Cricket World Cup 2023: ಪೈನಲ್ ಮ್ಯಾಚ್ ವೀಕ್ಷಿಸುವಾಗ ಈ ವಿಚಾರಗಳು ನೆನಪಿರಲಿ!
ನಾಳೆ (ನ.19 ರಂದು) ನಡೆಯಲಿರುವ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ ಫೈನಲ್ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾತುರದಿಂದ ಕಾದಿದೆ. ಈ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ತಂಡವನ್ನು ಎದುರಿಸುತ್ತಿದೆ. ಇದು ದೇಶದ 140 ಕೋಟಿಗೂ ಅಧಿಕ ಭಾರತೀಯರನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದೆ.
ಹೌದು, 12 ವರ್ಷಗಳ ನಂತರ ಭಾರತ ತಂಡ ಏಕದಿನ ಕ್ರಿಕೆಟ್ ವಿಶ್ವಕಪ್ ಫೈನಲ್‌ಗೆ ಪ್ರವೇಶಿಸಿದೆ. 2003ರ ವರ್ಲ್ಡ್‌ಕಪ್ ಪೈನಲ್‌ನಲ್ಲಿ ಆಸ್ಟ್ರೇಲಿಯಾ ಟೀಂ ವಿರುದ್ದ ಕಂಡಿದ್ದ ಸೋಲಿಗೆ ಪ್ರತಿಕಾರ ತೀರಿಸಿಕೊಳ್ಳುವುದಕ್ಕೆ ಇಪ್ಪತ್ತು ವರ್ಷಗಳ ನಂತರ ಅವಕಾಶ ಸಿಕ್ಕಿದೆ. ಇಂತಹ ಕ್ರಿಕೆಟ್ ಪಂದ್ಯವನ್ನು ನೀವು ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಪಂದ್ಯವನ್ನು ವೀಕ್ಷಿಸುವುದಕ್ಕಾಗಿ ನೀವು ಈ ವಿಶೇಷ ಫೀಚರ್ಸ್‌ಗಳನ್ನು ಹೊಂದಿರುವುದು ಅತ್ಯಗತ್ಯವಾಗಿದೆ. ಅಷ್ಟಕ್ಕೂ ಯಾವುದು ಆ ವಿಶೇಷ ಫೀಚರ್ಸ್ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೋನ್‌ನಲ್ಲಿ ಒನ್-ಹ್ಯಾಂಡ್ ಮೋಡ್ ಅನ್ನು ಸಕ್ರಿಯಗೊಳಿಸಿ
ಡಿಸ್ನಿ+ ಹಾಟ್‌ಸ್ಟಾರ್ ವರ್ಟಿಕಲ್ ಸ್ಟ್ರೀಮಿಂಗ್ ಅನ್ನು ಸಕ್ರಿಯಗೊಳಿಸಲು MaxView ನೊಂದಿಗೆ ಪಾಲುದಾರಿಕೆ ಹೊಂದಿದೆ. ಇದರಿಂದ ಬಳಕೆದಾರರಿಗೆ ಒನ್ ಹ್ಯಾಂಡ್ ಮೋಡ್ ವೀಕ್ಷಣೆಯ ಅನುಭವವನ್ನು ಒದಗಿಸುತ್ತದೆ. ಇದಕ್ಕಾಗಿ ನೀವು MaxView ಅನ್ನು ಸಕ್ರಿಯಗೊಳಿಸುವುದರಿಂದ ಸ್ಟ್ರೀಮ್ ಅನ್ನು ಪೋಟ್ರೇಟ್ ಮೋಡ್‌ನಲ್ಲಿ ಪರಿವರ್ತಿಸುತ್ತದೆ. ಇದರಿಂದ ಕ್ರಿಕೆಟ್ ಪಂದ್ಯವನ್ನು ಬಹಳ ಹತ್ತಿರದಿಂದ ಮೈದಾನದಲ್ಲಿ ಕುಳಿತು ನೋಡಿದಂತಹ ಅನುಭವ ಸಿಗಲಿದೆ.
ಬಿಲ್ಟ್ ಇನ್ ಸ್ಕೋರ್‌ಬೋರ್ಡ್ ಮತ್ತು ಲೈವ್ ಫೀಡ್
ಡಿಸ್ನಿ+ ಹಾಟ್‌ಸ್ಟಾರ್ ನಲ್ಲಿ ಮೀಸಲಾದ ಲೈವ್ ಫೀಡ್ ಟ್ಯಾಬ್ ಅನ್ನು ನೀಡಲಾಗಿದೆ. ಇದರಿಂದ ನೀವು ವರ್ಟಿಕಲ್ ಆಂಗಲ್‌ನಲ್ಲಿ ನೋಡುವಾಗ ಸ್ಕೋರ್‌ಬೋರ್ಡ್ ಟ್ಯಾಬ್ ಅನ್ನು ಸಹ ಟ್ಯಾಪ್ ಮಾಡಬಹುದು. ಒಂದು ವೇಳೆ ನೀವು ಪಂದ್ಯವನ್ನು ಲೇಟಾಗಿ ವಿಕ್ಷಣೆ ಮಾಡುತ್ತಿದ್ದರೆ ಸ್ಕೋರ್‌ಬೋರ್ಡ್ ಮಾಹಿತಿ ಹಾಗೂ ಅಪ್ಡೇಟ್ ವಿವರಗಳನ್ನು ಕಾಣಬಹುದಾಗಿದೆ.

ಕಡಿಮೆ ಡೇಟಾ ಬಳಕೆಗಾಗಿ ಆಪ್ಟಿಮೈಸ್ ಮಾಡಿದ ಡೇಟಾ ಬಳಸಿ
ನೀವು ಡಿಸ್ನಿ+ ಹಾಟ್‌ಸ್ಟಾರ್ ಅಪ್ಲಿಕೇಶನ್‌ನ ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮಾಡಿರಿ. ಈ ಹೊಸ ಅಪ್ಡೇಟ್‌ನಲ್ಲಿ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ವೀಡಿಯೊ ವಿತರಣೆಗಾಗಿ ಡೇಟಾ ಬಳಕೆ ಆಪ್ಟಿಮೈಸೇಶನ್ ಅನ್ನು ಮತ್ತಷ್ಟು ಸುಧಾರಿಸಿದೆ. ಇದರಿಂದ ನೀವು ಕ್ರಿಕೆಟ್ ಪಂದ್ಯವನ್ನು ನೋಡುವಾಗಲೂ ಡೇಟಾ ಬಳಕೆಯನ್ನು ಕಡಿಮೆ ಮಾಡುತ್ತದೆ.
ಆಲ್‌ವೇಸ್ ಆನ್ ಸ್ಕೋರ್‌ಬೋರ್ಡ್ ಪಿಲ್ ಆಯ್ಕೆ ಮಾಡಿ
ಇನ್ನು ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಮೂಲಕ ವರ್ಲ್ಡ್ ಕಪ್ ಮ್ಯಾಚ್ ವೀಕ್ಷಿಸುವಾಗ ಆಲ್‌ವೇಸ್ ಆನ್‌ಸ್ಕೋರ್ ಪಿಲ್ ಆಯ್ಕೆ ಮಾಡಿದೆ. ಇದರಿಂದ ನೀವು ಪಂದ್ಯವನ್ನು ವೀಕ್ಷಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಇತ್ತೀಚಿನ ಸ್ಕೋರ್ ಅನ್ನು ಅಪ್ಡೇಟ್ ಮಾಡಲಿದೆ. ಅಲ್ಲದೆ ಈ ಪಿಲ್ ಆಯ್ಕೆ ಬಳಸುವ ಬಳಕೆದಾರರು ಸಿಂಗಲ್ ಟ್ಯಾಪ್ ಮೂಲಕ ನೇರವಾಗಿ ಮ್ಯಾಚ್ ಆಕ್ಷನ್‌ಗೆ ಎಂಟ್ರಿ ನೀಡುವುದಕ್ಕೆ ಕೂಡ ಅನುಮತಿಸಲಿದೆ.

ಮಲ್ಟಿ ಕ್ಯಾಮೆರಾ ಆಂಗಲ್ ಬಳಸಿ
Disney+ Hotstar ನಲ್ಲಿ ಬಳಕೆದಾರರು ವಿವಿಧ ಕ್ಯಾಮೆರಾ ಕೋನಗಳ ನಡುವೆ ಬದಲಾಯಿಸಿಕೊಂಡು ಪಂದ್ಯವನ್ನು ವೀಕ್ಷಿಸುವ ಅವಕಾಶವಿದೆ. ಇದಕ್ಕಾಗಿ ಸ್ಟ್ಯಾಂಡರ್ಡ್ ಬರ್ಡ್ಸ್-ಐ ವ್ಯೂ ಅನ್ನು ಆರಿಸಿಕೊಳ್ಳಬಹುದು. ಇದರಿಂದ ಬ್ಯಾಟ್ಸ್‌ಮನ್‌ನ ಎಂಡ್ ಇಂದ ಪಂದ್ಯವನ್ನು ನೋಡುವುದಕ್ಕೆ ಸಾಧ್ಯವಾಗಲಿದೆ.
ಕಾಮೆಂಟರಿ ಭಾಷೆಯನ್ನು ಬದಲಾಯಿಸಿ
ಇದಲ್ಲದೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಅಪ್ಲಿಕೇಶನ್ ಮೂಲಕ ವರ್ಲ್ಡ್ ಕಪ್ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸುತ್ತಿದ್ದರೆ ನಿಮಗೆ ಬೇಕಾದ ಭಾಷೆಯ ಕಾಮೆಂಟರಿಯನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಡಿಸ್ನಿ+ ಹಾಟ್‌ಸ್ಟಾರ್ ಹಲವು ಭಾಷಾ ಆಯ್ಕೆಗಳನ್ನು ಸಹ ನೀಡಿದೆ.


Click it and Unblock the Notifications








