ಜಿಯೋ ಸಿಮ್ ಉಚಿತವಾಗಿ ಬೇಕಿದ್ದರೆ ಕ್ಯೂನಲ್ಲಿ ನಿಲ್ಲಿ, ಇಲ್ಲವೇ ಪಾವತಿಸಿ
ರಿಲಾಯನ್ಸ್ ಜಿಯೋ ಈಗ ಸದ್ಯದ ಭಾರತದಲ್ಲಿ ಸದ್ದು ಮಾಡುತ್ತಿದೆ. ಅಧಿಕೃತವಾಗಿ ಲಾಂಚ್ ಆಗುವ ಮುನ್ನವೇ ತನ್ನ ಪ್ರಿವ್ಯೂ ಆಫರ್‌ನಲ್ಲಿ ಸಾಕಷ್ಟು ಯೋಜನೆಗಳನ್ನು ಬಳಕೆದಾರರಿಗೆ ಉಣಬಡಿಸಿರುವ ನೆಟ್‌ವರ್ಕ್ ಸಂಸ್ಥೆ ಬಳಕೆದಾರರನ್ನು ಪ್ರಬಲವಾಗಿಯೇ ಹಿಡಿದಿಟ್ಟುಕೊಂಡಿದೆ. ಮೂರು ತಿಂಗಳ ಉಚಿತ ಇಂಟರ್ನೆಟ್ ಆಫರ್, ಕರೆ, ಎಸ್‌ಎಮ್‌ಎಸ್ ಹೀಗೆ ಪ್ರತಿಯೊಬ್ಬ ಫೋನ್ ಪ್ರೇಮಿ ಆಗ್ರಹಿಸಿರುವಂತಹ ಯೋಜನೆಗಳನ್ನೇ ರಿಲಾಯನ್ಸ್ ಬಳಕೆದಾರರಿಗೆ ನೀಡಲಿದೆ.
ಓದಿರಿ: ರಿಲಾಯನ್ಸ್ ಜಿಯೋ 4G, ಸಿಮ್ ಉಚಿತದ ಬಗ್ಗೆ ತಿಳಿಯಲೇಬೇಕಾದ 5 ಮಾಹಿತಿಗಳು
ಪ್ರಸ್ತುತ 4ಜಿ ಸಕ್ರಿಯವಾಗಿರುವ ಎಲ್ಲಾ ಫೋನ್‌ಗಳಲ್ಲಿ ಜಿಯೋ ಸಕ್ರಿಯವಾಗಿದ್ದು ಬಳಕೆದಾರರಿಗೆ ಇದು ಹಬ್ಬದ ಅವಸರವಾಗಿದೆ ಎಂಬುದಂತೂ ಸತ್ಯ. ರಿಲಾಯನ್ಸ್ ಡಿಜಿಟಲ್ ಸ್ಟೋರ್‌ಗಳಲ್ಲಿ ಮತ್ತು ರಿಲಾಯನ್ಸ್ ಡಿಜಿಟಲ್ ಎಕ್ಸ್‌ಪ್ರೆಸ್ ಮಿನಿ ಮಾಲ್‌ಗಳ ಎದುರಿಗೆ ಜನರು ಸಾಲುಗಟ್ಟಿನಿಂತು ಸಿಮ್ ಅನ್ನು ತಮ್ಮದಾಗಿಸಿಕೊಳ್ಳುವ ತುಡಿತದಲ್ಲಿದ್ದಾರೆ.

ವಾರಗಟ್ಟಲೆ ಸಾಲು
ದೆಹಲಿ, ಬೆಂಗಳೂರಿನ ಡಿಜಿಟಲ್ ಎಕ್ಸ್‌ಪ್ರೆಸ್ ಮಿನಿ ಸ್ಟೋರ್‌ಗಳಲ್ಲಿ 7-10 ದಿನಗಳ ಕಾಲ ಸುದೀರ್ಘವಾಗಿ ಸಿಮ್‌ಗಾಗಿ ಜನ ಕಾಯುತ್ತಿದ್ದಾರೆ. ನಿಮಗೆ ಜಿಯೋ ಸಿಮ್ ಬೇಕಾದಲ್ಲಿ, ನಿಮ್ಮ ಹೆಸರು, ಸಂಖ್ಯೆ ಮತ್ತು ಫೋನ್ ವಿವರವನ್ನು ರಿಜಿಸ್ಟರ್‌ನಲ್ಲಿ ಪಟ್ಟಿ ಮಾಡಿ ಎಂಬುದಾಗಿ ಸ್ಟೋರ್‌ನ ಮಾಲೀಕರು ಗ್ರಾಹಕರಲ್ಲಿ ವಿನಂತಿಸಿಕೊಂಡಿದ್ದಾರೆ.

ಕೆವೈಸಿ ದಾಖಲೆ
ಸಿಮ್‌ಗಾಗಿ ನಿಮ್ಮ ಹೆಸರು ಬಂದೊಡನೆ ನಿಮಗೆ ಕರೆಮಾಡುತ್ತೇವೆ ಮತ್ತು ನಿಮ್ಮ ಕೆವೈಸಿ ದಾಖಲೆಗಳನ್ನು ತೆಗೆದುಕೊಂಡು ಬಂದು ಸಿಮ್‌ಗಳನ್ನು ಖರೀದಿಸಿ ಎಂಬುದಾಗಿ ಇವರು ತಿಳಿಸುತ್ತಿದ್ದಾರೆ.

40-50 ಬಾಕಿಯಾಗಿರುವ ಕೋರಿಕೆ
ಸಿಮ್‌ಗಾಗಿ ಜನರು ಹೇಗೆ ಸಾಲುಗಟ್ಟಿ ನಿಂತಿದ್ದಾರೆ ಎಂದರೆ, ಒಂದು ರೀತಿಯ ನೂಕು ನುಗ್ಗಲು ಸಂಭವಿಸಿದೆ. ಸಿಮ್ ಪ್ರಕ್ರಿಯೆಗೆ ಬಹಳಷ್ಟು ಸಮಯ ತೆಗೆದುಕೊಳ್ಳುತ್ತಿದ್ದು, ದಿನದಲ್ಲಿ 40-50 ಬಾಕಿಯಾಗಿರುವ ಕೋರಿಕೆಗಳು ಬಂದಿವೆ. ನಿಮ್ಮ ಸಂಖ್ಯೆಯನ್ನು ನೀವು ನೀಡಿದಲ್ಲಿ, ವಾರದಲ್ಲಿ ನಾವು ನಿಮಗೆ ಕರೆಮಾಡುತ್ತೇವೆ ಎಂಬುದಾಗಿ ಮಾಲೀಕರು ತಿಳಿಸಿದ್ದಾರೆ.

ಒಂದೆರಡು ಗಂಟೆ ಕಾಯಬೇಕಾಗುತ್ತದೆ
ದಾಖಲೆಗಳನ್ನು ಬಳಕೆದಾರರಿಂದ ಸಂಗ್ರಹಿಸಿದ ನಂತರ ಅದನ್ನು ಸ್ಕ್ಯಾನ್ ಮಾಡಿ ಜಿಯೋ ಕಚೇರಿಗೆ ಕೂಡಲೇ ಕಳುಹಿಸಬೇಕು. ಇದಕ್ಕಾಗಿ ಬಳಕೆದಾರರು ಒಂದೆರಡು ಗಂಟೆ ಕಾಯಬೇಕಾಗುತ್ತದೆ.

ಅತಿಯಾದ ಬೇಡಿಕೆ
ಗ್ರಾಹಕರು ಸಿಮ್‌ಗಾಗಿ ಅತಿಯಾದ ಬೇಡಿಕೆಯನ್ನು ಇರಿಸುತ್ತಿದ್ದು ಇದರಿಂದ ಪ್ರಕ್ರಿಯೆಗಳು ನಿಧಾನಗತಿಯಲ್ಲಿ ನಡೆಯುತ್ತಿದೆ.

ಉಚಿತ ಸಿಮ್ ಬದಲಿಗೆ ಪಾವತಿ ಮಾಡಿ
ಜಿಯೋ ಸಿಮ್ ನಿಮಗೆ ಬೇಕು ಎಂದಾದಲ್ಲಿ ಫೋನ್ ಅನ್ನು ಖರೀದಿಸಿ ಎಂಬುದಾಗಿ ಕೂಡ ಕೆಲ ಸ್ಟೋರ್ ಮಾಲೀಕರು ನುಡಿಯುತ್ತಿದ್ದಾರೆ. ಇದರಿಂದ ಕೊಂಚವಾದರೂ ನೂಕು ನುಗ್ಗಾಟ ಕಡಿಮೆಯಾಗಲಿ ಎಂಬುದು ಮಾಲೀಕರ ಯೋಜನೆಯಾಗಿದೆ.

ಫೋನ್ ಖರೀದಿ ಮಾಡಿ ಸಿಮ್ ಉಚಿತವಾಗಿ ಪಡೆದುಕೊಳ್ಳಿ
ಜಿಯೋ ಸಿಮ್ ನಿಮಗೆ ಉಚಿತವಾಗಿ ಬೇಕು ಎಂದಾದಲ್ಲಿ ಅದಕ್ಕಾಗಿ ವಾರಗಟ್ಟಲೆ ನೀವು ಕಾಯಬೇಕಾಗುತ್ತದೆ. ಇಲ್ಲದಿದ್ದರೆ ಫೋನ್ ಖರೀದಿ ಮಾಡಿ ಸಿಮ್ ಉಚಿತವಾಗಿ ಪಡೆದುಕೊಳ್ಳಿ ಎಂಬುದಾಗಿ ಮಾಲೀಕರು ನುಡಿಯುತ್ತಿದ್ದಾರೆ. ನೀವು ಎಲ್‌ಜಿ ಅಥವಾ ಸ್ಯಾಮ್‌ಸಂಗ್ ಇಲ್ಲವೇ ಎಲ್‌ವೈಎಫ್ ಫೋನ್ ಅನ್ನು ಖರೀದಿಸಿದಲ್ಲಿ ಯಾವುದೇ ಶಾಪ್‌ನಿಂದ ಜಿಯೋ ಸಿಮ್ ನಿಮಗೆ ಉಚಿತವಾಗಿ ದೊರೆಯುತ್ತದೆ.

ಜಿಯೋ ಮತ್ತು ಪಾಲುದಾರ ಕಂಪೆನಿ
ಜಿಯೋ ಮತ್ತು ಪಾಲುದಾರ ಕಂಪೆನಿಗಳಾದ ಸ್ಯಾಮ್‌ಸಂಗ್ ಎಲ್‌ಜಿ ಮತ್ತು ಅಸೂಸ್ ಉಚಿತ ಸಿಮ್ ಪಡೆದುಕೊಳ್ಳುವ ವಿಧಾನದಲ್ಲಿ ಯಾವುದೇ ಬಗೆಯ ಸಹಾಯವನ್ನು ಮಾಡಲಾಗುತ್ತಿಲ್ಲ. ಯಾವ ಫೋನ್‌ಗೆ ಜಿಯೋ ಸಿಮ್ ವ್ಯವಸ್ಥೆ ಇದೆ ಎಂಬ ಮಾಹಿತಿಯ ಮೇಲೂ ಸರಿಯಾದ ಸಂವಹನವಿಲ್ಲ.

ಆಕ್ಟಿವೇಶನ್ ಮತ್ತು ರಿಜಿಸ್ಟ್ರೇಶನ್
ಹೊಸ ಫೋನ್ ಅನ್ನು ಖರೀದಿಸಿದ ನಂತರ ನಿಮಗೆ ಜಿಯೋ ಸಿಮ್ ದೊರಕಿದೆ ಎಂದಾದಲ್ಲಿ, ಇತರ ಗ್ರಾಹಕರು ಅನುಸರಿಸುವ ಅದೇ ಆಕ್ಟಿವೇಶನ್ ಮತ್ತು ರಿಜಿಸ್ಟ್ರೇಶನ್ ಪ್ರಕ್ರಿಯೆಯನ್ನು ನೀವು ಅನುಸರಿಸಬೇಕಾಗುತ್ತದೆ.

4 ರಿಂದ 5 ದಿನ
ನಿಮಗೆ ಸಿಮ್ ಉಚಿತವಾಗಿಯೇ ದೊರಕಲಿ ಅಥವಾ ಫೋನ್ ಖರೀದಿ ಮಾಡಿದ ನಂತರವೇ ಲಭ್ಯವಾಗಿರಲಿ, ನಿಮ್ಮ ಸಿಮ್ ಆಕ್ಟಿವೇಟ್ ಆಗಲು 4 ರಿಂದ 5 ದಿನಗಳನ್ನು ತೆಗೆದುಕೊಳ್ಳುತ್ತದೆ ನಂತರವಷ್ಟೇ ನೀವದನ್ನು ಬಳಸಿಕೊಳ್ಳಬಹುದಾಗಿದೆ.


Click it and Unblock the Notifications








