ವಾಟ್ಸಾಪ್‌ ಬ್ಯಾಂಕಿಂಗ್‌ ಸೇವೆಯನ್ನು ಪ್ರಾರಂಭಿಸಿದ ಐಸಿಐಸಿಐ ಬ್ಯಾಂಕ್‌!

|

ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಹಲವು ಹೊಸತುಗಳಿಗೆ ಕಾರಣವಾಗಿರುವ ದೇಶದ ಪ್ರಮುಖ ವಾಣಿಜ್ಯ ಬ್ಯಾಂಕ್‌ ಐಸಿಐಸಿಐ ಇದೀಗ ಹೊಸ ಮಾದರಿಯ ಸೇವೆಯನ್ನ ಪ್ರಾರಂಭಿಸಿದೆ. ಸದ್ಯ ಜಗತ್ತಿನ ಬಹುತೇಕ ರಾಷ್ಟ್ರಗಳು ಸೇರಿದಂತೆ ಭಾರತವೂ ಕೂಡ ಕೊರೊನಾ ವೈರಸ್‌ ಬೀತಿಯಿಂದ ಬಳಲುತ್ತಿದೆ. ಇದೇ ಕಾರಣಕ್ಕೆ ಭಾರತ ಸದ್ಯ ಲಾಕ್‌ಡೌನ್‌ ಅನ್ನು ಘೊಷಿಸಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ತನ್ನ ಗ್ರಾಹಕರ ಹಿತ ಕಾಯಲು ಐಸಿಐಸಿಐ ಬ್ಯಾಂಕ್‌ ಮುಂದಾಗಿದೆ.

ಹೌದು

ಹೌದು, ದೇಶದ ಪ್ರಮುಖ ಬ್ಯಾಂಕ್‌ಗಳಲ್ಲಿ ಒಂದಾಗಿರುವ ಐಸಿಐಸಿಐ ಬ್ಯಾಂಕ್‌ ತನ್ನ ಗ್ರಾಹಕರಿಗೆ ಹೊಸದೊಂದು ಅವಕಾಶವನ್ನ ಕಲ್ಪಿಸಿದೆ. ಕೊರೊನಾ ವೈರಸ್‌ ನಿಂದಾಗಿ ಉಂಟಾಗಿರುವ ಲಾಕ್‌ಡೌನ್‌ ಮಧ್ಯೆಯೂ ಗ್ರಾಹಕರು ಬ್ಯಾಂಕಿಂಗ್‌ ಸೇವೆ ಪಡೆಯುವ ಉದ್ದೇಶದಿಂದ ವಾಟ್ಸಾಪ್‌ ಬ್ಯಾಂಕಿಂಗ್‌ ಸೇವೆಯನ್ನ ಪ್ರಾರಂಭಿಸಿದೆ. ಈ ಮೂಲಕ ಗ್ರಾಹಕರ ಮನೆ ಭಾಗಿಲಿಗೆ ಮಾತ್ರವಲ್ಲ ಗ್ರಾಹಕನ ಅಂಗೈ ಮೇಲೆ ಬ್ಯಾಂಕಿಂಗ್‌ ಸೇವೆ ದೊರೆಯುವಂತೆ ಮಾಡಿದೆ. ಹಾಗಾದ್ರೆ ಈ ವಾಟ್ಸಾಪ್‌ ಬ್ಯಾಂಕಿಂಗ್‌ ಸೇವೆಯ ವಿಶೇಷತೆಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ

ದೇಶದೆಲ್ಲಡೆ

ಸದ್ಯ ದೇಶದೆಲ್ಲಡೆ ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಬ್ಯಾಂಕಿಂಗ್ ವಲಯವು ಕೂಡ ತನ್ನ ವಹಿವಾಟಿನಲ್ಲಿ ಕುಸಿತವನ್ನು ಅನುಭವಿಸಿದೆ. ರಾಷ್ಟ್ರವ್ಯಾಪಿ ಲಾಕ್‌ಡೌನ್ ಮತ್ತು ಸಾಮಾಜಿಕ ಅಂತರದ ಹಿನ್ನೆಲೆಯಲ್ಲಿ ಬ್ಯಾಂಕುಗಳು ತಮ್ಮ ಸೇವೆಗಳನ್ನು ಮಿತಿಗೊಳಿಸುವೆ. ಇದರಿಂದ ಗ್ರಾಹಕರಿಗೂ ಕೂಡ ಕೆಲವೊಮ್ಮೆ ಕಿರಿಕರಿ ಉಂಟಾಗುತ್ತಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಐಸಿಐಸಿಯ ಬ್ಯಾಂಕ್‌ ವಾಟ್ಸಾಪ್‌ ಸೇವೆಯನ್ನ ಪರಿಚಯಿಸಿದೆ. ಈ ಸೇವೆಯನ್ನು ಬಳಸುವ ಮೂಲಕ, ಐಸಿಐಸಿಐ ಗ್ರಾಹಕರು ಖಾತೆ ಬಾಕಿ ಪರಿಶೀಲನೆ, ಕೊನೆಯ ಮೂರು ವಹಿವಾಟುಗಳು, ಶಾಖೆಗಳು ಮತ್ತು ಎಟಿಎಂಗಳನ್ನು ಪತ್ತೆ ಹಚ್ಚುವುದು, ಸಾಲದ ಕೊಡುಗೆಗಳ ವಿವರಗಳನ್ನು ಪಡೆಯುವುದು, ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ನಿರ್ಬಂಧಿಸುವುದು / ಅನಿರ್ಬಂಧಿಸುವುದು ಮತ್ತು ಹೆಚ್ಚಿನವುಗಳಂತಹ ಮೂಲಭೂತ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಬಹುದಾಗಿದೆ.

ವಾಟ್ಸಾಪ್

ಇನ್ನು ಈ ವಾಟ್ಸಾಪ್ ಸೇವೆಯು ನಿಮ್ಮ ಖಾತೆಗೆ ಲಿಂಕ್‌ ಮಾಡಿರುವ ಮೊಬೈಲ್‌ ನಂಬರ್‌ ಮೂಲಕ ಕಾರ್ಯನಿರ್ವಹಿಸುತ್ತದೆ, ಅದು ಬಳಕೆದಾರರು ತಾವು ಪಡೆಯಲು ಬಯಸುವ ಯಾವುದೇ ಬ್ಯಾಂಕಿಂಗ್ ಸೇವೆಯನ್ನು ಟೈಪ್ ಮಾಡಲು ಅನುಮತಿಸುತ್ತದೆ. ಸೇವೆಯನ್ನು ಹಿಂದಿಯಲ್ಲಿ ಬಳಸಲು ಇಚ್ಚಿಸುವವರಿಗೆ ಪ್ರತ್ಯೇಕ ಫೋನ್ ಸಂಖ್ಯೆಯನ್ನು ಸಹ ಒದಗಿಸಲಾಗಿದೆ. ಅಲ್ಲದೆ ಐಸಿಐಸಿಐ ಬ್ಯಾಂಕ್ ವಾಟ್ಸಾಪ್ ಬ್ಯಾಂಕಿಂಗ್ ಅನ್ನು 24 ಗಂಟೆಗಳ ಸೇವೆಯನ್ನಾಗಿ ಮಾಡಿದೆ . ಜೊತೆಗೆ ಐಸಿಐಸಿಐ ಬ್ಯಾಂಕ್ ಅಲ್ಲದ ಬಳಕೆದಾರರು ಸಹ ವಾಟ್ಸಾಪ್ ಸೇವೆಯನ್ನು ಬಳಸಿಕೊಂಡು ತಮ್ಮ ಹತ್ತಿರವಿರುವ ಶಾಖೆಗಳು ಮತ್ತು ಎಟಿಎಂಗಳನ್ನು ಪರಿಶೀಲಿಸಬಹುದು.

ಐಸಿಐಸಿಐ ವಾಟ್ಸಾಪ್ ಸೇವೆಯನ್ನು ಬಳಸುವುದು ಹೇಗೆ?

ಐಸಿಐಸಿಐ ವಾಟ್ಸಾಪ್ ಸೇವೆಯನ್ನು ಬಳಸುವುದು ಹೇಗೆ?

* ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಐಸಿಐಸಿಐ ಬ್ಯಾಂಕ್ ವಾಟ್ಸಾಪ್ ಬ್ಯಾಂಕಿಂಗ್ ಫೋನ್ ಸಂಖ್ಯೆಯನ್ನು ಸೇವ್‌ ಮಾಡಿಕೊಳ್ಳಬೇಕು
* ಇಂಗ್ಲಿಷ್‌ ಭಾಷೆಯಾದರೆ +91 93249 53001 ಅಥವಾ ಹಿಂದಿ ಭಾಷೆಗಾದರೆ 9324953010 ಈ ನಂಬರ್‌ಗಳನ್ನ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಸೇವ್‌ ಮಾಡಿಕೊಳ್ಳಬೇಕು.
* ನಿಮ್ಮ ವಾಟ್ಸಾಪ್ ನಿಂದ ಈ ಮೇಲ್ಕಂಡ ಸಂಖ್ಯೆಗೆ ಹಾಯ್‌ ಸಂದೇಶ ಕಳುಹಿಸಬೇಕು.
* ನಂತರ ಸ್ವಯಂಚಾಲಿತ ಪ್ರತಿಕ್ರಿಯೆಯಲ್ಲಿ, ಬ್ಯಾಂಕ್ ಲಭ್ಯವಿರುವ ಸೇವೆಗಳನ್ನು, ಅದರ ಕೀವರ್ಡ್‌ಗಳನ್ನ ವಾಟ್ಸಾಪ್‌ನಲ್ಲಿ ಪಟ್ಟಿ ಮಾಡುತ್ತದೆ.
* ಈಗ, ಸೇವೆಗಳನ್ನು ಪಡೆಯಲು, ಐಸಿಐಸಿಐ ಬ್ಯಾಂಕ್ ಖಾತೆದಾರರು ಪ್ರತಿ ಸೇವೆಗೆ ನಿರ್ದಿಷ್ಟ ಕೀವರ್ಡ್‌ಗಳನ್ನು ಟೈಪ್ ಮಾಡಬೇಕು.

ಐಸಿಐಸಿಐ ವಾಟ್ಸಾಪ್ ಸೇವಾ ಕೀವರ್ಡ್‌ಗಳು

ಐಸಿಐಸಿಐ ವಾಟ್ಸಾಪ್ ಸೇವಾ ಕೀವರ್ಡ್‌ಗಳು

* ನಿಮ್ಮ ಖಾತೆಯನ್ನ ಪರಿಶೀಲಿಸಲು, ಬಳಕೆದಾರರು ಚಾಟ್‌ನಲ್ಲಿ 'ಬ್ಯಾಲೆನ್ಸ್,' 'ಬಾಲ್,' 'ಎಸಿ ಬಾಲ್' ಕೀವರ್ಡ್‌ ಟೈಪ್‌ ಮಾಡಬೇಕು
* ಕೊನೆಯ ಮೂರು ವಹಿವಾಟುಗಳನ್ನು ವೀಕ್ಷಿಸಲು, ಬಳಕೆದಾರರು 'ವಹಿವಾಟು,' 'stmt,' 'ಇತಿಹಾಸ ಎಂದು ಟೈಪ್ ಮಾಡಬಹುದು
* ಕ್ರೆಡಿಟ್ ಕಾರ್ಡ್ ಮಿತಿಯನ್ನು ತಿಳಿಯಲು 'ಮಿತಿ,' 'ಸಿಸಿ ಮಿತಿ' ಅಥವಾ 'ಸಿಸಿ ಬ್ಯಾಲೆನ್ಸ್,' 'ಕ್ರೆಡಿಟ್ ಬ್ಯಾಲೆನ್ಸ್,' ಎಂದು ಟೈಪ್‌ ಮಾಡಬೇಕು.
* ಸಾಲ-ಸಂಬಂಧಿತ ಸೇವೆಗಳಿಗಾಗಿ, ಒಬ್ಬರು ಕೇವಲ 'ಸಾಲ,' 'ಗೃಹ ಸಾಲ,' 'ವೈಯಕ್ತಿಕ ಸಾಲ' ಅಥವಾ 'ತ್ವರಿತ ಸಾಲ' ಎಂದು ಟೈಪ್ ಮಾಡಬಹುದು.

Best Mobiles in India

English summary
ICICI Bank WhatsApp banking service makes banking as easy as texting someone on WhatsApp.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X