ಐಡಿಯಾ ಮನಿ ಬಳಿಸಿ ರೆಡ್ ಬಸ್ ಬುಕ್ ಮಾಡುವ ಅವಕಾಶ..!

Written By: Lekhaka

ಐಡಿಯಾ ಸೆಲ್ಯುಲರ್ ತನ್ನದೇ ಆದ ಪೇಮೆಂಟ್ ಬ್ಯಾಂಕ್ ಅನ್ನು ಲಾಂಚ್ ಮಾಡಿದೆ. ಐಡಿಯಾ ಮನಿ ಲಾಂಚ್ ಮಾಡಿದೆ. ಇದಕ್ಕಾಗಿ ಆನ್ಲೈನ್ ಬಸ್ ಟಿಕೇಟಿಂಗ್ ಪ್ಲಾಟ್ ಫಾರ್ಮ್ ರೆಡ್ ಬಸ್ ನೊಂದಿಗೆ ಪಾಲುದಾರಿಕೆಯನ್ನು ಮಾಡಿಕೊಂಡಿದೆ.

ಐಡಿಯಾ ಮನಿ ಬಳಿಸಿ ರೆಡ್ ಬಸ್ ಬುಕ್ ಮಾಡುವ ಅವಕಾಶ..!

ಈ ಪಾಲುದಾರಿಕೆಯಿಂದಾಗಿ ಐಡಿಯಾ ಬಳಕೆದಾರರು ಐಡಿಯಾ ಮನಿಯಿಂದ ಇಂಟರ್ನೆಟ್ ಆಕ್ಸಿಸ್ ಇಲ್ಲದೆಯೂ ರೆಡ್ ಬಸ್ ನಲ್ಲಿ ಟಿಕೇಟ್ ಬುಕ್ ಮಾಡಬಹುದಾಗಿದೆ. ಐಡಿಯಾ ಮನಿ ಬಳಕೆದಾರರಿಗೆ ಹೊಸ ಮಾದರಿಯ ಬ್ಯಾಂಕಿಗ್ ಸೇವೆಯನ್ನು ನೀಡಲು ಇದು ಸಹಾಯಕವಾಗಿದೆ.

ರೆಡ್ ಬಸ್ ನಲ್ಲಿ ಟಿಕೇಟ್ ಬುಕ್ ಮಾಡಲು ಐಡಿಯಾ ಬಳಕೆದಾರರಿಗೆ ಭಾರತದಲ್ಲಿ ಎಲ್ಲಿ ಬೇಕಾದರು ಟಿಕೇಟ್ ಬುಕ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ. ಅಲ್ಲದೇ ಸರ್ಕಾರಿ ಮತ್ತು ಖಾಸಗಿ ಬಸ್ ಗಳನ್ನು ಬುಕ್ ಮಾಡುವ ಅವಕಾಶವನ್ನು ಮಾಡಿಕೊಡಲಿದೆ.

ಜಿಯೋವಿನ 2599 ರೂ. ಕ್ಯಾಶ್‌ಬ್ಯಾಕ್ ಆಫರ್ ಹಿಂದಿದೆ ಕರಾಳ ಸತ್ಯ!!..ಈ ಆಫರ್ ಬೇಕಾ ನಿಮಗೆ?

ಈಗಾಗಲೇ ರೆಡ್ ಬಸ್ ಭಾರತದ ನಂ 1 ಆನ್ಲೈನ್ ಟಿಕೇಟ್ ಬುಕಿಂಗ್ ಸೇವೆಯಾಗಿದ್ದು, ಈ ಹಿನ್ನಲೆಯಲ್ಲಿ ಐಡಿಯಾ ತನ್ನ ಬಳಕೆದಾರರಿಗೆ ಹೆಚ್ಚಿನ ಲಾಭವನ್ನು ಮಾಡಿಕೊಡುವ ಸಲುವಾಗಿ ರೆಡ್ ಬಸ್ ನೊಂದಿಗೆ ಪಾಲುದಾರಿಕೆಯನ್ನು ನೀಡಿದೆ.

ಈಗಾಗಲೇ ಮಾರುಕಟ್ಟೆಯಲ್ಲಿ ಏರ್ ಟೆಲ್ ಪೇಮೆಂಟ್ ಬ್ಯಾಂಕ್, ಜಿಯೋ ಮನಿ ಸೇರಿದಂತೆ ಎಲ್ಲಾ ಟೆಲಿಕಾಂ ಕಂಪನಿಗಳು ತಮ್ಮದೇ ಪೇಮೆಂಟ್ ಸೇವೆಗಳನ್ನು ನೀಡುತ್ತಿದ್ದು, ಐಡಿಯಾ ಸಹ ಇದೇ ಹಾದಿಯಲ್ಲಿ ಸಾಗುತ್ತಿದೆ.

English summary
The new collaboration will allow customers to book bus tickets online through Idea Money’s RAM portal with the help of the retailer.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot