Home
ಸುದ್ದಿಜಾಲ

ನೋಕಿಯಾ-ಐಡಿಯಾ ಒಪ್ಪಂದ: ಬಳಕೆದಾರರಿಗೆ ಕ್ಯಾಷ್ ಬ್ಯಾಕ್..!

By Lekhaka

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ಹೆಚ್ಚಿನ ಬಳಕೆದಾರರನ್ನು ಹೊಂದಿರುವ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿರುವ ಐಡಿಯಾ ಸೆಲ್ಯುಲರ್, ನೋಕಿಯಾ ದೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿದ್ದು, ನೋಕಿಯಾ ಫೀಚರ್ ಫೋನ್ ಗಳ ಮೇಲೆ ರೂ.600 ಕ್ಯಾಷ್ ಬ್ಯಾಕ್ ನೀಡಲು ಮುಂದಾಗಿದೆ.

ನೋಕಿಯಾ-ಐಡಿಯಾ ಒಪ್ಪಂದ: ಬಳಕೆದಾರರಿಗೆ ಕ್ಯಾಷ್ ಬ್ಯಾಕ್..!


ಮಾರುಕಟ್ಟೆಯಲ್ಲಿ ಈಗಾಗಲೇ ನೋಕಿಯಾ ಲಾಂಚ್ ಮಾಡಿರುವ ನೊಕಿಯಾ 105. ನೋಕಿಯಾ 130 ಮತ್ತು ನೋಕಿಯಾ 150 ಫೋನ್ ಗಳ ಖರೀದಿಸುವವರಿಗೆ ರೂ.600 ಕ್ಯಾಷ್ ಬ್ಯಾಕ್ ನೀಡಲಿದೆ ಎನ್ನಲಾಗಿದೆ. ಇದು 12 ತಿಂಗಳ ಅವಧಿಗೆ ದೊರೆಯಲಿದೆ ಎನ್ನಲಾಗಿದೆ.

ನೋಕಿಯಾ ಫೀಚರ್ ಫೋನ್ ಕೊಂಡ ನಂತರದಲ್ಲಿ ಐಡಿಯಾ ಸಿಮ್ ಬಳಕೆ ಮಾಡಿಕೊಳ್ಳಬೇಕಾಗಿದ್ದು, 12 ತಿಂಗಳ ಕಾಲ ರೂ.100ಕ್ಕೆ ರೀಚಾರ್ಜ್ ಮಾಡಿಕೊಳ್ಳಬೇಕಾಗಿದೆ. ಹೀಗೆ ರೀಚಾರ್ಜ್ ಮಾಡಿಕೊಂಡಲ್ಲಿ ರೂ.50 ಕ್ಯಾಷ್ ಬ್ಯಾಕ್ ದೊರೆಯಲಿದ್ದು, 28 ದಿನಗಳ ವ್ಯಾಲಿಡಿಟಿಯೂ ದೊರೆಯಲಿದೆ.

ಹೀಗೆ 12 ತಿಂಗಳಲ್ಲಿ ರೂ.50 ರಂತೆ ರೂ.600 ಕ್ಯಾಷ್ ಬ್ಯಾಕ್ ದೊರೆಯಲಿದೆ. ಈ ಪ್ಲಾನ್ ಕೇಲವ 3G ಬಳಕೆದಾರರಿಗೆ ಮಾತ್ರವೇ ದೊರೆಯಲಿದೆ ಇತರೆ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ನೀಡುವುದಿಲ್ಲ ಎನ್ನಲಾಗಿದೆ.

Nokia 7 Plus now up for sale in India - GIZBOT KANNADA

ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಬಳಕೆದಾರರನ್ನು ಕಳೆದುಕೊಂಡಿರುವ ಐಡಿಯಾ, ನೂತನ ಬಳಕೆದಾರರನ್ನು ಕಳೆದುಕೊಂಡಿದ್ದು, ಈ ಹಿನ್ನಲೆಯಲ್ಲಿ ನೂತನ ಬಳಕೆದಾರರನ್ನು ಸೆಳೆಯುವ ಸಲುವಾಗಿ ಈ ಹೊಸ ಆಫರ್ ಅನ್ನು ಬಿಡುಗಡೆ ಮಾಡಿದೆ ಎನ್ನಲಾಗಿದೆ.

ಈ ಒಪ್ಪಂದದಿಂದಾಗಿ ನೋಕಿಯಾ ಮತ್ತು ಐಡಿಯಾ ಇಬ್ಬರಿಗೂ ಲಾಭವಾಗಲಿದ್ದು, ಮಾರುಕಟ್ಟೆಯಲ್ಲಿ ಮತ್ತೇ ಫೀಚರ್ ಫೋನ್ ಗಳ ಅಬ್ಬರವೂ ಅಧಿಕವಾಗಿದ್ದು, ಈ ಹಿನ್ನಲೆಯಲ್ಲಿ ಈ ಹೊಸ ಆಫರ್ ಹೆಚ್ಚು ಸದ್ದು ಮಾಡಲಿದೆ ಎನ್ನಲಾಗಿದೆ.

Best Mobiles in India

English summary
Idea customers buying a new Nokia 105, Nokia 130 and Nokia 150 feature phones will get up to Rs. 600 cashback over a period of 12 months.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+