ಫಿಪಾ ನೋಡಲು ಕ್ಯಾಷ್ ಬ್ಯಾಕ್ ಕೊಟ್ಟ ಐಡಿಯಾ..! ಬೇರೆಲ್ಲೂ ಇಲ್ಲ..!
ಟೆಲಿಕಾಂ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸ ಹೊಸ ಆಫರ್ ಗಳನ್ನು ಕಾಣಬಹುದಾಗಿದೆ. ಇದೇ ಮಾದರಿಯಲ್ಲಿ ಸಾಕಷ್ಟು ಹೊಸ ತನಕ್ಕೆ ಸಾಕ್ಷಿಯಾಗುತ್ತಿರುವ ಐಡಿಯಾ ಈ ಬಾರಿ ಗ್ರಾಹಕರನ್ನು ಸೆಳೆಯುವ ಸಲುವಾಗಿ ಕ್ಯಾಷ್ ಬ್ಯಾಕ್ ಆಫರ್ ಅನ್ನು ಲಾಂಚ್ ಮಾಡಲು ಮುಂದಾಗಿದೆ. ಈ ಮೂಲ ಇತರೆ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆದು ತನ್ನ ಬೆಳವಣಿಗೆಗಾಗಿ ಹೆಚ್ಚಿನ ಮಂದಿಯನ್ನು ಆಕರ್ಷಿಸಲು ಮುಂದಾಗಿದೆ.

ಈಗಾಗಲೇ ಟೆಲಿಕಾಂ ಮಾರುಕಟ್ಟೆಯಲ್ಲಿ ಪೋಸ್ಟ್ ಪೇಯ್ಡ್ ಬಳಕೆದಾರರ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವ ಸಲುವಾಗಿ ಹೊಸ ಹೊಸ ಆಫರ್ ಗಳನ್ನು ಪೋಸ್ಟ್ ಪೇಯ್ಡ್ ಬಳಕೆದಾರರಿಗೆ ಸಾಕಷ್ಟು ಆಫರ್ ಗಳು ಲಭ್ಯವಿದೆ. ಇದೇ ಮಾದರಿಯಲ್ಲಿ ಐಡಿಯಾ ವಿಶೇಷವಾಗಿ ಕ್ಯಾಷ್ ಬ್ಯಾಕ್ ಆಫರ್ ಅನ್ನು ನೀಡಲು ಮುಂದಾಗಿದೆ. ಈ ಮಾದರಿ ಆಫರ್ ಬೇರೆ ಯಾವುದೇ ಟೆಲಿಕಾಂ ಕಂಪನಿಗಳಲ್ಲಿ ಕಾಣಲು ಸಾಧ್ಯವಿಲ್ಲ ಎನ್ನಲಾಗಿದೆ.

ಫಿಪಾ ಸ್ಪೆಷಲ್:
ಈಗಾಗಲೇ IPL ಸಂಭ್ರಮವನ್ನು ಹೆಚ್ಚಿಸಲು ಎಲ್ಲಾ ಟೆಲಿಕಾಂ ಕಂಪನಿಗಳು ಆಫರ್ ನೀಡಿದ್ದ ಮಾದರಿಯಲ್ಲಿ ಐಡಿಯಾ ವಿಭಿನ್ನವಾಗಿ ಫಿಪಾ ಸ್ಪೆಷಲ್ ಆಫರ್ ಅನ್ನು ನೀಡಲು ಮುಂದಾಗಿದೆ. ಇದು ಕೇವಲ ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮಾತ್ರವೇ ಲಭ್ಯವಿದ್ದು, ಕ್ಯಾಷ್ ಬ್ಯಾಕ್ ಸಹ ದೊರೆಯುತ್ತಿದೆ.

ಫಿಪಾ ನೋಡಲು:
ತಮ್ಮ ಬಳಕೆದಾರರು ಫಿಪಾವನ್ನು ನೋಡವು ಸಲುವಾಗಿ ಸೋನಿ ಲಿವ್ ಆಪ್ ಅನ್ನು ಸಬ್ ಸ್ಕ್ರೆಬ್ ಆಗುವ ಸಲುವಾಗಿ ಪೋಸ್ಟ್ ಪೇಯ್ಡ್ ಬಳಕೆದಾರರು ಬಿಲ್ ಪಾವತಿ ಮಾಡಿದ ಸಂದರ್ಭದಲ್ಲಿ ಕ್ಯಾಷ್ ಬ್ಯಾಕ್ ನೀಡಲಿದೆ. ಇದರಿಂದಾಗಿ ಸೋನಿ ಲಿವ್ ಆಪ್ ಅನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

ಮೂರು ತಿಂಗಳಿಗೆ ರೂ.150:
ಸೋನಿ ಲಿವ್ ಆಪ್ ಅನ್ನು ಪಡೆದುಕೊಳ್ಳಲು ಮೂರು ತಿಂಗಳಿಗೆ ರೂ. 149 ಪಾವತಿ ಮಾಡಬೇಕಾಗಿದೆ. ಈ ಹಿನ್ನಲೆಯಲ್ಲಿ ಐಡಿಯಾ ಬಳಕೆದಾರರು ಫಿಪಾ ನೋಡವ ಸಲುವಾಗಿ ಕ್ಯಾಚ್ ಬ್ಯಾಕ್ ಪಡೆದುಕೊಂಡು, ಅದರಲ್ಲಿ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಜುಲೈ 15ರ ವರೆಗೆ ಲಭ್ಯ:
ಸೋನಿ ಲಿವ್ ಆಪ್ ಅನ್ನು ಉಚಿತವಾಗಿ ನೋಡುವ ಸಲುವಾಗಿ ಐಡಿಯಾ ಬಳಕೆದಾರರು ಕ್ಯಾಷ್ ಬ್ಯಾಕ್ ಆಫರ್ ಅನ್ನು ಪಡೆದುಕೊಳ್ಳುವ ಸಲುವಾಗಿ ನೀಡುವ ಆಫರ್ ಜುಲೈ 15ರ ವರೆಗೆ ದೊರೆಯಲಿದೆ. ಇದರಿಂದಾಗಿ ಈ ಆಫರ್ ಲಾಭವನ್ನು ಪಡೆದುಕೊಳ್ಳಬೇಕಾದರೆ ಜುಲೈ 15ರ ಒಳಗೆ ರಿಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ.

ನಿರ್ವಾನ್ ಪ್ಲಾನ್:
ಈಗಾಗಲೇ ಐಡಿಯಾ ಲಾಂಚ್ ಮಾಡಿರುವ ಐಡಿಯಾ ನಿರ್ವಾನ್ ಪ್ಲಾನ್ ಗಳನ್ನು ಅದರಲ್ಲಿಯೂ ರೂ.499ಗಿಂತಲೂ ಅಧಿಕ ರಿಚಾರ್ಜ್ ಮಾಡಿಸಿಕೊಳ್ಳುವವರಿಗೆ ಮಾತ್ರವೇ ಈ ಕ್ಯಾಷ್ ಬ್ಯಾಕ್ ದೊರೆಯಲಿದೆ ಎನ್ನಲಾಗಿದೆ. ಅಲ್ಲದೇ ಇತರೆ ಪ್ಲಾನ್ ನವರು ಸಹ ಆಪ್ ಗ್ರೇಡ್ ಮಾಡಿಕೊಳ್ಳುವ ಅವಕಾಸವನ್ನು ಇದರಲ್ಲಿ ನೀಡಲಾಗಿದೆ.


Click it and Unblock the Notifications








