4G ವೋಲ್ಟ್ ವ್ಯಾಪ್ತಿಯನ್ನು ಹೆಚ್ಚಿಸಿರುವ ಐಡಿಯಾ 30 ಜಿಬಿ ಉಚಿತ ಡೇಟಾ ನೀಡುತ್ತಿದೆ.!

|

ಐಡಿಯಾ ಸೆಲ್ಯುಲರ್ 4G VoLTE (Voice-over-LTE) ನ್ನು 9 ಹೊಸ ಟೆಲಿಕಾಂ ಸರ್ಕಲ್ ನಲ್ಲಿ ಬಿಡುಗಡೆಗೊಳಿಸುತ್ತಿದ್ದು, ಮುಂಬೈ , ಕರ್ನಾಟಕ, ಪಂಜಾಬ್, ಹರಿಯಾಣ, ಪಶ್ಚಿಮ ಬಂಗಾಲ, ಉತ್ತರ ಪ್ರದೇಶದ ಪೂರ್ವಭಾಗ ಮತ್ತು ಪಶ್ಚಿಮ ಭಾಗ, ಬಿಹಾರ ಮತ್ತು ಜಾರ್ಖಂಡಿ, ಮತ್ತು ರಾಜಸ್ಥಾನವನ್ನು ಒಳಗೊಂಡಿದೆ. ಈ ಹೊಸ ವಿಸ್ತರಣೆಯಲ್ಲಿ, ಭಾರತದ 15 ವಿವಿಧ ಪ್ರದೇಶಗಳಲ್ಲಿ ಈ ವೋಲ್ಟ್ ಸರ್ವೀಸ್ ಸಿಗಲಿದೆ. ಆಯೋಜಕರು ಈ ತಿಂಗಳ ಆರಂಭದಲ್ಲಿ 6 ಪ್ರಮುಖ ಪ್ರದೇಶದಲ್ಲಿ ಈ ಸೇವೆ ನೀಡುವುದರಿಂದ ಹೊರನಡೆದಿದ್ದರು.

 4G ವ್ಯಾಪ್ತಿಯನ್ನು ಹೆಚ್ಚಿಸಿರುವ ಐಡಿಯಾ 30 ಜಿಬಿ ಉಚಿತ ಡೇಟಾ ನೀಡುತ್ತಿದೆ.!

ಅದರಲ್ಲಿ ಮಹಾರಾಷ್ಟ್ರ, ಗೋವಾ, ಗುಜರಾತ್, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣ, ಮತ್ತು ಚತ್ತೀಸ್ ಘಡ, ಮಧ್ಯಪ್ರದೇಶವೂ ಸೇರಿತ್ತು. ಈ ಘಟನೆ ನಡೆದ ಒಂದೇ ತಿಂಗಳಲ್ಲಿ ಐಡಿಯಾ ಆಯೋಜಕರು ತಮ್ಮ ವೋಲ್ಟ್ ಸೇವೆಯನ್ನು ಪರೀಕ್ಷೆಗೆ ಒಳಪಡಿಸಿದ್ದರು. ತಮ್ಮ ವ್ಯಾಪ್ತಿಯ ಕೆಲಸಗಾರರಿಗೆ ನೀಡುವುದರ ಮೂಲಕ ಪರೀಕ್ಷಿಸಲಾಗಿತ್ತು. ಆದರೆ ಈಗ ಪರಿಯಾತ್ಮಕ ಆಫರ್ ಎನ್ನುವಂತೆ, ಐಡಿಯಾ ತನ್ನ ವೋಲ್ಟ್ ಸರ್ವೀಸ್ ಪಡೆಯುವ ಬಳಕೆದಾರರಿಗೆ 30 ಜಿಬಿ ಫ್ರೀ ಡಾಟಾವನ್ನು ನೀಡಲಿದೆ. ಇದು ಮೊದಲ ಹಂತದಲ್ಲಿ 6 ಪ್ರದೇಶಗಳಿಗೆ ನೀಡಲಾಗಿಂತ ದುಪ್ಪಟ್ಟಾಗಿದ್ದು 10 ಜಿಬಿಗಿಂತ 20 ಜಿಬಿ ಹೆಚ್ಚು ನೀಡಿ ಒಟ್ಟು 30 ಜಿಬಿಯ ಆಫರ್ ನೀಡುತ್ತಿದೆ.

ಚಂದಾದಾರರು ಮೊದಲ 10 ಜಿಬಿ ಡಾಟಾವನ್ನು ವೋಲ್ಟ್ ಕಾಲ್ ಗಳಿಗಾಗಿ ನೀಡಲಾಗುತ್ತೆ. ಅದಕ್ಕೆ 10 ಜಿಬಿ ಸೇರುವುದು 4 ವಾರದ ನಂತರ. ಡಾಟಾ ಬಳಸಿದ ಅನುಭವ ಹೇಗಿತ್ತು ಎಂದು ಪ್ರತಿಕ್ರಿಯೆಯನ್ನು ಒದಗಿಸಲು, ಮತ್ತುಳಿದ 10 ಜಿಬಿಯನ್ನು8 ವಾರದ ನಂತರದ ಪ್ರತಿಕ್ರಿಯೆ ಪಡೆಯಲು ನೀಡಲಾಗುವುದು. ಐಡಿಯಾ ತಿಳಿಸುವಂತೆ VoLTE ಚಂದಾದಾರರು 4ಜಿ ನೆಟ್ ವರ್ಕ್ ನಿಂದ ಹೊರನಡೆದರೆ ಸ್ವಯಂಚಾಲಿತವಾಗಿ 2ಜಿ ಅಥವಾ 3ಜಿಗೆ ಕಳುಹಿಸಿ ಕಾರ್ಯ ನಿರ್ವಹಿಸುವಂತೆ ಮಾಡಲಾಗುವುದು ಇದಕ್ಕೆ Single Radio Voice Call Continuity (SRVCC) ಟೆಕ್ನಾಲಜಿಯನ್ನು ಬಳಸಲಾಗಿದೆ. ಇದು ಕರೆಯ ಕನೆಕ್ಟಿವಿಟಿಯನ್ನು ಹಾಳುಮಾಡದೇ ಕರೆ ಮುಂದುವರಿಯುವಂತೆ ಮಾಡುತ್ತೆ.

ಹೊಸದಾಗಿ ನೀಡಿರುವ ಡಾಟಾ ಆಫರ್ ತುಂಬಾ ಲಾಭದಾಯಕವಾಗಿದ್ದು ಮೊದಲ 10 ಜಿಬಿಯನ್ನು VoLTE ಕರೆಗಳನ್ನು ಮಾಡಲು ನೀಡಲಾಗುತೆ. ಐಡಿಯಾ ಬಳಕೆದಾರರು ಇನ್ನು ಮುಂದೆ ತನ್ನ 15 ಮಾರ್ಕೆಟಿಂಗ್ ಜಾಗಗಳಲ್ಲಿ ಹೈ ಡೆಫಿನೇಷನ್ ವಾಯ್ಸ್ ಕಾಲ್ಸ್ ಗಳನ್ನು ವೋಲ್ಟ್ ಮೂಲಕ ಮಾಡಲು ಸಾಧ್ಯವಿದೆ ಎಂದು ತಿಳಿಸುತ್ತಾರೆ ಐಡಿಯಾ ಸೆಲ್ಯುಲರ್ ನ ಮುಖ್ಯ ಮಾರ್ಕೆಟಿಂಗ್ ಆಫೀಸರ್ ಆಗಿರುವ ಶಶಿ ಶಂಕರ್...ಅವರು ಇದರ ಬಿಡುಗಡೆಯ ವಿಚಾರವಾಗಿ ಮಾತನಾಡುತ್ತಿದ್ದರು.

ನೆಟ್ ವರ್ಕ್ ವ್ಯಾಪ್ತಿ ಹೆಚ್ಚಿಸುವ ಬಗ್ಗೆ ಹೇಳುವುದಾದರೆ, ಐಡಿಯಾ ಅಟ್ರಾಕ್ಟೀವ್ ವಾಯ್ಸ್ ಮತ್ತು ಡಾಟಾ ಪ್ಲಾನ್ ಗಳನ್ನು ಪೋಸ್ಟ್ ಪೇಡ್ ಮತ್ತು ಪ್ರೀಪೇಡ್ ಬಳಕೆದಾರರಿಗೆ , ಇವರುಗಳ ಜೊತೆಗೆ ಅಧ್ಬುತ ಕ್ವಾಲಿಟಿಯ ಹ್ಯಾಂಡ್ ಸೆಟ್ ಗಳನ್ನು ಕೈಗೆಟುಕುವ ಬೆಲೆಯಲ್ಲಿ ನೀಡುವ ಉದ್ದೇಶ ಹೊಂದಿದೆ. ಆ ಮೂಲಕ ಐಡಿಯಾ ಬಳಕೆದಾರರು ಹೈ ಸ್ಪೀಡ್ 4ಜಿ ಡಾಟಾ ಮತ್ತು ವೊಲ್ಟ್ ಮೂಲಕ ಅಧ್ಬುತ ಧ್ವನಿ ಅನುಭವ ನೀಡುವ ಉದ್ದೇಶ ಹೊಂದಿದೆ.

Riversong Jelly Kids GPS tracker hands-on - GIZBOT KANNADA

ಚಂದಾದರರು ಈಗಾಗಲೇ ಇದರ ವ್ಯಾಪ್ತಿಯಲ್ಲಿ ಬಂದಿದ್ದರೆ ಅಟೋಮ್ಯಾಟಿಕಲಿ ಐಡಿಯಾ ವೋಲ್ಟ್ ಸರ್ವೀಸ್ ಗೆ ಅಪ್ ಡೇಟ್ ಆಗಲಿದ್ದಾರೆ. ಇದನ್ನು ಕೆಲವು ಸೆಲೆಕ್ಟೆಡ್ ಹ್ಯಾಂಡ್ ಸೆಟ್ ಗಳಲ್ಲಿ ಆಕ್ಸಿಸ್ ಮಾಡಬಹುದಾಗಿದೆ..ವಿವೋ ವಿ 7 ಪ್ಲಸ್,ಹಾನರ್ 5ಸಿ , ಹಾನರ್ 6ಎಕ್ಸ್, ಹಾನರ್ 7ಎಕ್ಸ್, ಹಾನರ್ ವಿವ್ 10, ಹಾನರ್ 9 ಲೈಟ್, ಮತ್ತು ಹಾನರ್ 9ಐ. ಆದರೆ ಶಿಯೋಮಿ ರೆಡ್ಮಿ 4, ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ7, ಗ್ಯಾಲಕ್ಸಿ ಎ5, ಗ್ಯಾಲಕ್ಸಿ ಎ 7, ಒನ್ ಪ್ಲಸ್ 5, ಒನ್ ಪ್ಲಸ್ 5ಟಿ, ಒನ್ ಪ್ಲಸ್ 6, ನೋಕಿಯಾ 3 ಮತ್ತು ನೋಕಿಯಾ 5 ಗಳು over-the-air (OTA) ಅಪ್ ಡೇಟ್ ಗಳನ್ನು ಪಡೆಯಲಿದ್ದು Idea VoLTE ನ್ನು ಅನೇಬಲ್ ಮಾಡಲು ಕೇಳಲಿದೆ..

999 ರುಪಾಯಿಗೆ ರೆಡ್ಮಿ ನೋಟ್ 5, ರೆಡ್ಮಿ ನೋಟ್ 5 ಪ್ರೋ ಖರೀದಿಸುವುದು ಹೇಗೆ ಗೊತ್ತಾ..?999 ರುಪಾಯಿಗೆ ರೆಡ್ಮಿ ನೋಟ್ 5, ರೆಡ್ಮಿ ನೋಟ್ 5 ಪ್ರೋ ಖರೀದಿಸುವುದು ಹೇಗೆ ಗೊತ್ತಾ..?

Best Mobiles in India

Read more about:
English summary
idea offering free 30GB 4G data to celebrate VoLte launch

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X