕಾರ್ಟ್‌ ಇ-ಕಾಮರ್ಸ್ ವೆಬ್‌ಸೈಟ್ ಐಫೋನ್ ಸ್ಮಾರ್ಟ್‌ಫೋನ್‌ ಖರೀದಿ ಮೇಲೆ ಭರ್ಜರಿ ರಿಯಾಯಿತಿ ನೀಡುತ್ತಿದ್ದು, ಇದರಲ್ಲಿ ನೀವು ಎಷ್ಟು ಹಣ ಉಳಿತಾಯ ಮಾಡಬಹುದು, ರಿಯಾಯಿತಿ ಪಡೆಯುವುದು ಹೇಗೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯಿರಿ.

iPhone 14 Plus, iPhone 15, iPhone 15 Pro ಸೇರಿದಂತೆ ಇನ್ನೂ ಅನೇಕ ಡಿವೈಸ್‌ಗಳ ಮೇಲೆ ಬ್ಯಾಂಕ್ ಕೊಡುಗೆಗಳ ಜೊತೆಗೆ ಬೃಹತ್ ಪ್ರಮಾಣದ ರಿಯಾಯಿತಿಗಳನ್ನು ಫ್ಲಿಪ್‌ಕಾರ್ಟ್‌ ನೀಡುತ್ತಿದೆ. ಮಾರಾಟವು ಈಗಾಗಲೇ ಆರಂಭವಾಗಿದ್ದು, ಜೂನ್ 8 ರವರೆಗೆ ಮುಂದುವರಿಯುತ್ತದೆ. ಫ್ಲಿಪ್‌ಕಾರ್ಟ್ ಎಂಡ್ ಆಫ್ ಸೀಸನ್ ಸೇಲ್ ಸಮಯದಲ್ಲಿ 128GB ಸ್ಟೋರೇಜ್ ವೇರಿಯಂಟ್‌ ಐಫೋನ್ 14 ಪ್ಲಸ್ ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 61,999 ರೂ.ಗಳಾಗಿರಲಿವೆ. ಈ ಬೆಲೆಯು ಅದರ ಮೂಲ ಬೆಲೆ ರೂ 79,900 ಕ್ಕಿಂತ ಬಹಳ ಕಡಿಮೆಯಾಗಿದೆ, ಅಂದರೆ ಫ್ಲಿಪ್‌ಕಾರ್ಟ್ ಈ ಸ್ಮಾರ್ಟ್‌ಫೋನ್‌ ಖರೀದಿ ಮೇಲೆ ಸುಮಾರು 17,901 ರೂ. ಗಳಷ್ಟು ಕಡಿಮೆ ಮಾಡಿದೆ.

iPhone ಖರೀದಿ ಮೇಲೆ ಭರ್ಜರಿ ರಿಯಾಯಿತಿ

ಐಫೋನ್ 14 ಡಿವೈಸ್‌ ಖರೀದಿಸಲು ಬಯಸುವವರು ಈ ಆಫರ್ ಬಳಸಿಕೊಳ್ಳಬಹುದು, ಆದರೆ ಪ್ಲಸ್ ಮಾದರಿಯು ಸ್ವಲ್ಪ ದೊಡ್ಡ ಡಿಸ್‌ಪ್ಲೇ ಮತ್ತು ಬ್ಯಾಟರಿ ಹೊಂದಿರುವುದನ್ನು ಗಮನಿಸಬಹುದು. ಹೆಚ್‌ಡಿಎಫ್‌ಸಿ ಬ್ಯಾಂಕ್ ಮೂಲಕ EMI ಆಯ್ಕೆಯಲ್ಲಿ ಫೋನ್‌ ಖರೀದಿಸಿದರೆ ಶೇಕಡಾ 10 ರಷ್ಟು ರಿಯಾಯಿತಿ ಸೇರಿದಂತೆ ಕೆಲವು ಬ್ಯಾಂಕ್ ಕೊಡುಗೆಗಳೂ ದೊರೆಯಲಿವೆ.

ಸಾಮಾನ್ಯ iPhone 14 ಮಾದರಿ ಸ್ಮಾರ್ಟ್‌ಫೋನ್‌ ಖರೀದಿಸಲು ಬಯಸುವವರು 56,999 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಅದರ ಹೊರತಾಗಿಯೂ ಗ್ರಾಹಕರು ಸ್ವಲ್ಪ ಹೆಚ್ಚು ಖರ್ಚು ಮಾಡಲು ಸಾಧ್ಯವಾದರೆ ಮತ್ತು ತಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡಲು ಯೋಜಿಸುತ್ತಿದ್ದರೆ ಐಫೋನ್ 15 ಅನ್ನು ಖರೀದಿಸುವುದು ಉತ್ತಮ ಆಯ್ಕೆಯಾಗಲಿದೆ.

ಐಫೋನ್‌ 14ಕ್ಕೆ ಹೋಲಿಸಿದರೆ iPhone 15 ವೇಗವಾದ ಕಾರ್ಯಕ್ಷಮತೆ ಮತ್ತು ಉತ್ತಮ ಕ್ಯಾಮರಾ ವ್ಯವಸ್ಥೆ ನೀಡುತ್ತದೆ. ಖಂಡಿತವಾಗಿ ನೀವು iPhone 15 Pro ಮಾದರಿಗಳಲ್ಲಿ ಉತ್ತಮ ಫೀಚರ್ಸ್‌ ಪಡೆಯಬಹುದು. ಆದರೆ ಸಾಮಾನ್ಯ ಐಫೋನ್ 15 ಮಾದರಿಯ ಬೆಲೆ 70,999 ರಿಂದ ಪ್ರಾರಂಭವಾಗುತ್ತದೆ, ಇದು ಅದರ ಮೂಲ ಬೆಲೆ 79,900 ಕ್ಕಿಂತ ಕಡಿಮೆಯಾಗಿದೆ. ಗ್ರಾಹಕರು 8,901 ರೂಪಾಯಿಗಳ ಫ್ಲಾಟ್ ರಿಯಾಯಿತಿಯನ್ನು ಈ ಸ್ಮಾರ್ಟ್‌ಫೋನ್‌ ಖರೀದಿಯಲ್ಲಿ ಪಡೆಯಬಹುದು. ಮತ್ತು SBI ಬ್ಯಾಂಕ್ ಕಾರ್ಡ್‌ಗಳ ಮೇಲೆ 4,000 ರೂ. ಗಳ ಹೆಚ್ಚುವರಿ ರಿಯಾಯಿತಿಯನ್ನೂ ಪಡೆಯಬಹುದು. ಇದು ಪರಿಣಾಮಕಾರಿ ಬೆಲೆಯನ್ನು 66,999 ರೂ.ಗೆ ಇಳಿಸುತ್ತದೆ. ಪ್ರಸ್ತುತ iPhone ನಲ್ಲಿ ಇನ್ನೂ ಹೆಚ್ಚಿನ ರಿಯಾಯಿತಿಗಳನ್ನು ಪಡೆಯಲು ಜನರು ವಿನಿಮಯ ಕೊಡುಗೆಗಳನ್ನು ಕ್ಲೈಮ್ ಮಾಡಬಹುದು.

ಐಫೋನ್ 15 ಪ್ರೊ ಸ್ಮಾರ್ಟ್‌ಫೋನ್‌ಗಾಗಿ ಖರೀದಿದಾರರು 1,27,990 ರೂ. ಗಳನ್ನು ನೀಡಬೇಕಾಗುತ್ತದೆ. ಇದು ಅದರ ಮೂಲ ಬೆಲೆ 1,34,900 ರೂ.ಗಿಂತ ಕಡಿಮೆಯಾಗಿದೆ. ಅದೇ ರೀತಿ iPhone 15 Pro Max ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 1,48,900 ರೂ.ಗಳಲ್ಲಿ ಖರೀದಿಸಬಹುದು ಇದು ಅದರ ಮೂಲ ಬೆಲೆ 1,59,900 ರೂ. ಗಿಂತ ಕಡಿಮೆಯಾಗಿದೆ. ಸಾಮಾನ್ಯ ಪ್ರೊ ಮಾದರಿಯನ್ನು ಖರೀದಿಸುವವರು ಒಂದನ್ನು ಪರಿಗಣಿಸಬಹುದು ಏಕೆಂದರೆ ನೀವು ಈ ಎರಡರಲ್ಲೂ ಒಂದೇ ರೀತಿಯ ಕಾರ್ಯಕ್ಷಮತೆಯನ್ನು ಪಡೆಯುತ್ತೀರಿ.

ಪ್ರೊ ಮ್ಯಾಕ್ಸ್ ಸ್ವಲ್ಪ ದೊಡ್ಡ ಬ್ಯಾಟರಿ ಮತ್ತು ಡಿಸ್‌ಪ್ಕೇ ಮಾತ್ರ ಹೊಂದಿದೆ. ಇದು 5x ಆಪ್ಟಿಕಲ್ ಜೂಮ್ ಅನ್ನು ಹೊಂದಿದೆ ಮತ್ತು ಸಾಮಾನ್ಯ ಪ್ರೊ ಆವೃತ್ತಿಯು 3x ಆಪ್ಟಿಕಲ್ ಜೂಮ್ ಅನ್ನು ಹೊಂದಿದೆ. ಎರಡೂ ಸಾಧನಗಳ ಉಳಿದ ವಿಶೇಷಣಗಳು ಒಂದೇ ಆಗಿರುತ್ತವೆ.

Best Mobiles in India

English summary
Flipkart e-commerce website is offering a huge discount on the purchase of iPhone smartphone, how much money you can save and how to get the discount through this article.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+