ನಾನು ಇನ್ನಷ್ಟು ಹೆಚ್ಚು ತೆರಿಗೆ ಕಟ್ಟಬೇಕಿತ್ತು ಎಂದು ಬಿಲ್‌ಗೇಟ್ಸ್ ಹೇಳಿದ್ದೇಕೆ ಗೊತ್ತಾ?
ನಾನು ಹೆಚ್ಚು ತೆರಿಗೆ ಕಟ್ಟಿದ್ದೇನೆ. ಉಳಿದವರಿಗೆಲ್ಲರಿಗಿಂತ ಹೆಚ್ಚು 10 ಶತಕೋಟಿ ಡಾಲರ್ ಗಿಂತಲೂ ಹೆಚ್ಚು ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿದ್ದೇನೆ!
ನಾನು ಹೆಚ್ಚು ತೆರಿಗೆ ಕಟ್ಟಿದ್ದೇನೆ. ಉಳಿದವರಿಗೆಲ್ಲರಿಗಿಂತ ಹೆಚ್ಚು 10 ಶತಕೋಟಿ ಡಾಲರ್ ಗಿಂತಲೂ ಹೆಚ್ಚು ತೆರಿಗೆಯನ್ನು ಸರ್ಕಾರಕ್ಕೆ ಪಾವತಿಸಿದ್ದೇನೆ. ಆದರೆ ನನ್ನ ಸ್ಥಾನದಲ್ಲಿರುವಂತಹ ಶ್ರೀಮಂತ ವ್ಯಕ್ತಿಗಳು ಸರ್ಕಾರಕ್ಕೆ ಹೆಚ್ಚಿನ ತೆರಿಗೆ ಪಾವತಿಸಬೇಕಾಗಿದೆ ಎಂದು ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್‌ಗೇಟ್ಸ್ ಹೇಳಿದ್ದಾರೆ.!!

ಕಳೆದ ಹತ್ತು ವರ್ಷಗಳಿಂದಲೂ ಜಗತ್ತಿನ ಐಟಿ ದಿಗ್ಗಜನಾಗಿ ಮೆರೆಯುತ್ತಿರುವ ಬಿಲ್‌ಗೇಟ್ಸ್ ಅವರು ಖಾಸಾಗಿ ಸುದ್ದಿವಾಹಿನಿಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.! ಹಾಗಾದರೆ, ಬಿಲ್‌ಗೆಟ್ಸ್ ಶ್ರೀಮಂತರು ಹೆಚ್ಚು ತೆರಿಗೆ ಕಟ್ಟಬೇಕು ಎಂದಿದ್ದೇಕೆ? ಅವರ ಉದ್ದೇಶ ಏನಿತ್ತು? ಎಂಬುದನ್ನು ಮುಂದೆ ತಿಳಿಯಿರಿ.!!

ಶತಕೋಟಿ ಸಂಪತ್ತಿನ ಒಡೆಯ!!
ತನ್ನ ಸಂಪತ್ತಿನಲ್ಲಿ 40 ಶತಕೋಟಿ ಡಾಲರ್‌ಗೂ ಅಧಿಕ ಹಣವನ್ನು ಚಾರಿಟೇಬಲ್ ಟ್ರಸ್ಟ್ ಗೆ ನೀಡಿರುವ ಶತಕೋಟಿ ಸಂಪತ್ತಿನ ಒಡೆಯ ಬಿಲ್‌ಗೇಟ್ಸ್ ಹೆಚ್ಚಿಗೆ ತೆರಿಗೆ ಹಣ ಕಟ್ಟುವ ಅತಿ ಶ್ರೀಮಂತ ವ್ಯಕ್ತಿಗಳು ಸರ್ಕಾರಕ್ಕೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಅವರು ಹೀಗೆ ಹೇಳಿದ್ದು ಇದೀಗ ವಿಶ್ವದಲ್ಲಿ ಅವರಿಗೆ ಮತ್ತೆ ಗೌರವ ಹೆಚ್ಚುವಂತೆ ಮಾಡಿದೆ.!

ಶ್ರೀಮಂತರು ಹೆಚ್ಚು ತೆರಿಗೆ ಕಟ್ಟಬೇಕು!!
ಹೆಚ್ಚಿಗೆ ತೆರಿಗೆ ಹಣ ಕಟ್ಟುವ ಅತಿ ಶ್ರೀಮಂತ ವ್ಯಕ್ತಿಗಳು ಸರ್ಕಾರಕ್ಕೆ ಅಗತ್ಯವಾಗಿದೆ. ಈಗ ಶ್ರೀಂತನಾಗಿರುವವನು ತನ್ನ ಶ್ರಮದಿಂದಲೇ ಹೆಚ್ಚು ಹಣವನ್ನು ಗಳಿಸಿದ್ದರೂ ಸಹ ಶ್ರೀಮಂತರು ಹೆಚ್ಚು ತೆರಿಗೆ ಕಟ್ಟುವುದರಿಂದ ಸಮಯಾಜದಲ್ಲಿ ಇರುವ ಸಮಸ್ಯೆಗಳನ್ನು ಬಹುಬೇಗ ನಿರ್ಮೂಲನೆ ಮಾಡಲು ಸಾಧ್ಯವಾಗಲಿದೆ ಎಂದು ಬಿಲ್‌ಗೇಟ್ಸ್ ಅಭಿಪ್ರಾಯಪಟ್ಟಿದ್ದಾರೆ.!!

ರಿಪಬ್ಲಿಕನ್ ತೆರಿಗೆ ಕಡಿತ ಒಳ್ಳೆಯದಲ್ಲ!!
ರಿಪಬ್ಲಿಕನ್ ತೆರಿಗೆ ಕಾನೂನಿನಲ್ಲಿ ಕಾರ್ಪೊರೇಟ್ ವಲಯಗಳಿಗೆ ತೆರಿಗೆ ಕಡಿತ ಮಾಡುವುದು ಹಿಂದಕ್ಕೆ ಹೋಗುವ ತೆರಿಗೆ ಮಸೂದೆ ಎಂದು ಗೇಟ್ಸ್ ಹೇಳಿದ್ದಾರೆ. ಈ ಮಸೂದೆಯಿಂದ ಅಮೆರಿಕಾದ ಕಾರ್ಮಿಕ ಮತ್ತು ಮಧ್ಯಮ ವರ್ಗಗಳಿಗೆ ಅನುಕೂಲವಾಗುತ್ತದೆ ಎಂದು ಹೇಳಲಾದರೂ ಹೆಚ್ಚು ಲಾಭವಾಗುವುದು ಶ್ರೀಮಂತ ವ್ಯಕ್ತಿಗಳಿಗೆ ಮಾತ್ರ ಎಂದು ಅವರು ಹೇಳಿದ್ದಾರೆ.!!


ಉದ್ಯೋಗಾವಕಾಶ ಹೆಚ್ಚಿಸಬೇಕು!!
ಅಮೆರಿಕಾದಲ್ಲಿ ಅಸಮಾನತೆ ಹೆಚ್ಚಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಲ್‌ಗೇಟ್ಸ್, ಅಮೆರಿಕಾದ ಜನಸಂಖ್ಯೆಯಲ್ಲಿ 6ರಷ್ಟು ಭಾಗ ಅತ್ಯಂತ ದುಃಖದ ಪರಿಸ್ಥಿತಿಯಲ್ಲಿ ಜೀವನ ಮಾಡುತ್ತಿದ್ದಾರೆ. ಇಂತಹ ನಾಗರಿಕರಿಗೆ ಉದ್ಯೋಗಾವಕಾಶಗಳನ್ನು ಸರ್ಕಾರ ಏಕೆ ಹೆಚ್ಚಿಸುವುದಿಲ್ಲ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.!!


Click it and Unblock the Notifications