ಐಡಿಯಾದಿಂದ ಹೊಸ ಆಫರ್: ಬಳಕೆದಾರರಿಗೆ ಹೊಸ ಮಾದರಿಯ ಸೇವೆ....!
ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ ದರ ಸಮರವೂ ಜೋರಾಗಿ ನಡೆಯುತ್ತಿದ್ದು, ಇದೇ ಹಿನ್ನಲೆಯಲ್ಲಿ ಸಾಕಷ್ಟು ನೂತನ ಆಫರ್ ಗಳು ಬಳಕೆದಾರರಿಗೆ ದೊರೆಯುತ್ತಿದೆ. ಸದ್ಯ ಐಡಿಯಾ ತನ್ನ ಬಳಕೆದಾರರಿಗೆ ಬೊಂಬಾಟ್ ಆಫರ್ ವೊಂದನ್ನು ಲಾಂಚ್ ಮಾಡಿದ್ದು, ಬಳಕೆದಾರರಿಗೆ ಜಿಯೋ ನೀಡುತ್ತಿರುವ ಆಫರ್ ಗಿಂತಲೂ ಉತ್ತಮವಾದ ಲಾಭವನ್ನು ಮಾಡಿಕೊಡಲು ಮುಂದಾಗಿದೆ.

ಇತ್ತೀಚೆಗೆ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರಿಗೆ ಪೋಸ್ಟ್ ಪೇಯ್ಡ್ ಪ್ಲಾನ್ ಗಳನ್ನು ನೀಡುತ್ತಿರುವ ಸಂದರ್ಭದಲ್ಲಿ ಐಡಿಯಾ ಪ್ರೀಪೇಯ್ಡ್ ಬಳಕೆದಾರರಿಗೆ ಸದ್ದಿಲ್ಲದೇ ಪ್ಲಾನ್ ವೊಂದನ್ನು ಘೋಷಣೆ ಮಾಡಿದ್ದು, ಇದರಲ್ಲಿ ಹೆಚ್ಚಿನ ಡೇಟಾವನ್ನು ನೀಡುವುದು ಮಾತ್ರವಲ್ಲದೇ ಕರೆ ಮಾಡುವ ಅವಕಾಶವನ್ನು ನೀಡಿದೆ ಎನ್ನಲಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಬಳಕೆದಾರರನ್ನು ಹೆಚ್ಚಿನ ಪ್ರಮಾಣದಲ್ಲಿ ಕಳೆದುಕೊಂಡಿರುವ ಐಡಿಯಾ ಮತ್ತೇ ಮಾರುಕಟ್ಟೆಯಲ್ಲಿ ಉಳಿದುಕೊಳ್ಳಲು ಹರ ಸಾಹಸ ಪಡುತ್ತಿದೆ ಎನ್ನಲಾಗಿದೆ.

ರೂ.227 ಪ್ಲಾನ್:
ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮ ಬಳಕೆದಾರರಿಗೆ ಮತ್ತೆ ಹಿಂದಿನಂತೆ 28 ದಿನಗಳ ಪ್ಲಾನ್ ಅನ್ನು ಲಾಂಚ್ ಮಾಡುತ್ತಿದ್ದು, ಇದೇ ಮಾದರಿಯನ್ನು ಅನುಸರಿಸಿರುವ ಐಡಿಯಾ ಸಹ ಬಳಕೆದಾರರಿಗೆ 28 ದಿನಗಳ ಪ್ಲಾನ್ ಲಾಂಚ್ ಮಾಡಿದ್ದು, ರೂ.227ಗೆ ರಿಚಾರ್ಜ್ ಮಾಡಿಸಬೇಕಾಗಿದೆ.

ನಿತ್ಯ 1.4 GB ಡೇಟಾ ಲಭ್ಯ:
ಐಡಿಯಾ ಬಿಡುಗಡೆ ಮಾಡಿರುವ ಪ್ಲಾನ್ ನಲ್ಲಿ ಬಳಕೆದಾರರು ರೂ.227ಗೆ ರಿಚಾರ್ಜ್ ಮಾಡಿಸಬೇಕಾಗಿದೆ. ಇದರಲ್ಲಿ ಬಳಕೆದಾರರಿಗೆ ನಿತ್ಯ 1.4 GB ಡೇಟಾ ಬಳಕೆಗೆ ದೊರೆಯಲಿದೆ ಎನ್ನಲಾಗಿದೆ. ಇದು 4G ವೇಗದಲ್ಲಿ ಕಾರ್ಯನಿರ್ವಹಿಸಲಿದೆ.

ಅನ್ ಲಿಮಿಟೆಡ್ ಕರೆಗಳು:
ಐಡಿಯಾ ಬಿಡುಗಡೆ ಮಾಡಿರುವ ರೂ.227 ಪ್ಲಾನ್ ನಲ್ಲಿ ಬಳಕೆದಾರರಿಗೆ ಸಾಕಷ್ಟು ಲಾಭವಿದ್ದು, ಅನ್ ಲಿಮಿಡೆಟ್ ಕರೆ ಮಾಡುವ ಅವಕಾಶವೂ ಲಭ್ಯವಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರು ಕಾಲ್ ಮಾಡಲು ಹಿಂದೂ ಮುಂದೆ ನೋಡಬೇಕಾಗಿಲ್ಲ.

ಉಚಿತ SMS:
ಐಡಿಯಾ ಬಿಡುಗಡೆ ಮಾಡಿರುವ ರೂ.227 ಪ್ಲಾನ್ ನಲ್ಲಿ ಬಳಕೆದಾರರಿಗೆ ಡೇಟಾ ಮತ್ತು ಕರೆ ಮಾಡುವ ಅವಕಾಶದೊಂದಿಗೆ ಉಚಿತ SMS ಕಳುಹಿಸುವ ಅವಕಾಶವನ್ನು ಮಾಡಿಕೊಡಲಾಗಿದೆ. ಇದರಿಂದಾಗಿ ಬಳಕೆದಾರರಿಗೆ ಸಾಕಷ್ಟು ಲಾಭವೂ ದೊರೆಯಲಿದೆ.

ಉಚಿತ ಮಿಸ್ ಕಾಲ್ ಆಲರ್ಟ್:
ಐಡಿಯಾ ಬಿಡುಗಡೆ ಮಾಡಿರುವ ರೂ.227 ಪ್ಲಾನ್ ನಲ್ಲಿ ಬಳಕೆದಾರರಿಗೆ ಹೊಸದಾಗಿ ಲಭ್ಯವಾಗಿರುವ ಸೇವೆ ಎಂದರೆ ಉಚಿತವಾಗಿ ಮಿಸ್ ಕಾಲ್ ಆಲರ್ಟ್ ಸೇವೆಯನ್ನು ಪಡೆದುಕೊಳ್ಳಬಹದಾಗಿದೆ. ಇದರಿಮದಾಗಿ ,ಮಿಸ್ ಕಾಲ್ ಕೊಟ್ಟವರ ಮಾಹಿತಿಯೂ ನಿಮಗೆ ದೊರೆಯಲಿದೆ.


Click it and Unblock the Notifications