ಡಿಜಿಟಲ್ ಡಿಎಲ್, ಆರ್‌ಸಿ ದಾಖಲೆ ತೋರಿಸಿದರೂ ಕಿರುಕುಳ: ಪೊಲೀಸರಿಗೆ ಮತ್ತೆ ಶಾಕ್!

|

ಡಿಜಿಟಲ್ ಮಾದರಿ ದಾಖಲೆಗಳನ್ನು ಸಂಚಾರ ಪೊಲೀಸರು ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ತಿರಸ್ಕರಿಸುತ್ತಿರುವುದು ಮತ್ತು ಚಾಲಕರಿಗೆ ಸ್ಮಾರ್ಟ್‌ಕಾರ್ಡ್, ಕಾಗದ ರೂಪದ ದಾಖಲೆ ಸಲ್ಲಿಸಲು ಅಧಿಕಾರಿಗಳು ಕಿರುಕುಳ ನೀಡುತ್ತಿರುವ ಕುರಿತು ಪದೇಪದೆ ದೂರುಗಳು ಸಲ್ಲಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಹೊಸ ಮಾರ್ಗಸೂಚಿ ರೂಪಿಸಿ ಸುತ್ತೋಲೆ ಮೂಲಕ ಸ್ಪಷ್ಟ ಸೂಚನೆ ರವಾನಿಸಿದೆ.

ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ 2018ರ ನ.2 ರಂದು ಅಧಿಸೂಚನೆ ಹೊರಡಿಸಿದಂತೆ, ನೋಂದಣಿ ಪ್ರಮಾಣ ಪತ್ರ (ಆರ್ಸಿ), ಚಾಲನಾ ಪರವಾನಗಿ (ಡಿಎಲ್), ವಿಮೆ, ಫಿಟ್ನೆಸ್ ಪ್ರಮಾಣಪತ್ರ (ಎಫ್ಸಿ), ಪರ್ವಿುಟ್, ವಾಯುಮಾಲಿನ್ಯ ಪ್ರಮಾಣಪತ್ರ ಸೇರಿ ವಾಹನಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಡಿಜಿಟಲ್(ಎಲೆಕ್ಟ್ರಾನಿಕ್) ಮಾದರಿಯಲ್ಲಿ ಸಲ್ಲಿಸಬಹುದು ಎಂದು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಮೂಲಕ ಸಚಿವಾಲಯ ತಿಳಿಸಿದೆ.

ಡಿಜಿಟಲ್ ಡಿಎಲ್, ಆರ್‌ಸಿ ದಾಖಲೆ ತೋರಿಸಿದರೂ ಕಿರುಕುಳ: ಪೊಲೀಸರಿಗೆ ಮತ್ತೆ ಶಾಕ್!

ಡಿ.17ರಂದು ಸಚಿವಾಲಯ ಸುತ್ತೋಲೆ ಮೂಲಕ ಸ್ಪಷ್ಟ ಸೂಚನೆ ರವಾನಿಸಿರುವ ಸಚಿವಾಲಯ, ವಾಹನ ಚಾಲಕರು ಸಲ್ಲಿಸುವ ಡಿಜಿಟಲ್ ಮಾದರಿ ದಾಖಲೆಗಳು ಅಸಲಿಯೋ ನಕಲಿಯೋ ಎಂದು ಪರೀಕ್ಷಿಸಲು ಹಲವು ಮಾರ್ಗಸೂಚಿ (ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್- ಎಸ್ಒಪಿ) ರೂಪಿಸಿದೆ. ಈ ಎಸ್ಒಪಿ ನಿಯಮವನ್ನು ಪಾಲಿಸಲು ಆಯಾ ರಾಜ್ಯದ ಸಾರಿಗೆ ಮತ್ತು ಸಂಚಾರ ಪೊಲೀಸ್ ಪ್ರವರ್ತನ (ಎನ್ಫೋರ್ಸ್ವೆುಂಟ್) ವಿಭಾಗಕ್ಕೆ ಸೂಚಿಸಿದೆ.

ಡಿಜಿಟಲ್ ದಾಖಲೆ ಸಮಾನ

ಡಿಜಿಟಲ್ ದಾಖಲೆ ಸಮಾನ

ಸ್ಮಾರ್ಟ್ಕಾರ್ಡ್ ಅಥವಾ ಕಾಗದ ರೂಪದ ದಾಖಲೆಗಳಿಗೆ ಡಿಜಿಟಲ್ ದಾಖಲೆ ಸಮಾನ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಮಾಹಿತಿ ತಂತ್ರಜ್ಞಾನ ಕಾಯಿದೆ 2000ರ ಅನ್ವಯವೂ ಡಿಜಿಟಲ್ ದಾಖಲೆಗಳು ಅಧಿಕೃತ ಎಂದು ತಿಳಿಸಲಾಗಿದೆ. ಡಿಜಿಟಲ್ ದಾಖಲೆಗೆ ಮಾನ್ಯತೆ ನೀಡಿರುವ ಕುರಿತು ಎನ್ಫೋರ್ಸ್ವೆುಂಟ್ ವಿಭಾಗದ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ಹಾಗೂ ತಿಳಿವಳಿಕೆ ನೀಡಲು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಎರಡು ಆಪ್‌ಗಳಲ್ಲಿ ಅಧಿಕೃತ!

ಎರಡು ಆಪ್‌ಗಳಲ್ಲಿ ಅಧಿಕೃತ!

ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಡಿಜಿಲಾಕರ್ ಮತ್ತು ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯದ ಎಂಪರಿವಾಹನ್ ಎಂಬ ಎರಡು ಆಪ್‌ಗಳಲ್ಲಿ ಇರುವ ಎಲ್ಲ ಡಿಜಿಟಲ್ ದಾಖಲೆಗಳು ಅಧಿಕೃತ ಎಂದು ತಿಳಿಸಿದೆ.ವಾಹನ ಚಾಲಕರು ಫೋನಿನಲ್ಲಿ ಯಾವುದಾದರೂ ಒಂದು ಆಪ್ ಡೌನ್ಲೋಡ್ ಮಾಡಿಕೊಂಡು ಎಲ್ಲ ಡಿಜಿಟಲ್ ದಾಖಲೆ ಪಡೆಯಬಹುದಾಗಿದೆ. ಈ ಎರಡು ಆಪ್‌ಗಳ ಮೂಲಕ ಡಿಜಿಟಲ್ ದಾಖಲೆಗಳನ್ನು ಬಳಕೆ ಮಾಡಬಹುದಾಗಿದೆ.

ಎಸ್ಒಪಿಯಲ್ಲಿ ಏನಿದೆ?

ಎಸ್ಒಪಿಯಲ್ಲಿ ಏನಿದೆ?

ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ಸುತ್ತೋಲೆ ಹೊರಡಿಸಿರುವಂತೆ, ಚಾಲಕರು ಡಿಜಿಲಾಕರ್ ಅಥವಾ ಎಂ-ಪರಿವಾಹನ್ ಆಪ್ ಮುಖಾಂತರ ದಾಖಲೆ ಸಲ್ಲಿಸಬಹುದಾಗಿದೆ. ಆಪ್ ಮೂಲಕ ನೋಂದಣಿ ಪ್ರಮಾಣ ಪತ್ರ (ಆರ್ಸಿ), ಚಾಲನಾ ಪರವಾನಗಿ (ಡಿಎಲ್), ಸಿ ಡೌನ್ಲೋಡ್ ಮಾಡಿಕೊಂಡು, ಮೊಬೈಲ್ನಲ್ಲಿ ಇಟ್ಟುಕೊಳ್ಳಬಹುದು. ಇದನ್ನು ಅಧಿಕಾರಿಗಳು ಸ್ಕ್ಯಾನ್ ಮಾಡುವ ಮೂಲಕ ಅಧಿಕೃತ ದಾಖಲೆಗಳೇ ಎಂಬುದನ್ನು ಪರಿಶೀಲಿಸಬಹುದು ಎಂದು ತಿಳಿಸಲಾಗಿದೆ.

ನಕಲಿ ದಾಖಲೆಗಳಿಗೆ ಬ್ರೇಕ್!

ನಕಲಿ ದಾಖಲೆಗಳಿಗೆ ಬ್ರೇಕ್!

ಇನ್ನು ವಾಹನ ಸವಾರರು ತೋರಿಸುವ ಡಿಜಿಟಲ್ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುವ ಸುಲಭ ಆಯ್ಕೆಯನ್ನು ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವಾಲಯ ತಿಳಿಸಿದೆ. ಯಾವ ಅಧಿಕಾರಿಯಾದರೂ ಸಾಮಾನ್ಯ ಆಂಡ್ರಾಯ್ಡ್ ಮೊಬೈಲ್ ಮೂಲಕ ಇ-ಚಲನ್ ಆಪ್ ಹಾಕಿಕೊಂಡು ದಾಖಲೆಗಳನ್ನು ಚೆಕ್ ಮಾಡಬಹುದಾಗಿದೆ. ಈ ಆಪ್ ಮೂಲಕ ಡಿಜಿಲಾಕರ್ ಮತ್ತು ಎಂಪರಿವಾಹನ್ ಆಪ್ನಲ್ಲಿರುವ ಕ್ಯೂಆರ್ ಕೋಡ್ಗಳನ್ನು ಸ್ಕ್ಯಾನ್ ಮಾಡಿದ ಸಂದರ್ಭದಲ್ಲಿ ನಕಲಿ ದಾಖಲೆಗಳು ದೊರೆಯುವುದಿಲ್ಲ.

ಏನಿದು ಡಿಜಿಲಾಕರ್?

ಏನಿದು ಡಿಜಿಲಾಕರ್?

ಸಾರಿಗೆ ಇಲಾಖೆಯು ವಾಹನ ಸವಾರರ ಸಹಾಯಕ್ಕೆ ಲಾಂಚ್ ಮಾಡಿರುವ ಹೊಸ ಯೋಜನೆಯೇ ಡಿಜಿ ಲಾಕರ್. ಕೋಟಿ ಸಂಖ್ಯೆಯಲ್ಲಿ ವಾಹನಗಳು ಮತ್ತು ವಾಹನ ಸವಾರರು ಈ ಡಿಜಿ ಲಾಕರ್ ಆಪ್ ಲಾಭವನ್ನು ಪಡೆಯಬಹುದಾಗಿದೆ. ಸಂಚಾರಿ ಪೊಲೀಸರು ವಾಹನ ತಪಾಸಣೆ ಮಾಡುವ ಸಂದರ್ಭದಲ್ಲಿ ಅಧಿಕೃತ ಪ್ರಮಾಣ ಪತ್ರಗಳನ್ನು ತೋರಿಸುವ ಬದಲು ಅದರ ಸಾಫ್ಟ್ ಕಾಪಿಯನ್ನು (ಡಿಜಿಟಲ್ ರೂಪ) ತೋರಿಸುವ ಆಪ್ ಇದಾಗಿದೆ.

ದಾಖಲೆಗಳನ್ನು ಸ್ಟೋರ್ ಮಾಡಿಕೊಳ್ಳಬಹುದು!

ದಾಖಲೆಗಳನ್ನು ಸ್ಟೋರ್ ಮಾಡಿಕೊಳ್ಳಬಹುದು!

ವಾಹನದ ಮತ್ತು ಚಾಲನೆಯ ದಾಖಲೆಗಳು ಮತ್ತು ಪ್ರಮಾಣಪತ್ರಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವ ಆಪ್ ಇದಾಗಿದ್ದು, ಸ್ಮಾರ್ಟ್‌ಫೋನ್‌ಗಳಲ್ಲಿ ಇದನ್ನು ಬಳಕೆ ಮಾಡಿಕೊಂಡರೆ ಓರ್ಜಿನಲ್ ದಾಖಲೆಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳುವ ಅಗತ್ಯತೆ ಇರುವುದಿಲ್ಲ. ಮೊಬೈಲ್‌ ನಲ್ಲಿಯೇ ಎಲ್ಲಾ ದಾಖಲೆಗಳನ್ನು ಸ್ಟೋರ್ ಮಾಡಿಕೊಳ್ಳಬಹುದಾಗಿದೆ. ಪೊಲೀಸರು ಕೇಳಿದ ಸಂದರ್ಭದಲ್ಲಿ ಪ್ರದರ್ಶಿಸಬಹುದಾಗಿದೆ.

ಡಿಜಿ ಲಾಕರ್ ಬಳಸುವುದು ಸುಲಭ

ಡಿಜಿ ಲಾಕರ್ ಬಳಸುವುದು ಸುಲಭ

ವಾಹನ ಸವಾರರು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ Digilocker ಆಪ್‌ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಈ ಆಪ್ ಬಳಕೆ ಮಾಡಿಕೊಳ್ಳುವ ಸಲುವಾಗಿ ಯಾವುದೇ ಹಣವನ್ನು ಪಾವತಿ ಮಾಡುವ ಅಗತ್ಯತೆ ಇಲ್ಲ ಎನ್ನಲಾಗಿದೆ. ಇದೊಂದು ಉಚಿತ ಸೇವೆಯಾಗಿದೆ. ಸ್ಮಾರ್ಟ್‌ಫೋನ್‌ ಇರವವರು ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

ರಿಜಿಸ್ಟರ್ ಮಾಡಿಕೊಳ್ಳಬೇಕು

ರಿಜಿಸ್ಟರ್ ಮಾಡಿಕೊಳ್ಳಬೇಕು

ಪ್ಲೇಸ್ಟೋರಿನಿಂದ ಡೌನ್‌ಲೋಡ್ ಮಾಡಿಕೊಂಡ ನಂತರ ಸ್ಮಾರ್ಟ್‌ಫೋನಿನಲ್ಲಿ ಇನ್ಸ್‌ಸ್ಟಾಲ್ ಮಾಡಬೇಕಾಗಿದೆ. ನಂತರ ಆಪ್ ತೆರೆದು ಮೊಬೈಲ್‌ ಸಂಖ್ಯೆ ಬಳಸಿ ಲಾಗ್‌- ಇನ್‌ ಆಗಬೇಕು. ನಂತರ ಕಡ್ಡಾಯವಾಗಿ ಆಧಾರ್‌ ಸಂಖ್ಯೆಯನ್ನು ನಮೂದಿಸಬೇಕು. ತದನಂತರ ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯನ್ನು ಆಯ್ಕೆ ಮಾಡಿಕೊಂಡು, ಅಲ್ಲಿ ನಿರ್ದಿಷ್ಟ ಹೆಸರಿನಲ್ಲಿ ದಾಖಲೆಗಳನ್ನು ಸೇವ್‌ ಮಾಡಬಹುದಾಗಿದೆ.

ಬೇರೆಯವರ ಗಾಡಿ ಓಡಿಸಿದರು ಚಿಂತೆ ಇಲ್ಲ

ಬೇರೆಯವರ ಗಾಡಿ ಓಡಿಸಿದರು ಚಿಂತೆ ಇಲ್ಲ

ನೀವು ಬೇರೆ ಯಾರದ್ದರೂ ವಾಹನವನ್ನು ಓಡಿಸುತ್ತಿರುವ ಸಂಧರ್ಭದಲ್ಲಿ ಪೊಲೀಸರು ತಪಾಸಣೆಗೆ ಮುಂದಾದ ಸಂದರ್ಭದಲ್ಲಿ ವಾಹನ ಮಾಲೀಕರ ಆರ್‌ಸಿ ಸಂಖ್ಯೆಯನ್ನು ತಿಳಿಸಿದರೂ ಸಾಕು. ಆದರೆ ವಾಹನದ ಮಾಲೀಕರು ಡಿಜಿ ಲಾಕರ್ ಬಳಕೆ ಮಾಡಿಕೊಳ್ಳುತ್ತಿರಬೇಕು.

ಈ ಆಪ್ ಉಪಯೋಗಗಳೇನು?

ಈ ಆಪ್ ಉಪಯೋಗಗಳೇನು?

ಈ ಆಪ್ ಬಳಕೆಯಿಂದಾಗಿ ಡಿಜಿಟಲ್ ಮಾದರಿಯಲ್ಲಿ ದಾಖಲೆಗಳು ಸುಲಭವಾಗಿ ಲಭ್ಯವಾಗಲಿದ್ದು, ಓರ್ಜಿನಲ್ ದಾಖಲೆ ಕಳೆದುಹೋಗುವ ಭಯವಿಲ್ಲ, ಇದಲ್ಲದೇ ಇ-ಆಧಾರ್ ಡಿಜಿಲಾಕರ್ನಲ್ಲೇ ಸಿಗಲಿದೆ. ಹೀಗಾಗಿ ಈ ಆಪ್ ಬಳಕೆಯೂ ಸಾಕಷ್ಟು ಸಹಾಯವನ್ನು ಮಾಡುತ್ತದೆ.

ಅನಾನುಕೂಲಗಳೇನು

ಅನಾನುಕೂಲಗಳೇನು

ವಾಹನ ಸವಾರರು ಈ ಡಿಜಿ ಲಾಕ್ ಸೇವಯನ್ನು ಬಳಕೆ ಮಾಡಿಕೊಳ್ಳಲು ಸ್ಮಾರ್ಟ್ ಫೋನ್ ಬೇಕಾಗಿದ್ದು, ಸಾಮಾನ್ಯ ಫೋನಿನಲ್ಲಿ ಬಳಕೆಯೂ ಸಾಧ್ಯವಿಲ್ಲ. ಇದಲ್ಲದೇ ಈ ಆಪ್ ಕಾರ್ಯನಿರ್ವಹಿಸಲು ಇಂಟರ್ನೆಟ್ ಬೇಕು. ಇದಲ್ಲದೇ ಆಧಾರ್ ಕಾರ್ಡ್ ಮಾಡಿಸದೆ ಹೋದರೆ ಈ ಆಪ್ ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ.

Best Mobiles in India

English summary
It is not entirely clear whether Mr Shah showed a regular scan copy of the license or one stored in the M-parivahan app or Digilocker app. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X