Flipkart ಬೊನಾಂಜಾ ಸೇಲ್ 2024; ರೂ. 10,000 ಒಳಗಿನ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿ !
ಫ್ಲಿಪ್‌ಕಾರ್ಟ್ (Flipkart) ಮೆಗಾ ಜೂನ್ ಬೊನಾಂಜಾ ಸೇಲ್ ಆರಂಭವಾಗಿದ್ದು, ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಲೈವ್ ನಡೆಯುತ್ತಿದೆ. ಈ ಮೆಗಾ ಸೇಲ್‌ನಲ್ಲಿ ಎಲ್ಲಾ ವಿಭಾಗಗಳ ಮೆಲೂ ಗರಿಷ್ಟ ಮಟ್ಟದ ರಿಯಾಯಿತಿಯನ್ನು ಫ್ಲಿಪ್‌ಕಾರ್ಟ್ ನೀಡುತ್ತಿದೆ. ಒಂದು ವೇಳೆ ನೀವು ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸಲು ಅಥವಾ ಕಡಿಮೆ ಬೆಲೆಯಲ್ಲಿ ಉತ್ತಮ ಸ್ಮಾರ್ಟ್‌ಫೋನ್ ಖರೀದಿಸಲು ಯೋಜನೆ ಹೊಂದಿದ್ದರೆ, ಹೆಚ್ಚಿನ ರಿಯಾಯಿತಿಯೊಂದಿಗೆ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಖರೀದಿಸಲ ಇದು ಸರಿಯಾದ ಸಮಯ. ಹಾಗಿದ್ರೆ ಯಾವ ಯಾವ ಸ್ಮಾರ್ಟ್‌ಫೋನ್‌ಗಳ ಮೇಲೆ ಎಷ್ಟು ಕೊಡುಗೆ ಇದೆ, ರೂ. 10,000 ದೊಳಗೆ ನೀವು ಯಾವ ಯಾವ ಕಂಮನಿಯ ಮೊಬೈಲ್‌ಗಳನ್ನು ಖರೀದಿಸಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.
Samsung, POCO ಮತ್ತು Infinix ನಂತಹ ಬ್ರ್ಯಾಂಡೆಡ್ ಸ್ಮಾರ್ಟ್‌ಫೋನ್‌ಗಳ ಮೇಲೆ ಸಾರ್ವಕಾಲಿಕ ಕಡಿಮೆ ಬೆಲೆಯಲ್ಲಿ ಈ ಬೊನಾಂಜಾ ಸೇಲ್ ಸಮಯದಲ್ಲಿ ನೀವು ಪಡೆಯಬಹುದಾಗಿದೆ. ರಿಯಾಯಿತಿ ಜೊತೆಗೆ ಫ್ಲಿಪ್‌ಕಾರ್ಟ್ ತ್ವರಿತ ಬ್ಯಾಂಕ್ ರಿಯಾಯಿತಿಗಳು, ಯಾವುದೇ ಹೆಚ್ಚುವರಿ ವೆಚ್ಚ ಇಲ್ಲದ EMI ಮತ್ತು ಕ್ಯಾಶ್‌ಬ್ಯಾಕ್ ಕೊಡುಗೆಗಳನ್ನು ಸಹ ನೀಡುತ್ತಿದೆ. ಈ ಲೇಖನದಲ್ಲಿ, ಫ್ಲಿಪ್‌ಕಾರ್ಟ್ ಮೆಗಾ ಜೂನ್ ಬೊನಾನ್ಜಾ ಸೇಲ್ 2024 ರ ಸಮಯದಲ್ಲಿ ನೀವು ರಿಯಾಯಿತಿ ದರದಲ್ಲಿ ಖರೀದಿಸಬಹುದಾದ ಕೆಲವು ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್‌ಗಳನ್ನು ನಾವು ಪಟ್ಟಿ ಮಾಡಿದ್ದೇವೆ ನೀವು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಬೆಸ್ಟ್ ಫೋನ್ ಕುರಿತು ನೋಡಿ.

POCO C61: 6GB RAM, 128GB ROM ವೇರಿಯಂಟ್ ಸ್ಮಾರ್ಟ್‌ಫೋನ್ 9,999 ಮೂಲ ಬೆಲೆ ಹೊಂದಿದ್ದು ಇದೀಗ ಈ ಬೊನಾಂಜಾ ಸೇಲ್ ನಲ್ಲಿ ಖರೀದಿಸಿದರೆ ಬರೋಬ್ಬರಿ 30% ರಿಯಾಯಿತಿ ಜೊತೆಗೆ ಕೇವಲ 6,999 ರೂ. ಗಳಿಗೆ ಗ್ರಾಹಕರ ಕೈ ಸೇರಲಿದೆ.
Motorola g04s: ಇದರ 4GB RAM ಹಾಗೂ 64GB ROM ವೇರಿಯಂಟ್‌ನ ಮೂಲ ಬೆಲೆ 9,999 ರೂ. ಇದ್ದು, ಇದೀಗ ಫ್ಲಿಪ್‌ಕಾರ್ಟ್‌ನ ಬೊನಾಂಜಾ ಸೇಲ್ ಸಂದರ್ಭದಲ್ಲಿ ಖರೀದಿಸಿದರೆ ಭರ್ಜರಿ 30% ರಿಯಾಯಿತಿಯೊಂದಿಗೆ ಕೇವಲ 6,999 ರೂ. ಗಳಿಗೆ ಖರೀದಿಸಬಹುದಾಗಿದೆ.
POCO M6 5G: ಇದರ 4GB RAM ಮತ್ತು 128GB ROM ಮಾದರಿಯ ಮೂಲ ಬೆಲೆ 12,999 ರೂ. ಹೊಂದಿದೆ. ಆದರೆ ಜೂನ್ ಮೆಗಾ ಬೊನಾಂಜಾ ಸೇಲ್‌ನಲ್ಲಿ ಫ್ಲಿಪ್‌ಕಾರ್ಟ್ ಮೂಲಕ ಖರೀದಿಸಿದರೆ 30% ರಿಯಾಯಿತಿಯೊಂದಿಗೆ ಕೇವಲ 8,999 ರೂ. ಗಳಿಗೆ ಖರೀದಿಸಬಹುದಾಗಿದೆ.
POCO M6 5G: ಈ ಸ್ಮಾರ್ಟ್‌ಫೋನ್‌ನ ಮೇಲೆ ಕೂಡ ಬರೋಬ್ಬರಿ 30% ರಿಯಾಯಿತಿ ಸಿಗಲಿದ್ದು, ಫ್ಲಿಪ್‌ಕಾರ್ಟ್ ಮೆಗಾ ಜೂನ್ ಬೊನಾಂಜಾ ಸೇಲ್ 2024 ರ ಸಮಯದಲ್ಲಿ ಗ್ರಾಹಕರು ಕೇವಲ 8,999 ರೂ. ಆರಂಭಿಕ ಬೆಲೆಯಲ್ಲಿ ಖರೀದಿಸಬಹುದು.
Samsung Galaxy F04: ಈ ಸ್ಮಾರ್ಟ್‌ಫೋನ್ ನ 4GB RAM ಹಾಗೂ 64GB ROM ವೇರಿಯಂಟ್‌ನ ಬೆಲೆ ಮೂಲ ಬೆಲೆ 11,499 ರೂ. ಗಳಾಗಿದ್ದು ಇದೀಗ ಬೊನಾಂಜಾ ಡೀಲ್ ಮೂಲಕ ಖರೀದಿಸದರೆ 30% ರಿಯಾಯಿತಿಯೊಂದಿಗೆ ರೂ. 7,999 ರೂ. ಗಳಿಗೆ ಗ್ರಾಹಕರು ಖರೀದಸಬಹುದಾಗಿದೆ.
Infinix SMART 8 HD: ಇದರ 3GB RAM ಮತ್ತು 64GB ROM ಮಾದರಿಯು 7,999 ರೂ. ಮೂಲ ಬೆಲೆ ಹೊಂದಿದೆ ಇದೀಗ ಫ್ಲಿಪ್‌ಕಾರ್ಟ್‌ನ ಜೂನ್ ಬೊನಾಂಜಾ ಸೇಲ್ ಮೂಲಕ ಖರೀದಿಸದರೆ ಶೇ.18% ರಿಯಾಯಿತಿ ಯೊಂದಿಗೆ 6,499 ರೂ. ಗಳಿಗೆ ಖರೀದಿಸಬಹುದಾಗಿದೆ.
ಈ ಸ್ಮಾರ್ಟ್‌ಫೋನ್‌ಗಳ ಜೊತೆಯಲ್ಲಿ ಇನ್ನೂ ಹಲವಾರ ಮೊಬೈಲ್‌ಗಳ ಮೇಲೆ ಅತೀ ಹೆಚ್ಚಿನ ರಿಯಾಯಿತಿ ಪಡೆಯಬಹುದಾಗಿದೆ.


Click it and Unblock the Notifications








