ನಾವು ಅಷ್ಟೇನೂ ನೋಡದ ವೈಶಿಷ್ಟ್ಯಗಳನ್ನು ಹೊಂದಿದೆ ಈ '75ಹೆಚ್2ಎ' ಸ್ಮಾರ್ಟ್‌ಟಿವಿ!

|

ಜಗತ್ತಿನ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿರುವ ಜನಪ್ರಿಯ ಎಲೆಕ್ಟ್ರಾನಿಕ್ ಸಂಸ್ಥೆ 'ಟಿಸಿಎಲ್' ಈಗ ಮತ್ತೊಂದು ಹೊಸ ಬ್ರ್ಯಾಂಡ್ ಸ್ಮಾರ್ಟ್‌ಟಿವಿಯನ್ನು ಭಾರತದ ಟಿವಿ ಮಾರುಕಟ್ಟೆಗೆ ಪರಿಚಯಿಸಿ ಗಮನಸೆಳೆದಿದೆ. 'ಟಿಸಿಎಲ್' ಕಂಪೆನಿಯ ಸ್ಮಾರ್ಟ್‌ಟಿವಿಗಳಲ್ಲೇ ಅತ್ಯಂತ ಹೆಚ್ಚು ವೈಶಿಷ್ಟ್ಯತೆಗಳನ್ನು ಹೊಂದಿರುವ ನೂತನ ಐಫಾಲ್ಕಾನ್(iFFALCON) ಬ್ರ್ಯಾಂಡ್ ಅಡಿಯಲ್ಲಿ '75ಹೆಚ್2ಎ' ಎಂಬ ಪ್ರೀಮಿಯಮ್ ಸ್ಮಾರ್ಟ್‌ಟಿವಿಯೊಂದು ದೇಶದ ಟಿವಿ ಮಾರುಕಟ್ಟೆಯಲ್ಲಿ ಸದ್ದು ಮಾಡಲು ತಯಾರಾಗಿದೆ.

ಹೌದು, ನಾವು ಅಷ್ಟೇನೂ ನೋಡದ ವೈಶಿಷ್ಟ್ಯಗಳ ವಿಶಿಷ್ಟ ಸಮೂಹವನ್ನು ಒದಗಿಸುವ ಏಕೈಕ ಸ್ಮಾರ್ಟ್‌ಟಿವಿಯಾಗಿ ನೂತನ '75ಹೆಚ್2ಎ' ಸ್ಮಾರ್ಟ್‌ಟಿವಿ ದೇಶದಲ್ಲಿ ಬಿಡುಗಡೆಗೊಂಡಿದೆ. 3840 x 2160 ಪಿಕ್ಸೆಲ್ಸ್ ಸಾಮರ್ಥ್ಯದ 75 ಇಂಚಿನ ಅಲ್ಟ್ರಾ ಹೆಚ್‌ಡಿ 4K ಆಂಡ್ರಾಯ್ಡ್ ಎಲ್ಇಡಿ ಡಿಸ್‌ಪ್ಲೇ, ಅಪ್‌ಸ್ಕೇಲ್ ಇಮೇಜ್ ತಂತ್ರಜ್ಞಾನ, ವೈಡ್ ಕಲರ್ ಗ್ಯಾಮಟ್ ತಂತ್ರಜ್ಞಾನ, MEMC 120Hz ಅಲ್ಗಾರಿದಮ್ ಸೇರಿದಂತೆ ಟಿವಿ ತಂತ್ರಜ್ಞಾನದಲ್ಲಿ ಮುಂದುವರೆದು ಈ ಆಂಡ್ರಾಯ್ಡ್ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ.

ನಾವು ಅಷ್ಟೇನೂ ನೋಡದ ವೈಶಿಷ್ಟ್ಯಗಳನ್ನು ಹೊಂದಿದೆ ಈ '75ಹೆಚ್2ಎ' ಸ್ಮಾರ್ಟ್‌ಟಿವಿ!

ಒಮ್ಮೆ ನೋಡಿದಾಗಲೇ ಭವಿಷ್ಯದ ಸ್ಮಾರ್ಟ್‌ಟಿವಿಯೆಂದು ಅನಿಸಿಬಿಡುವ ಈ ಟಿವಿ ಈಗ ಮನೆಯ ಅಲಂಕಾರವನ್ನು ಹೆಚ್ಚಿಸುವ ಬೆಸ್ಟ್ ಗ್ಯಾಜೆಟ್ ಕೂಡ ಆಗಲಿದೆ. ಹಾಗಾದರೆ, ಭಾರತದ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ನೂತನ '75ಹೆಚ್2ಎ' ಪ್ರೀಮಿಯಮ್ ಸ್ಮಾರ್ಟ್‌ಟಿವಿ ಹೇಗಿದೆ?, ಈ ಸ್ಮಾರ್ಟ್‌ಟಿವಿ ಹೊಂದಿರುವ ವಿಶೇಷತೆಗಳು ಯಾವುವು?, ಈ ಸ್ಮಾರ್ಟ್‌ಟಿವಿಯ ಬೆಲೆ ಎಷ್ಟು ಎಂಬೆಲ್ಲಾ ಮಾಹಿತಿಗಳನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಸಾಟಿಯಿಲ್ಲದ ಆಡಿಯೋ ಅನುಭವ

ಸಾಟಿಯಿಲ್ಲದ ಆಡಿಯೋ ಅನುಭವ

ಐಫಾಲ್ಕಾನ್ 75H2A UHD ಆಂಡ್ರಾಯ್ಡ್ ಟಿವಿಯ ಪ್ರಮುಖ ವಿಶೇಷತೆಗಳಲ್ಲಿ ಒಂದು ಹರ್ಮನ್ ಕರ್ಡಾನ್ ಉನ್ನತ ದರ್ಜೆ ಧ್ವನಿ ವ್ಯವಸ್ಥೆ. ಇದು ಸಿನಿಮಾದ ಆಡಿಯೊ ಗುಣಮಟ್ಟದಿಂದ ಒಟ್ಟಾರೆ ನೋಡುವ ಅನುಭವವನ್ನು ಹೆಚ್ಚಿಸುತ್ತದೆ. ನೀವು ಧ್ವನಿಯಲ್ಲಿ ಕಳೆದುಹೋಗುವ ಅನುಭವವನ್ನು ಇದರಿಂದ ಪಡೆಯುತ್ತೀರಿ, ಹಾರ್ಮನ್ ಕರ್ಡಾನ್ ನಿಂದ 30W ಔಟ್ಪುಟ್ನೊಂದಿಗೆ 4 ಫ್ರಂಟ್ ಫೈರಿಂಗ್ ಸ್ಪೀಕರ್ಗಳಿಗಳು ನಿಮ್ಮ ಮನಗೆಲ್ಲುತ್ತವೆ. ಹರ್ಮನ್ ಕಾರ್ಡಾನ್ ಸ್ಪೀಕರ್ಗಳಿಗೆ ಹೆಚ್ಚುವರಿಯಾಗಿ, ಡಾಲ್ಬಿ ಡಿಜಿಟಲ್ ಮತ್ತು ಡಿಟಿಎಸ್ ಅಧಿಕೃತ ಧ್ವನಿಯನ್ನು ಹೊರಡಿಸುತ್ತದೆ. ಟಿವಿ ಅಸಾಧಾರಣ ಚಿತ್ರ ವೀಕ್ಷಣೆ ಅನುಭವಕ್ಕಾಗಿ ಆಡಿಯೊ ಎಫೆಕ್ಟ್ ಒಂದು ಅದ್ಬುತ ಅನುಭವ ನೀಡಲಿದೆ ಎಂದು ಹೇಳಬಹುದು.

ಗೂಗಲ್-ಸರ್ಟಿಫೈಡ್ ಆಂಡ್ರಾಯ್ಡ್ ಟಿವಿ

ಗೂಗಲ್-ಸರ್ಟಿಫೈಡ್ ಆಂಡ್ರಾಯ್ಡ್ ಟಿವಿ

ಐಫಾಲ್ಕಾನ್ 752HA ಗೂಗಲ್-ಸರ್ಟಿಫೈಡ್ ಆಂಡ್ರಾಯ್ಡ್ ಟಿವಿ ಆದ್ದರಿಂದ, ಇದು ಯೂಟ್ಯೂಬ್, ನೆಟ್ಫ್ಲಿಕ್ಸ್ ಮುಂತಾದವುಗಳಿಂದ ಗೂಗಲ್ ಪ್ರಮಾಣೀಕರಿಸಿದ ಅಪ್ಲಿಕೇಶನ್‌ಗಳೊಂದಿಗೆ ಮೊದಲೇ ಲೋಡ್ ಆಗಿರುತ್ತದೆ. ಆಂಡ್ರಾಯ್ಡ್ 7.0 ಔಟ್-ಪೆಕ್ಸ್ ಅನ್ನು ರನ್ ಮಾಡುವ ಟಿವಿಯನ್ನು ಇತ್ತೀಚಿನ ಆವೃತ್ತಿಗೆ ಅಪ್‌ಗ್ರೇಡ್ ಮಾಡಬಹುದು. ಪೂರ್ವ ಲೋಡ್ ಆಗಿರುವ ವೈಶಿಷ್ಟ್ಯಗಳೊಂದಿಗೆ ಈ ಆಂಡ್ರಾಯ್ಡ್ ಟಿವಿ ಒಂದು ಸ್ಮಾರ್ಟ್ ಅನುಭವವನ್ನು ನೀಡುತ್ತದೆ. ನಿಮ್ಮ ನೆಚ್ಚಿನ ಅಪ್ಲಿಕೇನ್ ಡೌನ್‌ಲೋಡ್ ಮಾಡಲು ಪ್ಲೇ ಸ್ಟೋರ್ ಸಹಾಯ ಮಾಡಲಿದೆ. ನಿಮ್ಮ ಮೊಬೈಲ್ ಪರದೆಯನ್ನು ಟಿವಿಗೆ ಬಿತ್ತರಿಸಲು ಟಿವಿಯಲ್ಲಿಯೇ ಕ್ರೋಮ್‌ಕಾಸ್ಟ್ ಅನ್ನು ನೀಡಲಾಗಿದೆ.

 ಪ್ರೀಮಿಯಂ ಮೆಟಾಲಿಕ್ ಕೇಸಿಂಗ್ ವಿನ್ಯಾಸ

ಪ್ರೀಮಿಯಂ ಮೆಟಾಲಿಕ್ ಕೇಸಿಂಗ್ ವಿನ್ಯಾಸ

ಪ್ರೀಮಿಯಂ ಮೆಟಾಲಿಕ್ ಕೇಸಿಂಗ್ ಮತ್ತು ಕಿರಿದಾದ ಅಂಚಿನ ವಿನ್ಯಾಸವನ್ನು ಹೊಂದಿರುವ ಈ ಸ್ಮಾರ್ಟ್‌ಟಿವಿ ಕೆಳಭಾಗದಲ್ಲಿ ಹಾರ್ಮನ್ ಕರ್ಡಾನ್ ಸ್ಪೀಕರ್‌ಗಳನ್ನು ಹೊಂದಿದೆ. ಕಿರಿದಾದ ಚೌಕಟ್ಟನ್ನು ಮತ್ತು ಅಲ್ಟ್ರಾ ಸ್ಲಿಮ್ ಮತ್ತು ರಚನಾತ್ಮಕ ವಿನ್ಯಾಸ ಯಾವುದೇ ಪ್ರೀಮಿಯಂ ಸ್ಮಾರ್ಟ್‌ಟಿವಿಗಳನ್ನು ಸಹ ಮೀರಿಸಬಲ್ಲದು. ಸೊಗಸಾದ ವಿನ್ಯಾಸ ಮತ್ತು ಕಾರ್ಯನಿರ್ವಹಣೆಯ ಮಿಶ್ರಣವಾಗಿರುವ ಈ ಸ್ಮಾರ್ಟ್‌ಟಿವಿ ಮನೆಯ ಅಂದವನ್ನು ಸಹ ಪ್ರೀಮಿಯಮ್ ಮಾಡಬಲ್ಲದು. 3840 x 2160 ಪಿಕ್ಸೆಲ್ಸ್ ಸಾಮರ್ಥ್ಯದ 75 ಇಂಚಿನ ಅಲ್ಟ್ರಾ ಹೆಚ್‌ಡಿ 4K ಆಂಡ್ರಾಯ್ಡ್ ಎಲ್ಇಡಿ ಡಿಸ್‌ಪ್ಲೇಯಲ್ಲಿ ಕಾಣಿಸುವ ಚಿತ್ರಗಳು ನೋಡುಗರ ಎದೆಯನ್ನು ಸಹ ನಾಟಬಲ್ಲದು.

 ಬಹುಮುಖ್ಯ ಸಂಪರ್ಕ ಆಯ್ಕೆಗಳು

ಬಹುಮುಖ್ಯ ಸಂಪರ್ಕ ಆಯ್ಕೆಗಳು

ಐಫಾಲ್ಕಾನ್ ಬ್ರ್ಯಾಂಡ್‌ನ ಈ 75 ಇಂಚಿನ ಸ್ಮಾರ್ಟ್‌ಟಿವಿ ವ್ಯಾಪಕ ಶ್ರೇಣಿಯ ಸಂಪರ್ಕ ಆಯ್ಕೆಗಳೊಂದಿಗೆ ಬಂದಿದೆ. 3 ಹೆಚ್‌ಡಿಎಂಐ ಪೋರ್ಟ್‌ಗಳು ಮತ್ತು 2 ಯುಎಸ್‌ಬಿ ಫೋರ್ಟ್‌ಗಳನ್ನು ನೀವು ಟಿವಿಯಲ್ಲಿ ಕಾಣಬಹುದು. ಇದರಿಂದ ನೀವು ಗೇಮಿಂಗ್ ಕನ್ಸೋಲ್, ಸೆಟ್-ಟಾಪ್ ಬಾಕ್ಸ್ ಅಥವಾ ನಿಮ್ಮ ಟಿವಿಗೆ ಒಂದೇ ಸಮಯ ಮತ್ತು ಕೀಬೋರ್ಡ್, ಶೇಖರಣಾ ಸಾಧನ ಅಥವಾ ಮೌಸ್ನಂತಹ ಇನ್ಪುಟ್ ಸಾಧನಗಳಿಗೆ ಏಕಕಾಲದಲ್ಲಿ ಸಂಪರ್ಕಿಸಬಹುದು. ಜೊತೆಗೆ ಗೂಗಲ್-ಸರ್ಟಿಫೈಡ್ 752HA ಆಂಡ್ರಾಯ್ಡ್ ಟಿವಿ ಸಿನಿಮೀಯ ಚಿತ್ರದ ಗುಣಮಟ್ಟ, ಸಾಟಿಯಿಲ್ಲದ ಆಡಿಯೋ ಔಟ್ಪುಟ್ ಗೆ ಉತ್ತಮ ಬಳಕೆದಾರ ಅನುಭವವನ್ನು ಒದಗಿಸಲು ಖಾತರಿಪಡಿಸುತ್ತದೆ. ಇದರ ಬೆಲೆಯಲ್ಲಿ, ಈ ಟಿವಿ ಖಂಡಿತವಾಗಿ ಮಾರುಕಟ್ಟೆಯಲ್ಲಿಯೇ ಉತ್ತಮ ಖರೀದಿ ಆಯ್ಕೆಯಾಗಿದೆ.

ಇತರೆ ವಿಶೇಷತೆಗಳು ಮತ್ತು ಬೆಲೆ?

ಇತರೆ ವಿಶೇಷತೆಗಳು ಮತ್ತು ಬೆಲೆ?

ಯಂತ್ರಾಂಶದ ವಿಭಾಗದಲ್ಲಿ, ಈ ಸ್ಮಾರ್ಟ್‌ಟಿವಿ ಕ್ವಾಡ್-ಕೋರ್ ಸಿಪಿಯು ಮತ್ತು ದ್ವಿ-ಕೋರ್ ಜಿಪಿಯುಗಳೊಂದಿಗೆ ಬಂದಿದೆ. ನಿಮ್ಮ ನೆಚ್ಚಿನ ಅಪ್ಲಿಕೇಶನ್ಗಳು ಮತ್ತು ಗೇಮ್‌ಗಳನ್ನು ಸಂಗ್ರಹಿಸಲು 16GB ಆಂತರಿಕ ಸಂಗ್ರಹ ಸ್ಥಳಾವಕಾಶವಿದೆ. ಇವುಗಳ ಪರಿಣಾಮಕಾರಿ ಪರಿವರ್ತನೆಯನ್ನು ನಿರ್ವಹಿಸಲು 2.5GB RAM ಅನ್ನು ನೀಡಲಾಗಿದೆ. ಇನ್ನು ಕನ್ನಡದಲ್ಲಿಯೂ ಸೇರಿದಂತೆ ಬಹುತೇಕ ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲಿಯೂ ಸಹ ವಾಯ್ಸ್ ಸರ್ಚ್ ಮಾಡಬಹುದಾದ ಆಯ್ಕೆಯಿದೆ. ಇದರ ಜೊತೆಗೆ ಅಪ್‌ಸ್ಕೇಲ್ ಇಮೇಜ್ ತಂತ್ರಜ್ಞಾನ, ವೈಡ್ ಕಲರ್ ಗ್ಯಾಮಟ್ ತಂತ್ರಜ್ಞಾನ, MEMC 120Hz ಅಲ್ಗಾರಿದಮ್ ಸೇರಿದಂತೆ ಎಲ್ಲಾ ಅತ್ಯುತ್ತಮ ತಂತ್ರಜ್ಞಾನಗಳನ್ನು ಹೊಂದಿರುವ ಈ ಸ್ಮಾರ್ಟ್‌ಟಿವಿಯ ಬೆಲೆ 1,64,999 ರೂಪಾಯಿಗಳು.

Best Mobiles in India

Read more about:
English summary
TCL is known for its wide range of feature-rich smart TVs. The company has come up with an exclusive lineup of smart TVs for the Indian market under the iFFALCON brand. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X