Subscribe to Gizbot

ನಷ್ಟದಲ್ಲಿದ್ದರೂ ಬಳಕೆದಾರರಿಗೆ ಇಷ್ಟವಾಗುವ ಆಫರ್ ಕೊಟ್ಟ ಐಡಿಯಾ..!

Written By:

ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ನಷ್ಟದ ಹಾದಿಯನ್ನು ಹಿಡಿದಿರುವ ಐಡಿಯಾ, ತನ್ನ ಬಳಕೆದಾರರನ್ನು ಕಳೆದುಕೊಳ್ಳಬಾರದು ಎನ್ನುವ ಕಾರಣಕ್ಕೆ ಮಾರುಕಟ್ಟೆಯ ದರ ಸಮರಕ್ಕೆ ಸರಿ ಹೊಂದುವ ಪ್ಲಾನ್‌ ಗಳನ್ನು ಘೋಷಣೆ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಸದ್ಯ ಮಾರುಕಟ್ಟೆಯಲ್ಲಿ ಟ್ರೆಂಡ್ ಆಗಿರುವ ಜಿಯೋ ಮತ್ತು ಏರ್‌ಟೆಲ್‌ ಪ್ಲಾನ್‌ಗೆ ಸೆಡ್ಡು ಹೊಡೆಯುವ ಪ್ಲಾನ್ ವೊಂದನ್ನು ನೀಡಲು ಮುಂದಾಗಿದೆ.

ನಷ್ಟದಲ್ಲಿದ್ದರೂ ಬಳಕೆದಾರರಿಗೆ ಇಷ್ಟವಾಗುವ ಆಫರ್ ಕೊಟ್ಟ ಐಡಿಯಾ..!

ಐಡಿಯಾ ರೂ.109 ಪ್ಲಾನ್ ಜಾರಿಗೆ ತಂದಿದ್ದು, ಇದರಲ್ಲಿ ಬಳಕೆದಾರರಿಗೆ ವಾಯ್ಸ್, ಮೇಸೆಜ್ ಮತ್ತು ಡೇಟಾ ಆಫರ್ ಅನ್ನು ನೀಡುತ್ತಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಐಡಿಯಾದ ಈ ಹೊಸ ಆಫರ್ ಬಳಕೆದಾರರಿಗೆ ನೀಡುತ್ತಿರುವ ಸೌಲಭ್ಯಗಳೇನು ಎಂಬುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಡಿಯಾ ರೂ.109 ಪ್ಲಾನ್:

ಐಡಿಯಾ ರೂ.109 ಪ್ಲಾನ್:

ಈ ಪ್ಲಾನ್ ನಲ್ಲಿ ಬಳಕೆದಾರರು 1 GB ಡೇಟಾವನ್ನು ಬಳಕೆಗೆ ಪಡೆದುಕೊಳ್ಳಲಿದ್ದಾರೆ. ಇದರೊಂದಿಗೆ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವು ದೊರೆಯಲಿದೆ. ಇದರೊಂದಿಗೆ ರೋಮಿಂಗ್ ಸಹ ಉಚಿತವಾಗಲಿದ್ದು, ಉಚಿತವಾಗಿ ಮೇಸೆಜ್ ಮಾಡುವ ಅವಕಾಶವು ದೊರೆಯಲಿದೆ. ಆದರೆ ಈ ಆಫರ್ ಕೇವಲ 14 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.

ಮೈ ಐಡಿಯಾ ಆಪ್:

ಮೈ ಐಡಿಯಾ ಆಪ್:

ಈ ಆಫರ್ ಕೇವಲ ಮೈ ಐಡಿಯಾ ಆಪ್ ಮೂಲಕ ದೊರೆಯಲಿದೆ ಎನ್ನಲಾಗಿದೆ. ಇದರಲ್ಲಿ ರೀಚಾರ್ಜ್ ಮಾಡಿಸಿಕೊಂಡವರಿಗೆ ಮಾತ್ರವೇ ಈ ಆಫರ್ ದೊರೆಯಲಿದ್ದು, ಉಳಿದವರಿಗೆ ದೊರೆಯುವುದಿಲ್ಲ.

ಜಿಯೋ ಆಫರ್:

ಜಿಯೋ ಆಫರ್:

ಇದೇ ಮಾದರಿಯ ಆಫರ್ ಘೋಷಣೆ ಮಾಡಿರುವ ಜಿಯೋ, ರೂ.98 ಆಫರ್ ಘೋಷಣೆ ಮಾಡಿದೆ. ಇದರಲ್ಲಿ ಬಳಕೆದಾರರಿಗೆ 28 ದಿನಗಳ ವ್ಯಾಲಿಡಿಟಿಯನ್ನು ನೀಡಲಿದೆ. ಇದರಲ್ಲಿ 2 GB ಡೇಟಾ ಮತ್ತು ಇದರೊಂದಿಗೆ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವು ದೊರೆಯಲಿದೆ. ಇದರೊಂದಿಗೆ ರೋಮಿಂಗ್ ಸಹ ಉಚಿತವಾಗಲಿದ್ದು, ಉಚಿತವಾಗಿ ಮೇಸೆಜ್ ಮಾಡುವ ಅವಕಾಶವು ದೊರೆಯಲಿದೆ.

ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್‌ ಮಾಡಿ ಸ್ನೇಹಿತರೊಂದಿಗೆ ಹಂಚಿಕೊಳ್ಳುವುದು ಹೇಗೆ..?
ಏರ್‌ಟೆಲ್ ಆಫರ್:

ಏರ್‌ಟೆಲ್ ಆಫರ್:

ಏರ್‌ಟೆಲ್ ರೂ.93 ಆಫರ್ ಘೋಷಣೆ ಮಾಡಿದೆ. ಇದರಲ್ಲಿ ಬಳಕೆದಾರರಿಗೆ 28 ದಿನಗಳಿಗೆ 1GB ಡೇಟಾ ಮತ್ತು ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವು ದೊರೆಯಲಿದೆ. ಇದರೊಂದಿಗೆ ರೋಮಿಂಗ್ ಸಹ ಉಚಿತವಾಗಲಿದ್ದು, ಉಚಿತವಾಗಿ ಮೇಸೆಜ್ ಮಾಡುವ ಅವಕಾಶವು ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Idea Cellular Silently Launches Rs 109 Prepaid Tariff Plan. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot