ಐಸಿಐಸಿಐ ಬ್ಯಾಂಕ್‌ ಗ್ರಾಹಕರು ಹಣ ಪಾವತಿಸುವುದು ಈಗ ಇನ್ನಷ್ಟು ಸುಲಭ!

|

ಐಸಿಐಸಿಐ ಬ್ಯಾಂಕ್ ದೇಶದ ಪ್ರಮುಖ ವಾಣಿಜ್ಯ ಬ್ಯಾಂಕ್‌ ಎನಿಸಿಕೊಂಡಿದೆ. ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಹಲವು ಹೊಸತುಗಳಿಗೆ ಸಾಕ್ಷಿಯಾಗಿರುವ ಐಸಿಐಸಿಐ ಬ್ಯಾಂಕ್‌ ಗ್ರಾಹಕ ಸ್ನೇಹಿಯಾಗಿ ಗುರುತಿಸಿಕೊಂಡಿದೆ. ಸದ್ಯ ಇದೀಗ ಐಸಿಐಸಿಐ ಬ್ಯಾಂಕ್‌ ಹೊಸದಾಗಿ ಕಂಟ್ಯಾಕ್ಟ್‌ ಲೆಸ್‌ ಪೇಮೆಂಟ್‌ ಸರ್ವಿಸ್‌ ಅನ್ನು ಪರಿಚಯಿಸುವುದಕ್ಕೆ ಮುಂದಾಗಿದೆ. ತನ್ನ ಬ್ಯಾಂಕಿಂಗ್ ಆಪ್ ಐಮೊಬೈಲ್ ಪೇ ಮೂಲಕ ಕಂಟ್ಯಾಕ್ಟ್‌ ಲೆಸ್‌ ಪಾವತಿ ಸೇವೆ ಮಾಡುವುದಕ್ಕೆ ಅವಕಾಶ ನೀಡಲಿದೆ.

ಐಸಿಐಸಿಐ

ಹೌದು, ಐಸಿಐಸಿಐ ಬ್ಯಾಂಕ್‌ ತನ್ನ ಗ್ರಾಹಕರಿಗೆ ಹೊಸ ಐಮೊಬೈಲ್‌ ಪೇ ಮೂಲಕ ಕಂಟ್ಯಾಕ್ಟ್‌ ಲೆಸ್‌ ಪೇಮೆಂಟ್‌ ಸರ್ವಿಸ್‌ ಪರಿಚಯಿಸಿದೆ. ಇದರಿಂದ ಗ್ರಾಹಕರು ತಮ್ಮ ಕಾರ್ಡ್‌ಗಳನ್ನು ಬಳಸುವ ಬದಲು ಸ್ಮಾರ್ಟ್ ಫೋನ್‌ನಲ್ಲಿ ಪಿಒಎಸ್ ಮೆಷಿನ್‌ಗಳ ಮೂಲಕ ಪಾವತಿಸಲು ಅವಕಾಶ ನೀಡಲಿದೆ. ಈ ಸೇವೆ ಮೂಲಕ ಬ್ಯಾಂಕಿನ 1.5 ಕೋಟಿಗೂ ಹೆಚ್ಚು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಪ್ರಯೋಜನವನ್ನು ನೀಡಲಿದೆ. ಹಾಗಾದ್ರೆ ಐಸಿಐಸಿಐ ಬ್ಯಾಂಕ್‌ ಪರಿಚಯಿಸಿರುವ ಹೊಸ ಪೇಮೆಂಟ್‌ ಸರ್ವಿಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಐಸಿಐಸಿಐ

ಐಸಿಐಸಿಐ ಬ್ಯಾಂಕ್‌ ಗ್ರಾಹಕರು NFC ತಂತ್ರಜ್ಞಾನವನ್ನು ಆಧರಿಸಿ, ಕಂಟ್ಯಾಕ್ಟ್‌ ಲೆಸ್‌ ಪಾವತಿ ಸೇವೆಯನ್ನು ಮಾಡಬಹುದು. ಈ ಪಾವತಿ ಸೇವೆಯು ಗ್ರಾಹಕರಿಗೆ ಅವರ ICICI ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಡಿಜಿಟಲ್ ಆವೃತ್ತಿಗಳನ್ನು iMobile Pay ಆಪ್‌ನಲ್ಲಿ ಕ್ರಿಯೆಟ್‌ ಮಾಡಬಹುದು. ಈ ಡಿಜಿಟಲ್‌ ಕಾರ್ಡ್‌ಗಳನ್ನು ಬಳಸುವ ಮೂಲಕ ಗ್ರಾಹಕರು ಕಂಟ್ಯಾಕ್ಟ್‌ಲೆಸ್‌ ಪೇಮೆಂಟ್‌ ಮಾಡಬಹುದು. ಇದಕ್ಕಾಗಿ ಗ್ರಾಹಕರು POS ಡಿವೈಸ್‌ ಮೂಲಕ NFC ಸಕ್ರಿಯಗೊಳಿಸಿದ ವ್ಯಾಪಾರಿ ಕೇಂದ್ರಗಳಲ್ಲಿ ಮಾತ್ರ ಪಾವತಿಗಳನ್ನು ನಡೆಸಬಹುದಾಗಿದೆ.

ಐಮೊಬೈಲ್

ಇನ್ನು ಐಮೊಬೈಲ್ ಪೇ ಮೂಲಕ 'ಟ್ಯಾಪ್ ಟು ಪೇ' ಸೌಲಭ್ಯವು ಈಗ ವೀಸಾ ಕಾರ್ಡ್‌ಗಳಲ್ಲಿ ಲಭ್ಯವಿದೆ. ಇದನ್ನು ಶೀಘ್ರವೇ ಮಾಸ್ಟರ್‌ಕಾರ್ಡ್ ಕಾರ್ಡ್‌ಗಳಲ್ಲಿ ಸಕ್ರಿಯಗೊಳಿಸಲಾಗುತ್ತದೆ ಎನ್ನಲಾಗಿದೆ. ಗ್ರಾಹಕರು ಈ ಸೇವೆಯನ್ನು ಪಡೆಯಲು ಗೂಗಲ್ ಪ್ಲೇ ಸ್ಟೋರ್‌ ನಲ್ಲಿ iMobile Pay ಅಪ್ಲಿಕೇಶನ್‌ನ ಹೊಸ ಆವೃತ್ತಿಯನ್ನು ಅಪ್ಡೇಟ್‌ ಮಾಡಬೇಕಿದೆ. ತಮ್ಮ NFC ಸಕ್ರಿಯಗೊಳಿಸಿದ OS- ಆಂಡ್ರಾಯ್ಡ್ 6 ಮತ್ತು ಅದಕ್ಕಿಂತ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಇದನ್ನು ಅಪ್‌ಡೇಟ್ ಮಾಡಬಹುದಾಗಿದೆ.

ಟ್ಯಾಪ್

'ಟ್ಯಾಪ್ ಟು ಪೇ' ಸೇವೆಯನ್ನು ಬಳಸಲು ಗ್ರಾಹಕರು iMobile Pay ಮೂಲಕ ಒಂದು ಬಾರಿ ಆಕ್ಟಿವಿಟಿಯನ್ನು ಮಾಡಬೇಕು. ಇದಾದ ನಂತರ ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ, ಗ್ರಾಹಕರು ಪಿಒಎಸ್ ಸಾಧನದ ಬಳಿ ಫೋನ್ ಅನ್ನು ಟ್ಯಾಪ್ ಮಾಡುವ ಮೂಲಕ ಪ್ರತಿ ವಹಿವಾಟಿಗೆ 5,000ರೂ. ವರೆಗೆ ಪಾವತಿ ಮಾಡಬಹುದು. 5,000ರೂ.ಗಳಿಗಿಂತ ಹೆಚ್ಚಿನ ವಹಿವಾಟುಗಳಿಗೆ POS ಡಿವೈಸ್‌ ಬಳಿ ಫೋನ್ ಬೀಸುವುದರ ಜೊತೆಗೆ ಗ್ರಾಹಕರು ತಮ್ಮ ಕಾರ್ಡ್ PIN ಅನ್ನು ನಮೂದಿಸಬೇಕಿದೆ.

ಐಸಿಐಸಿಐನ ಹೊಸ ಸೇವೆಯನ್ನು ಪಡೆಯುವುದು ಹೇಗೆ?

ಐಸಿಐಸಿಐನ ಹೊಸ ಸೇವೆಯನ್ನು ಪಡೆಯುವುದು ಹೇಗೆ?

1. ಒನ್‌ ಟೈಂ ಆಕ್ಟಿವೇಶನ್‌
ಮೊದಲು iMobile Pay ಆಪ್‌ಗೆ ಲಾಗಿನ್ ಮಾಡಿ. ನಂತರ ಲಾಗಿನ್ ಪೇಜ್ ಅಥವಾ 'ಶಾಪ್' ವಿಭಾಗದಲ್ಲಿರುವ 'ಟ್ಯಾಪ್ ಟು ಪೇ' ಐಕಾನ್ ಮೇಲೆ ಕ್ಲಿಕ್ ಮಾಡಿ. ಡಿಜಿಟಲ್ ಆವೃತ್ತಿಯನ್ನು ಮಾಡಲು ನೋಂದಾಯಿತ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಆಯ್ಕೆ ಮಾಡಿರಿ. ನಂತರ ನಿಯಮಗಳು ಮತ್ತು ಷರತ್ತುಗಳನ್ನು ಸ್ವೀಕರಿಸಲು 'I Agree' ಕ್ಲಿಕ್ ಮಾಡಿರಿ.

2. ಪಾವತಿ ಮಾಡುವುದು
iMobile Pay ಆಪ್‌ಗೆ ಲಾಗ್ ಇನ್ ಮಾಡಿ ಮತ್ತು ಲಾಗಿನ್ ಪೇಜ್ ಅಥವಾ 'ಶಾಪ್' ವಿಭಾಗದಲ್ಲಿ 'ಟ್ಯಾಪ್ ಟು ಪೇ' ಮೇಲೆ ಕ್ಲಿಕ್ ಮಾಡಿ. ಪಾವತಿ ಮಾಡಲು ವರ್ಚುವಲ್ ವೀಸಾ ಕಾರ್ಡ್ ಆಯ್ಕೆ ಮಾಡಿ ಮತ್ತು NFC ಸಕ್ರಿಯಗೊಳಿಸಿದ POS ಡಿವೈಸ್‌ ಮೂಲಕವೂ ಟ್ಯಾಪ್‌ ಮಾಡಿ.

ಐಸಿಐಸಿಐ

ಇನ್ನು ಐಸಿಐಸಿಐ ಬ್ಯಾಂಕ್‌ನ ಐಮೊಬೈಲ್ ಪೇ ಮೂಲಕ ನಡೆಸುವ 'ಟ್ಯಾಪ್ ಟು ಪೇ' ಸುರಕ್ಷಿತ ಮತ್ತು ನೈರ್ಮಲ್ಯದ ಸಂಪರ್ಕವಿಲ್ಲದ ಪಾವತಿಗಳ ಬೆಳವಣಿಗೆಯನ್ನು ವೇಗಗೊಳಿಸುತ್ತದೆ. ಇದು ಭಾರತದ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆಗೆ ಕೊಡುಗೆ ನೀಡುತ್ತದೆ ಎಂದು ಇವಿಪಿ ಮತ್ತು ಚಿಫ್‌ ಗ್ರೋಥ್‌ ಆಫಿಸರ್‌ ಶ್ರೀನಿವಾಸ್ ನಿಡುಗೊಂಡಿ ಹೇಳಿದ್ದಾರೆ.

Most Read Articles
Best Mobiles in India

English summary
To use the ICICI Bank iMobile Pay feature, customers can tap their NFC enabled Android smartphones to make payments at merchant outlets.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X