Home
ಸುದ್ದಿಜಾಲ

ಜಿಯೋ, ಏರ್‌ಟೆಲ್‌ಗಳನ್ನು ಮಟ್ಟ ಹಾಕಲು ಹುಟ್ಟಿತು ಹೊಸ ಟೆಲಿಕಾಂ ಕಂಪೆನಿ!!

By Bhaskar N J

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿನ ಅತಿದೊಡ್ಡ ವಿಲೀನವಾಗಿರುವ ವೊಡಾಫೋನ್ ಮತ್ತು ಐಡಿಯಾ ವಿಲೀನದ ನಂತರ ನೂತನ ಹೆಸರು ಬದಲಾವಣೆಗೆ ಐಡಿಯಾ ಸಂಸ್ಥೆಯು ಷೇರುದಾರರು ಒಪ್ಪಿಗೆ ನೀಡಿದ್ದಾರೆ. ದೂರಸಂಪರ್ಕ ಇಲಾಖೆ ಕೂಡ ಯೋಜನೆಗೆ ಅಂಕಿತ ಹಾಕಿರುವುದರಿಂದ ಇನ್ನೇನು ಶೀಘ್ರದಲ್ಲಿಯೇ ಹೊಸ ಹೆಸರಿನಲ್ಲಿ ಟೆಲಿಕಾಂ ಕಂಪೆನಿಯೊಂದು ಅಸ್ತಿತ್ವಕ್ಕೆ ಬರುತ್ತಿದೆ.

ಜಿಯೋ ಬಂದ ನಂತರ ಟೆಲಿಕಾಂನಲ್ಲಿ ಆದಂತಹ ಭಾರೀ ಬದಲಾವಣೆಗಳಿಂದ ಒಂದಾಗಿದ್ದ ವೊಡಾಫೋನ್ ಮತ್ತು ಐಡಿಯಾ ಕಂಪೆನಿಗಳು ಈಗ ಒಂದೇ ಕಂಪೆನಿಯಾಗಿ ಬದಲಾಗಿವೆ. ಷೇರು ವಿನಿಮಯ ಕೇಂದ್ರದಲ್ಲಿಯೂ ಹೊಸದಾಗಿ ಕಂಪೆನಿ ಹೆಸರನ್ನು ನಿಡಿರುವುದನ್ನು ಐಡಿಯಾ ಸೆಲ್ಯುಲಾರ್ ಲಿಮಿಟೆಡ್‌ ಕಂಪನಿಯು ದೃಡಪಡಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಜಿಯೋ, ಏರ್‌ಟೆಲ್‌ಗಳನ್ನು ಮಟ್ಟ ಹಾಕಲು ಹುಟ್ಟಿತು ಹೊಸ ಟೆಲಿಕಾಂ ಕಂಪೆನಿ!!

ಭಾರತೀಯ ಟೆಲಿಕಾಂನಲ್ಲಿನ ಈ ದೊಡ್ಡ ವಿಲೀನದಿಂದ ಮೊಬೈಲ್‌ ಬಳಕೆದಾರರ ಸಂಖ್ಯೆ ಮತ್ತು ಆದಾಯಕ್ಕೆ ಸಂಬಂಧಿಸಿದಂತೆ ದೇಶದ ಅತಿದೊಡ್ಡ ಹೊಸ ದೂರಸಂಪರ್ಕ ಸಂಸ್ಥೆಯೊಂದು ಅಸ್ತಿತ್ವಕ್ಕೆ ಬರುತ್ತಿದೆ.! ಹಾಗಾದರೆ, ವೊಡಾಫೋನ್ ಮತ್ತು ಐಡಿಯಾ ವಿಲೀನದ ಹೊಸ ಕಂಪೆನಿಯ ಹೆಸರೇನು? ಟೆಲಿಕಾಂನಲ್ಲಿ ಆಗಬಹುದಾದ ಬದಲಾವಣೆಗಳೇನು ಎಂಬುದನ್ನು ಮುಂದೆ ತಿಳಿಯಿರಿ.

ಹೊಸ ಟೆಲಿಕಾಂ 'ವೊಡಾಫೋನ್ ಐಡಿಯಾ ಲಿಮಿಟೆಡ್'!

ಹೊಸ ಟೆಲಿಕಾಂ 'ವೊಡಾಫೋನ್ ಐಡಿಯಾ ಲಿಮಿಟೆಡ್'!

ಐಡಿಯಾ ಸೆಲ್ಯುಲಾರ್ ಲಿಮಿಟೆಡ್‌ ಕಂಪನಿಯು ವೊಡಾಫೋನ್ ಜತೆ ವಿಲೀನವಾಗುತ್ತಿರುವುದರಿಂದ ನೂತನ ಟೆಲಿಕಾಂ ಹುಟ್ಟಿಕೊಳ್ಳಲಿದೆ. ಕಳೆದ ಕೆಲವು ತಿಂಗಳಿನಿಂದಲೂ ಭಾರೀ ಕುತೋಹಲಕ್ಕೆ ಕಾರಣವಾಗಿದ್ದ ವಿಲೀನ ಟೆಲಿಕಾಂ ಹೆಸರು ಬಹಿರಂಗವಾಗಿದೆ. ನೂತನ ಟೆಲಿಕಾಂ ಹೆಸರು 'ವೊಡಾಫೋನ್ ಐಡಿಯಾ ಲಿಮಿಟೆಡ್' ಎಂದು ಇಡಲಾಗುತ್ತಿದೆ.

ಭಾರತದ ದೊಡ್ಡ ಟೆಲಿಕಾಂ!!

ಭಾರತದ ದೊಡ್ಡ ಟೆಲಿಕಾಂ!!

ಪ್ರಸ್ತುತ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಏರ್‌ಟೆಲ್ ಮೊದಲ ಸ್ಥಾನದಲ್ಲಿದ್ದರೆ, ವೊಡಾಪೋನ್ ಮತ್ತು ಐಡಿಯಾ ಟೆಲಿಕಾಂಗಳು ಎರಡು ಮತ್ತು ಮೂರನೇ ಸ್ಥಾನದಲ್ಲಿ ಮುಂದುವರೆದಿವೆ. ಆದರೆ, ಈ ಒಪ್ಪಂದದಿಂದಾಗಿ ದೇಶದಲ್ಲಿ ಶೇಕಡ 35% ಗ್ರಾಹಕರನ್ನು ಹೊಂದುವ ಮೂಲಕ ಭಾರತೀಯ ಟೆಲಿಕಾಂನಲ್ಲಿ 'ವೊಡಾಫೋನ್ ಐಡಿಯಾ' ಬೃಹತ್ ಟೆಲಿಕಾಂ ಆಗಿ ರೂಪುಗೊಳ್ಳಲಿದೆ.

ಷೇರು ಹಂಚಿಕೆ ಹೇಗಿರುತ್ತದೆ?

ಷೇರು ಹಂಚಿಕೆ ಹೇಗಿರುತ್ತದೆ?

ಈ ವಿಲೀನದಿಂದಾಗಿ ವೊಡಾಫೋನ್‌ಗೆ 82,800 ಕೋಟಿ ಮತ್ತು ಐಡಿಯಾಗೆ 72,200 ಕೋಟಿ ಮೌಲ್ಯ ಸಿಗಲಿದ್ದು,ವಿಲೀನವಾದ ಕಂಪನಿಯಲ್ಲಿ ವೊಡಾಫೋನ್‌ ಶೇ.45.1, ಆದಿತ್ಯ ಬಿರ್ಲಾ ಶೇ.26 ಮತ್ತು ಐಡಿಯಾ ಷೇರುದಾರರು ಶೇ.28.1 ಷೇರುಗಳನ್ನು ಹೊಂದಲಿದ್ದಾರೆ ಎಂದು ವೊಡಾಫೋನ್ ಕಂಪೆನಿಯ ಮೂಲಗಳಿಂದ ಮಾಧ್ಯಮಗಳಿಗೆ ತಿಳಿದುಬಂದಿದೆ.

ನೂತನ ಸಿಇಒ ಯಾರು?

ನೂತನ ಸಿಇಒ ಯಾರು?

23,000 ಕೋಟಿ ಡಾಲರ್‌ ಮೌಲ್ಯದ, ಭಾರತದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿ 'ವೊಡಾಫೋನ್ ಐಡಿಯಾ' ಶೇ.35ರಷ್ಟು ಷೇರು ಮಾರುಕಟ್ಟೆಯನ್ನು ಹೊಂದಲಿದೆ. ಈ ನೂತನ ಟೆಲಿಕಾಂ ಕಂಪೆನಿಗೆ ನೂತನ ಸಿಇಒ ಆಗಿ ಬಾಲೇಶ್ ಶರ್ಮಾ ನೇಮಕವಾಗಿದ್ದಾರೆ. ಕುಮಾರ ಮಂಗಲಂ ಬಿರ್ಲಾ ಅವರು ಕಾರ್ಯಕಾರಿಯೇತರ ಅಧ್ಯಕ್ಷರಾಗಿದ್ದಾರೆ.

ಟೆಲಿಕಾಂನಲ್ಲಿ ಭಾರೀ ಪೈಪೋಟಿ!!

ಟೆಲಿಕಾಂನಲ್ಲಿ ಭಾರೀ ಪೈಪೋಟಿ!!

'ವೊಡಾಫೋನ್ ಐಡಿಯಾ' ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಲಿರುವುದರಿಂದ, ರಿಲಯನ್ಸ್ ಜಿಯೊ, ಭಾರ್ತಿ ಏರ್‌ಟೆಲ್‌ ಮತ್ತು ವೊಡಾಫೋನ್ ಐಡಿಯಾ ನಡುವೆ ಮಾರುಕಟ್ಟೆಯಲ್ಲಿ ಭಾರೀ ಪೈಪೋಟಿ ಉಂಟಾಗಲಿದೆ. ದೇಶದಲ್ಲಿ ಏರ್‌ಟೆಲ್‌ಗಿಂತಲೂ ಹೆಚ್ಚು ನೆಟ್‌ವರ್ಕ್ ಪಡೆಯುವ ಈ ಕಂಪೆನಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಬಹುದು ಎಂಬ ನಿರೀಕ್ಷೆನ್ನು ಹೊಂದಲಾಗಿದೆ.

1,999 ರೂ.ಗಳ ಈ ಸ್ಪೀಕರ್ ನೀರಿನ ಒಳಗೂ ಹಾಡುತ್ತದೆ! Riversong Fusion Speaker
ಕಡಿಮೆ ಬೆಲೆಗೆ ಆಫರ್ಸ್!!

ಕಡಿಮೆ ಬೆಲೆಗೆ ಆಫರ್ಸ್!!

ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಯಾಗಿ 'ವೊಡಾಫೋನ್ ಐಡಿಯಾ' ಹುಟ್ಟುವುದರಿಂದ ಟೆಲಿಕಾಂ ಸೇವೆಯ ದರವೂ ಕಡಿಮೆಯಾಗಲಿದೆ ಎನ್ನಲಾಗಿದೆ. ಜಿಯೋ ನೀಡುತ್ತಿರುವ ಆಫರ್‌ಗಳಿಗಿಂತ ಕಡಿಮೆ ಬೆಲೆಗೆ ಸೇವೆಯನ್ನು ನೀಡುವ ಗುರಿಯನ್ನು 'ವೊಡಾಫೋನ್ ಐಡಿಯಾ' ಕಂಪೆನಿ ಸಿಇಒ ಬಾಲೇಶ್ ಶರ್ಮಾ ಹೊಂದಿದ್ದಾರಂತೆ.

Best Mobiles in India

English summary
the merger of the country’s No 2 and No 3 carriers will create the largest telecom firm in the country, with an almost 42% customer market share and 37% revenue market share. ತto know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+