Home
ಸುದ್ದಿಜಾಲ

ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಹಣ ಉಳಿಸಬೇಕೆ? ಗೂಗಲ್‌ನ ಈ ಫೀಚರ್ಸ್‌ ಫಾಲೋ ಮಾಡಿ!

ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡುವ ಮುನ್ನ ಗೂಗಲ್‌ನ ಸಹಾಯ ಪಡೆದುಕೊಳ್ಳುವುದು ಸೂಕ್ತವಾಗಿದೆ. ಗೂಗಲ್‌ ಆನ್‌ಲೈನ್‌ ಶಾಪಿಂಗ್‌ ಅನ್ನು ಸುಲಭಗೊಳಿಸಲಿದೆ. ನೀವು ಮನೆಯಲ್ಲಿಯೇ ಕುಳಿತು ನಿಮಗೆ ಬೇಕಾದ ಉತ್ಪನ್ನ ಕ್ಯಾಟಲಾಗ್‌ಗಳನ್ನು ಬ್ರೌಸ್ ಮಾಡುವುದಕ್ಕೆ ಗೂಗಲ್‌ ಸಹಾಯ ಮಾಡಲಿದೆ.

ಹೌದು, ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ನಿಮಗೆ ಯಾವ ಸೈಟ್‌ನಲ್ಲಿ ಹೆಚ್ಚಿನ ರಿಯಾಯಿತಿಯಿದೆ. ಯಾವ ಪ್ರಾಡಕ್ಟ್‌ಗಳಿಗೆ ಹೆಚ್ಚಿನ ಡಿಸ್ಕೌಂಟ್‌ ಇದೆ ಅಂತಾ ತಿಳಿಯೋದಕ್ಕೆ ಗೂಗಲ್‌ ಸಹಾಯ ಮಾಡಲಿದೆ. ಇದು ಆನ್‌ಲೈನ್‌ನಲ್ಲಿ ಉತ್ತಮ ರಿಯಾಯಿತಿ ಡೀಲ್‌ಗಳನ್ನು ಹುಡುಕುತ್ತಿದೆ. ಹಾಗಾದ್ರೆ ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ನೀವು ಯಾಕೆ ಗೂಗಲ್‌ ಬಳಸಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಹಣ ಉಳಿಸಬೇಕೆ? ಗೂಗಲ್‌ನ ಈ ಫೀಚರ್ಸ್‌ ಫಾಲೋ ಮಾಡಿ!

ಆನ್‌ಲೈನ್ ಶಾಪಿಂಗ್ ಸುಲಭಗೊಳಿಸಲಿದೆ ಗೂಗಲ್‌!
ಗೂಗಲ್‌ ತನ್ನ ಬ್ಲಾಗ್‌ಪೋಸ್ಟ್‌ಗಳಲ್ಲಿ ವಿವಿಧ ಬ್ರಾಂಡ್‌ಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಲಭ್ಯವಾಗುತ್ತಿರುವ ರಿಯಾಯಿತಿಯ ಡೀಲ್‌ಗಳನ್ನು ಪ್ರತಿಬಿಂಬಿಸುವ ಪೇಜ್‌ ಅನ್ನು ಅನಾವರಣಗೊಳಿಸುತ್ತಿದೆ. ಇದರಿಂದ ನೀವು ಎಲ್ಲಾ ಡೀಲ್‌ಗಳನ್ನು ಒಂದೇ ಸ್ಥಳದಲ್ಲಿ ನೋಡಬಹುದು, ಅಲ್ಲದೆ ಒಂದಕ್ಕೊಂದು ಹೋಲಿಕೆ ಮಾಡಿ ಯಾವ ಸೈಟ್‌ನಲ್ಲಿ ನಿಮಗೆ ಅಗತ್ಯವಾದ ಪ್ರಾಡಕ್ಟ್‌ಗೆ ಹೆಚ್ಚಿನ ರಿಯಾಯಿತಿ ಲಭ್ಯವಿದೆ ಅನ್ನೊದನ್ನ ಆರಿಸಿಕೊಳ್ಳಬಹುದು.

ಗೂಗಲ್‌ನ ಮೀಸಲಾದ ಡೀಲ್‌ಗಳ ಪೇಜ್‌ ಇದೀಗ ಸಾವಿರಾರು ಬ್ರ್ಯಾಂಡ್‌ಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಒಂದೇ ಸ್ಥಳದಲ್ಲಿ ಲಕ್ಷಾಂತರ ಪ್ರಮೋಷನ್‌ಗಳನ್ನು ಆಯೋಜಿಸುತ್ತಿದೆ. ಇದರಿಂದ ಕ್ರೋಮ್‌ ಸರ್ಚ್‌ನಲ್ಲಿನ ಹೊಸ ಫೀಚರ್ಸ್‌ಗಳು ಬೆಲೆಗಳ ಮೇಲೆ ಸುಲಭವಾಗಿ ಕಣ್ಣಾಡಿಸಲು ಸಹಾಯ ಮಾಡಲಿದೆ. ಪ್ರತಿಯೊಂದ ಪ್ರಾಡಕ್ಟ್‌ಗೂ ವಿಶೇಷ ರಿಯಾಯಿತಿ ಎಲ್ಲಿದೆ ಅಂತಾ ಹಲವಾರು ಸೈಟ್‌ಗಳನ್ನು ಸರ್ಚ್‌ ಮಾಡುವುದಕ್ಕಿಂತ ಒಂದೇ ವೇದಿಕೆಯಲ್ಲಿ ಸರ್ಚ್‌ ಮಾಡಿ ಉತ್ತರ ಪಡೆದುಕೊಳ್ಳುವುದು ಸೂಕ್ತವಾಗಿದೆ.

ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಹಣ ಉಳಿಸಬೇಕೆ? ಗೂಗಲ್‌ನ ಈ ಫೀಚರ್ಸ್‌ ಫಾಲೋ ಮಾಡಿ!

ಹೇಗಿದೆ ಗೂಗಲ್‌ನ ಹೊಸ ಪೇಜ್‌!
ಗೂಗಲ್‌ನ ಹೊಸ ಪೇಜ್‌ನಲ್ಲಿ ಅಂಗಡಿಗಳು, ಬ್ರ್ಯಾಂಡ್‌ಗಳು, ಐಷಾರಾಮಿ ಚಿಲ್ಲರೆ ವ್ಯಾಪಾರಿಗಳು ಸೇರಿದಂತೆ ವಿವಿಧ ಮಾರಾಟಗಾರರಿಂದ ಲಭ್ಯವಾಗುವ ಪ್ರಾಡಕ್ಟ್‌ಗಳ ಬಗ್ಗೆ ವಿವರವಿದೆ. ಇದರಲ್ಲಿ ಉಡುಪುಗಳು, ಎಲೆಕ್ಟ್ರಾನಿಕ್ಸ್, ಆಟಿಕೆಗಳು ಮತ್ತು ಸೌಂದರ್ಯದಂತಹ ವಿವಿಧ ವಿಭಾಗಗಳಿಂದ ಲಭ್ಯವಾಗುತ್ತಿರುವ ಡೀಲ್‌ಗಳನ್ನು ಡಿಸ್‌ಪ್ಲೇ ಮಾಡಲಾಗುವುದು ಎಂದು ಗೂಗಲ್‌ ತನ್ನ ಪೋಸ್ಟ್‌ನಲ್ಲಿ ತಿಳಿಸಿದೆ. ನೀವು ವಿವಿಧ ವರ್ಗಗಳ ಆಧಾರದ ಮೇಲೆ ನಿಮಗೆ ಬೇಕಾದ ಡೀಲ್‌ಗಳನ್ನು ವಿಂಗಡಿಸಬಹುದಾಗಿದೆ.

ಹೊಸ ಪೇಜ್‌ ಅನ್ನು ಪ್ರವೇಶಿಸಲು, ನೀವು ಗೂಗಲ್‌ ಸರ್ಚ್‌ನಲ್ಲಿ "ಶಾಪ್ ಡೀಲ್ಸ್‌" ಎಂದು ಟೈಪ್ ಮಾಡಬೇಕು. ನಂತರ ಹೊಸ ಡೀಲ್‌ಗಳ ಪೇಜ್‌ ಎಲ್ಲಾ ಉತ್ಪನ್ನಗಳನ್ನು ಪ್ರದರ್ಶಿಸುತ್ತದೆ. ಇದರಲ್ಲಿ ನೀವು ನಿರ್ದಿಷ್ಟವಾಗಿ ಏನನ್ನಾದರೂ ಹುಡುಕಲು ಬಯಸಿದರೆ, ಸ್ಟೋರ್ಸ್‌ ಪಕ್ಕದಲ್ಲಿರುವ ಪದವನ್ನು ಸೇರಿಸಿದರೆ ನಿಮಗೆ ರಿಯಾಯಿತಿಗಳ ಮಾಹಿತಿ ಲಭ್ಯವಾಗಲಿದೆ.

ಆನ್‌ಲೈನ್‌ ಶಾಪಿಂಗ್‌ ಮಾಡುವಾಗ ಹಣ ಉಳಿಸಬೇಕೆ? ಗೂಗಲ್‌ನ ಈ ಫೀಚರ್ಸ್‌ ಫಾಲೋ ಮಾಡಿ!

ಇನ್ನು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ ಹೆಚ್ಚಿನ ಹಣವನ್ನು ಸೇವ್‌ ಮಾಡುವುದಕ್ಕಾಗಿ ಬಳಕೆದಾರರು ರಿಯಾಯಿತಿ ಕೋಡ್‌ಗಳನ್ನು ಹುಡುಕಬಹುದು ಎಂದು ಗೂಗಲ್ ಹೇಳಿದೆ. ಅದರಂತೆ ನೀವು ಡೆಸ್ಕ್‌ಟಾಪ್‌ನಲ್ಲಿ ಕ್ರೋಮ್‌ ಟ್ಯಾಬ್ ಅನ್ನು ತೆರೆದಾಗ, ನಿಮ್ಮ "ಬ್ರೌಸಿಂಗ್ ಪುನರಾರಂಭ" ಕಾರ್ಡ್‌ನಲ್ಲಿ ನೀವು ಇತ್ತೀಚೆಗೆ ಶಾಪಿಂಗ್ ಸೈಟ್‌ಗಳಲ್ಲಿ ವೀಕ್ಷಿಸಿದ ಉತ್ಪನ್ನಗಳನ್ನು ಕಾಣಬಹುದಾಗಿದೆ. ಇದರಲ್ಲಿ ಆಕ್ಟಿವ್‌ ಪ್ರಮೋಷನ್‌ ಲಭ್ಯವಿದೆಯೇ ಅನ್ನೊದು ತಿಳಿಯಲಿದೆ. ಅಲ್ಲದೆ ನೀವು ಭೇಟಿ ನೀಡುತ್ತಿರುವ ಸೈಟ್‌ನಿಂದ ಲಭ್ಯವಿರುವ ಕೂಪನ್ ಕೋಡ್‌ಗಳನ್ನು ನೋಡಲು ಕ್ರೋಮ್‌ ಅಡ್ರೆಸ್‌ ಬಾರ್‌ನಲ್ಲಿರುವ ಡಿಸ್ಕೌಂಟ್‌ ಟ್ಯಾಗ್ ಐಕಾನ್ ಅನ್ನು ಕ್ಲಿಕ್ ಮಾಡಬಹುದಾಗಿದೆ.

ಅಂದರೆ ನಿಮ್ಮ ಡೆಸ್ಕ್‌ಟಾಪ್‌ನಲ್ಲಿ ಕ್ರೋಮ್‌ ಟ್ಯಾಬ್‌ ಅನ್ನು ತೆರೆದರೆ ನೀವು ಶಾಪಿಂಗ್ ಸೈಟ್‌ಗಳಲ್ಲಿ ಇತ್ತೀಚೆಗೆ ವೀಕ್ಷಿಸಿದ ಉತ್ಪನ್ನಗಳನ್ನು ಪ್ರದರ್ಶಿಸುವ ಬ್ರೌಸಿಂಗ್ ಅನ್ನು ಪುನರಾರಂಭಿಸಿ ಕಾರ್ಡ್‌ ಅನ್ನು ಕಾಣಬಹುದು. ಇದರಿಂದ ನೀವು ಬ್ರೌಸ್‌ ಮಾಡಿದ ಸೈಟ್‌ ಅನ್ನು ಮತ್ತೆ ತೆರೆಯುವುದಕ್ಕೆ ಸಾಧ್ಯವಾಗಲಿದೆ. ಜೊತೆಗೆ ನೀವು ಇತ್ತೀಚೆಗೆ ವೀಕ್ಷಿಸಿದ ಯಾವುದೇ ಉತ್ಪನ್ನಗಳಿಗೆ ಸಕ್ರಿಯ ಪ್ರಚಾರವು ಲಭ್ಯವಿದ್ದರೆ "ರೆಸ್ಯೂಮ್ ಬ್ರೌಸಿಂಗ್" ಕಾರ್ಡ್ ನಿಮಗೆ ತಿಳಿಸುತ್ತದೆ.

Best Mobiles in India

English summary
if you are shopping online! use this Google feature to save money: Details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+