Subscribe to Gizbot

ನಷ್ಟದಲ್ಲಿದ್ದರೂ ಕ್ಯಾಷ್ ಬ್ಯಾಕ್ ಆಫರ್ ನೀಡಿದ ಐಡಿಯಾ: ಯಾಕೆ ಕೊಟ್ಟಿದ್ದು..?

Written By:

ಜಿಯೋ ನೀಡುತ್ತಿರುವ ಆಕರ್ಷಕ ಆಫರ್‌ಗಳಿಂದಾಗಿ ನಷ್ಟಕ್ಕೆ ಗುರಿಯಾಗಿರುವ ಟೆಲಿಕಾಂ ಕಂಪನಿಗಳಲ್ಲಿ ಮೊದಲನೇ ಸ್ಥಾನದಲ್ಲಿರುವ ಐಡಿಯಾ ಮತ್ತೊಂಮ್ಮೆ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದ್ದು, ತನಗೆ ಉಂಟಾಗಿರುವ ನಷ್ಟದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ ಮತ್ತು ಹೊಸ ಗ್ರಾಹಕರನ್ನು ಸೆಳೆಯುವ ಸಲುವಾಗಿ ಕಾರ್ಬನ್ ಸ್ಮಾರ್ಟ್‌ಫೋನ್ ಮತ್ತು ಫೀಚರ್ ಫೋನ್‌ಗಳ ಮೇಲೆ ಆಫರ್ ಘೋಷಣೆ ಮಾಡಿದೆ ಎನ್ನಲಾಗಿದೆ.

ನಷ್ಟದಲ್ಲಿದ್ದರೂ ಕ್ಯಾಷ್ ಬ್ಯಾಕ್ ಆಫರ್ ನೀಡಿದ ಐಡಿಯಾ: ಯಾಕೆ ಕೊಟ್ಟಿದ್ದು..?

ಐಡಿಯಾ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿರುವ ಕಾರ್ಬನ್ ಮೊಬೈಲ್ಸ್ ನೊಂದಿಗೆ ಒಪ್ಪಂದನ್ನು ಮಾಡಿಕೊಂಡಿದ್ದು, ಈ ಮೂಲಕ ಕಾರ್ಬನ್ ಬಿಡುಗಡೆ ಮಾಡುವ ಹಲವು ಸ್ಮಾರ್ಟ್‌ಫೋನ್ ಮತ್ತು ಫೀಚರ್ ಫೋನ್‌ ಗಳ ಮೇಲೆ ಕ್ಯಾಷ್ ಬ್ಯಾಕ್ ಆಫರ್ ನೀಡಲು ಮುಂದಾಗಿದೆ. ಈ ಆಫರ್ ಗಳು ಫೆಬ್ರವರಿ 1ನೇ ತಾರೀಖಿನಿಂದ ಜಾರಿಗೆ ಬರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಯಾವ ಸ್ಮಾರ್ಟ್‌ಫೋನ್‌ಗಳ ಮೇಲೆ:

ಯಾವ ಸ್ಮಾರ್ಟ್‌ಫೋನ್‌ಗಳ ಮೇಲೆ:

ಕಾರ್ಬನ್ ಬಿಡುಗಡೆ ಮಾಡಿರುವ ಕಾರ್ಬನ್ A41 ಪವರ್ ಮತ್ತು A9 ಇಂಡಿಯನ್ ಸ್ಮಾರ್ಟ್‌ಫೋನ್‌ಗಳ ಮೇಲೆ ಕ್ಯಾಷ್ ಬ್ಯಾಕ್ ಆಫರ್ ಅನ್ನು ನೀಡಲಿದೆ. ರೂ.2000ದ ವರೆಗೂ ಕ್ಯಾಷ್ ಬ್ಯಾಕ್‌ ನೀಡಲಿದೆ. ಇದಲ್ಲದೇ ಕಾರ್ಬನ್‌ ಯುವ 2, ಕಾರ್ಬನ್ K310n ಮತ್ತು K9 ಜಂಬೋ ಫೀಚರ್ ಫೋನ್‌ಗಳ ಮೇಲೆ ರೂ.1000 ಕ್ಯಾಷ್ ಬ್ಯಾಕ್‌ ನೀಡಲಿದೆ.

ಕಾರ್ಬನ್ ಸ್ಮಾರ್ಟ್‌ಫೋನ್ ಗಳು:

ಕಾರ್ಬನ್ ಸ್ಮಾರ್ಟ್‌ಫೋನ್ ಗಳು:

ಕಾರ್ಬನ್ ಬಿಡುಗಡೆ ಮಾಡಿರುವ ಸ್ಮಾರ್ಟ್‌ಫೋನ್‌ಗಳ ಮೇಲೆ ಐಡಿಯಾ ಕ್ಯಾಷ್ ಬ್ಯಾಕ್ ನೀಡಿದ್ದು, ಕಾರ್ಬನ್ A41 ಪವರ್ ಮತ್ತು ಕಾರ್ಬನ್ A9 ಇಂಡಿಯನ್ ಪೋನ್‌ಗಳ ಮೇಲೆ ಆಫರ್ ನೀಡಲಾಗಿದೆ. ಮೊದಲಿಗೆ ರೂ.500 ಐಡಿಯಾ ಮನಿ ವ್ಯಾಲೆಟಿಗೆ ಬರಲಿದ್ದು, ಇದಾದ 18 ತಿಂಗಳ ನಂತರದಲ್ಲಿ ರೂ.1000 ಕ್ಯಾಚ್ ಬ್ಯಾಕ್ ದೊರೆಯಲಿದ್ದು, 36 ತಿಂಗಳ ಕೊನೆಯಲ್ಲಿ ರೂ.2000 ಕ್ಯಾಷ್ ಬ್ಯಾಕ್ ದೊರೆಯಲಿದೆ.

ಕಾರ್ಬನ್ ಫೀಚರ್ ಫೋನ್:

ಕಾರ್ಬನ್ ಫೀಚರ್ ಫೋನ್:

ಕಾರ್ಬನ್ ಬಿಡುಗಡೆ ಮಾಡಿರುವ ಕಾರ್ನಮ್ K24+ ಮತ್ತು ಕಾರ್ಬನ್ K9 ಜಂಬೋ ಸ್ಮಾರ್ಟ್‌ಫೋನ್ ಮೇಲೆ ರೂ.1000 ಕ್ಯಾಷ್ ಬ್ಯಾಕ್ ದೊರೆಯಲಿದೆ. ಮೊದಲಿಗೆ ರೂ.500 ಐಡಿಯಾ ವ್ಯಾಲೆಟ್ ನೊಂದಿಗೆ ಕಾಣಿಸಿಕೊಳ್ಳಲಿದೆ. ಇದಾದ ನಂತರದಲ್ಲಿ 36 ತಿಂಗಳ ನಂತರ ಉಳಿದ ಹಣವು ದೊರೆಯಲಿದೆ.

ಐಡಿಯಾ ಆಫರ್;

ಐಡಿಯಾ ಆಫರ್;

ಈ ಕ್ಯಾಷ್ ಬ್ಯಾಕ್ ಆಫರ್ ಅನ್ನು ಪಡೆದುಕೊಳ್ಳಲು ಈ ಸ್ಮಾರ್ಟ್‌ಫೋನ್‌ಗಳ ಮೇಲೆ ಐಡಿಯಾ ಆಫರ್ ರಿಚಾರ್ಜ್ ಮಾಡಿಸಿಕೊಳ್ಳಬಹುದಾಗಿದೆ. ಇದಕ್ಕಾಗಿ ಪ್ರತಿ ತಿಂಗಳು ರೂ.169 ಪ್ಲಾನ್ ರೀಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ. ಇದನ್ನು ಮಾಡಿಸದೆ ಇದ್ದರೇ ಕ್ಯಾಷ್ ಬ್ಯಾಕ್ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Idea Offers Up to Rs. 2,000 Cashback on Karbonn. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot