ಭಾರತದಲ್ಲಿ ಶಿಯೋಮಿಯೇ ನಂ.1 ಬ್ರ್ಯಾಂಡ್!..ಆಶ್ಚರ್ಯಕ್ಕೆ ಒಪ್ಪೊ ಹಿಂದಿಕ್ಕಿದ ಮೈಕ್ರೋಮ್ಯಾಕ್ಸ್!!
ಭಾರತದ ಮೊಬೈಲ್ ಮಾರುಕಟ್ಟೆಲ್ಲಿ ತ್ರಿವಿಕ್ರಮನಂತೆ ಮೆರೆಯುತ್ತಿರುವ ಶಿಯೋಮಿ ಮೊಬೈಲ್ ಕಂಪೆನಿ ಈ ವರ್ಷದ ಕೊನೆಯ ತ್ರೈಮಾಸಿಕದಲ್ಲಿಯೂ ಸಹ ನಂ.1 ಮೊಬೈಲ್ ಕಂಪೆನಿಯಾಗಿ ಮುಂದುವರೆದಿದೆ. 2018 ನೇ ವರ್ಷದ ಮೂರನೇ ತ್ರೈಮಾಸಿಕದಲ್ಲಿ ನಿರೀಕ್ಷೆಯಂತೆಯೇ ಶಿಯೋಮಿ ಕಂಪೆನಿ ಮೊದಲ ಸ್ಥಾನದಲ್ಲಿದ್ದರೆ, ಸ್ಯಾಮ್‌ಸಂಗ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಈ ವರ್ಷದ ಮೂರನೇ ತ್ರೈಮಾಸಿಕದ ಭಾರತದ ಮೊಬೈಲ್ ಮಾರುಕಟ್ಟೆಯ ರಿಪೋರ್ಟ್ ಅನ್ನು ಇಂಟರ್‌ನ್ಯಾಷನಲ್ ಡಾಟಾ ಕಾರ್ಪೋರೇಷನ್(ಐಡಿಸಿ) ಬಿಡುಗಡೆ ಮಾಡಿದ್ದು, ಮೊಬೈಲ್ ಮಾರುಕಟ್ಟೆಯಲ್ಲಿ ಹಲವಾರು ಬದಲಾವಣೆಗಳಾಗಿವೆ. ಮಾರುಕಟ್ಟೆಯಲ್ಲಿ ಸೊರಗಿಹೋಗಿದ್ದ ಮೈಕ್ರೋಮ್ಯಾಕ್ಸ್ ಮೊಬೈಲ್ ಕಂಪೆನಿ ಒಪ್ಪೊ ಕಂಪೆನಿಯನ್ನು ಮೀರಿಸಿ ಆಶ್ಚರ್ಯ ಮೂಡಿಸಿದೆ.


ಮೊದಲ ಸ್ಥಾನದಲ್ಲಿ ಶಿಯೋಮಿ !
2018ರ 3ನೇ ತ್ರೈಮಾಸಿಕದಲ್ಲಿ ಶಿಯೋಮಿ ಶೇ.27ರಷ್ಟು ಷೇರನ್ನು ಹೊಂದುವುದರ ಮೂಲಕ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಮತ್ತೆ ಅಧಿಪತ್ಯ ಸಾಧಿಸಿದೆ. 2018 ನೇ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಒಟ್ಟು 11.7 ಮಿಲಿಯನ್ ಮೊಬೈಲ್‌ಗಳನ್ನು ಮಾರಾಟ ಮಾಡಿ ಗಮನಸೆಳೆದಿದೆ. ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಮೊಬೈಲ್‌ಗಳು ಆನ್‌ಲೈನ್ ಮೂಲಕವೇ ಮಾರಾಟವಾಗಿದೆ ಎಂದು ರಿಪೋರ್ಟ್ ಹೇಳಿದೆ.

ಎರಡನೇ ಸ್ಥಾನಕ್ಕೆ ಸ್ಯಾಮಸಂಗ್
2018ರ 3ನೇ ತ್ರೈಮಾಸಿಕದಲ್ಲಿ ನಿರೀಕ್ಷೆಯಂತೆಯೇ ಸ್ಯಾಮ್‌ಸಂಗ್ ಕಂಪೆನಿ 2ನೇ ಸ್ಥಾನವನ್ನು ಗಳಿಸಿಕೊಂಡಿದೆ. ಈ ತ್ರೈಮಾಸಿಕದಲ್ಲಿ ಭಾರತದ ಮೊಬೈಲ್ ಮಾರುಕಟ್ಟೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಸ್ಯಾಮ್‌ಸಂಗ್ ಕಂಪೆನಿ ಶೇ.22.6ರಷ್ಟು ಮಾರುಕಟ್ಟೆಯನ್ನು ಗಳಿಸಿಕೊಂಡಿದೆ. 2018ರ 3ನೇ ತ್ರೈಮಾಸಿಕದಲ್ಲಿ ಒಟ್ಟು 9.6 ಮಿಲಿಯನ್ ಸ್ಮಾರ್ಟ್‌ಫೋನ್‌ಗಳನ್ನು ಸ್ಯಾಮ್‌ಸಂಗ್ ಮಾರಾಟ ಮಾಡಿದೆ.

ಮೂರನೇ ಸ್ಥಾನದಲ್ಲಿ ವಿವೋ
ಶಿಯೋಮಿ ಮತ್ತು ಸ್ಯಾಮ್‌ಸಂಗ್ ಕಂಪೆನಿಗಳ ನಂತರದ ಸ್ಥಾನವನ್ನು ವಿವೋ ಕಂಪೆನಿ ಪಡೆದುಕೊಂಡಿದೆ. 2018ರ ತ್ರೈಮಾಸಿಕ ವರದಿಯ ಪ್ರಕಾರ, ದೇಶದ ಮೊಬೈಲ್ ಮಾರುಕಟ್ಟೆಯ ಶೇ.10.6 ರಷ್ಟು ಪಾಲನ್ನು ವಿವೋ ಪಡೆದುಕೊಂಡಿದೆ. ಐಪಿಎಲ್ ಪಂದ್ಯಾವಳಿಗಳಿಗೆ ಪ್ರಾಯೋಜಕತ್ವವನ್ನು ಪಡೆಯುವ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯಲು ಸಫಲವಾಗಿರುವ ವಿವೋ ಕಂಪೆನಿ, ಈ ತ್ರೈಮಾಸಿಕದಲ್ಲಿ ಒಟ್ಟು 4.5 ಮಿಲಿಯನ್ ಮೊಬೈಲ್‌ಗಳನ್ನು ಮಾರಾಟ ಮಾಡಿದೆ.

ಮೈಕ್ರೋಮ್ಯಾಕ್ಸ್‌ಗೆ 4ನೇ ಸ್ಥಾನ!
ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಸೊರಗಿಹೋಗಿದ್ದ ಮೈಕ್ರೋಮ್ಯಾಕ್ಸ್ ಮೊಬೈಲ್ ಕಂಪೆನಿ ಈ ಬಾರಿ ಪುಟಿದೆದ್ದಿದೆ. ಕಳೆದ ತ್ರೈ ಮಾಸಿಕಗಳಲ್ಲಿ 7 ರಿಂದ 8 ನೇ ಸ್ಥಾನಕ್ಕೆ ಜಾರಿದ್ದ ಮೈಕ್ರೋಮ್ಯಾಕ್ಸ್ ಈ ಬಾರಿ ಒಪ್ಪೊ ಕಂಪೆನಿಯನ್ನು ಹಿಂದಿಕ್ಕಿ 4 ನೇ ಸ್ಥಾನ ಪಡೆದು ಆಶ್ಚರ್ಯ ಮೂಡಿಸಿದೆ. 2018ರ ತ್ರೈಮಾಸಿಕ ವರದಿ ಪ್ರಕಾರ ಒಟ್ಟು 2.9 ಮಿಲಿಯನ್ ಮೊಬೈಲ್‌ಗಳನ್ನು ಮಾರಿ ಮೈಕ್ರೋಮ್ಯಾಕ್ಸ್ ಶೇ.6.9ರಷ್ಟು ಮಾರುಕಟ್ಟೆಯನ್ನು ಹೊಂದಿದೆ.

5ನೇ ಸ್ಥಾನಕ್ಕೆ ಜಾರಿದ ಒಪ್ಪೊ!
ಮೈಕ್ರೋಮ್ಯಾಕ್ಸ್ ಮೊಬೈಲ್ ಕಂಪೆನಿಯ ಆರ್ಭಟದಿಂದಾಗಿ ಈ ತ್ರೈಮಾಸಿಕದಲ್ಲಿ ಒಪ್ಪೋ ಮೊಬೈಲ್ ಕಂಪೆನಿ 5ನೇ ಸ್ಥಾನಕ್ಕೆ ಜಾರಿದೆ. . 2018ರ ತ್ರೈಮಾಸಿಕ ವರದಿ ಪ್ರಕಾರ ಒಟ್ಟು 2.9 ಮಿಲಿಯನ್ ಮೊಬೈಲ್‌ಗಳನ್ನು ಮಾರಿರುವ ಒಪ್ಪೊ, ಶೇ. 6.7ರಷ್ಟು ಮೊಬೈಲ್ ಮಾರುಕಟ್ಟೆಯನ್ನು ಗಳಿಸುವ ಮೂಲಕ ಭಾರತದಲ್ಲಿ ತನ್ನ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಎಡವಿದೆ.ಒಪ್ಪೋ-ಎಕ್ಸ್ ಅವತರಣೆಯ ಸಿದ್ಧತೆಯಲ್ಲಿ ತೊಡಗಿದ್ದರಿಂದ ಒಪ್ಪೊ ಮಾರುಕಟ್ಟೆಯನ್ನು ಕಳೆದುಕೊಂಡಿದೆ ಎಂದು ಐಡಿಸಿ ಅಭಿಪ್ರಾಯಪಟ್ಟಿದೆ.


Click it and Unblock the Notifications








