USB, SD ಕಾರ್ಡ್ ಮತ್ತು ಫ್ಲ್ಯಾಶ್ ಡ್ರೈವ್ ಬಳಕೆ ನಿಷೇಧಿಸಿದ ಐಬಿಎಂ..!

|

ಐಬಿಎಂ ಸಂಸ್ಥೆ ತನ್ನ ಡಾಟಾ ಗಳ ಭದ್ರತೆಗಾಗಿ ಸಾಕಷ್ಟು ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ಒಂದು ದೊಡ್ಡ ಹೆಜ್ಜೆಯನ್ನು ತೆಗೆದುಕೊಂಡಿದೆ. ತನ್ನ ಎಲ್ಲಾ ಕೆಲಸಗಾರರಿಗೆ ಯಾವುದೇ ಕಾರಣಕ್ಕೂ ಪೆನ್ ಡ್ರೈವ್ ಮತ್ತು ಎಸ್ ಡಿ ಕಾರ್ಡ್ ಗಳನ್ನು ಆಫೀಸಿನಲ್ಲಿ ಬಳಸುವಂತಿಲ್ಲ ಎಂದು ಖಡಕ್ ಸೂಚನೆ ಕೊಟ್ಟಿದೆ.

USB, SD ಕಾರ್ಡ್ ಮತ್ತು ಫ್ಲ್ಯಾಶ್ ಡ್ರೈವ್ ಬಳಕೆ ನಿಷೇಧಿಸಿದ ಐಬಿಎಂ..!


ಕಂಪೆನಿಯು ಒಂದು ಸಾಧನದಿಂದ ಇನ್ನೊಂದು ಸಾಧನಕ್ಕೆ ಡಾಟಾವನ್ನು ವರ್ಗಾವಣೆ ಮಾಡುವ ಪ್ರಕ್ರಿಯೆ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡುತ್ತೆ ಎಂಬುದನ್ನು ಅರ್ಥೈಸಿಕೊಂಡಿದೆ. ಅದೇ ಕಾರಣಕ್ಕೆ ನಿರ್ಧಾರ ಕೈಗೊಂಡಿರುವ ಐಬಿಎಂ ಸಂಸ್ಥೆ ಆಂತರಿಕ ಸಂವಹನದ ಮೂಲಕ ಸಂಸ್ಥೆಯ ಎಲ್ಲಾ ಸದಸ್ಯರಿಗೆ ಡಾಟಾ ವರ್ಗಾಯಿಸುವ ಯಾವುದೇ ಸಾಧನವನ್ನು ಬಳಸುವಂತಿಲ್ಲ ಎಂದು ಆ ಎಲ್ಲಾ ಸಾಧನಗಳನ್ನು ನಿಷೇಧಿಸಿ ಸೂಚನೆ ಹೊರಡಿಸಿದೆ.

ಐಬಿಎಂ ನ ಮುಖ್ಯ ಭದ್ರತಾ ಅಧಿಕಾರಿಯಾಗಿರುವ ಶ್ಯಾಮಲಾ ನಾಯ್ಡು ಹೇಳುವ ಪ್ರಕಾರ, ಈ ನಿಷೇಧವು ಕಂಪನಿಯ ಹಣಕಾಸು ವ್ಯವಹಾರ ಹೊರಗಿನವರಿಗೆ ತಿಳಿಯುವುದು ಮತ್ತು ಕಂಪೆನಿಯ ಗೌರವಕ್ಕೆ ಧಕ್ಕೆ ತರುವಂತೆ ಮಾಡುವುದನ್ನು ತಪ್ಪಿಸುತ್ತೆ. ಒಟ್ಟಾರೆ ಈ ನಿಷೇಧದಿಂದಾಗಿ ಡಾಟಾ ವರ್ಗಾವಣೆಗೆ ಬಳಸುವ ಸಾಧನಗಳ ದುರುಪಯೋಗವನ್ನು ನಿಯಂತ್ರಿಸಬಹುದು ಎನ್ನುತ್ತಾರೆ.

ಈಗಾಗಲೇ ಈ ನಿಯಮವನ್ನು ಐಬಿಎಂನ ಕೆಲವು ಇಲಾಖೆಗಳಿಗೆ ಕಡ್ಡಾಯಗೊಳಿಸಲಾಗಿದೆ . ಮುಂದಿನ ವಾರದ ಹೊತ್ತಿಗೆ ಐಬಿಎಂನ ಎಲ್ಲಾ ಶಾಖೆಗಳಲ್ಲೂ ಇದನ್ನು ಜಾರಿಗೆ ತರಲಾಗುವುದು.

ಇನ್ನು ಮುಂದೆ ಒಂದು ವೇಳೆ ಒಬ್ಬರಿಂದ ಒಬ್ಬರಿಗೆ ಯಾವುದಾದರೂ ಫೈಲ್ ಗಳನ್ನು ಇಲ್ಲವೇ ದಾಖಲೆಗಳನ್ನು ಕಳುಹಿಸಿಲು ಫೈಲ್ ಸಿಂಕ್ ಇಲ್ಲವೇ ಶೇರ್ ನ್ನು ಬಳಕೆ ಮಾಡಬೇಕಾಗುತ್ತದೆ. ನಾಯ್ಡು ಇನ್ನೊಂದು ಅಂಶವನ್ನು ಹೇಳಿದ್ದಾರೆ, ಸ್ವಲ್ಪ ದಿನಗಳವರೆಗೆ ಈ ರೀತಿ ಹೊಸ ನಿಯಮಕ್ಕೆ ಹೊಂದಿಕೊಳ್ಳುವುದು ಕೆಲವರಿಗೆ ಅಡ್ಡಿಪಡಿಸಿದಂತ ಅನುಭವ ನೀಡಬಹುದು ಎಂದಿದ್ದಾರೆ.

ಐಬಿಎಂ ನ ಫರ್ಫಾಮಿಂಗ್ ರಿಪೈರ್ ಮತ್ತು ಅಪ್ ಗ್ರೇಡ್ ಸೆಕ್ಷನ್ ಗಳಲ್ಲಿ ಕೆಲಸ ಮಾಡುವವರಿಗೆ ಇದು ಕ್ಲಿಷ್ಟವಾಗಬಹುದು. ಪೆನ್ ಡ್ರೈವ್ ಬದಲಾಗಿ ನೌಕರರು ಬೇಕಾದ ಜಾಗದ ಎಂಟರ್ ಪ್ರೈಸ್ ಕ್ಲೌಡ್ ನ್ನು ನೇರವಾಗಿ ಬಳಕೆ ಮಾಡಬೇಕಾಗುತ್ತದೆ.

ಐಬಿಎಂನ ಈ ನಿರ್ಧಾರವು ಸ್ವಲ್ಪ ಆಶ್ಚರ್ಯ ಹುಟ್ಟಿಸಬಹುದು ಆದರೆ ಕಂಪೆನಿಯ ಭದ್ರತೆಯ ದೃಷ್ಟಿಯಿಂದ ಇದು ಅನಿವಾರ್ಯವಾಗಿದೆ. ರಿಮೂವೆಬಲ್ ಡಿವೈಸ್ ಗಳಿಂದಾಗುವ ಸಮಸ್ಯೆಯನ್ನು ತಪ್ಪಿಸಿಕೊಳ್ಳಲು ಇದೊಂದು ಅಧ್ಬುತ ಕಾರ್ಯವಾಗಿದೆ.

Oneplus 6 First Impressions - Gizbot Kannada

ಇದರ ಬಗ್ಗೆ ನೀವೇನು ಹೇಳುತ್ತೀರಿ. ನಿಮ್ಮ ಅಭಿಪ್ರಾಯವನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ಹಾಕಿ.

Best Mobiles in India

English summary
IBM Bans USB, SD Cards And Flash Drives From Every Office, Worldwide. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X