ಜಿಯೋಗೆ ಶಾಕ್ ನಿಂದ ಐಡಿಯಾದಿಂದ ದಿನಕ್ಕೆ 7GB ಡೇಟಾ ಪ್ಲಾನ್..!
ಟೆಲಿಕಾಂ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ದರ ಸಮರಕ್ಕೆ ಐಡಿಯಾ ತುಪ್ಪ ಸುರಿದಿದ್ದು, ದಿನಕ್ಕೆ 5 GB ಮತ್ತು 7GB ಡೇಟಾ ನೀಡುವ ಪ್ಲಾನ್ ಗಳನ್ನು ಘೋಷಣೆ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಜಿಯೋವನ್ನು ಮಣಿಸಲು ಮುಂದಾಗಿದೆ, ಇದರೊಂದಿಗೆ ಮಾರುಕಟ್ಟೆಯಲ್ಲಿ ತಾನು ಕಳೆದುಕೊಂಡಿರುವ ಬಳಕೆದಾರರನ್ನು ಹಿಂದಕ್ಕೆ ಪಡೆದುಕೊಳ್ಳಲು ಈ ಪ್ಲಾನ್‌ಗಳನ್ನು ದಾಳವಾಗಿ ಬಳಕೆ ಮಾಡಿಕೊಳ್ಳುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿ ದಿನಕ್ಕೇ ಒಂದು GB ಡೇಟಾವನ್ನು ಬಳಕೆ ನೀಡುವ ಯಾವುದೇ ಪ್ಲಾನ್‌ಗಳು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿಲ್ಲ. ಈ ಹಿನ್ನಲೆಯಲ್ಲಿ ಎಲ್ಲಾ ಕಂಪನಿಗಳು ದಿನಕ್ಕೆ 1.5GB ಇಲ್ಲವೇ 2GB ಡೇಟಾವನ್ನು ನೀಡುವಂತ ಆಫರ್ ಗಳನ್ನು ಘೋಷಣೆ ಮಾಡುತ್ತಿವೆ, ಈ ಮೂಲಕ ಬಳಕೆದಾರರ ಡೇಟಾ ದಾಹವನ್ನು ತಣಿವು ಕಾರ್ಯವನ್ನು ಮಾಡುತ್ತಿವೆ, ಇದರಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ಐಡಿಯಾ, ದಿನಕ್ಕೆ 5GB ಮತ್ತು 7GB ಹೈಸ್ಪೀಡ್ ಡೇಟಾವನ್ನು ನೀಡುವ ಪ್ಲಾನ್‌ಗಳನ್ನು ಘೋಷಣೆ ಮಾಡಿದೆ.
ಐಡಿಯಾ ರೂ.998 ಪ್ಲಾನ್‌ನಲ್ಲಿ ಬಳಕೆದಾರರಿಗೆ 35 ದಿನಗಳ ವ್ಯಾಲಿಡಿಟಿಯನ್ನು ನೀಡಲಿದ್ದು, ಪ್ರತಿ ನಿತ್ಯ 5GB 4G/2G ಡೇಟಾವನ್ನು ನೀಡಲಿದ್ದು, ಇದರೊಂದಿಗೆ 100 ನಂಬರ್ ಗಳಿಗೆ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ಮಾಡಿಕೊಡಲಿದೆ. ಇದಲ್ಲದೇ ನಿತ್ಯ 100SMS ಕಳುಹಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತಿದೆ.

ಇದೇ ಮಾದರಿಯಲ್ಲಿ ಜಿಯೋ ಸಹ ನಿತ್ಯ 5GB ಡೇಟಾವನ್ನು ನೀಡುವ ಪ್ಲಾನ್ ಅನ್ನು ರೂ.799ಕ್ಕೆ ನೀಡುತ್ತಿದೆ. ಆದರೆ ಇದರ ವ್ಯಾಲಿಡಿಟಿ 28 ದಿನಗಳ ಮಾತ್ರ. ಇದಕ್ಕೆ ಹೊಲಿಸಿಕೊಂಡರೆ ಐಡಿಯಾ ಪ್ಲಾನ್ ಬೆಸ್ಟ್ ಎನ್ನಲಾಗಿದೆ. ಆದರೆ ಜಿಯೋ ಯಾವುದೇ ಮಿತಿ ಇಲ್ಲದೇ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶವನ್ನು ಮಾಡಿಕೊಟ್ಟಿರುವುದು ಹೆಚ್ಚುವರಿಯಾಗಿದೆ.

ಇದಲ್ಲದೇ ನಿತ್ಯ 7GB ಡೇಟಾವನ್ನು ನೀಡುವ ಪ್ಲಾನ್ ಅನ್ನು ಕೆಲವು ಸರ್ಕಲ್‌ಗಳಲ್ಲಿ ಮಾತ್ರವೇ ಐಡಿಯಾ ಲಾಂಚ್ ಮಾಡಿದ್ದು, ರೂ.1298ಕ್ಕೆ 35 ದಿನಗಳಕಾಲ ನಿತ್ಯ 7GB ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿಯೂ ಬಳಕೆದಾರರಿಗೆ ಅನ್‌ಲಿಮಿಟೆಡ್ ಕರೆ ಮಾಡುವ ಅವಕಾಶ ಮತ್ತು ನಿತ್ಯ 100SMS ಕಳುಹಿಸಲು ಅನುವು ಮಾಡಿಕೊಟ್ಟಿದೆ.


Click it and Unblock the Notifications








